ಅಯೋಧ್ಯಾ, ಕಾಶಿ ಮತ್ತು ಮಥುರಾದಲ್ಲಿನ ದೇವಸ್ಥಾನಗಳ ಮುಕ್ತಿಗಾಗಿ ನಡೆಸಲಾದ ನ್ಯಾಯಾಂಗ ಹೋರಾಟ !

ನ್ಯಾಯವಾದಿ ವಿಷ್ಣು ಶಂಕರ್ ಜೈನ್

ಸರದಾರ ವಲ್ಲಭಭಾಯಿ ಪಟೇಲರ ೧೪೬ ನೆಯ ಜಯಂತಿಯ ನಿಮಿತ್ತ ‘ಉತ್ತಿಷ್ಠ ಭಾರತೀಯ ಸಂಸ್ಥೆಯ ವತಿಯಿಂದ ೩೧ ಅಕ್ಟೋಬರ ೨೦೨೧ ರಂದು ಭಾಗ್ಯನಗರದ (ತೆಲಂಗಾಣ) ರಾಜಧಾನಿ ಹೊಟೇಲ್‌ನಲ್ಲಿ ‘ರಾಷ್ಟ್ರೀಯ ಐಕ್ಯ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್ನ ವಕ್ತಾರ ಮತ್ತು ‘ಸರ್ವೋಚ್ಚ ನ್ಯಾಯಾಲಯದ ಧರ್ಮಾಭಿಮಾನಿ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಅಯೋಧ್ಯೆಯ ಶ್ರೀರಾಮಂದಿರ, ವಕ್ಫ್ ಅಧಿನಿಯಮ ೧೯೯೫, ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ೧೯೯೧ (ಈ ಕಾನೂನು ಪ್ರಕಾರ ೧೫ ಅಗಸ್ಟ್ ೧೯೪೭ ರಿಂದ ೧೯೯೧ ರ ವರೆಗೆ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಎಲ್ಲ ಖಟ್ಲೆಗಳನ್ನು ನೇರವಾಗಿ ರದ್ದುಪಡಿಸಲಾಗುವುದು), ಕಾಶಿ ವಿಶ್ವನಾಥ ಮಂದಿರ ಮುಕ್ತಿ ಸಂಗ್ರಾಮ, ಮಥುರೆಯ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಸಂಗ್ರಾಮ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಈ ಮಾರ್ಗದರ್ಶನದಿಂದ ಆಯ್ದು ಭಾಗವನ್ನು ಮುಂದೆ ಕೊಡುತ್ತಿದ್ದೇವೆ.        (ಪೂರ್ವಾರ್ಧ)

೧. ಪೂ. (ನ್ಯಾಯಾಧೀಶ) ಹರಿಶಂಕರ ಜೈನ ಇವರು ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ ನಂತರ ಪ್ರಭು ಶ್ರೀರಾಮನ ಮಂದಿರವನ್ನು ಭಕ್ತರಿಗಾಗಿ ತೆರೆಯುವಂತೆ ಆದೇಶ ನೀಡಿದ ನ್ಯಾಯಾಲಯ

