ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನದಿಂದ ಎಲ್ಲೆಡೆ ಹಿಂದೂಗಳಲ್ಲಿ ನವಚೈತನ್ಯ !

ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ…

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಗಲಿರುಳು ಕಾರ್ಯ ಮಾಡುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮೋತ್ಸವದ ನಿಮಿತ್ತ ದೇಶಾದ್ಯಂತ ಶ್ರೀರಾಮನವಮಿಯಿಂದ (೧೦.೪.೨೦೨೨ ರಿಂದ) ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದಿಂದಾಗಿ ಭಾರತಾದ್ಯಂತ ಹಿಂದೂ ಧರ್ಮಪ್ರೇಮಿಗಳಲ್ಲಿ ನವಚೈತನ್ಯ ನಿರ್ಮಾಣವಾಗಿದ್ದೂ ವ್ಯಾಪಕ ಪದ್ದತಿಯಲ್ಲಿ ಧರ್ಮಪ್ರಸಾರವಾಗುತ್ತಿದೆ. ಈ ಅಭಿಯಾನದಡಿಯಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಉಪಕ್ರಮಗಳಲ್ಲಿ ಇದುವರೆಗೆ ೪೪೫೪೧ ಹಿಂದೂಗಳು ಉತ್ಸಾಹದಿಂದ ಭಾಗವಹಿಸಿ ಚೈತನ್ಯದ ಸ್ತರದಲ್ಲಿ ಲಾಭವನ್ನು ಪಡೆದರು.

೧. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇವತೆಗಳಲ್ಲಿ ಪ್ರಾರ್ಥನೆ

ಮುಂಬರುವ ಭೀಕರ ಯುದ್ಧದ ನಂತರ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿ, ಎಂದು ಈ ಅಭಿಯಾನದ ನಿಮಿತ್ತ ಅಲ್ಲಲ್ಲಿ ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡಲಾಯಿತು. ದೇಶಾದ್ಯಂತ ೩೨ ಸಾವಿರದ ೨೨೦ ಹಿಂದೂ ಧರ್ಮಪ್ರೇಮಿಗಳು ಮತ್ತು ಸಾಧಕರು ಒಟ್ಟಾಗಿ ಬಂದು ೧ ಸಾವಿರದ ೨೦ ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥಿಸಲಾಯಿತು.

೨. ಒತ್ತಡಮುಕ್ತ ಹಾಗೂ ಆನಂದಮಯ ಜೀವನಕ್ಕಾಗಿ ಮಾರ್ಗದರ್ಶಕ ಪ್ರವಚನಗಳು

ಪ್ರಸ್ತುತ ಅನಿಶ್ಚಿತ ಹಾಗೂ ಅಸುರಕ್ಷಿತ ಜೀವನದಲ್ಲಿ ಜನರು ಒತ್ತಡಮುಕ್ತ ಹಾಗೂ ಆನಂದಮಯ ಜೀವನವನ್ನು ಜೀವಿಸಲು ಅಧ್ಯಾತ್ಮವನ್ನು ಅಂಗೀಕರಿಸುವುದು ಅಂದರೆ ಸಾಧನೆ ಮಾಡುವುದು ಅಗತ್ಯವಾಗಿದೆ. ಸಾಧನೆಯೇ ಮನುಷ್ಯನಿಗೆ ಚಿರಂತರ ಆನಂದವನ್ನು ನೀಡಬಹುದು. ಸನಾತನದ ಸಾಧಕರು ೧೯೪ ಸ್ಥಳಗಳಲ್ಲಿ ತೆಗೆದುಕೊಂಡಿದ್ದ ಸಾಧನೆಯ ಪ್ರವಚನದಿಂದ ೪೯೮೧ ಜಿಜ್ಞಾಸುಗಳು ಲಾಭವನ್ನು ಪಡೆದುಕೊಂಡರು.

