ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತನೆಂದು ಹೇಳಿ ಭೇಟಿಯಾಗುವ ಹಾಗೂ ಸಂದೇಹಾಸ್ಪದವಾಗಿ ವರ್ತಿಸುವ ವ್ಯಕ್ತಿಗಳಿಂದ ಎಚ್ಚರದಿಂದಿರಿ ಹಾಗೂ ಆ ಮಾಹಿತಿಯನ್ನು ಕೂಡಲೇ ಸಮಿತಿಗೆ ತಿಳಿಸಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸವಿನಯ ಕರೆ

ಮಹಾರಾಷ್ಟ್ರದಲ್ಲಿನ ಓರ್ವ ವ್ಯಕ್ತಿಯು ಹಿಂದುತ್ವನಿಷ್ಠ ಎಂದು ಹೇಳಿಕೊಂಡು ಬೇರೆ ಜಿಲ್ಲೆಯ ಬೇರೆಯೊಂದು ಸಂಘಟನೆಯ ಪದಾಧಿಕಾರಿ ಹಾಗೂ ಕಾರ್ಯಕರ್ತರನ್ನು ಭೇಟಿಯಾದರು. ಭೇಟಿ ಆಗುವಾಗ ತಾವು ಹಿಂದುತ್ವನಿಷ್ಠರೆಂದು ಹೇಳಿಕೊಂಡು ‘ತನಗೆ ಆ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ನಿಮ್ಮ ಸಂಪರ್ಕ ಸಂಖ್ಯೆಯನ್ನು ನೀಡಿದ್ದರು ಆದ್ದರಿಂದ ನಾನು ನಿಮ್ಮನ್ನು ಭೇಟಿಯಾಗಲು ಬಂದೆ’ ಎಂದು ಹೇಳಿದರು. ‘ಸಂಪರ್ಕ ಸಂಖ್ಯೆ ಯಾರು ಕೊಟ್ಟರು’, ಎಂದು ಸ್ಥಳೀಯ ಕಾರ್ಯಕರ್ತರು ಕೇಳಿದಾಗ ಈ ನಕಲಿ ಹಿಂದುತ್ವನಿಷ್ಠನಿಗೆ ಸಮಿತಿಯ ಕಾರ್ಯಕರ್ತನ ಹೆಸರನ್ನು ಹೇಳಲು ಆಗಲಿಲ್ಲ. ಈ ಸಂದೇಹಾಸ್ಪದ ವ್ಯಕ್ತಿಯು ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತನನ್ನು ಭೇಟಿಯಾಗುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಯಾವುದೇ ಮುನ್ಸೂಚನೆ ಇರಲಿಲ್ಲ; ಅವರು ಬಂದು ಹೋಗಿರುವ ಬಗ್ಗೆ ಸ್ಥಳೀಯ ಸಂಘಟನೆಯಿಂದ ಸಮಿತಿಯ ಕಾರ್ಯಕರ್ತನಿಗೆ ನಂತರ ತಿಳಿಯಿತು.

ಹಿಂದೂ ಜನಜಾಗೃತಿ ಸಮಿತಿಯು ಯಾವಾಗಲೂ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯವನ್ನು ಮಾಡುತ್ತದೆ ಎಂಬುದು ಸ್ಥಳೀಯ ಸಂಘಟನೆಯ ಕಾರ್ಯಕರ್ತರಿಗೆ ತಿಳಿದಿದ್ದರಿಂದ ಆ ನಕಲಿ ಹಿಂದುತ್ವನಿಷ್ಠ ವ್ಯಕ್ತಿಯು ಆಕ್ರಮಣಕಾರಿಯಾಗಿ ಮಾತನಾಡುತ್ತಿರುವುದನ್ನು ನೋಡಿ, ಆ ಸ್ಥಳೀಯ ಕಾರ್ಯಕರ್ತರಿಗೆ ಸಂದೇಹ ಬಂದಿತು. ಈ ನಕಲಿ ಹಿಂದುತ್ವನಿಷ್ಠನ ಚತುಷ್ಚಕ್ರ ವಾಹನದಲ್ಲಿ ‘ಪೊಲೀಸ್’ ಮತ್ತು ‘ಪತ್ರಕರ್ತ’ ಹೀಗೆ ೨ ಪ್ಲೇಟ್‌ಗಳು ಇರುವುದು ಕಾರ್ಯಕರ್ತರಿಗೆ ಕಂಡಿತು.

ಹಿತಚಿಂತಕರಲ್ಲಿ ವಿನಂತಿ !

ಈ ರೀತಿಯ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಎಂದು ಹೇಳಿಕೊಂಡು ಯಾರಾದರೂ ಸಂದೇಹಾಸ್ಪದವಾಗಿ ವರ್ತಿಸುತ್ತಿದ್ದರೆ ದಯವಿಟ್ಟು ತಮ್ಮ ಪರಿಚಯದ ಸಮಿತಿಯ ಕಾರ್ಯಕರ್ತರನ್ನು ಕೂಡಲೇ ಸಂಪರ್ಕಿಸಿ.