೬ ಡಿಸೆಂಬರ ೧೯೯೨ ರಂದು ಬಾಬರೀ ಮಸೀದಿಯು ಧ್ವಂಸ ವಾಯಿತು. ಅದೇ ದಿನ ನ್ಯಾಯವಾದಿ ವಿಷ್ಣು ಶಂಕರ ಜೈನರ ಅಜ್ಜಿಯು ((ನ್ಯಾಯವಾದಿ) ಪೂ. ಹರಿ ಶಂಕರ ಜೈನ ಇವರ ತಾಯಿ) ನಿಧನರಾಗಿದ್ದರು. ಅಂತ್ಯ ಸಂಸ್ಕಾರದ ಎಲ್ಲ ಕ್ರಿಯೆಗಳನ್ನು ಮುಗಿಸಿದ ನಂತರ ೧೩ ದಿನಗಳಲ್ಲಿ, ಅಂದರೆ ೨೦ ಡಿಸೆಂಬರ ೧೯೯೨ ರಂದು (ನ್ಯಾಯವಾದಿ) ಪೂ. ಹರಿಶಂಕರ ಜೈನ ಇವರು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಿದರು. ಅರ್ಜಿಯಲ್ಲಿ, ‘ಭಗವಾನ ಶ್ರೀರಾಮನ ದರ್ಶನವನ್ನು ಮಾಡು ವುದು ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ; ಆದ್ದರಿಂದ ನಿಲ್ಲಿಸಿರುವ ದರ್ಶನವನ್ನು ಭಕ್ತರಿಗಾಗಿ ಪ್ರಾರಂಭಿಸಬೇಕು ಎಂದು ಬೇಡಿಕೆ ಯನ್ನು ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ೧೦ ದಿನ ಸತತ ವಾದ ನಡೆಯಿತು. ನ್ಯಾಯಾಲಯವು ೧ ಜನವರಿ ೧೯೯೩ ರಂದು ‘ಭಗವಾನ ಶ್ರೀರಾಮರು ಸಂವಿಧಾನಾತ್ಮಕ ಪುರುಷರಾಗಿದ್ದ ಕಾರಣ ಅವರ ಭಕ್ತರಿಗಾಗಿ ತಕ್ಷಣ ಮಂದಿರವನ್ನು ತೆರೆಯಬೇಕು, ಎನ್ನುವ ಐತಿಹಾಸಿಕ ನಿರ್ಣಯವನ್ನು ನೀಡಿತು. ಆ ದಿನ ಈ ಅರ್ಜಿಯ ಅರ್ಜಿಯನ್ನು ದಾಖಲಿಸದಿದ್ದರೆ, ಈ ನಿರ್ಣಯ ಆಗುತ್ತಿರಲಿಲ್ಲ ಹಾಗೂ ಇಂದು ನಮ್ಮ ಪರವಾಗಿ ಬಂದಿರುವ ಶ್ರೀರಾಮಮಂದಿರದ ನಿರ್ಣಯದಲ್ಲಿಯೂ ಅಡಚಣೆ ಬಂದೇ ಬರುತ್ತಿತ್ತು. ೨೦೧೦ ರಲ್ಲಿ ಶ್ರೀರಾಮಮಂದಿರದ ನಿರ್ಣಯವು ಹಿಂದೂಗಳ ಪರವಾಗಿ ಬಂದಿದೆ. ಅದರಲ್ಲಿ ನ್ಯಾಯಾಲಯವು ೧/೩ ಭೂಭಾಗವನ್ನು ಮುಸಲ್ಮಾನರಿಗೆ ಕೊಡಬೇಕೆಂಬ ನಿರ್ಣಯ ನೀಡಿತು. ಅದಕ್ಕೂ ನಾವು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ನೀಡಿದ್ದೇವೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪುಪತ್ರವು ‘ಕಾಶಿ, ಮಥುರಾ, ವಕ್ಫ್ ಕಾನೂನು ಮತ್ತು ‘ಪ್ಲೇಸಸ್ ಆಫ್‌ವರ್ಶಿಪ್ ಆಕ್ಟ್ ಇವುಗಳ ಕೇಂದ್ರಬಿಂದು ಆಗಿದೆ. ಸರ್ವೋಚ್ಚ ನ್ಯಾಯಾಲಯವು ೧೧೬ ಮತ್ತು ೧೧೭ ಈ ಅಂಶಗಳಲ್ಲಿ ಹೇಳಿರುವುದೇನೆಂದರೆ, ‘ಐತಿಹಾಸಿಕ ದೃಷ್ಟಿಯಲ್ಲಿ ಮಂದಿರವಿದ್ದರೆ ಹಾಗೂ ಅದನ್ನು ಕೆಡವಲಾಗಿದ್ದರೆ, ಆ ಮಂದಿರವನ್ನು ನಿರ್ಮಿಸುವ ಸಂಕಲ್ಪವು ಅಭೇದ್ಯವಾಗಿದೆ. ಇದರ ಅರ್ಥ ಒಂದು ವೇಳೆ ನೀವು ಮಂದಿರವನ್ನು ನಿರ್ಮಿಸಿದಿರಿ ಹಾಗೂ ಕಾರಣಾಂತರದಿಂದ ಅದು ಧ್ವಂಸವಾದಲ್ಲಿ, ಮಂದಿರವನ್ನು ನಿರ್ಮಿಸುವ ನಿಮ್ಮ ಸಂಕಲ್ಪವು ಅಮರವಾಗಿದೆ. ನೀವು ಆ ಮಂದಿರವನ್ನು ಪುನಃ ನಿರ್ಮಿಸಬಹುದು. ಈ ವಿಷಯವು ಅತ್ಯಂತ ಮಹತ್ವದ್ದಾಗಿದೆ. ಈ ಆಧಾರದಲ್ಲಿಯೇ ನಾವು ಕಾಶಿ ಮತ್ತು ಮಥುರೆಯ ಮಂದಿರಗಳ ಪ್ರಕರಣವನ್ನು ದಾಖಲಿಸಿದ್ದೇವೆ.

