ಹಿಂದೂ ದೇವಾಲಯಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ !

೧. ಎಷ್ಟು ರಾಜಕಾರಣಿಗಳು ಹೀಗೆ ಸತ್ಯ ಮಾತನಾಡುತ್ತಾರೆ ?

ದೇಶದಲ್ಲಿ ದೇವಸ್ಥಾನದ ಮುಂದೆ ಮುಸಲ್ಮಾನರು ಮೆರವಣಿಗೆ ಸಾಗಬಹುದಾದರೆ, ಮಸೀದಿಯ ಮುಂದೆ ಹಿಂದೂಗಳ ಮೆರವಣಿಗೆ ಏಕೆ ಸಾಗಬಾರದು ? ಮುಸಲ್ಮಾನರ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರ ಏಕೆ ಗಲಭೆಗಳಾಗುತ್ತವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ವಿಧಾನಸಭೆಯಲ್ಲಿ ಪ್ರಶ್ನಿಸಿದರು.

೨. ಹಿಂದೂ ದೇವಾಲಯಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ !

ಸಂವಿಧಾನದ ಪ್ರಕಾರ ಭಾರತ ‘ಜಾತ್ಯತೀತ ದೇಶ’ ಆಗಿರುವುದರಿಂದ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಮಾತ್ರವಲ್ಲದೆ ಇತರ ಧರ್ಮದವರ ಧಾರ್ಮಿಕ ಸ್ಥಳಗಳನ್ನು ಸಹ ನಿಯಂತ್ರಣಕ್ಕೆ ತರಲು ಸರಕಾರ ಚಿಂತನೆ ನಡೆಸಬೇಕು ಎಂದು ಮಹಾರಾಷ್ಟ್ರ ವಿಧಾನಸಭಾಧ್ಯಕ್ಷ ರಾಹುಲ್‌ ನಾರ್ವೇಕರ್‌ ಸರಕಾರಕ್ಕೆ ಸೂಚಿಸಿದರು.

೩. ಹಿಂದೂಗಳ ದೇವಾಲಯಗಳನ್ನು ಹುಡುಕಲು ಅಭಿಯಾನ ನಡೆಸಿ !

ಸಂಭಲ್‌ನ ಚಂದೌಸಿ ನಗರದ ೧೦೦ ಪ್ರತಿಶತದಷ್ಟು ಮುಸಲ್ಮಾನ ಬಹುಸಂಖ್ಯಾತ ಪ್ರದೇಶವಾದ ಲಕ್ಷ್ಮಣಗಂಜ್‌ ನಲ್ಲಿ ಬಂಕೆಬಿಹಾರಿ ದೇವಾಲಯವು ಪತ್ತೆಯಾಗಿದ್ದು, ಈಗ ಅದು ಭಗ್ನ ಸ್ಥಿತಿಯಲ್ಲಿದೆ. ಹಿಂದೂಗಳ ಪಲಾಯನದ ನಂತರ, ೨೦೧೦ ರಲ್ಲಿ ಮತಾಂಧ ಮುಸಲ್ಮಾನರು ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು.

೪. ಧರ್ಮರಕ್ಷಣೆಗಾಗಿ ಕ್ರಿಯಾಶೀಲರಾದ ಹಿಂದೂಗಳು !

ಅಲಿಗಡ (ಉತ್ತರ ಪ್ರದೇಶ) ದ ಮುಸಲ್ಮಾನ ಬಹುಸಂಖ್ಯಾತ ಸರೈ ರೆಹಮಾನ್‌ ಪ್ರದೇಶದಲ್ಲಿ ಮುಸಲ್ಮಾನರ ವಶದಲ್ಲಿದ್ದ ೫೦ ವರ್ಷಕ್ಕೂ ಹೆಚ್ಚು ಹಳೆಯದಾದ ಶಿವ ಮಂದಿರವನ್ನು ಹಿಂದೂಗಳು ಮುಕ್ತಗೊಳಿಸಿದರು. ಈ ದೇವಾಲಯವನ್ನು ಹಲವು ವರ್ಷಗಳಿಂದ ಮುಚ್ಚಲಾಗಿತ್ತು. ಅದನ್ನು ತೆರೆದು ಸ್ವಚ್ಛಗೊಳಿಸಿದ ಬಳಿಕ ಅಲ್ಲಿ ನಿತ್ಯ ಪೂಜೆ ಆರಂಭಿಸಲಾಗಿದೆ.

೫. ಭಾರತದಲ್ಲಿ ಹಿಂದೂಗಳು ಮತ್ತು ಅವರ ನಾಯಕರು ಅಸುರಕ್ಷಿತರು !

ಅಸ್ಸಾಂ ವಿಶೇಷ ಕ್ರಿಯಾ ಪಡೆಯು ಬಂಗಾಳ ಪೊಲೀಸರು ಮತ್ತು ಕೇರಳ ಪೊಲೀಸರೊಂದಿಗೆ ‘ಆಪರೇಷನ್‌ ಆಧುನಿಕ’ ನಡೆಸಿ ೮ ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಇತರ ಹಿಂದೂ ಸಂಘಟನೆಗಳ ಮುಖಂಡರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದರು.

೬. ಹೀಗೆ ಕೋಲಾಹಲ ಹಾಕುವವರಿಂದ ಸಾರ್ವಜನಿಕರ ಹಣ ವಸೂಲಿ ಮಾಡಿರಿ !

 ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್‌ ೨೦ ರಂದು ಕೋಲಾಹಲದಲ್ಲಿ ಕೊನೆಗೊಂಡಿತು.  ೨೦ ದಿನಗಳ ಕಾಲ ಈ ಅಧಿವೇಶನ ನಡೆಯದ ಕಾರಣ ಅಂದಾಜು ೮೪ ಕೋಟಿ ರೂಪಾಯಿಗಳ ನಷ್ಟವಾಗಿದೆ.  ಸಂಸತ್ತಿನ ಕಾರ್ಯಕಲಾಪಕ್ಕೆ ನಿಮಿಷಕ್ಕೆ ಸುಮಾರು ೨ ಲಕ್ಷ ೫೦ ಸಾವಿರ ರೂಪಾಯಿ ವೆಚ್ಚವಾಗುತ್ತದೆ.

೭. ಇಂತಹ ದೇಶದ್ರೋಹಿಗಳ ವಿರುದ್ಧ ಕ್ರಮ ಅಗತ್ಯ !

೧೯೯೮ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ೫೮ ಜನರು ಸಾವನ್ನಪ್ಪಿದ್ದರು.  ಈ ಸ್ಫೋಟಗಳ ಹಿಂದಿನ ಅಪರಾಧಿ ಎಸ್‌.ಎ.  ಪಾಷಾ ಇವನ ಅಂತ್ಯಕ್ರಿಯೆಯಲ್ಲಿ, ಸಾವಿರಾರು ಮತಾಂಧ ಮುಸಲ್ಮಾನರು ಭಾಗವಹಿಸಿದ್ದರು.