ನಿಸರ್ಗದ ವಿವಿಧ ವೈಶಿಷ್ಟ್ಯಪೂರ್ಣ ಬದಲಾವಣೆಗಳನ್ನು ಬರೆದಿಟ್ಟು ಸಾಧಕರಿಗೆ ಸೃಷ್ಟಿಸೌಂದರ್ಯವನ್ನು ಅನುಭವಿಸಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆಯವರು !

ಕು. ಸಾಯಲಿ ಡಿಂಗರೆ

ಶ್ರೀಮನ್ನಾರಾಯಣಸ್ವರೂಪಿ ಪರಾತ್ಪರ ಗುರು ಡಾ. ಆಠವಲೆಯವರ ವಾಸ್ತವ್ಯದಿಂದ ಪಾವನವಾಗಿರುವ ರಾಮನಾಥಿಯಲ್ಲಿನ ಸನಾತನದ ಆಶ್ರಮವು ಸಾಕ್ಷಾತ್ ಭೂವೈಕುಂಠವೇ ಆಗಿದೆ ! ಇದರ ಸುತ್ತಮುತ್ತಲಿನ ನಿಸರ್ಗವೂ ಸುಂದರವಾಗಿದೆ. ಈ ನಿಸರ್ಗದಲ್ಲಿ ಮತ್ತು ವಾತಾವರಣದಲ್ಲಿ ಈಶ್ವರನ ಅನೇಕ ದೈವೀ ಲೀಲೆಗಳನ್ನು ಅನುಭವಿಸಬಹುದು. ಅಂದರೆ ಪರಾತ್ಪರ ಗುರು ಡಾ. ಆಠವಲೆಯವರು ಭಗವಂತನ ಲೀಲೆಗಳನ್ನು ಬರೆದಿಟ್ಟು ಸಾಧಕರಲ್ಲಿ ಆ ದೃಷ್ಟಿಯನ್ನು ನಿರ್ಮಾಣ ಮಾಡುತ್ತಿದ್ದಾರೆ ! ಅವರು ಕೇವಲ ಸೃಷ್ಟಿ ಸೌಂದರ್ಯದ ಆಸ್ವಾದನೆಯನ್ನು ತೆಗೆದುಕೊಳ್ಳಲು ಹೇಳದೇ ಅದರ ಹಿಂದಿನ ಆಧ್ಯಾತ್ಮಿಕ ಕಾರಣಮೀಮಾಂಸೆಯನ್ನು ಹೇಳಿ ಸಾಧಕರಿಗೆ ನಿಸರ್ಗದಲ್ಲಿನ ಅಧ್ಯಾತ್ಮವನ್ನು ಅನುಭವಿಸಲು ಕಲಿಸುತ್ತಾರೆ. ಆಶ್ರಮದ ಪರಿಸರದಲ್ಲಿ ಕಂಡುಬಂದ ನಿಸರ್ಗದ ಮನೋಹರ ಛಾಯಾಚಿತ್ರಗಳು ಮತ್ತು ಆ ಮೂಲಕ ನಿರ್ಮಾಣವಾದ ಪರಾತ್ಪರ ಗುರು ಡಾ. ಆಠವಲೆಯವರ ಗುಣದರ್ಶನದ ಬಗ್ಗೆ ನಾವು ಈ ವಾರದ ಸಂಚಿಕೆಯಲ್ಲಿ ನೋಡಲಿದ್ದೇವೆ.

