ಆತ್ಮಬಲವು ಹೇಗಿರಬೇಕು ? ಎಂಬುದರ ಉತ್ತಮ ಉದಾಹರಣೆಯೆಂದರೆ ಛತ್ರಪತಿ ಶಿವಾಜಿ ಮಹಾರಾಜರು ! ಪುರಂದರ ಕೋಟೆಯ ಒಪ್ಪಂದದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ೨೦ ವರ್ಷಗಳಲ್ಲಿ ಶ್ರಮ ಪಟ್ಟು ಗಳಿಸಿದ್ದನ್ನು ಒಂದೇ ವರ್ಷದಲ್ಲಿ ಕಳೆದುಕೊಳ್ಳಬೇಕಾಯಿತು. ಅಷ್ಟೇ ಅಲ್ಲದೇ ಎಲ್ಲ ಆತ್ಮೀಯರನ್ನಷ್ಟೇ ಅಲ್ಲದೇ ತನ್ನ ಪ್ರಾಣಕ್ಕಿಂತ ಮಿಗಿಲಾದ ಸಹಪಾಠಿಗಳ ಜೀವನವನ್ನೂ ಮುಡುಪಾಗಿಟ್ಟು ಅತ್ಯಂತ ಕಪಟ, ಕ್ರೂರ ವೈರಿಯ ಮುಂದೆ ಹೋಗಿ ನಿಲ್ಲಬೇಕಾಯಿತು. ಔರಂಗಜೇಬನ ಕಣ್ಗಾವಲಿನಲ್ಲಿ ನಿಲ್ಲಬೇಕಾಯಿತು. ಆ ಸಮಯದಲ್ಲಿ ಶಿವಾಜಿ ಮಹಾರಾಜರು ೩೬ ವರ್ಷದವರಿದ್ದರು ! ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಹಾರಾಜರ ಆತ್ಮಬಲವು ದೃಢವಾಗಿತ್ತು. ಅವರು ಯುಕ್ತಿಯಿಂದ ಸಹಾಯಕರನ್ನು ಸುಖರೂಪವಾಗಿ ಹೊರಗೆ ತೆಗೆದರು ಮತ್ತು ನಂತರ ತಾವು ಅದರಿಂದ ನಿಧಾನವಾಗಿ ಹೊರಗೆ ಬಂದರು. ಧೈರ್ಯ, ಸಹನೆ ಮತ್ತು ಜಾಗೃತೆಯಿಂದ ತಮ್ಮ ಮಾರ್ಗಕ್ರಮಣವನ್ನು ನಿರಂತರವಾಗಿಟ್ಟು ತಮ್ಮ ಜನ್ಮಸ್ಥಳಕ್ಕೆ ಸುಖರೂಪವಾಗಿ ತಲುಪಿದರು. ೨೦ ವರ್ಷಗಳ ತನಕ ಅವಿರತವಾಗಿ ಶ್ರಮಪಟ್ಟು ನಿಲ್ಲಿಸಿದ್ದನ್ನು ಕಳೆದುಕೊಂಡಿದ್ದರೂ, ಅದನ್ನು ಮುಂದಿನ ಕೇವಲ ಒಂದು ವರ್ಷದಲ್ಲಿ ಪುನಃ ಪಡೆದರು.ಇಷ್ಟೆ ಅಲ್ಲದೇ, ಆ ವೈರಿಯನ್ನು ತಮ್ಮ ಪರಾಕ್ರಮದಿಂದ ಮಣ್ಣು ಮುಕ್ಕಿಸಿದರು. ಕಳೆದು ಕೊಂಡಿದ್ದನ್ನು ಪಡೆದರಲ್ಲದೇ ಅದರ ಜೊತೆ ೩೬೦ ಕೋಟೆಗಳನ್ನು ಮುಂದಿನ ೮ ವರ್ಷಗಳಲ್ಲಿಯೇ ಕಟ್ಟಿದರು. ಸಂಕಟದ ಮೇಲೆ ಆತ್ಮಹತ್ಯೆಯು ಉಪಾಯವಾಗಿರದೇ, ಶೀಘ್ರಗತಿಯಿಂದ ಹೋರಾಡುವುದರಲ್ಲಿದೆ ಎಂಬುದನ್ನು ಛತ್ರಪತಿ ಶಿವಾಜಿ ಮಹಾರಾಜರು ಈ ಘಟನೆಯಿಂದ ನಮಗೆಲ್ಲರಿಗೆ ಪಾಠವನ್ನೇ ಕಲಿಸಿದರು.