ರಷ್ಯಾ ಯುಕ್ರೇನ್‌ನ ಮೇಲೆ ದಾಳಿ ಮಾಡಿ ೫೦ ಕ್ಕೂ ಹೆಚ್ಚು ದಿನ ಉರುಳಿದೆ. ನೋಡನೋಡುತ್ತಿದ್ದಂತೆಯೇ ತಥಾಕಥಿತ ದೊಡ್ಡ ಹಾಗೂ ಬಲಿಷ್ಠ ಅಮೇರಿಕಾ ಮತ್ತು ಯುರೋಪ್ ಇವುಗಳ ಮಾನವನ್ನು ಹರಾಜು ಹಾಕುತ್ತಾ ರಷ್ಯಾದ ಸೈನ್ಯ ಯುಕ್ರೇನಿನ ರಾಜಧಾನಿಯ ಹೊರಗೆ ಬಂದು ನಿಂತಿದೆ. ಇಂದು ಅಮೇರಿಕಾ ಮತ್ತು ಇತರ ದೇಶಗಳು ಭಾರತಕ್ಕೆ ನೈತಿಕತೆಯ ಪಾಠ ಮಾಡುತ್ತಾ ‘ಭಾರತ ರಷ್ಯಾವನ್ನು ಖಂಡಿಸಬೇಕು ಹಾಗೂ ಅದರ ಮೇಲೆ ಒತ್ತಡ ಹೇರಬೇಕು’, ಎಂಬುದಕ್ಕಾಗಿ ಪ್ರಯತ್ನಿಸುತ್ತಿವೆ. ಹೀಗಿದ್ದರೂ ಭಾರತ ಅದರಿಂದ ವಿಚಲಿತವಾಗಲಿಲ್ಲ. ಅಂತರರಾಷ್ಟ್ರೀಯ ರಾಜಕಾರಣವು ಕೇವಲ ನೈತಿಕತೆಯಿಂದಲೇ ನಡೆಯುವುದಿಲ್ಲ. ಅದಕ್ಕೆ ಐತಿಹಾಸಿಕ ಹಿನ್ನೆಲೆಯೂ ಇರುತ್ತದೆ ಹಾಗೂ ಅದಕ್ಕಾಗಿ ಕೆಲವು ಮಹತ್ವಪೂರ್ಣ ಕೊಂಡಿಯನ್ನು ಈ ಲೇಖನದ ಮೂಲಕ ಕೊಡುತ್ತಿದ್ದೇನೆ.
೧. ಯುಕ್ರೇನ್ ವಿಷಯದಲ್ಲಿ ಭಾರತ ಇದುವರೆಗೆ ಅನುಭವಿಸಿದ ಕಠೋರ ವರ್ತನೆಗಳು
ಅ. ೧೯೯೮ ರಲ್ಲಿ ಭಾರತ ಪೊಕ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ಮಾಡಿತು, ಆಗ ಭಾರತದ ಮೇಲೆ ಕಠಿಣ ನಿರ್ಬಂಧ ಹೇರಿದ ದೇಶವೇ ಯುಕ್ರೇನ್ !
ಆ. ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮತದಾನ ಮಾಡಿರುವ ದೇಶವೇ ಯುಕ್ರೇನ್ !
ಇ. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ದೇಶವೇ ಯುಕ್ರೇನ್ !
ಈ. ಭಾರತವನ್ನು ‘ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಸೇರಿಸಬಾರದು’, ಎಂದು ಹೇಳುವ ದೇಶವೇ ಯುಕ್ರೇನ್ !
ಉ. ೨೦೧೯ ರಲ್ಲಿ ವಿಶ್ವ ಸಂಸ್ಥೆಗಳಲ್ಲಿ ಕಾಶ್ಮೀರದ ಪ್ರಶ್ನೆಗೆ ಭಾರತದ ವಿರುದ್ಧ ಮತದಾನ ಮಾಡಿದ ದೇಶವೇ ಯುಕ್ರೇನ್ !