೧. ಪರಾತ್ಪರ ಗುರು ಡಾ. ಆಠವಲೆಯವರ ಸೌಂದರ್ಯದೃಷ್ಟಿ

೧೧ ಸಪ್ಟೆಂಬರ್ ೨೦೧೬ ರಂದು ಇಲ್ಲಿನ ಔದುಂಬರದ ಮರದ ಹಿಂದಿರುವ ಬೀದಿದೀಪದ ಪ್ರಕಾಶದ ಕಡೆಗೆ ನೋಡುವಾಗ ‘ಆ ಗಿಡದಿಂದಲೇ ಪ್ರಕಾಶ ಕಿರಣಗಳು ಹೊರಬೀಳುತ್ತಿವೆ’ ಎಂದು ಅನಿಸುತ್ತದೆ ಎಂಬುದು ಪರಾತ್ಪರ ಗುರು ಡಾಕ್ಟರರ ಗಮನಕ್ಕೆ ಬಂದಿತು. (ಛಾಯಾಚಿತ್ರ ೧ ನೋಡಿ.) ನಾವು ಇದರ ಛಾಯಾಚಿತ್ರವನ್ನು ತೆಗೆದಿಟ್ಟಿದ್ದೇವೆ. ೩೧ ಆಗಸ್ಟ್ ೨೦೧೭ ರಂದು ಅದೇ ಔದುಂಬರದ ವೃಕ್ಷದ ಹಿಂದಿರುವ ಬೀದಿ ದೀಪವನ್ನು ಒಂದು ವಿಶಿಷ್ಟ ಕೋನದಿಂದ ನೋಡಿದರೆ ಮರದ ಹಿಂದೆ ಸೂರ್ಯನೇ ಉದಯಿಸಿರುವಂತೆ ಕಾಣುತ್ತದೆ. ವಾಸ್ತವದಲ್ಲಿ ಇದು ರಾತ್ರಿಯ ಸಮಯವಾಗಿತ್ತು. (ಛಾಯಾಚಿತ್ರ ೨ ನೋಡಿ.) ಪರಾತ್ಪರ ಗುರು ಡಾ. ಆಠವಲೆಯವರು ಈ ಸುಂದರ ದೃಶ್ಯಗಳ ಛಾಯಾಚಿತ್ರವನ್ನು ತೆಗೆದಿಡಲು ಹೇಳಿದರು.

೨. ಕೇವಲ ನಿಸರ್ಗದ ಸೌಂದರ್ಯವನ್ನು ತೋರಿಸದೇ ‘ಇದು ಸ್ವರ್ಗಲೋಕದ ವಾತಾವರಣವನ್ನು ಹೋಲುತ್ತದೆ’, ಎಂದು ಹೇಳಿ ನಿಸರ್ಗದಲ್ಲಿನ ಬದಲಾವಣೆಗಳನ್ನು ಅನುಭವಿಸುವ ದೈವೀ ದೃಷ್ಟಿಯನ್ನು ಸಾಧಕರಲ್ಲಿ ನಿರ್ಮಾಣ ಮಾಡುವುದು

ಇತ್ತೀಚೆಗೆ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಲು ನಗರದ ಜನರು ಪ್ರವಾಸಕ್ಕೆ ಹೋಗುತ್ತಾರೆ. ಸಾಮಾನ್ಯ ವ್ಯಕ್ತಿಯು ನಿಸರ್ಗವನ್ನು ನೋಡುವ ಮತ್ತು ಅದರ ಸಹವಾಸದಲ್ಲಿ ಛಾಯಾಚಿತ್ರವನ್ನು ತೆಗೆಯುವಷ್ಟೇ ನಿಸರ್ಗದ ಸುಖವನ್ನು ಅನುಭವಿಸಬಹುದು. ಅಧ್ಯಾತ್ಮದಲ್ಲಿನ ಉನ್ನತರು ನಿಸರ್ಗಸುಖದ ಆಚೆ ಹೋಗಿ ನಿಸರ್ಗದಲ್ಲಿನ ದೈವೀ ಬದಲಾವಣೆಗಳನ್ನು ಅನುಭವಿಸುತ್ತಾರೆ. ೨೪ ಸಪ್ಟೆಂಬರ್ ೨೦೧೭ ರಂದು ಸಂಜೆ ಸೂರ್ಯಾಸ್ತದ ನಂತರದ ವಾತಾವರಣದಲ್ಲಿ ಎಂದಿಗಿಂತಲೂ ವಿಭಿನ್ನ, ಅಂದರೆ ನಸುಗೆಂಪು ಬಣ್ಣದ ಅರಿವಾಗುತ್ತಿತ್ತು. ‘ಈ ವಾತಾವರಣವು ಸ್ವರ್ಗಲೋಕದ ವಾತಾವರಣವನ್ನು ಹೋಲುತ್ತದೆ’ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದರು. ಅವರು ಆಶ್ರಮದಲ್ಲಿನ ಸಾಧಕರಿಗೆ ಈ ವಾತಾವರಣವನ್ನು ಅನುಭವಿಸಲು ಹೇಳಿದರು. (ಛಾಯಾಚಿತ್ರ ೩ ನೋಡಿ.) ವಾತಾವರಣವು ಒಮ್ಮೆ ಜನಲೋಕದಲ್ಲಿನ ವಾತಾವರಣದಂತೆ ಆಗಿದ್ದರಿಂದ ಅವರು ಅದನ್ನೂ ಸಾಧಕರಿಗೆ ಅನುಭವಿಸಲು ಹೇಳಿದ್ದರು.

