‘ಪ್ರತಿದಿನ ನಡೆದಿರುವ ಆತ್ಮಹತ್ಯೆಗಳು, ಜೀವನದಲ್ಲಿನ ನಿರಾಶೆ, ಸಂಕಟ, ಸತ್ವಪರೀಕ್ಷೆಯ ಕ್ಷಣಗಳು, ಒತ್ತಡದ ಪ್ರಸಂಗಗಳನ್ನು ಎದುರಿಸಲು ಆವಶ್ಯಕವಾಗಿರುವ ಆತ್ಮಬಲವನ್ನು ನೀಡಲು ಸದ್ಯದ ಶಿಕ್ಷಣಪದ್ಧತಿ, ಸಮಾಜರಚನೆ ಮತ್ತು ಸಂಸ್ಕಾರಗಳು ವಿಫಲವಾಗಿರುವುದನ್ನು ತೋರಿಸುತ್ತದೆ. ‘ಜೀವನದಲ್ಲಿನ ಶೇ. ೮೦ ರಷ್ಟು ದುಃಖಗಳಿಗೆ ಅಧ್ಯಾತ್ಮವೇ ಮೂಲ ಕಾರಣವಾಗಿರುತ್ತದೆ. ಅವುಗಳನ್ನು ಕೇವಲ ಆಧ್ಯಾತ್ಮಿಕ ಉಪಾಯಗಳಿಂದ, ಅಂದರೆ ಸಾಧನೆಯಿಂದ ದೂರಗೊಳಿಸಲು ಸಾಧ್ಯವಾಗುತ್ತದೆ’, ಎಂದು ಅಧ್ಯಾತ್ಮಶಾಸ್ತ್ರವು ಹೇಳುತ್ತದೆ.
ಸಾಧನೆಯಿಂದ ಪ್ರಾಪ್ತವಾಗುವ ಆತ್ಮಬಲದಿಂದ ಮನಸ್ಸು ಗಟ್ಟಿ, ಹಾಗೆಯೇ ಸಮಾಧಾನಿ ಮತ್ತು ಆನಂದಿಯಾಗುತ್ತದೆ. ಸಾಧನೆಯಿಂದ ಕೇವಲ ಮನಸ್ಸಿನ ಏಕಾಗ್ರತೆ ಸಾಧ್ಯವಾಗುತ್ತದೆ ಅಲ್ಲದೇ ಅದರಿಂದ ಮನಃಶಾಂತಿಯೂ ಸಿಗುತ್ತದೆ. ಪ್ರತಿಯೊಂದು ವಿಷಯವು ಪ್ರಾರಬ್ಧಕ್ಕನುಸಾರ ಘಟಿಸಲಿದೆ, ಎಂಬ ಶಾಶ್ವತ ಸತ್ಯದ ಅರಿವಿರುತ್ತದೆ. ಇಷ್ಟೇ ಅಲ್ಲದೇ ಸತತವಾಗಿ ಪ್ರಯತ್ನಿಸುತ್ತಿರುವುದು, ಜಿಗುಟುತನ ಇವುಗಳಂತಹ ಗುಣಗಳು ಮೂಡಿ ಧ್ಯೇಯಪೂರ್ತಿಗಾಗಿ ಈಶ್ವರನ ಅಧಿಷ್ಠಾನ ಲಭಿಸಿ ಯಶಸ್ಸೂ ಸಿಗುತ್ತದೆ. ಸಾಧನೆಯೇ ಎಲ್ಲ ಪ್ರಶ್ನೆಗಳಿಗೆ ಅಂತಿಮ ಉತ್ತರವಾಗಿದೆ. ಆದುದರಿಂದ ಶಿಕ್ಷಣಪದ್ಧತಿಯಲ್ಲಿ ಧರ್ಮಶಿಕ್ಷಣ, ಧರ್ಮಾಚರಣೆ, ಸಾಧನೆ ಇತ್ಯಾದಿ ವಿಷಯಗಳ ಸಮಾವೇಶವಿರುವುದು ಅತ್ಯಾವಶ್ಯಕವಾಗಿದೆ.’
ಮಾನಸಿಕ ಒತ್ತಡವನ್ನು ದೂರಗೊಳಿಸಲು ಸಮಾಜಕ್ಕೆ ಸಾಧನೆ ಮತ್ತು ಧರ್ಮಾಚರಣೆಯನ್ನು ಕಲಿಸುವುದು ಆವಶ್ಯಕವಾಗಿದೆ. ಸನಾತನದ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾವಿರಾರು ಸಾಧಕರು ಸಾಧನೆಯನ್ನು ಮಾಡುವುದರಿಂದ ಮಾನಸಿಕ ಒತ್ತಡ ದೂರವಾಗಿ ಜೀವನವು ಆನಂದಮಯವಾದುದರ ಅನುಭೂತಿಯನ್ನು ಪಡೆದಿದ್ದಾರೆ !