೨. ಅಮೇರಿಕಾ ಯುಕ್ರೇನ್‌ಗೆ ಯುದ್ಧ ಮಾಡಲು ಉತ್ತೇಜಿಸಿತು ಹಾಗೂ ಯಾವುದೇ ದೇಶವೂ ಯುಕ್ರೇನ್‌ಗೆ ಯುದ್ಧದಲ್ಲಿ ಪ್ರತ್ಯಕ್ಷ ಸಹಾಯ ಮಾಡದಿರುವುದು
ರಷ್ಯಾ-ಯುಕ್ರೇನಿನ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇಂದು ಯುರೋಪ್‌ಗೆ ಭಾರತ ಅತೀ ಆವಶ್ಯಕವಾಗಿದೆ. ಪ್ರಧಾನಮಂತ್ರಿ ಮೋದಿಯವರು ಜಾಗತಿಕ ಮಟ್ಟದಲ್ಲಿ ದೊಡ್ಡ ನಾಯಕರಾಗಿದ್ದಾರೆ. ‘ಒಂದು ವೇಳೆ ಭಾರತ ಇದರಲ್ಲಿ ಹಸ್ತಕ್ಷೇಪ ಮಾಡಿದರೆ, ಪುತೀನ್ ಈ ವಿಷಯದಲ್ಲಿ ಖಂಡಿತ ವಿಚಾರ ಮಾಡುವರು ಹಾಗೂ ಈ ಯುದ್ಧಕ್ಕೆ ಎಲ್ಲಿಯಾದರೂ ಪೂರ್ಣವಿರಾಮ ಸಿಗಬಹುದು, ಎಂಬುದು ಯುರೋಪ್‌ಗೆ ಚೆನ್ನಾಗಿ ತಿಳಿದಿದೆ; ಏಕೆಂದರೆ ಭಾರತ ಮತ್ತು ರಷ್ಯಾದ ಮೈತ್ರಿಸಂಬಂಧ ತುಂಬಾ ಹಳೆಯದಾಗಿದೆ. ಯುಕ್ರೇನ್‌ಗೆ ‘ಯುದ್ಧ ಮಾಡು ಎಂದು ಹೇಳುವ ಅದರ ಮಿತ್ರರೆ ಅದಕ್ಕೆ ಮೋಸ ಮಾಡಿದ್ದಾರೆ. ಎಲ್ಲ ನಗರಗಳು ಧ್ವಂಸವಾಗುತ್ತಿರುವಾಗ ಯುರೋಪಿಯನ್ ದೇಶಗಳಿಂದ ಯಾರೂ ಯುಕ್ರೇನ್‌ನ ಸಹಾಯಕ್ಕೆ ಬರಲಿಲ್ಲ. ಯುಕ್ರೇನ್ ಜಗತ್ತಿನ ಪ್ರತಿಯೊಂದು ದೇಶದಿಂದ ಸಹಾಯವನ್ನು ಕೇಳಿದೆ; ಆದರೆ ಯಾರೂ ಮುಂದೆ ಬರಲಿಲ್ಲ. ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ಸಹಾಯವನ್ನು ಘೋಷಿಸಿ ಅಮೇರಿಕಾ ದೂರವೇ ಉಳಿಯಿತು. ಸದ್ಯ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಯುಕ್ರೇನನ್ನು ಸಂಪೂರ್ಣ ನಾಶಗೊಳಿಸಿತು. ಆದರೆ ಯಾವುದೇ ದೇಶ ಪ್ರತ್ಯಕ್ಷ ಸೈನ್ಯವನ್ನು ಯುಕ್ರೇನ್‌ಗೆ ಸಹಾಯಕ್ಕಾಗಿ ಕಳುಹಿಸಿಲ್ಲ. ಯುರೋಪಿಯನ್ ದೇಶಗಳು ವಿಶೇಷವಾಗಿ ಅಮೇರಿಕಾ ಯುಕ್ರೇನ್‌ಗೆ ಈ ಯುದ್ಧಕ್ಕಾಗಿ ಉತ್ತೇಜಿಸಿತು, ಆದರೆ ಇಂದು ಇಡೀ ಜಗತ್ತು ಅದರ ಅವಸ್ಥೆಯನ್ನು ನೋಡುತ್ತಿದೆ.