ಬಹಳಷ್ಟು ಬಾರಿ ವಾತಾವರಣವು ಗುಲಾಬಿ, ನಸುಹಳದಿ, ನಸುಗೆಂಪು ಬಣ್ಣದ್ದಾಗಿತ್ತು. ಆಕಾಶದಲ್ಲಿ ಕಾಮನಬಿಲ್ಲು ಕಾಣಿಸುತ್ತದೆ. ಸಾಧಕರಿಗೆ ನಿಸರ್ಗಚಕ್ರಕ್ಕನುಸಾರ ಆಗುವ ಬದಲಾವಣೆಗಳ ಹಿಂದಿನ ದೈವೀ ಅನುಭೂತಿಗಳ ಬಗ್ಗೆ ಪರಿಚಯಿಸುವ ಪರಾತ್ಪರ ಗುರು ಡಾ. ಆಠವಲೆಯವರು ಏಕೈಕರಾಗಿದ್ದಾರೆ. ಆಧ್ಯಾತ್ಮವನ್ನು ಜೀವಿಸಲು ಉಚ್ಚ ಲೋಕದಲ್ಲಿನ ವಾತಾವರಣವನ್ನು ಪೃಥ್ವಿಯ ಮೇಲೆ ಅನುಭವಿಸುವುದು ಮಹಾನ ಭಾಗ್ಯವೇ ಆಗಿದೆ. ಆದುದರಿಂದಲೇ ವಾತಾವರಣವು ದೈವೀ ಆದಂತೆಯೇ ಪರಾತ್ಪರ ಗುರು ಡಾಕ್ಟರರು ಆಶ್ರಮದಲ್ಲಿನ ಸಾಧಕರಿಗೆ ಅದನ್ನು ಅನುಭವಿಸಲು ಹೇಳುತ್ತಾರೆ. ಮುಂದಿನ ಪೀಳಿಗೆಗಳಿಗೂ ಹೀಗೂ ಇರುತ್ತದೆ, ಎಂಬುದನ್ನು ತಿಳಿಸಲು ಛಾಯಾಚಿತ್ರಗಳನ್ನು ತೆಗೆಸಿ ಸಂಗ್ರಹಿಸಿಡಲು ಹೇಳುತ್ತಾರೆ.

೩. ಸಾಧಕರಿಗೆ ನಿಸರ್ಗದಲ್ಲಿನ ಬದಲಾವಣೆಗಳಲ್ಲಿರುವ ಅಧ್ಯಾತ್ಮವನ್ನು ಅನುಭವಿಸಲು ಕಲಿಸುವ ಪರಾತ್ಪರ ಗುರು ಡಾ. ಆಠವಲೆ !

