‘ಸಂತ’ರೆಂದು ಯಾರಿಗೆ ಹೇಳಬೇಕು ?

‘ಪ್ರಾರಬ್ಧ ಭೋಗವನ್ನು ಭೋಗಿಸಿ ಯೋಗ್ಯ ಕ್ರಿಯಮಾಣವನ್ನು ಬಳಸಿ ಪುನಃ ಈಶ್ವರನೊಂದಿಗೆ ಏಕರೂಪವಾಗುವುದು’, ಇದು ಮನುಷ್ಯ ಜನ್ಮದ ಉದ್ದೇಶವಾಗಿದೆ. ಈಶ್ವರನೊಂದಿಗೆ ಏಕರೂಪವಾಗಲು ಈಶ್ವರನಿಗೆ ಅಪೇಕ್ಷಿತ ಮತ್ತು ಈಶ್ವರನಂತೆ ವರ್ತಿಸುವುದು ಆವಶ್ಯಕವಾಗಿರುತ್ತದೆ. ಇದಕ್ಕಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಹಿಂದೂ ಧರ್ಮಕ್ಕನುಸಾರ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ವಿವಿಧ ಸಾಧನಾಮಾರ್ಗಗಳಿವೆ ಮತ್ತು ಯಾರು ಯಾವ ಮಾರ್ಗದಿಂದ ಸಾಧನೆಯನ್ನು ಮಾಡಬೇಕು, ಎಂಬ ಬಗ್ಗೆ ಮಾರ್ಗದರ್ಶನ ಮಾಡುವ ಸಂತರು, ಗುರುಗಳು ಉನ್ನತರೂ ಇದ್ದಾರೆ. ಅವರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿದರೆ ಅಥವಾ ಅವರ ಮನಸ್ಸನ್ನು ಗೆದ್ದರೆ, ಬೇಗನೆ ಈಶ್ವರಪ್ರಾಪ್ತಿಯಾಗುತ್ತದೆ. ಇಂತಹ ಮಾರ್ಗದರ್ಶನ ದೊರಕುವುದು ಸಹ ನಮ್ಮ ಪ್ರಾರಬ್ಧದಲ್ಲಿ ಇರಬೇಕಾಗುತ್ತದೆ, ಇಲ್ಲದಿದ್ದರೆ ಹಲವರ ಜನ್ಮ ಯೋಗ್ಯ ಸಾಧನೆಯನ್ನು ಮಾಡದಿರುವುದರಿಂದ ಅಥವಾ ಆ ರೀತಿ ಮಾರ್ಗದರ್ಶನ ದೊರಕದಿರುವುದರಿಂದ ಉಳಿದು ಹೋಗಬಹುದು. ಹಿಂದೂಗಳಲ್ಲಿ ಸಾಧನೆಯನ್ನುಮಾಡಿ ಒಂದು ಆಧ್ಯಾತ್ಮಿಕ ಹಂತವನ್ನು ತಲುಪಿದರೆ, ಆ ವ್ಯಕ್ತಿಯನ್ನು ‘ಸಂತ’ನೆಂದು ಗುರುತಿಸಲು ಬರುತ್ತದೆ. ಆ ರೀತಿ ಗುರುತಿಸಲು ಸಹ ಎದುರಿನ ವ್ಯಕ್ತಿ ಆ ಆಧ್ಯಾತ್ಮಿಕ ಮಟ್ಟದವರಾಗಿರಬೇಕಾಗುತ್ತದೆ. ಅನೇಕ ಜನರು ಇಂದು ‘ಸಂತ’ರೆಂದು ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದರೂ, ಅವರು ಸಂತರಿದ್ದಾರೆ, ಎಂದು ದೃಢವಾಗಿ ಹೇಳಲು ಬರುವುದಿಲ್ಲ, ಹಾಗೆಯೇ ಹಲವರು ಸಂತರಿದ್ದರೂ ನಮಗೆ ಗುರುತಿಸಲು ಸಾಧ್ಯವಾಗುವುದಿಲ್ಲ. ಹಿಂದೂ ಧರ್ಮಕ್ಕನುಸಾರ ಓರ್ವ ಸಂತರೇ ಇನ್ನೋರ್ವ ಸಂತರನ್ನು ಗುರುತಿಸಬಲ್ಲರು. ಇಂತಹ ಸಂತರು ಯಾರೊಬ್ಬರನ್ನು ಸಂತರೆಂದು ಘೋಷಿಸಿದರೆ, ಜನರು ಅವರನ್ನು ಒಪ್ಪಿಕೊಳ್ಳುತ್ತಾರೆ. ಜನರಿಗೆ ಸಹ ಇಂತಹ ಸಂತರ ಆಚರಣೆಯಿಂದ, ಮಾರ್ಗದರ್ಶನದಿಂದ ಅವರ ಆಧ್ಯಾತ್ಮಿಕ ಪ್ರೌಢಿಮೆ ಗಮನಕ್ಕೆ ಬರುತ್ತದೆ. ಭಾರತದಲ್ಲಿ, ಜನತೆಯೇ ಸಂತರೆಂದು ಗುರುತಿಸುವ ಮತ್ತು ಅವರ ಮೇಲೆ ವಿಶ್ವಾಸವಿಡುವಂತಹ ಸಾವಿರಾರು ಸಂತರು ಆಗಿ ಹೋಗಿದ್ದಾರೆ. ಅವರನ್ನು ಯಾರೂ ಎಂದಿಗೂ ಸಂತರೆಂದು ಘೋಷಿಸಿರಲಿಲ್ಲ, ಆದರೆ ಅವರ ಸ್ಥಿತಿಯಿಂದಲೇ ಜನರು ಅವರನ್ನು ಅರಿತರು; ಏಕೆಂದರೆ ಆ ಸಮಯದಲ್ಲಿ ಜನತೆಯು ಸಹ ಕೊಂಚ ಪ್ರಮಾಣದಲ್ಲಿ ಸಾಧನೆಯನ್ನು ಮಾಡುವವರಾಗಿದ್ದರು.

ಮುಸಲ್ಮಾನರಲ್ಲಿ ಏಕೆ ‘ಸಂತ’ರಿಲ್ಲ ?

ಮುಸಲ್ಮಾನರಲ್ಲಿ ‘ಸಂತ’ರಿರುವ ಬಗ್ಗೆ ಯಾವತ್ತೂ ಕೇಳಲು ಸಿಕ್ಕಿಲ್ಲ. ಯಾವ ಅರಬ್ ದೇಶಗಳಿಂದ ಇಸ್ಲಾಮ್‌ನ ಜನ್ಮವಾಯಿತೋ, ಅಲ್ಲಿನ ಯಾವನಾದರೊಬ್ಬ ವ್ಯಕ್ತಿ ‘ಸಂತ’ರಾಗಿದ್ದರು, ಎಂದು ಅಥವಾ ಈಗ ಯಾರಾದರೂ ಸಂತರಿದ್ದಾರೆ, ಎಂದು ಕೇಳಲು ಸಿಗುವುದಿಲ್ಲ. ಭಾರತದಲ್ಲಿ ಮುಸಲ್ಮಾನರ ಅನೇಕ ಪ್ರಮುಖರಿದ್ದರೂ ಅವರು