೨. ಕಾಶಿ ವಿಶ್ವನಾಥ ಮಂದಿರದ ಪವಿತ್ರ ಭೂಮಿಯನ್ನು ಸಾಕ್ಷಾತ್ ಭಗವಾನ ಶಂಕರನೇ ನಿರ್ಮಿಸಿದ್ದಾಗಿರುವುದರಿಂದ ಅದು ಮಂದಿರಕ್ಕೆ ಸಿಗಬೇಕು, ಎಂದು ನ್ಯಾಯಾಲಯದಲ್ಲಿ ಬೇಡಿಕೆಯನ್ನು ಸಲ್ಲಿಸುವುದು

೨ ಅ. ಕಾಶಿ ವಿಶ್ವನಾಥ ಮಂದಿರದ ಖಟ್ಲೆಯು ಪ್ರಾತಿನಿಧಿಕವಾಗಿದೆ. ಸ್ಥಳೀಯ ವರ್ತಮಾನಪತ್ರಿಕೆಗಳ ಮೂಲಕ ‘ಬಹಿರಂಗ ಸೂಚನೆ ಯನ್ನು ಪ್ರಕಾಶಿಸಲಾಗುತ್ತದೆ. ಅದರಿಂದ ಸಮಾಜದ ಯಾವುದೇ ವ್ಯಕ್ತಿ ಇದರಲ್ಲಿ ‘ಪಾರ್ಟಿ (ಪಕ್ಷಕಾರ) ಆಗಲು ಸಾಧ್ಯವಿಲ್ಲ. ಈ ಖಟ್ಲೆಯು ಈಗ ನ್ಯಾಯಾಲಯದಲ್ಲಿ ದಾಖಲಾಗಿದೆ.

೨ ಆ. ಅನೇಕ ಬಾರಿ ಧ್ವಂಸಕ್ಕೊಳಗಾದ ಕಾಶೀ ಮಂದಿರ : ಕಾಶಿ ಮಂದಿರದ ಇತಿಹಾಸವು ಅತ್ಯಂತ ರಕ್ತರಂಜಿತವಾಗಿದೆ. ೧೧೯೩ ರಿಂದ ೧೬೬೧ ಈ ಅವಧಿಯಲ್ಲಿ ಈ ಮಂದಿರವನ್ನು ಅನೇಕ ಬಾರಿ ಧ್ವಂಸ ಮಾಡಲಾಯಿತು. ಪ್ರತಿಯೊಂದು ಬಾರಿ ದೊಡ್ಡ ಸಂಘರ್ಷ ವಾಯಿತು. ಎಲ್ಲಕ್ಕಿಂತ ಕೊನೆಯಲ್ಲಿ ಅಂದರೆ ೧೬೬೯ ರಲ್ಲಿ ಔರಂಗಜೇಬನು ಈ ಮಂದಿರವನ್ನು ಕೆಡವಿದ್ದನು. ಅವನು ಮಂದಿರವನ್ನು ಕೆಡಹಲು ನೀಡಿದ ಆದೇಶವು ಇನ್ನೂ ಇದೆ. ನಾವು ಈ ಖಟ್ಲೆಯನ್ನು ಶೃಂಗಾರ ಗೌರೀದೇವಿ ಮತ್ತು ಆದಿ ವಿಶ್ವೇಶ್ವರರ ವತಿಯಿಂದ ದಾಖಲಿಸಿದ್ದೇವೆ. (ಶ್ರೀರಾಮಮಂದಿರದ ಖಟ್ಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು, ‘ವಿಶ್ವಸ್ಥರು ಕರ್ತವ್ಯವನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸದಿದ್ದರೆ, ಭಗವಂತನು ಸ್ವತಃ ನ್ಯಾಯಾಲಯಕ್ಕೆ ಬರಬಹುದು, ಎಂದು ಹೇಳಿತ್ತು. ಈ ಕಾರಣಕ್ಕಾಗಿಯೆ ನಾವು ಭಗವಂತನ ಮೂಲಕ ಕಾಶಿ ಮತ್ತು ಮಥುರಾದ ಖಟ್ಲೆಗಳನ್ನು ದಾಖಲಿಸಿದ್ದೇವೆ.)