೩ ಅ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಂತೆ ಸನಾತನದ ಮೂರ್ತಿಕಾರ ಸಾಧಕರಾದ ಶ್ರೀ. ಗುರುದಾಸ ಖಂಡೆಪಾರಕರ, ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜೂ ಸುತಾರರು ಶ್ರೀ ದುರ್ಗಾದೇವಿಯ ಮೂರ್ತಿ ನಿರ್ಮಿಸುತ್ತಿದ್ದಾರೆ. ಮೂರ್ತಿಯನ್ನು ನಿರ್ಮಿಸುವ ಪ್ರಕ್ರಿಯೆಯು ನಡೆಯುತ್ತಿರುವಾಗಲೇ ಅದರಲ್ಲಿ ಅಪಾರ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳಿರುವುದು ಗಮನಕ್ಕೆ ಬಂದಾಗ ಪರಾತ್ಪರ ಗುರು ಡಾ. ಆಠವಲೆಯವರು ೨೨ ಜುಲೈ ೨೦೨೨ ರಂದು ಆಶ್ರಮದಲ್ಲಿನ ಸಾಧಕರಿಗೆ ದರ್ಶನ ಪಡೆಯಲು ಆ ಮೂರ್ತಿಯನ್ನು ಇಡಲು ಹೇಳಲಾಯಿತು. ಆ ಮೂರ್ತಿಯ ದರ್ಶನ ಪಡೆಯುತ್ತಿರುವಾಗ ಸಾಧಕರಿಗೆ ಮೂರ್ತಿಯಲ್ಲಿರುವ ಅತ್ಯಂತ ಜಾಗೃತ ತೇಜತತ್ತ್ವದ ಸಂದರ್ಭದಲ್ಲಿ ಬಹಳಷ್ಟು ಅನುಭೂತಿಗಳು ಬಂದವು. ಈ ದಿನದಂದು ಆಕಾಶದಲ್ಲಿ ನಸುಗೆಂಪು ಬಣ್ಣ ಹರಡಿತ್ತು. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ನಿರ್ಮಿಸಲಾದ ಶಕ್ತಿಸ್ವರೂಪಿಣಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಸಾಧಕರ ದರ್ಶನಕ್ಕಾಗಿ ಇಡುವುದು ಮತ್ತು ಅದೇ ದಿನ ಆಕಾಶದಲ್ಲಿ ಶಕ್ತಿಯ ಅನುಭೂತಿಯನ್ನು ನೀಡುವ ನಸುಗೆಂಪು ಬಣ್ಣ ಕಾಣಿಸುವುದು ಇದು ದೇವಿಯು ಸಾಧಕರಿಗೆ ನೀಡಿದ ಅನುಭೂತಿಯೇ ಆಗಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ಆಕಾಶದಲ್ಲಿನ ಈ ದೈವೀ ಬದಲಾವಣೆಗಳನ್ನು ಬರೆದಿಟ್ಟು ಅದರ ಛಾಯಾಚಿತ್ರಗಳನ್ನು ತೆಗೆದಿಡಲು ಹೇಳಿದರು. (ಪುಟ ೧೦ ರಲ್ಲಿರುವ ಛಾಯಾಚಿತ್ರ ೪ ನೋಡಿ.)

೩ ಆ. ೨೦೧೬ ರಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ‘ಮಳೆಗಾಲದಲ್ಲಿ ಭೂಮಿಯ ಮೇಲೆ ಬೀಳುವ ಮಳೆಹನಿಯ ಕಡೆಗೆ ನೋಡಿ ಮನಸ್ಸಿಗೆ ಏನು ಅನಿಸುತ್ತದೆ ?’, ಎಂಬುದರ ಪ್ರಯೋಗ ಮಾಡಲು ಹೇಳಿದ್ದರು. ಆ ಹನಿಯನ್ನು ನೋಡಿ ಮನಸ್ಸಿಗೆ ಆನಂದವಾಗುತ್ತದೆ, ಎಂಬುದನ್ನು ಅವರು ಈ ಪ್ರಯೋಗದಿಂದ ಗಮನಕ್ಕೆ ತಂದುಕೊಟ್ಟರು. ಸಾಮಾನ್ಯವಾಗಿ ‘ಮಳೆ ಬೀಳುವುದನ್ನು ನೋಡುವುದು’, ಎಲ್ಲರಿಗೂ ಇಷ್ಟವಾಗುವ ಸಂಗತಿ; ಆದರೆ ಅದರ ಇಂತಹ ಶಾಸ್ತ್ರೀಯ ಕಾರಣಮೀಮಾಂಸೆಯನ್ನು ಮಾಡುವವರು ಪರಾತ್ಪರ ಗುರು ಡಾಕ್ಟರರನ್ನು ಬಿಟ್ಟರೆ ಬೇರೆ ಯಾರಿದ್ದಾರೆ ?