ಸಂತರಿದ್ದಾರೆ, ಎಂದು ಕಂಡು ಬರುವುದಿಲ್ಲ. ಇಲ್ಲಿ ತುಲನೆ ಮಾಡುವ ಭಾಗವಿಲ್ಲದಿದ್ದರೂ, ಇದು ವಸ್ತುಸ್ಥಿತಿಯಾಗಿದೆ, ಎಂದೇ ಕಂಡು ಬರುತ್ತದೆ. ಆದುದರಿಂದ ಅವರ ಈ ಸ್ಥಿತಿಯ ಅರ್ಥವೇನೆಂದು ತಿಳಿದುಕೊಳ್ಳಬಹುದು ಎಂದು ಪ್ರತಿಯೊಬ್ಬರು ನಿಶ್ಚಯಿಸಬಹುದು. ಕ್ರೈಸ್ತರಲ್ಲಿ ಮಾತ್ರ ಅವರ ಪ್ರಮುಖ ಧಾರ್ಮಿಕ ಕೇಂದ್ರವಾದ ವ್ಯಾಟಿಕನ್‌ನಲ್ಲಿ ಅವರ ಸರ್ವೋಚ್ಚ ಧರ್ಮಗುರು ಪೋಪ್‌ರು ಒಬ್ಬರಿಗೆ ಸಂತರೆಂದು ಘೋಷಿಸುವ ಅಧಿಕಾರವನ್ನು ನೀಡುತ್ತಾರೆ. ಅಲ್ಲಿ ಒಂದು ಕಾರ್ಯಕ್ರಮದ ಮೂಲಕವೇ ಸಂತರೆಂದು ಘೋಷಿಸಲಾಗುತ್ತದೆ.  ೧೫ ಮೇ ಈ ದಿನದಂದು ವ್ಯಾಟಿಕನ್‌ನಲ್ಲಾದ ಕಾರ್ಯಕ್ರಮದಲ್ಲಿ ಭಾರತದ ತಮಿಳುನಾಡಿನ ೧೮ ನೇಶತಮಾನದಲ್ಲಿನ ದೇವಸಹಾಯಮ್ ಪಿಲ್ಲೈ ಇವರನ್ನು ‘ಸಂತ’ರೆಂದು ಘೋಷಿಸಲಾಯಿತು. ಇಲ್ಲಿ ೨೦೦ ವರ್ಷಗಳ ಹಿಂದಿನ ವ್ಯಕ್ತಿಯನ್ನು ಈಗ ಸಂತರೆಂದು ಘೋಷಿಸಲು ಸಾಧ್ಯವೇ ? ಎಂಬ ಪ್ರಶ್ನೆಯು ಮೂಡುತ್ತದೆ ಅಥವಾ ಅದಕ್ಕಾಗಿ ಇಷ್ಟು ವರ್ಷಗಳೇಕೆ ಬೇಕಾಯಿತು ? ಒಂದು ವೇಳೆ ಅವರು ಸಂತರಿದ್ದರೆಂದರೆ, ಅವರನ್ನು ಜೀವಂತವಿರುವಾಗ ಯಾರೂ ಗುರುತಿಸಿರಲಿಲ್ಲವೇ ? ದೇವ ಸಹಾಯಮ್ ಇವರ ಕಾರ್ಯ ‘ಅಲೌಕಿಕ’ವಾಗಿತ್ತು’, ಎಂದು ಭಾರತದಲ್ಲಿನ ಸಂಸ್ಥೆಯಿಂದ ವ್ಯಾಟಿಕನ್‌ಗೆ ಗೊತ್ತಾದಾಗ ೨೦೧೪ ನೇ ಇಸವಿಯಲ್ಲಿ ಪೋಪ್ ಇವರು ಅದಕ್ಕೆ ಮಾನ್ಯತೆ ನೀಡಿದ ನಂತರ ಇಂದು ೮ ವರ್ಷಗಳ ನಂತರ ಅವರನ್ನು ಸಂತರೆಂದು ಘೋಷಿಸಲಾಯಿತು.

ಕಲ್ಪಿತ ಸಂತರನ್ನು ಬಹಿರಂಗಪಡಿಸಿ !