೨ ಇ. ಕಾಶಿ ವಿಶ್ವನಾಥ ಮಂದಿರದ ಭೂಮಿಯು ಪವಿತ್ರವಾಗಿರುವುದರಿಂದ ಅದನ್ನು ಮಂದಿರಕ್ಕಾಗಿ ಕೊಡಬೇಕೆಂಬ ಬೇಡಿಕೆ ಸಲ್ಲಿಕೆ ಯಾಗುವುದು ಹಾಗೂ ಅಲ್ಲಿನ ಪವಿತ್ರ ಸ್ಥಾನವನ್ನು ನೋಡಿ ಅಲ್ಲಿ ಮಸೀದಿಯಲ್ಲ, ಶಿವಲಿಂಗವಿರುವುದು ಖಾತ್ರಿಯಾಗುವುದು : ಇದರಲ್ಲಿ ‘ಕಾಶಿ ವಿಶ್ವನಾಥ ಮಂದಿರದ ಸಂಪೂರ್ಣ ೫ ಕೋಸ (೩ ಕಿ.ಮೀಟರ್) ಭೂಮಿಯು ಭಗವಾನ ಶಂಕರನದ್ದಾಗಿದ್ದು ಅದನ್ನು ಸಾಕ್ಷಾತ್ ಭಗವಾನ ಶಂಕರನೇ ನಿರ್ಮಿಸಿದ್ದಾನೆ. ‘ಈ ಸ್ಥಾನವು ಸಂಪೂರ್ಣ ವಿಶ್ವದ ಮೊದಲ ನಗರವಾಗಿದ್ದು ಎಲ್ಲಕ್ಕಿಂತ ಪುರಾತನವಾಗಿದೆ. ಅಲ್ಲಿಗೆ ಹೋದಾಗ ಮೋಕ್ಷಪ್ರಾಪ್ತಿಯಾಗುತ್ತದೆ, ಎಂದು ನಮ್ಮ ಪುರಾಣದಲ್ಲಿ ವರ್ಣನೆಯಿದೆ. ಸಂಪೂರ್ಣ ಈ ೫ ಕೋಸ (೩ ಕಿ.ಮೀ.) ಭೂಮಿಯು ನಮಗೆ ಪವಿತ್ರವಾಗಿರುವುದರಿಂದ ಅದನ್ನು ಮಂದಿರಕ್ಕೆ ಕೊಡಬೇಕು. ಅದೇ ರೀತಿ ಈ ಮಂದಿರದ ದರ್ಶನ ಪಡೆಯಲು ಹಾಗೂ ಭಗವಂತನ ಪೂಜೆ ಮಾಡಲು ಇದನ್ನು ತೆರೆದಿಡಬೇಕು, ಎನ್ನುವ ಬೇಡಿಕೆಯನ್ನು ಮಾಡ ಲಾಗಿದೆ. ಈ ಬೇಡಿಕೆಯ ಜೊತೆಗೆ ‘ಮಸೀದಿಯ ಪಶ್ಚಿಮ ದಿಕ್ಕಿನಲ್ಲಿ ಶೃಂಗಾರ ಗೌರಿಮೂರ್ತಿಯಿದೆ. ಅಲ್ಲಿ ಹಿಂದೆ ಪ್ರತಿದಿನ ಪೂಜೆ ಅರ್ಚನೆ ಆಗುತ್ತಿತು ಬಾಬರೀ ಮಸೀದಿಯ ಧ್ವಂಸದ ನಂತರ ಅಲ್ಲಿ ವರ್ಷಕ್ಕೊಮ್ಮೆ ಕೇವಲ ಒಂದೇ ದಿನ ಪೂಜೆಯಾಗುತ್ತದೆ. ಆದ್ದರಿಂದ ಅಲ್ಲಿ ಹಿಂದಿನಂತೆಯೆ ಪೂಜೆ ಮಾಡುವ ಅವಕಾಶ ಸಿಗಬೇಕು, ಎಂದು ವಿನಂತಿಸಲಾಯಿತು. ಆ ಜ್ಞಾನವ್ಯಾಪಿ ಬಾವಿಯಲ್ಲಿ ಇಂದು ಕೂಡ ಮೂಲ ಜ್ಯೋತಿರ್ಲಿಂಗವಿದೆ. ಆದ್ದರಿಂದ ಅಲ್ಲಿ ಮಸೀದಿ ಇರಲು ಸಾಧ್ಯವೇ ಇಲ್ಲ. ಅಲ್ಲಿನ ಸಂಪೂರ್ಣ ನಿರ್ಮಾಣ ಕಾರ್ಯವು ಒಂದು ಮಂದಿರದಂತೆಯೆ ಇದೆ. ಕಾಶಿಯಲ್ಲಿ ನಂದಿ ಮಸೀದಿಯ ಕಡೆಗೆ ಮುಖ ಮಾಡಿಕೊಂಡಿದೆ. ಇದರ ಅರ್ಥ ಅಲ್ಲಿ ಖಂಡಿತವಾಗಿಯೂ ಶಿವಲಿಂಗವಿದೆ.

