‘ಛಾವಾ’ (ಅಂದರೆ ಸಿಂಹದ (ಛ. ಶಿವಾಜಿ ಮಹಾರಾಜರ) ಮರಿ) ಈ ಹಿಂದಿ ಚಲನಚಿತ್ರ ಫೆಬ್ರವರಿ ೧೪ ರಂದು ಅಂದರೆ ‘ವ್ಯಾಲೆಂಟೈನ್ಸ್ ಡೇ’ ಎಂಬ ಅಸಭ್ಯ ಪದ್ಧತಿಯನ್ನು ಮುರಿಯುವಲ್ಲಿ ಮಹಾನ್ ಕಾರ್ಯವನ್ನು ಮಾಡಿದೆ. ಈ ಚಲನಚಿತ್ರವು ಮೊದಲ ಬಾರಿಗೆ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಅದ್ವಿತೀಯ ಶೌರ್ಯ, ಅಪಾರ ಧೈರ್ಯ, ಸ್ವರಾಜ್ಯದ ಬಗೆಗಿನ ಪರಾಕಾಷ್ಠೆಯ ನಿಷ್ಠೆ, ಜಾಜ್ವಲ್ಯ ಧರ್ಮಪ್ರೇಮ ಮತ್ತು ಮೊಗಲರ ಮೃಗೀಯ ಕ್ರೌರ್ಯವನ್ನು ಇಡೀ ಜಗತ್ತಿಗೆ ತಿಳಿಸಿತು. ಚಲನಚಿತ್ರಗಳ ಮೂಲಕ ಹಿಂದೂ ಧರ್ಮ ಮತ್ತು ದೇವತೆಗಳನ್ನು ನಿರಂತರವಾಗಿ ಅಪಹಾಸ್ಯ ಮಾಡುವ ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಭಯೋತ್ಪಾದಕರಂತೆ ಚಿತ್ರಿಸುವ ಮತ್ತು ಸತ್ಯ ಕಥೆಯನ್ನು ತಿರುಚಿ ‘ಆಸಿಡ್’ ಎರಚಿದ ಮುಸಲ್ಮಾನ ವ್ಯಕ್ತಿಯ ಹೆಸರನ್ನು ಬದಲಾಯಿಸಿ ಅವನನ್ನು ಹಿಂದೂ ಎಂದು ತೋರಿಸುವ ದುಷ್ಕೃತ್ಯ ಮಾಡುವ ಮೂಲಕ ಹಸಿರು ಸಮಾಜಕ್ಕೆ ಕೇಸರಿ ಪ್ರತ್ಯುತ್ತರವೇ ನಿರ್ದೇಶಕ ಲಕ್ಷ್ಮಣ್ ಉತ್ತೇಕರ್ ಇವರು ನೀಡಿದ್ದಾರೆ.
ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ಇಲ್ಲಿಯವರೆಗೆ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿತ್ತು. ಅವರ ಕುರಿತು ಧಾರಾವಾಹಿಗಳನ್ನು ನಿರ್ಮಿಸುವವರನ್ನು ಕೆಲವು ಮುಸಲ್ಮಾನ ಓಲೈಕೆ ಮಾಡುವ ಆಡಳಿತಗಾರರು ತಮ್ಮ ಬಗ್ಗೆ ರಹಸ್ಯವಾಗಿ ವಿರೋಧಿಸಿದರು. ‘೧೬೮೯ ಸಂಭಾಜಿ’ಯಂತಹ ಚಲನಚಿತ್ರಗಳನ್ನು ಹಣಕಾಸಿನ ಕೊರತೆಯಿಂದಾಗಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾದರು. ಸಂಭಾಜಿ ಮಹಾರಾಜರ ಪಾತ್ರವನ್ನು ನಿರ್ವಹಿಸಿದ ಕಲಾವಿದರನ್ನು ಗುರಿಯಾಗಿಸಿಕೊಂಡು, ಮರಾಠಿ ಚಲನಚಿತ್ರ ಮತ್ತು ರಂಗಭೂಮಿ ಉದ್ಯಮವನ್ನು ಜಾತ್ಯತೀತವಾದಿಗಳ ಸೆರಗಿಗೆ ಕಟ್ಟಿಹಾಕಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಮರಾಠಿ ಚಲನಚಿತ್ರ ನಿರ್ಮಾಪಕರು ಈ ಅಡೆತಡೆಗಳನ್ನು ಮುರಿಯಲು ಪ್ರಯತ್ನಿಸಿದ್ದಾರೆ; ಆದರೆ ಅವರಿಗೆ ಸೀಮಿತ ಯಶಸ್ಸು ಸಿಕ್ಕಿತು. ಇದಕ್ಕೆ ವ್ಯತಿರಿಕ್ತವಾಗಿ, ‘ಛಾವಾ’ ಚಿತ್ರವು ಎಲ್ಲಾ ನಿರ್ಬಂಧಗಳನ್ನು ಮುರಿದು ಜಾತ್ಯತೀತರಿಗೆ ಬಲವಾದ ಪೆಟ್ಟು ನೀಡಿದೆ. ‘ವ್ಯಾಲೆಂಟೈನ್ಸ್ ಡೇ’ದ ಸ್ವಪ್ನಮಯ ಜೀವನದಲ್ಲಿ ಮುಳುಗಿರಬಹುದಾದ ಯುವಕರು, ಸಂಭಾಜಿ ಮಹಾರಾಜರ ಅಸಾಧಾರಣ ರಾಷ್ಟ್ರ ಮತ್ತು ಧರ್ಮ ಪ್ರೇಮದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಇವೆಲ್ಲವೂ ಸಂಭಾಜಿ ಮಹಾರಾಜರ ಮಹೋನ್ನತ ಜೀವನಗಾಥೆಯನ್ನು ಸಪ್ತಸಾಗರದಾಚೆಗೆ ಕೊಂಡೊಯ್ಯಲು ನಿಪುಣ ನಿರ್ದೇಶಕ ಲಕ್ಷ್ಮಣ್ ಉತೇಕರ್ ಅವರ ಯಶಸ್ವಿ ಪ್ರಯತ್ನಗಳ ಪ್ರತಿಫಲವೆಂದು ಹೇಳಲೇಬೇಕು !

ಚಲನಚಿತ್ರದ ಮಹತ್ವಪೂರ್ಣ ವೈಶಿಷ್ಟ್ಯಗಳು
|
೧. ಚಲನಚಿತ್ರದ ವೈಶಿಷ್ಟ್ಯಗಳು !
ಅ. ಚಲನಚಿತ್ರ ಕಥೆಯನ್ನು ದಿ. ಶಿವಾಜಿ ಸಾವಂತ್ ಅವರ ಕಾದಂಬರಿ ‘ಛಾವಾ’ದಿಂದ ತೆಗೆದುಕೊಳ್ಳಲಾಗಿದೆ; ಆದಾಗ್ಯೂ, ಕಾದಂಬರಿಯಲ್ಲಿನ ವಿಶಿಷ್ಟ ಪ್ರಸಂಗಗಳು ಆಯ್ಕೆ ಅದ್ಭುತವಾಗಿದೆ. ಋಷಿ ವೀರಮಾನಿ ಮತ್ತು ಇರ್ಷಾದ್ ಕಾಮಿಲ್ ಬರೆದ ಸಂಭಾಷಣೆ ಹೆಚ್ಚು ಕ್ಷಾತ್ರತೇಜಸ್ಸಿನಿಂದ ತುಂಬಿದ್ದು, ತೀಕ್ಷ್ಣವಾಗಿವೆ.
