ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನೂ ತಪ್ಪು ಘಟಿಸಿಲ್ಲ ! – ಕೇರಳ ಉಚ್ಚ ನ್ಯಾಯಾಲಯ

ನ್ಯಾಯಾಲಯ ಹೇಳಿದ್ದನ್ನು ಜಾತ್ಯತೀತರು ಅಥವಾ ಪ್ರಗತಿ(ಅಧೋಗತಿ)ಪರರಿಗೆ ಹೇಳುವ ಧೈರ್ಯವಿದೆಯೇ ?

ತಿರುವನಂತಪುರಂ (ಕೇರಳ) – ಯಾರಿಗೆ ಪಾಕಿಸ್ತಾನ ಅವರಿಗಾಗಿ ಯೋಗ್ಯವಾದ ಸ್ಥಾನವಾಗಿದೆ ಎಂದೆನಿಸುತ್ತದೆಯೋ, ಅಂತಹವರು ಗಮನದಲ್ಲಿಡಬೇಕಾದ ಅಂಶವೆಂದರೆ ಭಾರತದಲ್ಲಿ ಅವರ ವಿರುದ್ಧವಾಗಿ ಎಂದಿಗೂ ಏನೂ ಅಯೋಗ್ಯ ಘಟಿಸಿರಲಿಲ್ಲ, ಎಂದು ಕೇರಳದ ಉಚ್ಚ ನ್ಯಾಯಾಲಯವು ಹೇಳಿದೆ. ಭಾರತದ ವಿರುದ್ಧ ಯುದ್ಧಸಾರಿದ ಮತ್ತು ಕಾಶ್ಮೀರದಲ್ಲಿ ಶಿಬಿರಗಳ ಆಯೋಜನೆಯನ್ನು ಮಾಡಿ ಜಿಹಾದಿ ಉಗ್ರರನ್ನು ಸೇರ್ಪಡೆ ಮಾಡಿದುದರ ಪ್ರಕರಣದಲ್ಲಿ ೧೦ ಜನರಿಗಾಗಿದ್ದ ಜೀವಾವಧಿ ಶಿಕ್ಷೆಯನ್ನು ಖಾಯಂ ಮಾಡುತ್ತಾ  ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದೆ. ‘ರಾಷ್ಟ್ರೀಯ ತನಿಖಾ ದಳ’ದ (‘ಎನ್.ಐ.ಎ.’ಯ) ನ್ಯಾಯಾಲಯವು ಈ ೧೦ ಜನರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಅದಕ್ಕೆ ಉಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗಿತ್ತು.

ನ್ಯಾಯಾಲಯವು ಮುಂದಿನ ಅಂಶಗಳನ್ನು ಹೇಳಿದೆ,

೧. ಮೂಲಭೂತವಾದಿ ಅಥವಾ ಉಗ್ರ ವಿಚಾರಗಳ ಜನರು ವಿಭಜನೆಯ ನಂತರದ ಇತಿಹಾಸವನ್ನು ನೋಡಬೇಕು. ಆಗ ಇಲ್ಲಿ ಇರುವವರಿಗೆ ಎಷ್ಟು ಉತ್ತಮ ಸ್ಥಿತಿ ಇದೆಯೋ ಅಷ್ಟು ಸ್ಥಿತಿ ಗಡಿಯ ಆಚೆಯ (ಪಾಕಿಸ್ತಾನದ) ಸ್ಥಿತಿಯಿಲ್ಲ, ಎಂಬುದು ಗಮನಕ್ಕೆ ಬರಬಹುದು.

೨. ಪಾಕಿಸ್ತಾನದ ಜೊತೆಯಲ್ಲಾದ ಸಂಘರ್ಷದ ಕಾಲದಲ್ಲೂ ಹಿಂದೂಬಹುಸಂಖ್ಯಾತ ಭಾರತದಲ್ಲಿ ಮುಸಲ್ಮಾನರನ್ನು ನಿರ್ಬಂಧಿಸಿದ ಘಟನೆಗಳು ಎಂದಿಗೂ ಆಗಲಿಲ್ಲ.

೩. ಸ್ವರ್ಗಸುಖಕ್ಕಾಗಿ ಯಾರು ಮನುಷ್ಯರನ್ನು ಮತ್ತು ದೇಶದ ನಾಗರಿಕರನ್ನು ಕೊಂದರೋ, ಅಂತಹವರಿಂದ ಅವರ ಕುಟುಂಬದವರ ಜೀವನವು ನರಕಸಮಾನವಾಗಿದೆ. ಅವರು ನಾಚಿಕೆಯಿಂದ ದುಃಖದಲ್ಲಿ ಮುಳುಗಿದ್ದಾರೆ.

ಅಯೋಧ್ಯೆಯ ಮಠ-ಮಂದಿರಗಳು ತೆರಿಗೆಮುಕ್ತ !

ಅಯೋಧ್ಯೆ (ಉತ್ತರಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಮುಂದಾಳತ್ವದಿಂದ ಅಯೋಧ್ಯೆಯಲ್ಲಿರುವ ಮಠ-ಮಂದಿರಗಳನ್ನು ತೆರಿಗೆಮುಕ್ತವಾಗಿ ಮಾಡಲಾಗಿದೆ. ಅಯೋಧ್ಯೆ ನಗರಪಾಲಿಕೆಯಿಂದ ಇದರ ಮಸೂದೆಯನ್ನು ಸಮ್ಮತಿಸಲಾಗಿದೆ. ವ್ಯವಸಾಯಕ್ಕಾಗಿ ಉಪಯೋಗಿಸದ ಎಲ್ಲಾ ಮಠ, ಮಂದಿರಗಳು ಮತ್ತು ಆಶ್ರಮ ತೆರಿಗೆಮುಕ್ತ ಮಾಡಲಾಗಿದೆ. ಮಂದಿರದ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಈ ಬಗ್ಗೆ ಘೋಷಿಸಿದರು. (ಯೋಗಿ ಆದಿತ್ಯನಾಥ ಇವರಿಗೆ ಅಭಿನಂದನೆ ! – ಸಂಪಾದಕರು)

ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಮಸೂದೆಗೆ ರಾಜ್ಯ ಮಂತ್ರಿಮಂಡಳದಲ್ಲಿ ಅಸ್ತು

ಬೆಂಗಳೂರು – ರಾಜ್ಯದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರ ನಿಷೇಧ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗೀಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ. ವಿಧಾನಪರಿಷತ್ತಿನಲ್ಲಿ ಸರಕಾರದ ಹೇಳಿಕೆಗೆ ಬಹುಮತ ಇಲ್ಲದ ಕಾರಣ ಸುಗ್ರೀವಾಜ್ಞೆಗೆ ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.