ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಏಕರೂಪತೆಯ ವಿಷಯದಲ್ಲಿ ಸಾಧಕರಿಗೆ ಬಂದ ಅನುಭೂತಿಗಳು

ಸನಾತನದ ಸಾಧಕರಿಗೆ ಪರಾತ್ಪರ ಗುರು ಡಾಕ್ಟರರ ವಿಷಯದಲ್ಲಿ ಯಾವ ರೀತಿಯ ಅನುಭೂತಿಗಳು ಬರುತ್ತವೆಯೋ, ಅದೇ ರೀತಿಯ ಅನುಭೂತಿಗಳು ಅವರ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಿಷಯದಲ್ಲಿಯೂ ಬರುತ್ತವೆ. ಇದರಿಂದ ‘ಗುರುತತ್ತ್ವವು ಒಂದೇ ಆಗಿದೆ’ ಎಂಬ ಪರಾತ್ಪರ ಗುರುದೇವರ ಕಲಿಕೆಯ ಅನುಭವ ಬರುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಾಧಕರ ಸಾಧನೆಯ ಶಿವಧನಸ್ಸನ್ನು ಸಹಜವಾಗಿ ಎತ್ತಿಕೊಂಡಿದ್ದಾರೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮತ್ತು ಸಾಧಕರ ಸಾಧನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸಲು ಹಗಲಿರುಳೂ ಪ್ರವಾಸ ಮಾಡುತ್ತಿದ್ದಾರೆ. ಅನೇಕ ಸಾಧಕರು ಸದ್ಗುರುದ್ವಯರನ್ನು ಪ್ರತ್ಯಕ್ಷ ನೋಡಿಲ್ಲ, ಅದರೂ ಅವರ ಭಾವ ಅವರ ಅನುಭೂತಿಗಳಿಂದ ಕಂಡುಬರುತ್ತದೆ.

ಪರಾತ್ಪರ ಗುರು ಡಾಕ್ಟರರ ಚರಣಗಳ ದರ್ಶನದಿಂದ ಭಾವಾಶ್ರುಗಳು ಬರುವಂತೆಯೇ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಚರಣಗಳ ದರ್ಶನದಿಂದ ಭಾವಾಶ್ರುಗಳು ಬರುವುದು

ಶ್ರೀ. ಅಶೋಕ ಸಾರಂಗಧರ

೫.೧.೨೦೨೦ ರಂದು ಮುಂಜಾನೆ ಕನಸ್ಸಿನಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದರ್ಶನವಾಯಿತು ಮತ್ತು ನನ್ನ ಭಾವಜಾಗೃತವಾಯಿತು. ಅವರ ಚರಣಗಳ ದರ್ಶನವಾಗುತ್ತಿದ್ದುದರಿಂದ ನನ್ನ ಭಾವಾಶ್ರು ಗಳು ನಿಲ್ಲುತ್ತಲೇ ಇರಲಿಲ್ಲ. ಪರಾತ್ಪರ ಗುರು ಡಾ. ಆಠವಲೆಯವರ ಚರಣ ಗಳನ್ನು ನೋಡಿದಾಗ ಹೇಗೆ ಭಾವಾಶ್ರುಗಳು ಬರುತ್ತವೆಯೋ ಹಾಗೆಯೇ ಭಾವಾಶ್ರುಗಳು ಸದ್ಗುರುದ್ವಯರ ಚರಣಗಳ ದರ್ಶನದಿಂದ ಬರುತ್ತಿದ್ದವು.

– ಶ್ರೀ. ಅಶೋಕ ಸಾರಂಗಧರ, ಫೋಂಡಾ, ಗೋವಾ. (೩.೫.೨೦೨೧)

‘ಪರಾತ್ಪರ ಗುರು ಡಾಕ್ಟರ್ ಆಠವಲೆ, ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‍ಶಕ್ತಿ (ಸೌ.) ಬಿಂದಾ ಸಿಂಗಬಾಳರು ದತ್ತನ ರೂಪವಾಗಿದ್ದಾರೆ’, ಎಂದರಿವಾಗುವುದು

ನನಗೆ ‘ಪರಾತ್ಪರ ಗುರು ಡಾ. ಆಠವಲೆ, ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ, ಶ್ರೀಸತ್‍ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ದತ್ತನ ಮೂರು ರೂಪಗಳೇ ಆಗಿದ್ದಾರೆ’ ಎಂದೆನಿಸಿತು. ಪರಾತ್ಪರ ಗುರು ಡಾಕ್ಟರರು ಶ್ರೀವಿಷ್ಣು, ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳವರು ಶಿವರೂಪ ಮತ್ತು ಶ್ರೀಸತ್‍ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಬ್ರಹ್ಮರೂಪವಾಗಿದ್ದಾರೆ. ಎಂದೆನಿಸಿತು

– ಶ್ರೀ. ಸಂಕೇತ ಭೋವರ, ಗೋವಾ.

ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಒಟ್ಟಿಗಿರುವ ಛಾಯಾಚಿತ್ರವನ್ನು ನೋಡಿ ಬಂದ ಅನುಭೂತಿ

ಸೌ. ಲವನಿತಾ ಡೂರ್

‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ ಈ ಗ್ರಂಥದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಮೂವರು ಒಟ್ಟಿಗಿರುವ ಛಾಯಾಚಿತ್ರವಿದೆ. ಆ ಛಾಯಾಚಿತ್ರ ನೋಡಿದಾಗ ನನಗೆ ಮುಂದಿನಂತೆ ಅರಿವಾಯಿತು.