ಈಗ ದೇವಸಹಾಯಮ್ ಇವರ ‘ಅಲೌಕಿಕ ಕಾರ್ಯ’ವೇನಿತ್ತೆಂಬುದನ್ನು ಗಮನಿಸಬೇಕಿದೆ. ವಿಶೇಷವೆಂದರೆ ದೇವ ಸಹಾಯಮ್ ಇವರು ಬ್ರಾಹ್ಮಣರಾಗಿದ್ದರು. ಅವರು ಅಲ್ಲಿನ ಹಿಂದೂ ರಾಜ ಮನೆತನದಲ್ಲಿ ಅಧಿಕಾರಿಯಾಗಿದ್ದರು. ಅವರು ನಂತರ ಮತಾಂತರಗೊಂಡು ಕ್ರೈಸ್ತರಾದರು. ಅವರು ತಮ್ಮ ಅಧಿಕಾರವನ್ನು ಬಳಸಿ ಅನೇಕ ಹಿಂದೂಗಳನ್ನು ಮತಾಂತರಿಸಿದರು, ಹಾಗೆಯೇ ‘ರಾಜಮನೆತನದ ಗೂಢ ಮಾಹಿತಿಯನ್ನು ಡಚ್ಚರಿಗೆ ನೀಡಿದರು’, ಎಂಬ ಆರೋಪ ಅವರ ಮೇಲಿದೆ. ಮುಂದೆ ಅವರನ್ನು ಸ್ಥಳೀಯರು ಕೊಂದರೆಂದು ಹೇಳಲಾಗುತ್ತದೆ. ‘ಅವರ ಈ ಮತಾಂತರದ ‘ಅಲೌಕಿಕ’ ಕಾರ್ಯದಿಂದಲೇ ಅವರಿಗೆ ‘ಸಂತ’ರೆಂದು ಘೋಷಿಸಿದರೇ ?’ ಎಂಬ ಪ್ರಶ್ನೆಯು ಎದುರಾಗುತ್ತದೆ. ಇದಕ್ಕೂ ಮೊದಲು ವ್ಯಾಟಿಕನ್‌ನಿಂದ ಮದರ ತೆರೆಸಾ ಇವರನ್ನು, ಮೃತ್ಯೋತ್ತರವಾಗಿ ‘ಸಂತ’ರೆಂದು ಘೋಷಿಸಲಾಗಿತ್ತು. ಅವರು ಸಂತರಿರುವ ಬಗ್ಗೆ ಕ್ರೈಸ್ತರಿಗೇ ಆಕ್ಷೇಪವಿತ್ತು ಎಂದು ಹೇಳಲಾಗುತ್ತಿತ್ತು. ಆದ್ದರಿಂದ ಅವರನ್ನು ಅವರು ಜೀವಂತವಿರುವಾಗ ಸಂತರೆಂದು ಘೋಷಿಸಿರಲಿಲ್ಲ. ಹೀಗಿದ್ದರೂ ಅವರ ಒಟ್ಟಾರೆ ಸಾಮಾಜಿಕ ಕಾರ್ಯದ ಬಗ್ಗೆ ಸಂಶಯವಿದೆ. ಸಾಮಾಜಿಕ ಕಾರ್ಯದ ಹೆಸರಿನಲ್ಲಿ ಅವರು ಹಿಂದೂಗಳನ್ನು ಮತಾಂತರಿಸಿದರೆಂಬ ಆರೋಪ ಅವರ ಮೇಲಿತ್ತು. ಆದ್ದರಿಂದ ಹಿಂದೂ ಸಂಘಟನೆ ಅವರನ್ನು ಎಂದಿಗೂ ಸಂತರೆಂದು ಸ್ವೀಕರಿಸಲು ಸಾಧ್ಯವಿಲ್ಲ. ‘ಹಿಂದೂಗಳನ್ನು ಮತಾಂತರಿಸುವವರಿಗೆ ವ್ಯಾಟಿಕನ್ ‘ಸಂತ’ರೆಂದು ಘೋಷಿಸುತ್ತದೆ, ಎಂಬ ನಿಯಮವಿದೆ’, ಎಂದು ಯಾರಾದರೂ ಹೇಳತೊಡಗಿದರೆ, ಅದು ತಪ್ಪಿದೆ ಎಂದು ಹೇಗೆ ಹೇಳಬಹುದು ? ಗೋವಾದಲ್ಲಿ ೧೫ ನೇ ಶತಮಾನದಲ್ಲಿ ಫ್ರಾನ್ಸಿಸ್ ಝೆವಿಯರ್ ಇವರ ಹೇಳಿಕೆಯ ಮೇರೆಗೆ ಹಿಂದೂಗಳ ಬಲ ಪೂರ್ವಕ ಮತಾಂತರವು ಆರಂಭವಾಯಿತು. ಹಿಂದೂಗಳ ಮೇಲೆ ನಾನಾ ರೀತಿಯ ದೌರ್ಜನ್ಯವನ್ನೆಸಗಿ ಅವರನ್ನು ಮತಾಂತರಿಸಲಾಯಿತು, ಎಂಬುದು