– ಕು. ಸಾಯಲಿ ಡಿಂಗರೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೧.೨೦೨೨)

ನಿಸರ್ಗದಲ್ಲಿನ ಆನಂದದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಆಗಾಗ ತೆಗೆದಿರುವ ಉದ್ಗಾರಗಳು !

ಪರಾತ್ಪರ ಗುರು ಡಾ. ಆಠವಲೆ

೧. ನಿಸರ್ಗವು ನೀಡುವಂತಹ ಆನಂದವನ್ನು ಯಾರಿಗೂ ನೀಡಲು ಸಾಧ್ಯವಿಲ್ಲ ! : ‘ಹೂವು, ಗಿಡ, ನದಿ, ಜಲಪಾತ, ಆಕಾಶ ಇತ್ಯಾದಿ ನಿಸರ್ಗದಲ್ಲಿನ ಎಲ್ಲ ಘಟಕಗಳು ಇತರರಿಗೆ ಆನಂದವನ್ನು ನೀಡುತ್ತವೆ. ಸುಂದರವಾದ ವ್ಯಕ್ತಿಯನ್ನು ನೋಡಿದಾಗ ಕೇವಲ ತಾತ್ಕಾಲಿಕ ಸುಖದ ಅನುಭವವಾಗುತ್ತದೆ; ಆದರೆ ನಿಸರ್ಗದ ಕಡೆಗೆ ನೋಡಿದಾಗ ನಿತ್ಯನೂತನ ಆನಂದ ದೊರೆಯುತ್ತದೆ ! ನನ್ನನ್ನು ಪ.ಪೂ. ಭಕ್ತರಾಜ ಮಹಾರಾಜರು ಮುಂಬೈಯಿಂದ ಗೋವಾಗೆ ಕಳಿಸಿದ್ದು ಒಳ್ಳೆಯದಾಯಿತು, ಇಲ್ಲದಿದ್ದರೆ ನನಗೆ ಮುಂಬಯಿಯಲ್ಲಿ ಆನಂದದಾಯಕ ನಿಸರ್ಗ ಕಾಣಿಸುತ್ತಲೇ ಇರಲಿಲ್ಲ. ಗೋವಾದಲ್ಲಿಯೂ ದೇವರು ನನಗೆ ನಿಸರ್ಗವನ್ನು ನೋಡಲು ಒಳ್ಳೆಯ ಕೋಣೆಯನ್ನು ನೀಡಿದ್ದಾರೆ.’

– (ಪರಾತ್ಪರ ಗುರು) ಡಾ. ಆಠವಲೆ (೩೦.೧೨.೨೦೧೭)

೨. ಪರಾತ್ಪರ ಗುರು ಡಾ. ಆಠವಲೆಯವರಿಗೆ ನಿರ್ಗುಣದ ಅನುಭೂತಿಯನ್ನು ನೀಡುವ ನಿಸರ್ಗ ! : ‘ಸದ್ಯ ನಾನು ಯಾವ ಕೋಣೆಯಲ್ಲಿ ಗ್ರಂಥ-ಸಂಕಲನ ಮಾಡುತ್ತಿದ್ದೇನೋ ಅಲ್ಲಿಯೇ ಕುಳಿತು ಮುಂದಿನ ಜನ್ಮದಲ್ಲೂ ಗ್ರಂಥ ಸಂಕಲನ ಮಾಡಲು ಇಷ್ಟವಾಗುತ್ತದೆ; ಏಕೆಂದರೆ ಅಲ್ಲಿಂದ ಕಾಣುವ ನಿಸರ್ಗವು ನೋಡುತ್ತಲೇ ಇರಬೇಕು ಎಂಬ ನಿರ್ಗುಣದ ಅನುಭೂತಿ ನೀಡುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ (೧೭.೪.೨೦೨೦)