೧. ನನಗೆ ಆಧ್ಯಾತ್ಮಿಕ ಲಾಭವಾಯಿತು.

೨. ನನಗೆ ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕಡೆಗೆ ಪ್ರಕಾಶವು ಹೊಗುತ್ತಿರುವುದು ಕಾಣಿಸುತ್ತಿತ್ತು.

೩. ‘ಹೇಗೆ ದೇವಿಯು ದೇವರ ರೂಪವಾಗಿರುತ್ತಾಳೆಯೋ, ಹಾಗೆಯೇ ನನಗೆ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ರೂಪವಾಗಿದ್ದಾರೆ’, ಎಂದು ಅನಿಸಿತು.

೪. ನನಗೆ ‘ಪರಾತ್ಪರ ಗುರು ಡಾ. ಆಠವಲೆಯವರಿಂದ ಇಬ್ಬರ ಕಡೆಗೂ ಶಕ್ತಿಯು ಪ್ರಕ್ಷೇಪಿತವಾಗುತ್ತಿದ್ದು ಪರಾತ್ಪರ ಗುರುದೇವರು ಅವರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ದಿವ್ಯ ಕಾರ್ಯವನ್ನು ಮಾಡಿಸಿಕೊಳ್ಳುತ್ತಿದ್ದಾರೆ, ಎಂದು ಅನಿಸಿತು.

– ಸೌ. ಲವನಿತಾ ಡೂರ್, ವಿಯೆನ್ನಾ, ಆಸ್ಟ್ರೀಯಾ. (೩೧. ೧.೨೦೧೮)

ಪರಾತ್ಪರ ಗುರು ಡಾಕ್ಟರರು ಮತ್ತು ಸದ್ಗುರುದ್ವಯರು ಗುರು ಪ.ಪೂ. ಭಕ್ತರಾಜ ಮಹಾರಾಜರಲ್ಲಿ ವಿಲೀನವಾಗುತ್ತಿರುವುದರ ಅರಿವಾಗುವುದು

‘ನಾನು ೧.೭.೨೦೨೦ ರಂದು ಆಷಾಢ ಏಕಾದಶಿಯ ದಿನ ಬೆಳಗ್ಗೆ ೫.೩೦ ಕ್ಕೆ ಎದ್ದು ಕುಳಿತೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ದರ್ಶನವನ್ನು ಪಡೆದೆನು. ಅನಂತರ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳ ದರ್ಶನವಾಯಿತು. ಆಗ ನನಗೆ ಪರಾತ್ಪರ ಗುರು ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರಲ್ಲಿ ವಿಲೀನರಾಗಿರುವುದು ಕಾಣಿಸಿತು. ನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಚರಣಗಳ ದರ್ಶನವಾದ ನಂತರ ಅವರು ಸಹ ಪ.ಪೂ. ಭಕ್ತರಾಜ ಮಹಾರಾಜರಲ್ಲಿ ವಿಲೀನರಾಗಿರುವುದು ಕಾಣಿಸಿತು. ಅನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚರಣಗಳ ದರ್ಶನವಾದ ನಂತರ ಅವರೂ ಪ.ಪೂ. ಭಕ್ತರಾಜ ಮಹಾರಾಜರಲ್ಲಿ ಏಕರೂಪವಾಗಿರುವುದು ಕಾಣಿಸಿತು. ಇದೆಲ್ಲವನ್ನು ಅನುಭವಿಸುವಾಗ ನನ್ನ ಕಣ್ಣುಗಳಿಂದ ಭಾವಾಶ್ರುಗಳು ಸುರಿಯುತ್ತಿದ್ದವು. ನನಗೆ ದೇವರು, ದರ್ಶನ ನೀಡಿದುದರಿಂದ ಚೈತನ್ಯ ಮತ್ತು ಆನಂದದ ಅರಿವಾಯಿತು ಮತ್ತು ನನಗೆ ಭಾವಜಾಗೃತಿಯಾಯಿತು.

– ಶ್ರೀ ಶಿವಾಜಿ ಚವ್ಹಾಣ, ಸನಾತನ ಆಶ್ರಮ, ದೇವದ

ಗುರುಪಾದುಕೆಯ ಪೂಜೆಯಲ್ಲಿ ಪರಾತ್ಪರ ಗುರುಗಳು, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದರ್ಶನವಾಗುವುದು

‘ನನಗೆ ಪರಾತ್ಪರ ಗುರು ಡಾಕ್ಟರರು ಸ್ಪರ್ಶಿಸಿದ ಪಾದುಕೆಗಳ ಪೂಜೆಯಾಗುತ್ತಿರುವಾಗ ಶ್ರೀಕೃಷ್ಣ, ಪರಾತ್ಪರ ಗುರು ಡಾ. ಆಠವಲೆಯವರು, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದರ್ಶನವಾಯಿತು. ನಾನು ‘ಶ್ರೀಮಹಾ ಲಕ್ಷ್ಮೀಮಾತೆ ರೂಪದಲ್ಲಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಚರಣಗಳ ಪೂಜೆ ಮಾಡುತ್ತಿದ್ದೇನೆ’, ಎಂದೆನಿಸಿತು. ಗುರುಪಾದುಕೆಗಳ ಪೂಜೆಯ ಚೈತನ್ಯದಿಂದ ಮನಸ್ಸು ಶಾಂತ ಮತ್ತು ಸ್ಥಿರವಾಯಿತು. ಆಗ ಶೀತಲತೆಯ ಅರಿವಾಯಿತು.

– ಕು. ಸುನೀತಾ  ಛತ್ತರ, ವಾರಣಾಸಿ.

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು