ಅಯೋಧ್ಯೆ, ಕಾಶಿ, ಮಥುರಾ ಅಷ್ಟೇ ಅಲ್ಲ; ಕಬಳಿಸಿದ ೩೬ ಸಾವಿರ ದೇವಾಲಯಗಳನ್ನು ಮರಳಿ ವಶಪಡಿಸಿಕೊಳ್ಳುವವರೆಗೂ ಹಿಂದೂಗಳು ಸುಮ್ಮನಿರುವುದಿಲ್ಲ ! – ಶ್ರೀ. ಸುರೇಶ ಚವ್ಹಾಣಕೆ, ಸುದರ್ಶನ ನ್ಯೂಸ್

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಆನ್‌ಲೈನ್’ ವಿಶೇಷ ಸಂವಾದ : ‘ಭೋಜಶಾಲೆಯಲ್ಲಿ ಮಾತಾ ಶ್ರೀ ವಾಗ್ದೇವಿ ಮಂದಿರದ ಸ್ಥಳದಲ್ಲಿ ಕಮಾಲ ಮೌಲಾ ಮಸೀದಿ ಹೇಗೆ ?’

ಶ್ರೀ. ಸುರೇಶ ಚವ್ಹಾಣಕೆ

ಮುಂಬಯಿ – ಇಸ್ಲಾಮಿಕ್ ಆಕ್ರಮಣಕಾರರು ಭಾರತದಲ್ಲಿ ಸಾವಿರಾರು ದೇವಾಲಯಗಳನ್ನು ಕೆಡವಿದರು ಮತ್ತು ಅಲ್ಲಿ ಮಸೀದಿಗಳನ್ನು ನಿರ್ಮಿಸಿದರು. ಈ ಪ್ರತಿಯೊಂದು ದೇವಾಲಯದ ಪುನರ್‌ನಿರ್ಮಾಣಕ್ಕಾಗಿ ಹಿಂದೂಗಳ ಅನೇಕ ತಲೆಮಾರುಗಳು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ; ಆದರೆ ದೇವಾಲಯದ ಮೇಲಿನ ಅಧಿಕಾರವನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ನಾವೂ ಅದೇ ಹಿಂದೂಗಳ ವಂಶಜರಾಗಿದ್ದೇವೆ. ಹಿಂದೂಗಳಿಂದ ಏನೆಲ್ಲವನ್ನು ಕಸಿದುಕೊಳ್ಳಲಾಗಿದೆಯೋ. ಅವೆಲ್ಲವನ್ನು ಹಿಂತಿರುಗಿಸಬೇಕು. ಇದು ಈಗ ಹೊಸ ಹಿಂದುಸ್ಥಾನವಾಗಿದೆ. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಹಿಂಪಡೆಯುವ ಸಂಕಲ್ಪವನ್ನು ಕೆಲವು ಶತಮಾನಗಳ ಹಿಂದೆ ತೆಗೆದುಕೊಳ್ಳಲಾಗಿತ್ತು. ಅದನ್ನು ಪ್ರತ್ಯಕ್ಷವಾಗಿ ಕೃತಿಗೆ ತರುವ ಪ್ರಕ್ರಿಯೆ ಈಗ ನಡೆಯುತ್ತಿದೆ. ಅಯೋಧ್ಯೆಯ ಶ್ರೀರಾಮ ದೇವಾಲಯ, ಕಾಶಿಯ ಶ್ರೀ ವಿಶ್ವನಾಥ ದೇವಾಲಯ, ಮಥುರಾದ ಶ್ರೀಕೃಷ್ಣ ದೇವಾಲಯ ಮಾತ್ರವಲ್ಲ, ಕುತುಬ್ ಮಿನಾರ್ ಸೇರಿದಂತೆ ದೇಶಾದ್ಯಂತ ಇಂತಹ ೩೬ ಸಾವಿರ ದೇವಾಲಯಗಳ ಪಟ್ಟಿ ಇದೆ. ಈ ಕಬಳಿಸಿರುವ ದೇವಾಲಯಗಳನ್ನು ಹಿಂಪಡೆಯುವವರೆಗೂ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ‘ಸುದರ್ಶನ ನ್ಯೂಸ್’ನ ಮುಖ್ಯ ಸಂಪಾದಕ ಶ್ರೀ. ಸುರೇಶ ಚವ್ಹಾಣಕೆಯವರು ಸ್ಪಷ್ಟವಾಗಿ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ‘ಭೋಜಶಾಲಾದ ಮಾತೆ ಶ್ರೀ ವಾಗ್ದೇವಿ ದೇವಾಲಯದ ಸ್ಥಳದಲ್ಲಿ ಕಮಾಲ ಮೌಲಾ ಮಸೀದಿಹೇಗೆ ?’ ಈ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಇಂಗ್ಲೆಂಡ್ ನಲ್ಲಿರುವ ವಾಗ್ದೇವಿಯ ಮೂರ್ತಿಯನ್ನು ಮರಳಿ ತರಲು ಹಿಂದೂಗಳು ಸರಕಾರದ ಮೇಲೆ ಒತ್ತಡ ತರಬೇಕು – ದೇವೆಂದ್ರ ಪಾಂಡೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ‘ಅಖಿಲ ಭಾರತ ಹಿಂದೂ ಮಹಾಸಭೆ’