ಆ. ಆರಂಭದಲ್ಲಿ, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾಹಿತಿಯನ್ನು ಸಂಕ್ಷಿಪ್ತವಾಗಿ ನಿರೂಪಿಸಲಾಗಿದೆ. ತದನಂತರ ಪ್ರಾರಂಭವಾದ ಮೊದಲ ಯುದ್ಧದ ಪ್ರಸಂಗದಿಂದಲೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ.
ಇ. ಈ ಚಲನಚಿತ್ರದ ಆರಂಭದಲ್ಲಿ ಸಂಭಾಜಿ ಮಹಾರಾಜರ ಜಾತ್ಯತೀತತೆಯನ್ನು ತೋರಿಸುವ ಒಂದು ಘಟನೆ ಇದೆ; ಆದರೆ, ತದನಂತರ ಎಲ್ಲಿಯೂ ಜಾತ್ಯತೀತತೆಯನ್ನು ಹೊಗಳಿಲ್ಲ. ಇಂದು, ಅನೇಕ ಜನರು ಛತ್ರಪತಿ ಶಿವಾಜಿ ಮಹಾರಾಜರನ್ನು ‘ಜಾತ್ಯತೀತ’ ಎಂದು ಬಿಂಬಿಸಲು ಉದ್ದೇಶಪೂರ್ವಕವಾಗಿ ಕೆಲವು ಮುಸಲ್ಮಾನರನ್ನು ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ತೋರಿಸುತ್ತಾರೆ; ಆದರೆ, ಈ ಚಿತ್ರದಲ್ಲಿ ಅಂತಹ ದೃಶ್ಯವಿಲ್ಲ.
೨. ಚಲನಚಿತ್ರ ನಟರ ಅದ್ಭುತ ನಟನೆ !
ಅ. ವಿಕ್ಕಿ ಕೌಶಲ್ ‘ಸಂಭಾಜಿ ಮಹಾರಾಜರ’ ಚಿತ್ರದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕಾಗಿ ಅವರು ಪಟ್ಟ ಕಠಿಣ ಪರಿಶ್ರಮವೆಂದರೆ ತೂಕ ಹೆಚ್ಚಿಸಿಕೊಳ್ಳುವುದು, ಕತ್ತಿವರಸೆ ಕಲಿಯುವುದು ಮತ್ತು ಕುದುರೆ ಸವಾರಿ ಕಲಿಯುವುದರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಂಭಾಜಿಯವರ ಪಾತ್ರ ಎಷ್ಟು ವಾಸ್ತವಿಕವಾಗಿ ನಟಿಸಿದ್ದಾರೆಂದರೆ ಅದು ಅವರ ನರನಾಡಿಗಳಲ್ಲಿಯೇ ಹರಿದಾಡುತ್ತಿರುವಂತೆ ತೋರುತ್ತದೆ. ಸಂಭಾಜಿ ಮಹಾರಾಜರನ್ನು ಜೈಲಿಗೆ ಹಾಕಿದ ನಂತರ ಅವರ ಕೋಪ, ದೇಹವು ನೋವಿನಲ್ಲಿದ್ದಾಗಲೂ ಜಾಗೃತವಾಗಿರುವ ಅವರ ನಿರ್ಭೀತ ವರ್ತನೆ, ನಾಲಿಗೆ ಕತ್ತರಿಸಿದ ನಂತರವೂ ಅವರ ಕಣ್ಣುಗಳಿಂದ ಹೊರಬರುವ ಬೆಂಕಿ, ದೇಶಭಕ್ತಿಯ ಜ್ವಾಲೆ ಮತ್ತು ಅವರ ಜ್ವಲಂತ ಧರ್ಮನಿಷ್ಠೆ ಎಲ್ಲವೂ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಇಂದಿನ ಪೀಳಿಗೆಯ ಅತ್ಯಂತ ಪ್ರತಿಭಾನ್ವಿತ, ಅಧ್ಯಯನಶೀಲ ಮತ್ತು ವಾಸ್ತವವನ್ನು ಹಿಡಿದು ಪಾತ್ರದೊಂದಿಗೆ ಏಕರೂಪರಾಗುವ ವಿಶೇಷ ನಟರೆಂದು ವಿಕಿ ಕೌಶಲ್ ಉಲ್ಲೇಖಿಸಬೇಕು.
