ಸನಾತನ ಸಂಸ್ಕೃತಿಯ ಪುನರುಜ್ಜೀವನದ ಕಾಲ !

ಕೇರಳದ ರಾಜ್ಯಪಾಲ ಅರೀಫ್ ಮಹಮ್ಮದ ಖಾನ್ ಇವರು ಮೇ ೭ ರಂದು ಒಂದು ಶಾಲೆಯ ಉದ್ಘಾಟನೆಯ ಸಂದರ್ಭದಲ್ಲಿ ನೀಡಿರುವ ಒಂದು ಹೇಳಿಕೆಯು ಅತ್ಯಂತ ಮಹತ್ವಪೂರ್ಣ ಹಾಗೂ ಮುಸಲ್ಮಾನರ ಸಹಿತ ಸಮಸ್ತ ಪ್ರಗತಿಪರ ಹಿಂದೂಗಳು ಕೂಡ ಪಾಠ ಕಲಿಯುವಂತಿದೆ. ಅವರು, “ಭಾರತದ ಪ್ರಾಚೀನ ಸಂಸ್ಕೃತಿಯ ಪುನರುಜ್ಜೀವನ ಹಾಗೂ ಸನಾತನ ಧರ್ಮದ ತತ್ತ್ವಗಳ ಶಿಕ್ಷಣವನ್ನು ದೇಶದಲ್ಲಿ ಯೋಗ್ಯ ರೀತಿಯಲ್ಲಿ ನೀಡಿ  ಪುನರ್‌ಸಂಚಯನ ಮಾಡಬೇಕು”, ಎಂದಿದ್ದಾರೆ. ಶಹಾಬಾನೋ ಪ್ರಕರಣದ ಸಮಯದಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿಯವರ ಸರಕಾರದಲ್ಲಿ ಮಂತ್ರಿ ಆಗಿದ್ದ ಅರೀಫ್ ಮಹಮ್ಮದ ಖಾನ್ ಇವರು ರಾಜೀನಾಮೆಯನ್ನು ನೀಡಿದ್ದರು. ಅರೀಫ್ ಖಾನ್ ಇವರಿಗೆ ಓರ್ವ ವಿವೇಕಶೀಲ ಮುಸಲ್ಮಾನ ವಿಚಾರವಾದಿಯೆಂದು ಹೇಳಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ. ಕಾಲದ ಪ್ರವಾಹದಲ್ಲಿ ಹಿಂದೂ ಸಂಸ್ಕೃತಿಯ ಸಂಭಾವ್ಯ ಪುನರುಜ್ಜೀವನವಾಗುವ ದೃಷ್ಟಿಯಲ್ಲಿ ಇಂದು ಏನೆಲ್ಲ ಚಟುವಟಿಕೆಗಳಾಗುತ್ತಿವೆಯೊ, ಆ ಹಿನ್ನೆಲೆಯಲ್ಲಿ ಕಾಲದ ಹೆಜ್ಜೆಯನ್ನು ಗುರುತಿಸಿದರೆ ಖಾನ್ ಇವರ ಈ ಮೇಲಿನ ಹೇಳಿಕೆಯು ಅತ್ಯಂತ ಅರ್ಥಪೂರ್ಣವಾಗಿದೆ. ಅದರ ಹಿಂದೆ ದೊಡ್ಡ ಗರ್ಭಿತಾರ್ಥ ಅಡಗಿದೆ. ಆದ್ದರಿಂದ ಸನಾತನ ಸಂಸ್ಕೃತಿಯ ಪುನರುಜ್ಜೀವನದ ಪಠ್ಯಕ್ರಮವನ್ನು ಕಲಿಸುವ ವಿಷಯವನ್ನು ಒಂದು ದೊಡ್ಡ ಹುದ್ದೆಯಲ್ಲಿರುವ ಮುಸಲ್ಮಾನ ವ್ಯಕ್ತಿ ಹೇಳುತ್ತಿದ್ದಾರೆ. ಈ ವಿಷಯದಲ್ಲಿ ಮುಸಲ್ಮಾನ ಸಮಾಜದವರು ಗಾಂಭೀರ್ಯದಿಂದ ಚಿಂತನೆ ಮಾಡಿ ತಮ್ಮ ವೃತ್ತಿ ಹಾಗೂ ಹಿಂದೂ ಧರ್ಮ ಮತ್ತು ಧರ್ಮೀಯರನ್ನು ನೋಡುವ ವಕ್ರದೃಷ್ಟಿಕೋನವನ್ನು ಬದಲಾಯಿಸಿದರೆ ಮುಂದಿನ ಕಾಲದಲ್ಲಿ ಅವರು ಒಳ್ಳೆಯ ಜೀವನ ಜೀವಿಸಬಹುದು.

ಪರಿವರ್ತನೆಯ ಸಾಕ್ಷಿದಾರ !

ಇಂದು ಸಂಕುಚಿತವಾಗಿರುವ ಭಾರತವು ಪೃಥ್ವಿಯ ಮೇಲಿನ ಅನೇಕ ದೇಶಗಳ ಪೈಕಿ ಒಂದೆಂದು ಕಾಣಿಸುತ್ತಿದ್ದರೂ, ಒಂದು ಕಾಲದಲ್ಲಿ ಇಡೀ ಭೂಮಿಯನ್ನು ಆಳುತ್ತಿದ್ದ ಏಕೈಕ ಸಂಸ್ಕೃತಿಯಾಗಿತ್ತು. ಇದರ ಉದಾಹರಣೆಗಳು ಪುರಾವೆಗಳ ಸಹಿತ ಒಮ್ಮೆ ಪಠ್ಯಕ್ರಮದಲ್ಲಿ ಬಂದರೆ ಸಹಜವಾಗಿಯೇ ‘ಇಂದಿನ ಜಗತ್ತಿನ ಎರಡು ದೊಡ್ಡ ಪಂಥಗಳ ಪೂರ್ವಜರು ಈ ಸನಾತನ ಸಂಸ್ಕೃತಿಯ ಭಾಗವೇ ಆಗಿದ್ದರು’, ಎಂಬುದನ್ನು ಪ್ರತ್ಯೇಕವಾಗಿ ಸಿದ್ಧಪಡಿಸುವ ಅವಶ್ಯಕತೆಯಿಲ್ಲ. ಇಂದು ಕೂಡ ಕೆಲವು ರಾಷ್ಟ್ರನಿಷ್ಠ ಮುಸಲ್ಮಾನರು ಈ ವಿಷಯವನ್ನು ಬಹಿರಂಗವಾಗಿ ಹೇಳುವ ಧೈರ್ಯವನ್ನು ತೋರಿಸುತ್ತಾರೆ ‘ಅವರ ಪೂರ್ವಜರು ಹಿಂದೂಗಳೇ ಆಗಿದ್ದರು’ ಎನ್ನುತ್ತಾರೆ. ಮುಸಲ್ಮಾನರು ಈ ವಿಷಯವನ್ನು ಗಮನಿಸಿದರೆ ‘ಹಿಂದೂಗಳ ವಿಷಯದಲ್ಲಿ ವೈರತ್ವವನ್ನು ಇಟ್ಟುಕೊಳ್ಳುವುದು ಎಷ್ಟು ನಿರರ್ಥಕವಾಗಿದೆ’, ಎಂಬುದು ಅವರಿಗೆ ಸಹಜವಾಗಿ ಅರಿವಾಗಬಹುದು; ಆದರೆ ಅವರ ಮೂಲಭೂತವಾಗಿ ಧಾರ್ಮಿಕ ನೇತಾರರಿಗೆ ಕಳೆದ ನೂರಾರು ವರ್ಷಗಳಿಂದ ಹೀಗಾಗಬಾರದೆಂದು ಅನಿಸುತ್ತಿದೆ, ಆದ್ದರಿಂದಲೇ ಅವರು ಸ್ವಾತಂತ್ರ್ಯದ ನಂತರವೂ ಕಾಂಗ್ರೆಸ್‌ನೊಂದಿಗೆ ಸಂಧಾನ ಸಾಧಿಸಿ ಹಾಗಾಗದಂತೆ ನೋಡಿಕೊಂಡರು. ಸ್ವಾಮಿ ವಿವೇಕಾನಂದರು, ಪೂ. ಗೋಳವಲಕರ್‌ಗುರೂಜಿ, ಸ್ವಾತಂತ್ರ್ಯವೀರ ಸಾವರಕರ ಮುಂತಾದ ಹಿಂದೂ ನೇತಾರರು ಮಾಡಿದ ‘ಹಿಂದೂ ರಾಷ್ಟ್ರ’ದ ಉಲ್ಲೇಖವನ್ನು ಉದ್ದೇಶಪೂರ್ವಕವಾಗಿ ಇತಿಹಾಸದಿಂದ ಮುಂದೆ ಬರಲು ಬಿಡಲಿಲ್ಲ. ಹಿಂದೂ ಜನಜಾಗೃತಿ ಸಮಿತಿಯ ಮೂಲಕ ೧೦ ವರ್ಷಗಳ ಹಿಂದೆ ‘ಹಿಂದೂ ರಾಷ್ಟ್ರ’ ಈ ಶಬ್ದವು ಪುನಃ ಭಾರತದಲ್ಲಿ ಘೋಷಣೆ ಮಾಡಲು ಆರಂಭವಾಯಿತು ಹಾಗೂ ಕಳೆದ ೩ ವರ್ಷಗಳಲ್ಲಿ ಹಿಂದೂಗಳ ಧರ್ಮಗುರುಗಳು, ಸಂತ-ಮಹಾತ್ಮರು, ಸಾವಿರಾರು ಹಿಂದುತ್ವನಿಷ್ಠರು ಮತ್ತು ಲಕ್ಷಗಟ್ಟಲೆ ಹಿಂದೂಗಳ ಮನಸ್ಸಿನಲ್ಲಿ ಅದು ಜಾಗೃತವಾಗಲು ಆರಂಭವಾಯಿತು.

ಪರಿವರ್ತನೆಯ ಪರಿಣಾಮ

ಈ ಪರಿವರ್ತನೆಯ ಒಂದು ಪರಿಣಾಮವೆಂದರೆ ಕಳೆದ ಕೆಲವು ದಿನಗಳಿಂದ ಹಿಂದೂಗಳ ಶ್ರದ್ಧಾಸ್ಥಾನಗಳು ಮತ್ತು ಕಲೆಯ ಅತ್ಯುಚ್ಚ ಸಂಕೇತವಾಗಿರುವ ಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದ್ದಾರೆ, ಎನ್ನುವ ವಿಷಯದಲ್ಲಿ ಎಲ್ಲೆಡೆಯ ಹಿಂದುತ್ವನಿಷ್ಠರು ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಿದರು. ಈ ಹಿಂದೆ ಯಾವ ವಿಷಯದಲ್ಲಿ ಮಾತನಾಡುವುದೂ ಅಪರಾಧವೆನ್ನುವ ಹಾಗೆ ಅತ್ಯಂತ ಕ್ಷೀಣ ಧ್ವನಿಯಲ್ಲಿ ಮಾತನಾಡುತ್ತಿದ್ದರು ಹಾಗೂ ಮಾಧ್ಯಮಗಳಂತೂ ಅವುಗಳತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ, ಇಂತಹ ಎಲ್ಲ ವಿಷಯಗಳು ದೊಡ್ಡ ಪ್ರಮಾಣದಲ್ಲಿ ಮುಂದೆ ಬರುತ್ತಿವೆ. ‘೧ ಸಾವಿರ ಸ್ತ್ರೀಯರನ್ನು ಜನಾನಖಾನೆಯಟ್ಟುಕೊಂಡಿದ್ದ, ೮ ‘ನಿಕಾಹ’ ಮಾಡಿರುವ ಹಾಗೂ ಮುಮ್ತಾಜ್‌ಳ ಪ್ರೇಮಕ್ಕೊಳಗಾಗಿಯೂ (?) ಮೊದಲ ನಿಕಾಹವನ್ನು ಬೇರೆ ಸ್ತ್ರೀಯೊಂದಿಗೆ ಮಾಡಿರುವ ಹಾಗೂ ೧೪ ವರ್ಷಗಳ ವೈವಾಹಿಕ ಜೀವನದಲ್ಲಿ ಮುಮ್ತಾಜಳ ಮೇಲೆ ೧೪ ಹೆರಿಗೆಯನ್ನು ಹೇರಿ ೧೪ ನೆ ಹೆರಿಗೆಯಾಗುವಾಗ ಅವಳನ್ನು ಮರಣದ ದವಡೆಗೆ ತಳ್ಳಿದ ಶಹಾಜಹಾನ ಬಾದಶಾಹ ಆಗಿದ್ದನು. ಆದ್ದರಿಂದ ತಾಜಮಹಲ್‌ಅನ್ನು ‘ಶಹಾಜಹಾನ ಮತ್ತು ಮುಮ್ತಾಜ ಇವರ ಪ್ರೇಮದ ಸಂಕೇತವೆಂದು ಹೇಳುವುದು ಹಾಸ್ಯಾಸ್ಪದವಾಗಿದೆ’, ಎನ್ನುವ ಸತ್ಯ ಇತಿಹಾಸವನ್ನು ಕಾಂಗ್ರೆಸ್ ಭಾರತೀಯ ವಿದ್ಯಾರ್ಥಿಗಳಿಂದ ಅಡಗಿಸಿಟ್ಟಿತ್ತು. ಪ್ರಸಿದ್ಧ ಇತಿಹಾಸ ಸಂಶೋಧಕರಾದ ಪುರುಷೋತ್ತಮ ನಾಗೇಶ ಓಕ್ ಇವರು ‘ಮುಮ್ತಾಜಳ ಶವವನ್ನು ಬುರ‍್ಹಾನಪುರದಲ್ಲಿ ಹುಗಿಯಲಾಗಿತ್ತು ಹಾಗೂ ತಾಜಮಹಲ್ ನಡಿಯಲ್ಲಿ ಶಿವಲಿಂಗವಿದೆ’, ಎಂದು ಹೇಳಿ ‘ತೇಜೋಮಹಾಲಯದ ಅಸ್ತಿತ್ವದ ೧೦೮ ಪುರಾವೆಗಳನ್ನು ನೀಡಿದ್ದಾರೆ. ಅದನ್ನು ನೀಡಿಯೂ ಅನೇಕ ವರ್ಷಗಳಾದವು; ಆದರೆ ಇಂದಿನ ವರೆಗೆ ಅದಕ್ಕೆ ಆಡಳಿತದ ಅಥವಾ ನ್ಯಾಯಾಂಗದ ಅಧಿಕೃತ ಮನ್ನಣೆ ಸಿಕ್ಕಿಲ್ಲ. ಈಗ ಹಿಂದೂಗಳು ಆ ವಿಷಯದಲ್ಲಿ ಜಾಗೃತರಾಗಿದ್ದಾರೆ. ಆದ್ದರಿಂದ ಕಾಶಿ ವಿಶ್ವೇಶ್ವರನ ಹಾಗೆಯೆ ಶೀಘ್ರದಲ್ಲಿಯೆ ಅದರ ಸತ್ಯವೂ ಬಹಿರಂಗವಾಗುವುದು. ‘ರಾಮ ಮಂದಿರದ ನ್ಯಾಯಾಂಗ ಹೋರಾಟದ ಭವ್ಯ ಹಾಗೂ ಅದ್ವಿತೀಯ ಯಶಸ್ಸಿನ ನಂತರ ಕಾಶಿ ಮತ್ತು ಮಥುರಾ ಆಕ್ರಮಣಮುಕ್ತವಾಗುವ ಕ್ಷಣ ಸಮೀಪಿಸಿದೆ’, ಎಂದು ಹಿಂದೂಗಳಿಗೆ ಅರಿವಾಗಿದೆ.