ಶ್ರೀ. ದೇವೆಂದ್ರ ಪಾಂಡೆ

೧೦೩೪ ರಲ್ಲಿ ಮಧ್ಯಪ್ರದೇಶದ ಧಾರನಲ್ಲಿ ಮಾತಾ ವಾಗ್ದೇವಿಯ (ಶ್ರೀಸರಸ್ವತಿ ದೇವಿ) ಅತ್ಯಂತ ಪುರಾತನ ದೇವಾಲಯವನ್ನು ರಾಜಾ ಭೋಜರು ಸ್ಥಾಪಿಸಿದ್ದರು. ಇದನ್ನು ೧೩೦೫ ರಲ್ಲಿ ಅಲ್ಲಾವುದ್ದೀನ್‌ ಖಿಲ್ಜಿಯು ದಾಳಿ ಮಾಡಿ ನಾಶ ಮಾಡಲು ಪ್ರಯತ್ನಿಸಿದನು. ನಂತರ, ೧೪೦೧ ರಲ್ಲಿ, ದಿಲಾವರ ಖಾನ್ ದಾಳಿ ಮಾಡಿ ದೇವಾಲಯದ ಪ್ರವೇಶದ್ವಾರದ  ಬಳಿ ಮಸೀದಿಯನ್ನು ನಿರ್ಮಿಸಿದನು. ಅದರ ನಂತರ ಮಹಮೂದ್‌ನು ಮತ್ತೊಂದು ಮಸೀದಿಯನ್ನು ಕಟ್ಟಿದನು. ಬ್ರಿಟಿಷರ ಆಳ್ವಿಕೆಯಲ್ಲಿ ೧೮೭೫ ರಲ್ಲಿ ದೇವಾಲಯದ ಸ್ಥಳದಲ್ಲಿ ಉತ್ಖನನದ ಸಮಯದಲ್ಲಿ ದೊರೆತ ವಾಗ್ದೇವಿಯ ಮೂರ್ತಿಯನ್ನು ಇಂಗ್ಲೆಂಡನ ವಸ್ತು ಸಂಗ್ರಹಾಲಯಕ್ಕೆ ಕೊಂಡೊಯ್ಯಲಾಯಿತು. ಇಂದಿಗೂ ಭಾರತದ ಜ್ಞಾನ ಮತ್ತು ಬುದ್ಧಿ ಇಂಗ್ಲೆಂಡನಲ್ಲಿ ಬಂಧನದಲ್ಲಿದೆ. ಭಾರತ ಸರಕಾರವು ಈ ಕುರಿತು ಬೆಂಬತ್ತುವಿಕೆ ಮಾಡಿ ಆ ವಿಗ್ರಹ ಮರಳಿ ತರಬಹುದು. ಇದಕ್ಕಾಗಿ ಹಿಂದೂಗಳು ಒತ್ತಡ ಹೇರಬೇಕು.

‘ಪ್ಲೇಸಸ್ ಆಫ್ ವರ್ಶಿಪ್’ ಈ ಕಾನೂನನ್ನುಕೂಡಲೇ ರದ್ದುಪಡಿಸಬೇಕು –  ಅಭಯ ವರ್ತಕ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಶ್ರೀ. ಅಭಯ ವರ್ತಕ

ಮೊಘಲರು ಅನೇಕ ದೇವಾಲಯಗಳನ್ನು ಕೆಡವಿದರು. ಹಿಂದೂಗಳು ಅದರ ವಿರುದ್ಧ ಹೋರಾಡಿದರು ಮತ್ತು ಅದನ್ನು ಪುನರ್‌ನಿರ್ಮಿಸಿದರು; ಆದರೆ ಮೊಘಲ ಆಕ್ರಮಣಕಾರರು ಅದನ್ನು ಮತ್ತೆ ನೆಲಸಮಗೊಳಿಸಿದರು. ಈಗಲೂ ನಾವು ದೇವಾಲಯಗಳನ್ನು ಕಟ್ಟುತ್ತಿದ್ದೇವೆ; ಆದರೆ ಅವುಗಳ ರಕ್ಷಣೆಗೆ ನಾವು ಯಾವ ವ್ಯವಸ್ಥೆ ರೂಪಿಸಲು ಹೊರಟಿದ್ದೇವೆ ಎಂಬುದನ್ನು ಹಿಂದೂಗಳು ಯೋಚಿಸಬೇಕು ಇತಿಹಾಸದಲ್ಲಾದ ತಪ್ಪುಗಳು ಮರುಕಳಿಸಬಾರದು. ಅಲ್ಲದೇ ಕಾಂಗ್ರೆಸ್ ಸರಕಾರವು ಹಿಂದೂಗಳಿಗೆ ದ್ರೋಹ ಬಗೆದು ಸಿದ್ಧಪಡಿಸಿರುವ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ೧೯೯೧’ ದೇವಾಲಯ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಹಾಗಾಗಿ ಕೂಡಲೇ ಈ ಕಾನೂನನ್ನು ರದ್ದುಗೊಳಿಸಬೇಕು, ಎಂದು ಈ ಮೂಲಕ ನಾವು ಮನವಿ ಮಾಡುತ್ತಿದ್ದೇವೆ.