೩. ಭಾರತಕ್ಕೆ ೧೯೭೧ ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅಮೇರಿಕಾ ಮತ್ತು ಬ್ರಿಟಿಷ ಯುದ್ಧ ನೌಕೆಗಳನ್ನು ತಡೆಯಲು ಸಹಾಯ ಮಾಡಿದ ರಷ್ಯಾ
ಭಾರತಕ್ಕೆ ಅಡಚಣೆಗಳು ಎದುರಾದಗಲೆಲ್ಲ ಸಹಾಯ ಮಾಡಲು ಕೇವಲ ರಷ್ಯಾ ಓಡಿಬಂದಿತ್ತು. ಅದಕ್ಕಾಗಿ ೫೦ ವರ್ಷಗಳ ಹಿಂದಿನ ವಿಸ್ಮರಣೆಯಾಗಿರುವ ಘಟನೆಯನ್ನು ತಿಳಿದುಕೊಳ್ಳೋಣ. ಡಿಸೆಂಬರ್ ೧೯೭೧ ರಲ್ಲಿ ಭಾರತವು ಬಾಂಗ್ಲಾದೇಶ ಮುಕ್ತಿಯ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಮುನ್ನುಗ್ಗಿತ್ತು. ಪಾಕಿಸ್ತಾನದ ಮಿತ್ರವಾದ ಅಮೇರಿಕಾ ಭಾರತಕ್ಕೆ ಯುದ್ಧವನ್ನು ನಿಲ್ಲಿಸಿ ಇಲ್ಲದಿದ್ದರೆ ಭಾರತ ಕೆಟ್ಟ ಪರಿಣಾಮ ಅನುಭವಿಸುವುದು’, ಎಂದು ಬೆದರಿಕೆಯೊಡ್ಡಿತ್ತು. ಆಗ ಭಾರತ ಜಾಗರೂಕತೆ ವಹಿಸಿ ಸಹಾಯಕ್ಕಾಗಿ ರಷ್ಯಾಗೆ ಸಂದೇಶವನ್ನು ಕಳುಹಿಸಿತ್ತು. ಪಾಕಿಸ್ತಾನ ಸೋಲುತ್ತದೆ, ಎಂದು ಸ್ಪಷ್ಟ ಅರಿವಾದಾಗ ಅಮೇರಿಕಾದ ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್ ಇವರು ರಾಷ್ಟ್ರಪತಿ ರಿಚರ್ಡ್ ನಿಕ್ಸನ್ ಇವರಿಗೆ ಹೇಳಿ ಅಮೇರಿಕಾದ ಅತೀ ದೊಡ್ಡ ಅಣ್ವಸ್ತ್ರ ವಿಮಾನವಾಹಕ ನೌಕೆಯನ್ನು ಬಂಗಾಲದ ಉಪಸಾಗರಕ್ಕೆ ಕಳುಹಿಸಲು ನಿರ್ಧರಿಸಿದರು. ಈ ಹಡಗು ಆ ಕಾಲದಲ್ಲಿ ಜಗತ್ತಿನ ಅತಿ ದೊಡ್ಡ ೯೪ ಸಾವಿರ ಟನ್ ತೂಕದ ಹಡಗಾಗಿತ್ತು. ಅದಕ್ಕೆ ೯೦ ಯುದ್ಧ ವಿಮಾನಗಳನ್ನು ಸಾಗಿಸುವ ಕ್ಷಮತೆಯಿತ್ತು. ಅದರ ತುಲನೆಯಲ್ಲಿ ಭಾರತದ ಬಳಿ ೧೯ ಸಾವಿರದ ೫೦೦ ಟನ್ ತೂಕದ ‘ಐ.ಎನ್.ಎಸ್. ವಿಕ್ರಾಂತ’ ಇತ್ತು. ಅದಕ್ಕೆ ಸುಮಾರು ೨೧ ರಿಂದ ೨೩ ವಿಮಾನಗಳನ್ನು ಸಾಗಿಸುವ ಕ್ಷಮತೆಯಿತ್ತು !