ಆ. ಶಾಂತವಾಗಿ ಕಾಣುವ ವೃದ್ಧನು ದ್ವೇಷಕ್ಕೆ ಒಳಗಾಗಿ ಯಾವ ರೀತಿ ಹೆದರಿಕೆಯಿಲ್ಲದ ಕೊಲೆಗಾರನಾಗುತ್ತಾನೆ ಎನ್ನುವುದು ಔರಂಗಜೇಬನ ಪಾತ್ರವನ್ನು ನಿರ್ವಹಿಸಿರುವ ಅಕ್ಷಯ್ ಖನ್ನಾ ಸುಂದರವಾಗಿ ಅಭಿನಯಿಸಿದ್ದಾರೆ. ಅಕ್ಷಯ್ ಖನ್ನಾ ಅವರ ಕೊಡುಗೆಯು ಮೊಘಲರ ಹಸಿರು ಮನೋಭಾವದ ಬಗ್ಗೆ ಪ್ರೇಕ್ಷಕರಲ್ಲಿ ಆಕ್ರೋಶವನ್ನು ಉಂಟು ಮಾಡುತ್ತದೆ.
ಇ. ರಶ್ಮಿಕಾ ಮಂದಣ್ಣ ಅವರು ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಹಿಂದೂ ಮಹಾರಾಣಿಯ ಆತ್ಮಸಂಯಮ, ಅತ್ಯುತ್ತಮ ರಾಜಕೀಯ ತಿಳುವಳಿಕೆ, ಮನುಷ್ಯನನ್ನು ಗುರುತಿಸುವ ಕಲೆ, ತತ್ತ್ವನಿಷ್ಠೆ ಮತ್ತು ಕೇವಲ ಪತಿಯ ಮನೋಭಾವ ಮಾತ್ರವಲ್ಲ, ಸ್ವರಾಜ್ಯದ ಅಗತ್ಯವನ್ನು ಅರಿತು ದುಃಖವನ್ನು ಮರೆಮಾಚುವ ಧೈರ್ಯಶಾಲಿ ಮಹಾರಾಣಿ ಈ ಎಲ್ಲಾ ಛಾಯೆಗಳನ್ನು ರಶ್ಮಿಕಾ ಅವರು ಸಮರ್ಥವಾಗಿ ವ್ಯಕ್ತಪಡಿಸಿದ್ದಾರೆ.
ಈ. ಇತರ ಕಲಾವಿದರಲ್ಲಿ ಅಶುತೋಷ್ ರಾಣಾ (ಸೇನಾಪತಿ ಹಂಬೀರರಾವ್ ಮೋಹಿತೆ), ವಿನೀತ್ ಕುಮಾರ್ ಸಿಂಗ್ (ಕವಿ ಕಲಶ), ದಿವ್ಯಾ ದತ್ತಾ (ಮಹಾರಾಣಿ ಸೋಯರಾಬಾಯಿ), ಸಂತೋಷ್ ಜುವೇಕರ್ (ರಾಯಾಜಿ ಮಾಲ್ಗೆ) ಮುಂತಾದವರ ಪಾತ್ರಗಳು ಸಹ ಗಮನಾರ್ಹವಾಗಿವೆ.
