ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ದೈವೀ ವೈಶಿಷ್ಟ್ಯಗಳಿಂದ ಕೂಡಿದ ಛಾಯಾಚಿತ್ರ !

‘ಮ್ಹಾಪಸಾದ ಸದ್ಗುರು (ಶ್ರೀಮತಿ) ಸುಶೀಲಾ ಆಪಟೆಅಜ್ಜಿಯವರು ಪರಾತ್ಪರ ಗುರು ಡಾಕ್ಟರರಿಗೆ ಹಳದಿ ಬಣ್ಣದ ಶಾಲನ್ನು ಅರ್ಪಣೆ ಮಾಡಿದರು. ಆಗಿನ ಈ ಛಾಯಾಚಿತ್ರವಾಗಿದೆ. ಅದರ ಕೆಲವು ವೈಶಿಷ್ಟ್ಯಗಳನ್ನು ಕೊಡುತ್ತಿದ್ದೇವೆ.

ಸದ್ಗುರು (ಶ್ರೀಮತಿ) ಸುಶೀಲಾ ಆಪಟೆಅಜ್ಜಿ

 

ಕು. ಪೂನಮ ಧೊಂಡಿರಾಮ ಸಾಳುಂಖೆ

೧. ‘ಪರಾತ್ಪರ ಗುರು ಡಾ. ಆಠವಲೆಯವರ ಈ ಮುದ್ರೆಯಲ್ಲಿ ನನಗೆ ನನ್ನ ಗುರುಗಳಾದ ಪ.ಪೂ. ಗಜಾನನ ಮಹಾರಾಜರ ದರ್ಶನವಾಯಿತು’. – (ಸದ್ಗುರು) ಶ್ರೀಮತಿ ಸುಶೀಲಾ ಆಪಟೆಅಜ್ಜಿ

೨. ಸನಾತನ-ನಿರ್ಮಿತ ದೇವತೆಗಳ ಚಿತ್ರಗಳಲ್ಲಿರುವಂತಹ ಭಾವವು ಈ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾಕ್ಟರರ ಮುಖದಲ್ಲಿ ಕಾಣಿಸುತ್ತಿದೆ.

೩. ಈ ಛಾಯಾಚಿತ್ರವು ಪರಾತ್ಪರ ಗುರು ಡಾ. ಆಠವಲೆಯವರಿಗೂ ಇಷ್ಟವಾಯಿತು. ಅವರು, “ಈ ಛಾಯಾಚಿತ್ರವು ಮುಂದಿನ ಮಹಾಯುದ್ಧದ ಕಾಲದಲ್ಲಿಯೂ ನಾಶವಾಗಬಾರದು, ಆ ರೀತಿಯಲ್ಲಿ ಅದರ ಕಾಳಜಿ ತೆಗೆದುಕೊಳ್ಳೋಣ” ಎಂದು ಹೇಳಿದರು. – ಕು. ಪೂನಮ ಸಾಳುಂಖೆ (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೩.೨೦೨೨)

ಸದ್ಗುರು (ಶ್ರೀಮತಿ) ಸುಶೀಲಾ ಆಪಟೆಅಜ್ಜಿಯವರು ಅರ್ಪಣೆ ಮಾಡಿದ ಶಾಲು ಹೊದಿಸಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ಭಾವಮುದ್ರೆ ಇರುವ ಛಾಯಾಚಿತ್ರ

ಈ ಛಾಯಾಚಿತ್ರದ ಕಡೆಗೆ ಯಾವ ಬದಿಯಿಂದ ನೋಡಿದರೂ ‘ಪರಾತ್ಪರ ಗುರು ಡಾಕ್ಟರರು ನಮ್ಮ ಕಡೆಗೇ ನೋಡುತ್ತಿದ್ದಾರೆ’, ಹಾಗೆಯೇ ‘ಅವರ ತಲೆ ಮತ್ತು ಶರೀರವೂ ನಮ್ಮ ಕಡೆಗೆ ತಿರುಗಿದೆ’, ಎಂದು ಅರಿವಾಗುತ್ತದೆ.

೧. ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಹೆಚ್ಚಾದ ತೇಜತತ್ತ್ವದ ಪ್ರತೀಕವಾದ ಛಾಯಾಚಿತ್ರ

(ಪೂ.) ಶ್ರೀ. ಸಂದೀಪ ಆಳಶಿ,

ಈ ಛಾಯಾಚಿತ್ರವು ೨೧.೩.೨೦೨೦ ರಂದು ತೆಗೆಯಲಾಗಿತ್ತು. ಈ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರ ವಯಸ್ಸು ೭೮ ವರ್ಷಗಳಾಗಿದ್ದರೂ, ಛಾಯಾಚಿತ್ರದಲ್ಲಿ ಅವರು ವಯಸ್ಸಿನಲ್ಲಿ ತುಂಬ ಚಿಕ್ಕವರೆಂದು ಎನಿಸುತ್ತದೆ. ಅವರ ಕೊರಳಿನ ತ್ವಚೆಯ ಮೇಲಿರುವ ಸ್ವಲ್ಪ ಸುಕ್ಕುಗಳನ್ನು ಬಿಟ್ಟರೆ, ಮುಖ ಮತ್ತು ಕೈಗಳ ಮೇಲೆ ವಿಶೇಷವಾಗಿ ಸುಕ್ಕುಗಳು ಕಾಣಿಸುವುದಿಲ್ಲ. ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದಿದ್ದರೂ, ಅವರ ಮುಖದ ಮೇಲೆ ದಣಿವು ಕಾಣಿಸುವುದಿಲ್ಲ. ಸಾಮಾನ್ಯವಾಗಿ ವಯಸ್ಕರ ವ್ಯಕ್ತಿಗಳಲ್ಲಿ ಕಂಡುಬರುವ ಒಂದು ರೀತಿಯ ತ್ವಚೆಯ ಒರಟುತನವೂ ಅವರಲ್ಲಿ ಕಂಡುಬರುವುದಿಲ್ಲ. ಈ ವಯಸ್ಸಿನಲ್ಲಿಯೂ ಪರಾತ್ಪರ ಗುರು ಡಾಕ್ಟರರ ತ್ವಚೆಯು ನುಣುಪಾಗಿ ಕಾಣಿಸುತ್ತದೆ. ಪ್ರಾಣಶಕ್ತಿಯು ಅತ್ಯಂತ ಕಡಿಮೆಯಾಗಿದ್ದರೂ ಅವರ ಮುಖವು ಅತ್ಯಂತ ಪ್ರಸನ್ನ ಮತ್ತು ತೇಜಸ್ವಿ ಎನಿಸುತ್ತದೆ.

೨. ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಹೆಚ್ಚಳವಾದ ಚೈತನ್ಯದ ಪ್ರತೀಕವಾಗಿರುವ ಛಾಯಾಚಿತ್ರ !

ಈ ಸಜೀವತನವು ಚೈತನ್ಯದ ಪ್ರತೀಕವಾಗಿದೆ. ಪರಾತ್ಪರ ಗುರು ಡಾಕ್ಟರರ ಈ ಛಾಯಾಚಿತ್ರವು ಸಜೀವ ಎನಿಸುತ್ತಿದ್ದೂ ‘ಪರಾತ್ಪರ ಗುರು ಡಾಕ್ಟರರು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ’, ಎಂದೆನಿಸುತ್ತದೆ. ಈ ಛಾಯಾಚಿತ್ರದ ಕಡೆಗೆ ಯಾವುದೇ ಬದಿಯಿಂದ ನೋಡಿದರೂ ‘ಪರಾತ್ಪರ ಗುರು ಡಾಕ್ಟರರು ನಮ್ಮ ಕಡೆಗೇ ನೋಡುತ್ತಿದ್ದಾರೆ’, ಹಾಗೆಯೇ ‘ಅವರ ತಲೆ ಮತ್ತು ಶರೀರವೂ ನಮ್ಮ ಕಡೆಗೆ ತಿರುಗಿದೆ’, ಎಂದರಿವಾಗುತ್ತದೆ.

೩. ಪರಾತ್ಪರ ಗುರು ಡಾಕ್ಟರರ ನಿರ್ಗುಣಾವಸ್ಥೆಯ ಪ್ರತೀಕವಾದ ಛಾಯಾಚಿತ್ರ !

ಈ ಛಾಯಾಚಿತ್ರದಲ್ಲಿನ ಪರಾತ್ಪರ ಗುರು ಡಾಕ್ಟರರ ಕಣ್ಣುಗಳ ಕಡೆಗೆ ನೋಡಿದರೆ ‘ಪರಾತ್ಪರ ಗುರು ಡಾಕ್ಟರರು ಶೂನ್ಯದಲ್ಲಿ ನೋಡುತ್ತಿದ್ದಾರೆ’, ಎಂದು ಎನಿಸುತ್ತದೆ. ಸ್ವಲ್ಪದರಲ್ಲಿ ಅವರ ದೃಷ್ಟಿಯು ನಿರ್ಗುಣದಲ್ಲಿದ್ದಂತೆ ಎನಿಸುತ್ತದೆ.

– ಪೂ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೨.೨೦೨೨)

ಪ್ರತ್ಯಕ್ಷ ಪರಮೇಶ್ವರನು ಪ್ರಸನ್ನನಾದರೂ ಅವನಿಗೆ ಸಂಬಂಧಿಸಿದ ಜ್ಞಾನವು ಗುರುಮುಖದಿಂದಲೇ ಆಗಬೇಕು ! – ಸಂತ ಭಕ್ತರಾಜ ಮಹಾರಾಜರು