೨ ಈ. ಪ್ರಸಿದ್ಧ ಇತಿಹಾಸಕಾರ ಜೇಮ್ಸ್ ಪ್ರಿನ್ಸೆಸ್ ಇವರು ಹೀಗೆಂದಿದ್ದಾರೆ, “ಕಾಶಿಯು ಹಿಂದೂಗಳ ಮೊದಲ ನಗರವಾಗಿದೆ. ಗಂಗೆಯು ಮೊದಲ ನದಿಯಾಗಿದೆ ಹಾಗೂ ವಿಶ್ವನಾಥನು ಮೊದಲ ದೇವರಾಗಿದ್ದಾನೆ. ಸ್ಕಂದ ಪುರಾಣ, ಶಿವ ಮಹಾಪುರಾಣ ಮತ್ತು ಕಾಶಿ ರಹಸ್ಯದ ವಿವಿಧ ಶ್ಲೋಕಗಳಲ್ಲಿ ಭಗವಾನ ಶಿವನು ಸ್ವತಃ ಈ ನಗರದ ಮಹತ್ವವನ್ನು ಹೇಳಿದ್ದಾನೆ”. ಅದರಲ್ಲಿ ‘ಈಶ್ವರನು ಸ್ವತಃ ೫ ಕೋಸು (೩ ಕಿ.ಮೀಟರ್) ಭೂಮಿಯನ್ನು ತನಗಾಗಿ ನಿರ್ಮಿಸಿದ್ದನು, ಎಂದು ಹೇಳಲಾಗಿದೆ.

೩. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ರಾಮಸ್ವಾಮಿ ಇವರು ತೀರ್ಪುಪತ್ರದಲ್ಲಿ ‘ಕಾಶಿಯ ಲಿಂಗವನ್ನು ಸ್ವತಃ ಶಿವನೇ ನಿರ್ಮಿಸಿದ್ದಾನೆ’, ಎಂದು ನಮೂದಿಸಿರುವುದು