೩. ಇತರ ಪ್ರಮುಖ ಅಂಶಗಳು
ಅ. ಚಿತ್ರದಲ್ಲಿನ ಸಂಭಾಜಿ ಮಹಾರಾಜರ ಸಂಪೂರ್ಣ ಪಾತ್ರವು ಅನುಕರಣೀಯವಾಗಿದೆ. ಅವರ ನಾಯಕತ್ವ, ನಿರ್ಣಯ ಕೌಶಲ್ಯ, ಧರ್ಮಾಭಿಮಾನ, ಸಹಿಷ್ಣುತೆ, ಅದಮ್ಯ ಇಚ್ಛಾಶಕ್ತಿ, ಕ್ಷಾತ್ರತೇಜ, ಬ್ರಾಹ್ಮತೇಜ, ದೇವರಲ್ಲಿನ ಶ್ರದ್ಧೆ ಇತ್ಯಾದಿ ಗುಣಗಳನ್ನು ಇಲ್ಲಿ ಕಲಿಯಬಹುದು. ಮುಂಭಾಗದಿಂದ ಬರುವ ಶತ್ರುವಿಗಿಂತ ನಮ್ಮ ಗುಂಪಿನಲ್ಲಿರುವ ವಿಶ್ವಾಸಘಾತಕರು ಎಷ್ಟು ಅಪಾಯಕಾರಿ ಎಂದು ಈ ಚಿತ್ರವು ಪ್ರಮುಖ ಪಾಠವನ್ನು ನೀಡುತ್ತದೆ.
ಆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಎ.ಆರ್. ರೆಹಮಾನ್ ಅವರು ನೀಡಿದ್ದಾರೆ. ಸಂಭಾಜಿ ಮಹಾರಾಜರ ಬಗ್ಗೆ ‘ತೂಫಾನ್’ ಹಾಡು ಶ್ರವಣೀಯವಾಗಿದೆ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಶಕ್ತಿಯನ್ನು ಸೃಷ್ಟಿಸುತ್ತದೆ.
ಇ. ಚಿತ್ರಮಂದಿರದಲ್ಲಿ ಮೊದಲೇ ಕೇಸರಿ ಧ್ವಜಗಳನ್ನು ಹಾಕಲಾಗಿದೆ. ಅನೇಕ ಹಿಂದೂ ಯುವಕರ ಗುಂಪುಗಳು ಕೇಸರಿ ಧ್ವಜಗಳನ್ನು ಹಿಡಿದುಕೊಂಡು, ಕೇಸರಿ ಶಾಲುಗಳು, ವೇಷಭೂಷಣಗಳನ್ನು ಧರಿಸಿ ಜಯಘೋಷಗಳನ್ನು ಮಾಡುತ್ತಾ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಸಂಭಾಜಿ ಮಹಾರಾಜರ ಪ್ರವೇಶದ ಸಮಯದಲ್ಲಿ ಚಿತ್ರಮಂದಿರದಲ್ಲಿ ಪ್ರಾರಂಭವಾಗುವ ಜಯಘೋಷ ಮತ್ತು ಕೊನೆಯಲ್ಲಿ ಹರಡುವ ಸ್ಮಶಾನಮೌನವು ಹಿಂದೂಗಳ ಜೀವಂತಿಕೆಯ ಸಂಕೇತವಾಗಿದೆ. ಇದು ಒಂದು ರೀತಿಯಲ್ಲಿ ‘ವ್ಯಾಲೆಂಟೈನ್ಸ್ ಡೇ’ಯನ್ನು ಬದಿಗೊತ್ತಿ ಹಿಂದುತ್ವದ ಅಲೆಗಳನ್ನು ತರುವ ಈ ಚಿತ್ರದ ಬಗ್ಗೆ ಪ್ರತಿಯೊಬ್ಬ ಹಿಂದೂ ಕೃತಜ್ಞರಾಗಿರಬೇಕು ! ಹಾಗೆಯೇ, ಈ ಚಿತ್ರಕ್ಕೆ ಬಂದ ಮತಾಂಧರು ಮತ್ತು ಔರಂಗಜೇಬಪ್ರೇಮಿಗಳು ಯಾವುದೇ ಕಾರಣವನ್ನು ಕಂಡುಹಿಡಿದು ಹಿಂದೂಗಳ ಮೇಲೆ ದಾಳಿ ಮಾಡಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ! ಆದ್ದರಿಂದ ಹಿಂದೂಗಳು ಚಿತ್ರವನ್ನು ನೋಡುವಾಗ ಸರಿಯಾದ ಮುನ್ನೆಚ್ಚರಿಕೆ ಮತ್ತು ಜಾಗರೂಕತೆಯನ್ನು ವಹಿಸಬೇಕು !