ಸಾಧನೆಯನ್ನು ಮಾಡುವುದರಿಂದ ಸಕಾರಾತ್ಮಕ ವಿಚಾರಗಳು ಬಂದು ವ್ಯಕ್ತಿಯು ಶಾಶ್ವತವಾಗಿ ಆನಂದಮಯ ಜೀವನವನ್ನು ನಡೆಸಬಹುದು. ವಿಜ್ಞಾನದ ಮೂಲಕ ಪ್ರಾಪ್ತವಾಗುವ ಭೌತಿಕ ಸಾಧನಗಳಿಂದ ಕ್ಷಣಿಕ ಸುಖ ಸಿಗುತ್ತದೆ, ಶಾಶ್ವತ ಆನಂದ ಸಿಗುವುದಿಲ್ಲ, ಆದುದರಿಂದ ಮನುಷ್ಯನಿಗೆ ಅಧ್ಯಾತ್ಮದ ಹೊರತು ಬೇರೆ ಮಾರ್ಗವೇ ಇಲ್ಲ, ಇದೇ ಪುನಃ ಅಧೋರೇಖಿತವಾಗುತ್ತದೆ. ಈ ಆನಂದಕ್ಕಾಗಿ ಬಹಳಷ್ಟು ಪಾಶ್ಚಾತ್ಯರು ಭಾರತಕ್ಕೆ ಸಾಧನೆಯನ್ನು ಕಲಿಯಲು ಬರುತ್ತಿದ್ದಾರೆ ! ಆದುದರಿಂದ ಸರಕಾರವು ನಾಗರಿಕರಿಗೆ ಧರ್ಮಶಿಕ್ಷಣವನ್ನು ನೀಡಿ ಸಾಧನೆಯನ್ನು ಕಲಿಸುವುದು ಅತ್ಯಾವಶ್ಯಕವಾಗಿದೆ !
ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆಗಳಂತಹ ಘಟನೆಗಳು ಘಟಿಸುತ್ತಿವೆ, ಇದರಿಂದ ಆಪತ್ಕಾಲದ ತೀವ್ರತೆ ಗಮನಕ್ಕೆ ಬರುತ್ತದೆ. ಸಾಧನೆಯನ್ನು ಮಾಡಿದರೆ ಮಾತ್ರ ಭಗವಂತನು ಮನುಷ್ಯನ ರಕ್ಷಣೆ ಮಾಡುವನು, ಎಂಬುದನ್ನು ಗಮನದಲ್ಲಿಡಿ !
ಯಾರ ಪ್ರಾಣ ಹೋಗಿದೆಯೋ ಅವರಿಗಾಗಿ ಮತ್ತು ಯಾರು ಬದುಕಿದ್ದಾರೆ, (ಯಾರ ಪ್ರಾಣ ಹೋಗಲಿಲ್ಲ) ಅವರಿಗಾಗಿಯೂ ವಿದ್ವಾಂಸರು ದುಃಖಿಸುವುದಿಲ್ಲ !ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ | ಗತಾಸೂನಗತಾಸೂಂಶ್ಚ ನಾನುಶೋಚನ್ತಿ ಪಣ್ಡಿತಾಃ || – ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೧೧ ಅರ್ಥ : ಹೇ ಅರ್ಜುನಾ, ನೀನು ಯಾರ ಬಗ್ಗೆ ದುಃಖಿಸಬಾರದೋ, ಅಂತಹ ಜನರಿಗಾಗಿ ದುಃಖಿಸುತ್ತಿರುವೆ ಮತ್ತು ವಿದ್ವಾಂಸನಂತೆ ಸಮರ್ಥನೆ ಮಾಡುತ್ತಿರುವೆ; ಆದರೆ ಯಾರ ಪ್ರಾಣ ಹೋಗಿದೆಯೋ ಅವರಿಗಾಗಿ ಮತ್ತು ಯಾರ ಪ್ರಾಣ ಹೋಗಲಿಲ್ಲ, ಅವರಿಗಾಗಿಯೂ ವಿದ್ವಾಂಸರು ದುಃಖಿಸುವುದಿಲ್ಲ. |