‘ಮಸೀದಿಗಳ ಮೇಲಿನ ಸಾವಿರಾರು ಭೋಂಗಾಗಳು ಕೆಳಗಿಳಿಯಬಹುದು’, ಎಂದು ಯಾರಾದರೂ ಎರಡು ತಿಂಗಳ ಹಿಂದೆ ಹೇಳುತ್ತಿದ್ದರೆ ಯಾರಿಗೂ ನಂಬಲು ಸಾಧ್ಯವಿರಲಿಲ್ಲ. ಆದರೆ ಮನಸೆಯ ಅಧ್ಯಕ್ಷ ರಾಜ ಠಾಕರೆ ಇವರು ಹಿಂದೂಗಳಿಗೆ ಕರೆ ನೀಡಿದಾಗ ಅನೇಕ ಸ್ಥಳಗಳಲ್ಲಿ ಮುಸಲ್ಮಾನ ನಾಯಕರೇ ನಿಯಮಗಳನ್ನು ಪಾಲಿಸಲು ಆದೇಶ ನೀಡಿದರು. ನೂರಾರು ವರ್ಷಗಳಿಂದ ಸಾಧ್ಯವಾಗದ ಈ ಕಾರ್ಯವು ಅತ್ಯಲ್ಪ ಕಾಲದಲ್ಲಿ ಆಯಿತು. ಹಿಂದೂಗಳ ಮಹಾನ ಸನಾತನ ಸಂಸ್ಕೃತಿಯ ಪುನರುಜ್ಜೀವನವಾಗುವುದು ಈಗ ಇದೇ ರೀತಿಯಲ್ಲಿ ಶೀಘ್ರಗತಿಯಲ್ಲಿ ಆಗುವ ಚಿಹ್ನೆ ಕಾಣಿಸುತ್ತಿದೆ. ಇಂದು ಪ್ರಾಚೀನ ಮಂದಿರಗಳು ಮತ್ತು ಮೂರ್ತಿಕಲೆಯ ಮೂಲಕ ಶಾಶ್ವತವಾಗಿದ್ದ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಗತಿ ಹೊಂದಿರುವ ಜ್ಞಾನ-ವಿಜ್ಞಾನವು ಹೇಗೆ ಅಸ್ತಿತ್ವದಲ್ಲಿತ್ತು, ಎಂಬುದರ ದೊಡ್ಡ ಸಂಶೋಧನೆಯಾಗುತ್ತಿದೆ. ತಮಿಳುನಾಡಿನ ಕುಂದಮವಾದ ಕುನಾಥಸ್ವಾಮಿ ಮಂದಿರದಲ್ಲಿ ‘ಶುಕ್ರಾಣು ಮತ್ತು ಅಂಡಾಣು’ಗಳ ಮಿಲನ, ಹೊಟ್ಟೆಯಲ್ಲಿನ ಗರ್ಭದ ವಿವಿಧ ಅವಸ್ಥೆ, ಗರ್ಭ ಹೊರಗೆ ಬರುವ ಸಮಯ ಇತ್ಯಾದಿ ವಿಷಯಗಳ ವಿಸ್ತಾರವಾದ ಶಿಲ್ಪಕಲೆಯಿದೆ. ಇಂದು ಯಾವ ವಿಷಯವು ಕೇವಲ ‘ಎಕ್ಸ್‌ರೆ’ಯಂತ್ರದಿಂದ ತಿಳಿಯುತ್ತದೋ, ಅದು ಋಷಿಮುನಿಗಳಿಗೆ ತಿಳಿದಿತ್ತು, ಎಂಬುದು ಇದರಿಂದ ಅರಿವಾಗುತ್ತದೆ. ಹರ್ಯಾಣಾದಲ್ಲಿ ೫ ಸಾವಿರ ವರ್ಷಗಳ ಹಿಂದಿನ ಆಭರಣಗಳನ್ನು ತಯಾರಿಸುವ ದೊಡ್ಡ ಉದ್ಯೋಗದ ಸ್ಥಳ ಇತ್ತೀಚೆಗಷ್ಟೆ ಸಿಗುವುದು ಅಥವಾ ತಮಿಳುನಾಡಿನಲ್ಲಿ ೪೨೦೦ ವರ್ಷಗಳ ಹಿಂದೆ ಕಬ್ಬಿಣವನ್ನು ಉಪಯೋಗಿಸಲಾಗುತ್ತಿತ್ತು ಎಂದು ಮುಖ್ಯಮಂತ್ರಿ ಸ್ಟಾಲಿನ್ ಇವರು ವಿಧಾನಸಭೆಯಲ್ಲಿ ಹೇಳಿರುವಂತಹ ವಿಷಯಗಳಿಂದ ಹಿಂದೂ ಸಂಸ್ಕೃತಿಯ ಶ್ರೇಷ್ಠತೆಯು ಪುನಃ ಪುನಃ ಸಿದ್ಧವಾಗುತ್ತಿದೆ. ಹೀಗಿರುವಾಗ ಅರೀಫ್ ಖಾನ್ ಇವರಿಗೂ ‘ಇದೇ ವಿಷಯದಲ್ಲಿ ಯೋಗ್ಯವಾದ ಶಿಕ್ಷಣವನ್ನು ನೀಡಲಾಗಬೇಕು’, ಎಂದು ಅನಿಸುವುದು ಅತ್ಯಂತ ಸ್ವಾಭಾವಿಕವಾಗಿದೆ.