೪. ಚಿತ್ರದ ಸರ್ವಸ್ವ ‘ಲಕ್ಷ್ಮಣ ಉತ್ತೇಕರ್’ ಅವರಿಗೆ ವಿಶೇಷ ಅಭಿನಂದನೆಗಳು !
ಲಕ್ಷ್ಮಣ ಉತ್ತೇಕರ್ ಅವರ ಚಿತ್ರ ನಿರ್ದೇಶನ ಅತ್ಯುತ್ತಮವಾಗಿದೆ. ಅವರ ಶಿವಾಜಿ ಮಹಾರಾಜರ ಪ್ರೀತಿಯ ಪ್ರಜ್ಞೆ ಚಿತ್ರದ ಎಲ್ಲಾ ಸನ್ನಿವೇಶಗಳಲ್ಲಿಯೂ ಬರುತ್ತದೆ. ಅವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಿದ್ದಾರೆ. ಜಾತ್ಯತೀತವಾದಿಗಳು ಅಥವಾ ಔರಂಗಜೇಬನ ವಂಶಜರು ಯಾವುದೇ ರೀತಿಯ ಟೀಕೆಗೆ ಅವಕಾಶ ನೀಡಬಾರದು, ಅದರಲ್ಲೂ ಅವರು ಯಶಸ್ವಿಯಾಗಿದ್ದಾರೆ. ಚಲನಚಿತ್ರ ಮಾಧ್ಯಮವಾಗಿ ಅಗತ್ಯವಿರುವ ಸಾಧನ ಶುಚಿತ್ವವನ್ನು ಕಾಪಾಡಿಕೊಳ್ಳುವಾಗ ಈ ಶೌರ್ಯಗಾಥೆಯನ್ನು ಜಗತ್ತಿನಾದ್ಯಂತ ಯಾವುದೇ ಅಡೆತಡೆಯಿಲ್ಲದೆ ತಲುಪಿಸುವ ಅವರ ಉದ್ದೇಶವು ಈಡೇರಿದೆ. ವಿದೇಶಗಳಲ್ಲಿ ಅಲೆಕ್ಸಾಂಡರ್‌ನಂತಹ ಸ್ವಯಂಘೋಷಿತ ಹೋರಾಟಗಾರರ ಸಣ್ಣಪುಟ್ಟ ಯುದ್ಧಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ಜಗತ್ತಿನಾದ್ಯಂತ ತಲುಪಿಸಿ ಅದರ ವೇತನದ ಮೇಲೆ ಜೀವನ ನಡೆಸುವ ಚಲನಚಿತ್ರ ನಿರ್ಮಾಪಕರನ್ನು ಉತ್ತೇಕರ್ ಅವರು ಮುಳುಗಿಸಿದ್ದಾರೆ.