ಇತಿಹಾಸವಾಗಿದೆ. ಈ ಇತಿಹಾಸವನ್ನು ಹತ್ತಿಕ್ಕಿ ಝೆವಿಯರನನ್ನು ‘ಸಂತ’ನೆಂದು ನಿಶ್ಚಯಿಸಲಾಗುತ್ತಿದೆ. ಅವನನ್ನು ‘ಗೋಂಯಚಾ ಸಾಯಬ್’ನೆಂದು ಮೆರೆಸಲಾಗುತ್ತಿದೆ. ಇದರಿಂದ ಕ್ರೈಸ್ತರು ಯಾರಿಗೆ ‘ಸಂತ’ರೆಂದು ಹೇಳುತ್ತಾರೆ, ಎಂದು ಗಮನಕ್ಕೆ ಬರುತ್ತದೆ. ಮುಸಲ್ಮಾನರಲ್ಲಿ ಹಿಂದೆ ಆಗಿ ಹೋಗ ಕೆಲವರನ್ನು ‘ಸಂತ’ರೆಂದು ಹೇಳಲಾಗುತ್ತಿತ್ತು. ಅವರ ದರ್ಗಾವನ್ನು ಕಟ್ಟಿ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಹೋಗುತ್ತಾರೆ. ಹಿಂದೂಗಳೂ ಹೋಗುತ್ತಾರೆ; ಆದರೆ ಈ ಕಲ್ಪಿತ ಸಂತರ ಇತಿಹಾಸವನ್ನು ನೋಡಿದರೆ ಅವರು ಸಹ ಹಿಂದೂಗಳ ಮತಾಂತರಕ್ಕಾಗಿ ಕಾರ್ಯ ಮಾಡಿರುವುದು ಕಂಡು ಬರುತ್ತದೆ. ಇನ್ನೊಂದೆಡೆ ಹಿಂದೂಗಳ ಒಬ್ಬ ಸಂತರಾದರೂ ಎಂದಿಗೂ ಮತಾಂತರಕ್ಕಾಗಿ ಪ್ರಯತ್ನಿಸಿರುವುದನ್ನು ಕೇಳಿರುವಿರಾ ? ಯಾರು ಮತಾಂತರಗೊಂಡರೋ, ಅವರು ಸ್ವೇಚ್ಛೆಯಿಂದ ಹಿಂದೂ ಧರ್ಮಕ್ಕೆ ಬರುತ್ತಿದ್ದರೆ, ಅವರಿಗೆ ಪುನಃ ಪ್ರವೇಶ ನೀಡುವ ಪ್ರಯತ್ನವನ್ನು ಕೆಲವು ಸಂತರು ಮಾಡಿದರು, ಇದು ಸಹ ಇತಿಹಾಸವಿದೆ. ಇಂದಿಗೂ ಇಂತಹ ಅನೇಕ ಸಂತರು ಹಿಂದೂಗಳ ಶುದ್ಧೀಕರಣ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ. ಸದ್ಯ ದೇಶದಲ್ಲಿ ಜ್ಞಾನವಾಪಿ ಮಸೀದಿ, ಮಥುರೆಯ ಶಾಹಿ ಈದ್ಗಾಹ ಮಸೀದಿ, ತಾಜ್‌ಮಹಲ್ ಇವುಗಳ ನಿಜವಾದ ಇತಿಹಾಸವನ್ನು ಬಹಿರಂಗ ಪಡಿಸಲು ನ್ಯಾಯಾಂಗ ಹೋರಾಟ ನಡೆದಿದೆ. ಅದೇ ರೀತಿ ಕ್ರೈಸ್ತ ಪಂಥದ ಸಂತರ ನಿಜವಾದ ಇತಿಹಾಸವನ್ನು ಕಂಡು ಹಿಡಿಯಲು ಹೋರಾಟ ಮಾಡುವ ಆವಶ್ಯಕತೆ ಇದೆ. ಇದರಿಂದ ಯಾರು ಮಾನವತಾವಾದಿಗಳಾಗಿದ್ದರು ? ಮತ್ತು ಯಾರು ಅತ್ಯಾಚಾರ ಮಾಡಿದರು ?, ಎಂದು ಜಗತ್ತಿನೆದುರು ಬರುತ್ತದೆ. ಇದಕ್ಕಾಗಿ ಸರಕಾರವು ನೇತೃತ್ವ ತೆಗೆದುಕೊಂಡು ಇತಿಹಾಸದ ಸಂಶೋಧನೆಯನ್ನು ಮಾಡಬೇಕು’, ಎಂದು ಅನಿಸುತ್ತದೆ !