ಭಾರತೀಯ ಸಂವಿಧಾನಕ್ಕನುಸಾರ ‘ಆರ್ಟಿಕಲ್ ೧೩ರ ಮೂಲಕ ಇದು ಹಿಂದೂ ಕಾನೂನಿನ ಭಾಗವಾಗಿದ್ದು ಹಿಂದೂ ಕಾನೂನಿನ ಸ್ರೋತವಾಗಿದೆ. ಆದ್ದರಿಂದ ಯಾವಾಗ ನಾವು ನ್ಯಾಯಾಲಯದಲ್ಲಿ ಖಟ್ಲೆಯನ್ನು ಹೋರಾಡುತ್ತೇವೆಯೋ, ಆಗ ಈ ಪವಿತ್ರ ಭೂಮಿಯ ಶಾಸ್ತ್ರದ ಆಧಾರದಲ್ಲಿ ಮಹತ್ವವನ್ನು ವಿವರಿಸುವುದು ಮಹತ್ವದ್ದಾಗಿರುತ್ತದೆ. ‘ಕಾಶೀ ವಿಶ್ವನಾಥ ಕಾನೂನು ೧೯೮೩ ಎನ್ನುವ ವಿಶೇಷ ಕಾನೂನು ಬಂತು. ಅದರಲ್ಲಿ ಆ ಬದಿಯ ಮಂಟಪ, ಬಾವಿ ಮತ್ತು ಕಥಿತ ಮಸೀದಿ ಇವೆಲ್ಲವೂ ಮಂದಿರದ್ದಾಗಿವೆ, ಎಂದು ಘೋಷಿಸಲಾಯಿತು. ಯಾವಾಗ ಈ ಕಾನೂನಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ನೀಡಲಾಯಿತೋ, ಆಗ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪುಪತ್ರದಲ್ಲಿ ‘೧೯೯೭ – ೪ ಇನ್ನೊಂದು ಪುಟ, ಕ್ರಮಾಂಕ ೬೦೬ ರಲ್ಲಿನ ಮೊದಲ ಸ್ತಂಭದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ರಾಮಸ್ವಾಮಿ ಇವರು ಕಾಶಿಯ ವಿಷಯದಲ್ಲಿ ಅತ್ಯಂತ ಸುಂದರವಾದ ವಾಕ್ಯವನ್ನು ಬರೆಯುತ್ತಾ, ಏನೆಂದರೆ, ಕಾಶಿಯ ಲಿಂಗವನ್ನು ಸ್ವತಃ ಶಿವನೇ ನಿರ್ಮಿಸಿದ್ದಾನೆ ! ಎಂದಿದ್ದಾರೆ.

೪. ಕಾಶಿ ವಿಶ್ವನಾಥ ಮಂದಿರದ ಸಂಪೂರ್ಣ ಭೂಮಿ ಮಂದಿರದ ಸಂಪತ್ತು ಆಗಿದೆಯೆಂದು ೧೯೮೩ ರಲ್ಲಿ ಘೋಷಿಸಲಾದುದು

೧೮ ಎಪ್ರಿಲ್ ೧೬೬೯ ರಂದು ಔರಂಗಜೇಬನು ನೀಡಿದ ಆದೇಶವು, ಅಂದರೆ ಕಾಶಿಯ ಮಂದಿರವನ್ನು ಅವನೇ ಕೆಡವಿರು ವುದಕ್ಕೆ ಮಹತ್ವದ ಪುರಾವೆಯಾಗಿದೆ. – ನ್ಯಾಯವಾದಿ ವಿಷ್ಣು ಶಂಕರ ಜೈನ, ಸರ್ವೋಚ್ಚ ನ್ಯಾಯಾಲಯ ಜಾನ್ ಬೋಸಮ್ ಇವರು ‘ಹಿಸ್ಟರಿ ಆಫ್ ಇಂಡಿಯಾ ಹೆಸರಿನ ಒಂದು ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಈ ಆದೇಶದ ಸಮಾವೇಶವಿದೆ. ೨ ಸಪ್ಟೆಂಬರ್ ೧೬೬೯ ರಂದು ಔರಂಗಜೇಬನು ಮಂದಿರವನ್ನು ಕೆಡಹಲು ಆದೇಶವನ್ನು ನೀಡಿದ್ದನು. ಈ ಆದೇಶವು ‘ಮಂಜರೀಸೆ ಆಲಮಗಿರಿಯಲ್ಲಿಯೂ ಕಂಡುಬರುತ್ತದೆ.

ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿದ ನಂತರವೂ ಹಿಂದೂಗಳು ಪೂಜೆ ಮಾಡುವುದನ್ನು ನಿಲ್ಲಿಸಲಿಲ್ಲ. ಹಿಂದೂಗಳು ಮಸೀದಿಯ ಬಾಗಿಲಿನಿಂದ ಅದೃಶ್ಯ ರೂಪದಲ್ಲಿ (ಸೂಕ್ಷ್ಮದಲ್ಲಿ) ಈಶ್ವರನ ದರ್ಶನ ಪಡೆಯುತ್ತಿದ್ದರು. ಇತಿಹಾಸದಲ್ಲಿ ಏನು ಹೇಳಲಾಗಿದೆ ಎಂದರೆ, ೩೦ ಡಿಸೆಂಬರ್ ೧೮೧೦ ರಂದು ಹಿಂದೂಗಳು ಈ ಮಂದಿರವನ್ನು ಪುನಃ ತಮ್ಮ ವಶಕ್ಕೆ ಪಡೆದುಕೊಂಡರು. ಆಗ ಬ್ರಿಟಿಷ ಸರಕಾರದ ಜಿಲ್ಲಾ ದಂಡಾಧಿಕಾರಿ ವ್ಹಾಟ್ಸನ್ ಇವರು ‘ಪ್ರೆಸಿಡೆಂಟ್ ಕೌನ್ಸಿಲ್‌ಗೆ ಒಂದು ಪತ್ರವನ್ನು ಬರೆದರು. ಅದರಲ್ಲಿ ಅವರು ‘ಜ್ಞಾನವ್ಯಾಪಿಯ ಮಂದಿರವನ್ನು ಹಿಂದೂಗಳಿಗೆ ಶಾಶ್ವತವಾಗಿ ಕೊಡಬೇಕು, ಎಂದು ಹೇಳಿದ್ದರು.  ಅನಂತರ ‘ಈ ಸ್ಥಳವು ಮಸೀದಿಯದ್ದಾಗಿದೆಯೆಂದು ಘೋಷಿಸಿ ಅದನ್ನು ಮುಸಲ್ಮಾನರಿಗೆ ಕೊಡ ಬೇಕು, ಎಂದು ೧೯೩೬ ರಲ್ಲಿ ದೀನ ಮಹಮ್ಮದ ಸಾಹೇಬನು ಖಟ್ಲೆಯನ್ನು ದಾಖಲಿಸಿದನು. ಅದರಲ್ಲಿ ಹಿಂದೂ ಸಮಾಜವನ್ನು ‘ಪಾರ್ಟಿ (ಪಕ್ಷಕಾರ) ಯನ್ನಾಗಿ ಮಾಡಿರಲಿಲ್ಲ. ಮುಸಲ್ಮಾನರು ಬ್ರಿಟಿಷ ಸರಕಾರದ ವಿರುದ್ಧ ಈ ಖಟ್ಲೆಯನ್ನು ದಾಖಲಿಸಿದ್ದರು. ಬ್ರಿಟಿಷ ಸರಕಾರವು ಹಿಂದೂಗಳ ಪರವಾಗಿ ೧೫ ಸಾಕ್ಷಿದಾರರನ್ನು ಕರೆದು ವಿಚಾರಣೆ ನಡೆಸಿತು. ಎಲ್ಲ ಸಾಕ್ಷೀದಾರರು ಹಿಂದೂಗಳ ಪರವಾಗಿದ್ದರು. ಇಷ್ಟು ಮಾತ್ರವಲ್ಲ, ಬ್ರಿಟಿಷ ಸರಕಾರವೂ ಹಿಂದೂಗಳ ಪರವಾಗಿತ್ತು. ‘ಈ ಸ್ಥಳ ಮಂದಿರದ್ದಾಗಿದ್ದು ಅದನ್ನು ಹಿಂದೂ ಗಳಿಗೆ ಒಪ್ಪಿಸಬೇಕೆಂದು ಪಾರತಂತ್ರ್ಯದ ಕಾಲದಲ್ಲಿಯೂ ೧೫ ಹಿಂದೂಗಳು ಮುಸಲ್ಮಾನರ ವಿರುದ್ಧ ಸಾಕ್ಷಿ ನೀಡಿದ್ದರು. ಇದಕ್ಕೆ ದೀನ ಮಹಮ್ಮದನು ಸವಾಲನ್ನು ನೀಡಿದನು; ಆದರೆ ೧೯೪೨ ರಲ್ಲಿ ಅವನ ಅರ್ಜಿಯನ್ನು ತಳ್ಳಿಹಾಕಲಾಯಿತು. ೧೯೮೩ ರಲ್ಲಿ ಈ ಪೂರ್ಣ ಸ್ಥಳವನ್ನು ಮಂದಿರದ ಸಂಪತ್ತು ಎಂದು ಘೋಷಿಸಲಾಯಿತು.

(ಮುಂದುವರಿಯುವುದು) – ನ್ಯಾಯವಾದಿ ವಿಷ್ಣು ಶಂಕರ ಜೈನ, ಸರ್ವೋಚ್ಚ ನ್ಯಾಯಾಲಯ