ಉತ್ತೇಕರ ಅವರಿಗೆ ವಿಶೇಷ ಅಭಿನಂದನೆಗಳು ಏಕೆಂದರೆ ಅವರು ಈ ಚಿತ್ರದಲ್ಲಿ ಸಂಭಾಜಿ ಮಹಾರಾಜರ ಧರ್ಮವೀರತ್ವವನ್ನು ತೋರಿಸುವ ಒಂದು ಸಣ್ಣದಾದರೂ ಪ್ರಮುಖವಾದ ಸನ್ನಿವೇಶವನ್ನು ಹಾಕಿದ್ದಾರೆ. ಔರಂಗಜೇಬ್ ಸಂಭಾಜಿ ಮಹಾರಾಜರಿಗೆ ಧರ್ಮವನ್ನು ಬದಲಾಯಿಸುವ ಆಮಿಷವನ್ನು ತೋರಿಸುತ್ತಾನೆ; ಆದರೆ ರಾಜನು ಅವನನ್ನು ತನ್ನ ಗುಂಪಿಗೆ ಬರುವಂತೆ ಆಹ್ವಾನಿಸುತ್ತಾನೆ. ಈ ಸನ್ನಿವೇಶವು ‘ಕಳೆದ ಹಲವು ವರ್ಷಗಳಿಂದ ದಾವೂದ್ ಇಬ್ರಾಹಿಂನಂತಹ ಭೂಗತ ಜಗತ್ತಿನ ಮತಾಂಧ ಗೂಂಡಾಗಳ ಕೈಯಲ್ಲಿ ಕೈಗೊಂಬೆಯಾಗಿರುವ ಮತ್ತು ಮತಾಂಧರ ಪರವಾಗಿ ಮಾತನಾಡಲು ಭಯೋತ್ಪಾದಕರಿಗೆ ಹಿಂದೂ ಹೆಸರುಗಳನ್ನು ನೀಡಿ ಅವರನ್ನು ಅಪಖ್ಯಾತಿಗೊಳಿಸುವ ‘ಬಾಲಿವುಡ್’ಗೆ ‘ಕೇಸರಿ ಪ್ರತ್ಯುತ್ತರ’ವಾಗಿದೆ.
೫. ಎಲ್ಲರಿಗೂ ಕರೆ !
ಇಂತಹ ಚಿತ್ರ ಹಲವು ವರ್ಷಗಳಲ್ಲಿ ಒಮ್ಮೆ ಮಾತ್ರ ಬರುತ್ತದೆ. ಇಂದಿನವರೆಗೂ ಮತಾಂಧ ಮೊಘಲರ ಕ್ರೂರ ಮುಖವನ್ನು ಯಾರ ಮುಂದೆಯೂ ಬರಲು ಬಿಡಬಾರದು ಎಂದು ಈ ವಿಷಯದ ಬಗ್ಗೆ ಅನೇಕ ಕಾದಂಬರಿಗಳಿದ್ದರೂ ಯಾರೂ ಈ ವಿಷಯವನ್ನು ಕೈಗೆತ್ತಿಕೊಂಡಿರಲಿಲ್ಲ. ಈ ಚಿತ್ರವು ಹಿಂದಿ ಚಿತ್ರರಂಗದ ಮೇಲೆ ಬಂದ ಹಸಿರು ಪಾಚಿಯನ್ನು ತೆಗೆದುಹಾಕುವ ಆರಂಭವಾಗಬಹುದು. ಆದ್ದರಿಂದ ಮತ್ತು ಶಿವ-ಶಂಭುರಾಜರ ಅನುಯಾಯಿಗಳಾಗಿ ಈ ಶೌರ್ಯಗಾಥೆಯನ್ನು ನಾವು ನೋಡಲೇಬೇಕು. ಹಾಗೆಯೇ ಈ ಚಿತ್ರವನ್ನು ನಾವು ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಅದು ಚಲನಚಿತ್ರ ನಿರ್ಮಾಪಕರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ ಮತ್ತು ಅವರನ್ನು ಬೆಂಬಲಿಸಿದಂತೆ ಆಗುತ್ತದೆ. ಎಲ್ಲಾ ಪೋಷಕರು ಮಕ್ಕಳ ಮುಂದೆ ರಾಷ್ಟ್ರ ಮತ್ತು ಧರ್ಮ ಪ್ರೀತಿಯ ಆದರ್ಶವನ್ನು ಸೃಷ್ಟಿಸಬೇಕು ಎಂದು ಮಕ್ಕಳಿಗೆ ಈ ಚಿತ್ರವನ್ನು ತೋರಿಸಬೇಕು !
– ಸಂಕಲನಕಾರರು : ಶ್ರೀ. ಸಾಗರ ನಿಂಬಾಳಕರ