೩. ಹಿಂದೂ ಐಕ್ಯತಾ ಮೆರವಣಿಗೆಯಿಂದ ಹಿಂದೂ ಸಂಘಟನೆಯ ಆವಿಷ್ಕಾರ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅಗತ್ಯವಿರುವ, ಹಿಂದೂಗಳ ಸಂಘಟನೆ ! ಇದಕ್ಕಾಗಿ ಹಿಂದೂ ಐಕ್ಯತಾ ಮೆರವಣಿಗೆಯು ಮಾಧ್ಯಮವಾಯಿತು ! ದೇವತೆಗಳ ಹಾಗೂ ಗುರುಗಳ ಆಶೀರ್ವಾದದಿಂದಾಗಿ ಹಿಂದೂ ಧರ್ಮ ಹಾಗೂ ಭಾರತ ದೇಶದ ಮೇಲಾಗುತ್ತಿರುವ ವಿವಿಧ ಆಘಾತಗಳನ್ನು ತಡೆಯಲು ಈಗ ಹಿಂದೂಗಳು ಜಾಗೃತರಾಗಿ ಒಟ್ಟಾಗುತ್ತಿದ್ದಾರೆ. ಹಿಂದೂ ಸಂಘಟನೆಯ ಆವಿಷ್ಕಾರಕ್ಕೆ ಕಾರಣವಾಗಿದ್ದ ಹಿಂದೂ ಐಕ್ಯತಾ ಮೆರವಣಿಗೆಯ ಮಾಧ್ಯಮದಿಂದ ಹಿಂದೂ ಸಂಘಟನೆಯ ಹುಮ್ಮಸ್ಸು ಮುಗಿಲೇತ್ತರಕ್ಕೆ ಏರಿತ್ತು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಾದ ೮ ಹಿಂದೂ  ಐಕ್ಯತಾ ಮೆರವಣಿಗೆಯಲ್ಲಿ ೩೯೫೫ ಧರ್ಮಪ್ರೇಮಿಗಳು ಭಾಗವಹಿಸಿದರು.

೪. ಚೈತನ್ಯಮಯ ದೇವಸ್ಥಾನಗಳ ಸ್ವಚ್ಛತೆ ಹಾಗೂ ಜ್ಞಾನವರ್ಧಕ ಗ್ರಂಥಗಳ ಪ್ರದರ್ಶನಗಳು

ದೇವಸ್ಥಾನವೆಂದರೆ ಸಮಾಜದ ದೇವರಕೋಣೆಯಾಗಿದ್ದು ಅವು ಹಿಂದೂಗಳಿಗೆ ಚೈತನ್ಯದ ಕುಂಜಗಳಾಗಿವೆ. ದೇಶಾದ್ಯಂತ ೨೮೦ ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನಗಳ ಮಾಡಲಾದ ಸ್ವಚ್ಛತೆಯಲ್ಲಿ ೩೧೨೮ ಹಿಂದೂಗಳು ಭಾಗವಹಿಸಿದ್ದರು.

೫. ೧೩ ರಾಜ್ಯಗಳಲ್ಲಿನ ೪೫ ಜಿಲ್ಲೆಗಳಲ್ಲಿ ಧರ್ಮಪ್ರೇಮಿ ಹಾಗೂ ಸಾಧಕರ ಸಹಭಾಗ

ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ದೆಹಲಿ, ಹರಿಯಾಣಾ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ಮತ್ತು ಪೂರ್ವೋತ್ತರ ಭಾರತದ ಝಾರಖಂಡ ಹೀಗೆ ಒಟ್ಟು ೧೩ ರಾಜ್ಯಗಳಲ್ಲಿನ ೪೫ ಜಿಲ್ಲೆಗಳಲ್ಲಿ ಈ ಉಪಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರಲ್ಲಿ ಹಿಂದುತ್ವನಿಷ್ಠ, ಧರ್ಮಪ್ರೇಮಿ, ಅನೇಕ ಹಿಂದುತ್ವನಿಷ್ಠ ಸಂಘಟನೆ-ಸಂಪ್ರದಾಯಗಳ ಪ್ರತಿನಿಧಿಗಳು, ಸನಾತನ ಸಂಸ್ಥೆ ಸಹಿತ ವಿವಿಧ ಆಧ್ಯಾತ್ಮಿಕ ಸಂಸ್ಥೆಗಳ ಸಾಧಕರು, ದೇವಸ್ಥಾನಗಳ ಅರ್ಚಕರು ಮತ್ತು ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದರು. ಈ  ವೇಳೆ ಹಿಂದೂ ಸಂಘಟನೆಗಳಿಂದಾಗಿ ನೆರೆದಿದ್ದವರಲ್ಲಿ ಹಿಂದೂ ರಾಷ್ಟ್ರದ ಉತ್ಸಾಹ ಮೂಡಿತು.