‘ಗುರುಕೃಪಾಯೋಗಾ’ನುಸಾರ ಸಾಧನೆಯ ಮೊದಲ ಹಂತ ಕೇವಲ ‘ಸ್ವಭಾವದೋಷ-ನಿರ್ಮೂಲನೆ’ಯಲ್ಲ ‘ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ’ ಹೀಗಿದೆ’ – (ಪರಾತ್ಪರ ಗುರು) ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆ

ಸಾಧಕರಿಗೆ ಅವರಲ್ಲಿರುವ ಸ್ವಭಾವದೋಷಗಳು ಅವರ ಸಾಧನೆಯಲ್ಲಿನ ಅಡತಡೆಯಾಗಿರುತ್ತವೆ. ಅದರೊಂದಿಗೆ ಅವರ ಕೆಲವು ಗುಣಗಳು ಸಾಧನೆಗೆ ಸಹಾಯಕವಿರುತ್ತದೆ. ಆದ್ದರಿಂದ ಸಾಧನೆಯಲ್ಲಿ ಸ್ವಭಾವದೋಷ-ನಿರ್ಮೂಲನೆಗೆ ಇರುವಷ್ಟೇ ಮಹತ್ವ ಗುಣ-ಸಂವರ್ಧನೆಗೂ ಇದೆ. ಸ್ವಲ್ಪದರಲ್ಲಿ ಸಾಧನೆಗಾಗಿ ಈ ಎರಡು ಪ್ರಯತ್ನಗಳೆಂದರೆ, ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಇದಕ್ಕಾಗಿ ‘ಗುರುಕೃಪಾಯೋಗಾ’ನುಸಾರ ಸಾಧನೆಯ ಎಂಟು ಹಂತಗಳ ಪೈಕಿ ಮೊದಲ ಹಂತವನ್ನು ಕೇವಲ ‘ಸ್ವಭಾವದೋಷ-ನಿರ್ಮೂಲನೆ’ ಎನ್ನದೇ ‘ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ’ ಎಂದು ಉಲ್ಲೇಖಿಸಬೇಕು. ಸಾಧಕರೂ ಸ್ವಭಾವದೋಷ-ನಿರ್ಮೂಲನೆಯೊಂದಿಗೆ ‘ಗುಣ-ಸಂವರ್ಧನೆ’ ಪ್ರಕ್ರಿಯೆಯನ್ನೂ ನಿಯಮಿತವಾಗಿ ನಡೆಸಬೇಕು; ಏಕೆಂದರೆ ಗುಣಗಳಿರದೇ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ. ಗುಣಗಳಿಂದ ಮನೋಬಲವು ಹೆಚ್ಚಾಗುತ್ತದೆ. ಗುಣವೃದ್ಧಿಯಾದರೆ, ‘ಸಾಧನೆ ಮಾಡಿದರೂ ಪ್ರಗತಿ ಏಕೆ ಆಗುತ್ತಿಲ್ಲ’, ಎಂಬ ರೀತಿಯ ವಿಚಾರ ಅಥವಾ ಈ ವಿಚಾರಗಳಿಂದ ಬರುವ ನಿರಾಶೆಯೂ ಬರುವುದಿಲ್ಲ. ಸಾಮಾನ್ಯವಾಗಿ ಒತ್ತಡ ಬರುವುದು, ಕಾಳಜಿ ಮಾಡುವುದು, ನಿರಾಶೆ, ಮನೋರಾಜ್ಯದಲ್ಲಿ ವಿಹರಿಸುವುದು ಇವುಗಳಂತಹ ಸ್ವಭಾವದೋಷಗಳನ್ನು ಪ್ರತಿಯೊಬರೂ ದೂರಮಾಡಬೇಕಾಗುತ್ತದೆ. ಆದ್ದರಿಂದ ಇವುಗಳಂತಹ ಸ್ವಭಾವದೋಷ ಬಹಳ ಇರುವವರು ಪ್ರಾಧಾನ್ಯತೆಯಿಂದ ಸ್ವಭಾವದೋಷ-ನಿರ್ಮೂಲನೆಗೆ ಒತ್ತು ನೀಡಬೇಕು ಮತ್ತು ಇವುಗಳಂತಹ ಸ್ವಭಾವದೋಷಗಳು ಕಡಿಮೆ ಇರುವವರು ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸಿ ಗುಣ-ಸಂವರ್ಧನೆ ಪ್ರಕ್ರಿಯೆಗೆ ಒತ್ತು ನೀಡಬೇಕು. ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾದ ಸೂಚನೆಗನುಸಾರ ಪ್ರತಿದಿನ ಸ್ವಯಂಸೂಚನೆಗಳ ಸತ್ರಗಳನ್ನು ಆಧ್ಯಾತ್ಮಿಕ ತೊಂದರೆ ಇಲ್ಲದವರು ೧೨, ಮಧ್ಯಮ ತೊಂದರೆ ಇರುವವರು ೧೫, ತೀವ್ರ ತೊಂದರೆ ಇರುವ ಸಾಧಕರು ೧೮ ಮಾಡಬೇಕು.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ (೧೨-೪-೨೦೨೨)

ಕಾಲಾನುಸಾರ ಅಷ್ಟಾಂಗ ಸಾಧನೆಯ ಹಂತಗಳ ಬದಲಾದ ಕ್ರಮಕ್ಕನುಸಾರ ಸಾಧನೆಯನ್ನು ಮಾಡಿರಿ !

‘ಗುರುಕೃಪಾಯೋಗಾನುಸಾರ ಸಾಧನೆ’ಯ ಅಂತರ್ಗತ ಇಲ್ಲಿಯವರೆಗೆ ಅಷ್ಟಾಂಗ ಸಾಧನೆಯ ಹಂತಗಳ ಕ್ರಮ ಈ ರೀತಿ ಇತ್ತು –
೧. ಸ್ವಭಾವದೋಷ-ನಿರ್ಮೂಲನೆ, ೨. ಅಹಂ-ನಿರ್ಮೂಲನೆ, ೩. ನಾಮಜಪ, ೪. ಸತ್ಸಂಗ, ೫. ಸತ್ಸೇವೆ, ೬. ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ, ೭. ಸತ್‍ಗಾಗಿ ತ್ಯಾಗ ಮತ್ತು ೮. ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೀತಿ) ಸದ್ಯ ಮಹಾಭಯಂಕರ ಆಪತ್ಕಾಲವು ಹತ್ತಿರ ಬರುತ್ತಿದೆ. ಇಂತಹ ಆಪತ್ಕಾಲದಲ್ಲಿ ಕೇವಲ ದೇವರೇ ನಮ್ಮನ್ನು ರಕ್ಷಿಸಬಹುದು. ‘ಭಾವವಿದ್ದಲ್ಲಿ ದೇವ’ ಈ ವಚನಕ್ಕನುಸಾರ ನಮ್ಮಲ್ಲಿ ಭಾವವಿದ್ದರೆ, ನಮಗೆ ದೇವರ ಸಹಾಯ ಬೇಗನೆ ಸಿಗುತ್ತದೆ. ಇದಕ್ಕಾಗಿ ನಮ್ಮಲ್ಲಿ ಭಾವವನ್ನು ನಿರ್ಮಿಸುವುದು ಅತ್ಯಂತ ಆವಶ್ಯಕವಾಗಿದೆ. ಇದಕ್ಕಾಗಿ ಈಗ ‘ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ’ ಇದು ಅಷ್ಟಾಂಗ ಸಾಧನೆಯಲ್ಲಿನ ನಾಲ್ಕನೇಯ ಹಂತ (ಅಂಗ) ವಾಗಲಿದೆ. ಅಷ್ಟಾಂಗ ಸಾಧನೆಯ ಹಂತಗಳ ಸುಧಾರಿತ ಕ್ರಮ ಹೀಗಿದೆ –
೧. ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ೨. ಅಹಂ-ನಿರ್ಮೂಲನೆ, ೩. ನಾಮಜಪ, ೪. ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ, ೫. ಸತ್ಸಂಗ, ೬. ಸತ್ಸೇವೆ ೭. ಸತ್‍ಗಾಗಿ ತ್ಯಾಗ ಮತ್ತು ೮. ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೀತಿ)

– (ಪರಾತ್ಪರ ಗುರು) ಡಾ. ಜಯಂತ ಆಠವಲೆ (೧೨-೪-೨೦೨೨)

ಸದ್ಯ ಮನುಷ್ಯನು ಸ್ವಾರ್ಥ ಮತ್ತು ಪೈಪೋಟಿಯನ್ನೇ ಸುಖವೆಂದು ನಂಬುತ್ತಿದ್ದಾನೆ !

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

‘ಸೃಷ್ಟಿಯಲ್ಲಿನ ಮನುಷ್ಯರಲ್ಲದ ಜೀವಗಳು ಕ್ಷಣಿಕ ಜೀವನವಿದ್ದರೂ ಅವು ಆನಂದದಿಂದ ಬದುಕುತ್ತಿರುತ್ತವೆ. ಮನುಷ್ಯನು ಮಾತ್ರ ದ್ವೇಷ, ಏರಿಳಿತ, ಸ್ವಾರ್ಥ ಮುಂತಾದ ಅಹಂಕಾರಗಳಿಂದ ದುಃಖವನ್ನು ಅನುಭವಿಸುತ್ತಿದ್ದಾನೆ ಮತ್ತು ಅದರಲ್ಲಿಯೇ ಒಣಜಂಭ ಮತ್ತು ಸುಖವೆಂದು ನಂಬುತ್ತಿದ್ದಾನೆ.’

– (ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು) (೨೦-೮-೨೦೧೮)