ಬಾಂಗ್ಲಾದೇಶ ಮುಕ್ತವಾಗುವುದನ್ನು ನಿಲ್ಲಿಸುವುದೇ ಅಮೇರಿಕನ್ ಹಡಗಿನ ಉದ್ದೇಶವಾಗಿತ್ತು. ದುರ್ಭಾಗ್ಯದಿಂದ ಅದೇ ವೇಳೆಗೆ ಭಾರತಕ್ಕೆ ಇನ್ನೊಂದು ಕೆಟ್ಟ ಸುದ್ದಿ ಸಿಕ್ಕಿತು. ರಷ್ಯಾದ ಗುಪ್ತಚರ ಇಲಾಖೆಯು ಭಾರತವನ್ನು ಎಚ್ಚರಿಸುತ್ತಾ, ಬ್ರಿಟಿಷ ನೌಕಾದಳವೂ ತನ್ನ ಅನೇಕ ಯುದ್ಧನೌಕೆಗಳನ್ನು ಅರಬೀ ಸಮುದ್ರಕ್ಕೆ ಕಳುಹಿಸುತ್ತಿದೆ. ಅದರ ನೇತೃತ್ವವನ್ನು ಎಚ್.ಎಮ್.ಎಸ್. ಇಗಲ್ ಎಂಬ ೩೦ ರಿಂದ ೩೫ ವಿಮಾನಗಳನ್ನು ಸಾಗಿಸುವ ಕ್ಷಮತೆ ಇರುವ ೫೫ ಸಾವಿರ ಟನ್ ತೂಕದ ಬ್ರಿಟಿಷ ವಿಮಾನವಾಹಕ ಹಡಗು ಮತ್ತು ಕಮಾಂಡೋ ಕ್ಯಾರಿಯರ್ ಅಲ್ಬಿಯಾನ್ ಮಾಡುತ್ತಿದೆ, ಎಂಬ ಸಂದೇಶ ರವಾನಿಸಿತು. ಇದು ಭಾರತವನ್ನು ಅರಬೀ ಸಮುದ್ರದಲ್ಲಿ ಮತ್ತು ಬಂಗಾಲದ ಉಪಸಾಗರದಲ್ಲಿ ಹೀಗೆ ಎರಡೂ ದಿಕ್ಕಿನಲ್ಲಿ ಮುತ್ತಿಗೆ ಹಾಕುವ ಬ್ರಿಟಿಷ ಮತ್ತು ಅಮೇರಿಕಾ ನೌಕಾದಳದ ಇಬ್ಬಗೆಯ ಹೊಂಚಾಗಿತ್ತು. ಈ ರೀತಿಯಲ್ಲಿ ಜಗತ್ತಿನ ಎರಡು ಮಹತ್ವದ ಪ್ರಜಾಪ್ರಭುತ್ವದ ದೇಶಗಳು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವದ ದೇಶವನ್ನು ಬೆದರಿಸುತ್ತಿದ್ದವು. ಆಗ ಭಾರತ ತಕ್ಷಣ ಸಹಾಯ ಮಾಡಬೇಕೆಂಬ ಸಂದೇಶವನ್ನು ಮಾಸ್ಕೋಗೆ ಕಳುಹಿಸಿತು. ರಷ್ಯಾದ ನೌಕಾದಳವು ತಕ್ಷಣ ೧೬ ಯುದ್ಧನೌಕೆಗಳನ್ನು ಮತ್ತು ೬ ಅಣ್ವಸ್ತ್ರವಾಹಕ ಸಬ್‌ಮೆರೀನ್‌ಗಳನ್ನು ವ್ಲಡಿವಾಸ್ಟಾಕ್‌ನಿಂದ ಕಳುಹಿಸಿತು. ಅಮೇರಿಕಾವನ್ನು ತಡೆಯುವುದು ಅದರ ಉದ್ದೇಶವಾಗಿತ್ತು. ಎಡ್ಮಿರಲ್ ಎನ್.ಕೃಷ್ಣನ್ ಇವರು ಅಂದಿನ ನೌಕಾದಳದ ಪೂರ್ವ ವಿಭಾಗದ ಮುಖ್ಯಸ್ಥರಾಗಿದ್ದರು, ಅವರು ತಮ್ಮ ಪುಸ್ತಕ ‘ನೋ ವೇ ಬಟ್ ಸರೆಂಡರ್’ನಲ್ಲಿ (NO WAY BUT SURRENDER) ಈ ಬಗ್ಗೆ ಬರೆದಿದ್ದಾರೆ, ಅವರಿಗೆ ಒಂದು ವಿಷಯ ಕಾಡುತ್ತಿತ್ತು ಅದೆಂದರೆ, ಅಮೇರಿಕನ್ ಯುದ್ಧನೌಕೆ ಚಿತ್ತಗಾಂಗ್ ಬಂದರಿನ ಮೇಲೆ ಆಕ್ರಮಣ ಮಾಡಬಹುದು. ಎಂದು ಅವರು ‘ಮಾರೋ ಅಥವಾ ಮರೋ, ಈ ಕಿಚ್ಚಿನಿಂದ ಒಂದು ಯೋಜನೆಯನ್ನೂ ತಯಾರಿಸಿದ್ದರು. ಡಿಸೆಂಬರ್ ೧೯೭೧ ರ ಎರಡನೆ ವಾರದಲ್ಲಿ ಅಮೇರಿಕಾದ ದೈತ್ಯಾಕಾರದ ಯುದ್ಧ ನೌಕೆ ಬಂಗಾಲದ ಉಪಸಾಗರಕ್ಕೆ ಬರುತ್ತಿತ್ತು ಹಾಗೂ ಬ್ರಿಟಿಷ ಯುದ್ಧನೌಕೆಗಳು ಅರಬೀ ಸಾಗರದತ್ತ ಹೊರಟಿದ್ದವು. ಈಗ ಸಂಪೂರ್ಣ ಜಗತ್ತಿನ ಶ್ವಾಸವೇ ನಿಂತು ಹೋದಂತಿತ್ತು, ಈಗ ಮಹಾಯುದ್ಧ ಭುಗಿಲೇಳುತ್ತದೋ ಏನೋ ? ಆದರೆ ಅಮೇರಿಕಾದ ಯುದ್ಧನೌಕೆಗೆ ತಿಳಿಯದಂತೆಯೇ ಅನಿರೀಕ್ಷಿತವಾಗಿ ಬಂಗಾಲ ಉಪಸಾಗರದಲ್ಲಿ ರಷ್ಯಾದ ಅಣ್ವಸ್ತ್ರವಾಹಕ ಸಬ್‌ಮೆರಿನ್ ಗಳು ಕಾಣಿಸಿದವು. ಅವುಗಳು ಅವರ ದಾರಿಯನ್ನು ಅಡ್ಡಗಟ್ಟಿ ನಿಂತಿದ್ದವು. ಎಡ್ಮಿರಲ್ ಗಾರ್ಡನ್ ತಿಳಿಸಿದರು, ‘ನಮಗೆ ತಡವಾಯಿತು. ರಷ್ಯಾದವರು ಮೊದಲಿಂದಲೇ ಇಲ್ಲಿ ನಿಂತಿದ್ದಾರೆ. ಅಮೇರಿಕನ್ ಮತ್ತು ಬ್ರಿಟಿಷ ನೌಕಾದಳ ಬಂದ ದಾರಿಯಲ್ಲಿಯೆ ಹಿಂದೆ ಹೋಗುವ ನಿರ್ಣಯಕೈಗೊಳ್ಳಬೇಕಾಯಿತು’.
೪. ವಿಶ್ವ ಸಂಸ್ಥೆ ಭದ್ರತಾ ಪರಿಷತ್ತಿನ ಮತದಾನದ ಸಮಯದಲ್ಲಿ ಭಾರತದ ತಟಸ್ಥ ನಿಲುವು ಖಂಡಿತ ಯೋಗ್ಯ !
ಇಂದು ಈ ಘಟನೆ ವಿಸ್ಮರಣೆಯಾಗಿದೆ. ಇದರಿಂದ ನಮ್ಮ ನಿಜವಾದ ಮಿತ್ರ ಯಾರು, ಎಂಬುದು ತಿಳಿಯುವುದು. ಅದರಿಂದ ಯುಕ್ರೇನ್‌ನ ಜಯಜಯಕಾರ ಅಥವಾ ಅವರಿಗಾಗುವ ಹಾನಿಯ ವಿಷಯದಲ್ಲಿ ಹೆಚ್ಚು ದುಃಖಿಸುತ್ತಾ ಕುಳಿತುಕೊಳ್ಳಬೇಡಿ. ಭಾರತವೂ ಮನುಷ್ಯತ್ವದ ಬಹುದೊಡ್ಡ ಬೆಲೆ ತೆರಬೇಕಾಯಿತು. ರಷ್ಯಾವು ಭಾರತದ ೫೦ ವರ್ಷಗಳಷ್ಟು ಹಳೆಯ ಮಿತ್ರವಾಗಿದೆ, ಆದ್ದರಿಂದ ಭಾರತ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ಮತದಾನದ ಸಮಯದಲ್ಲಿ ತಟಸ್ಥವಾಗಿರುವ ನಿಲುವನ್ನು ತೆಗೆದುಕೊಂಡಿರುವುದು ಯೋಗ್ಯವಾಗಿದೆ. ಇವೆಲ್ಲ ಘಟನೆಗಳಿಂದ ಅಮೇರಿಕಾದ ಇನ್ನೊಂದು ಮುಖ ಜಗತ್ತಿನ ಮುಂದೆ ಬಂತು ಹಾಗೂ ಅದರ ಮಹಾಧಿಕಾರಿ ಯಾಗುವ ಸುಪ್ತ ಇಚ್ಛೆಗೆ ರಷ್ಯಾ ತಣ್ಣೀರು ಎರಚಿತು.
ಲೇಖಕರು – ಓರ್ವ ನಿವೃತ್ತ ನೌಕಾದಳ ಕಮಾಂಡರ್ (ಆಧಾರ – ಸಾಮಾಜಿಕ ಜಾಲತಾಣ)
ಪ್ರಸಾರಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ !ಕಳೆದ ೨೦ ವಷಗಳಲ್ಲಿ ದೇಶದಲ್ಲಿ ಏಳೂ ದಿನಗಳು ಮತ್ತು ೨೪ ಗಂಟೆಗಳು ನಡೆಯುವ ೩೭೫ ‘ನ್ಯೂಸ್ ಚ್ಯಾನೆಲ್ಸ್’ ಪ್ರಾರಂಭವಾಗಿವೆ. ಇದು ಯಾವಾಗಲೂ ಹಸಿದಿರುವ ಒಂದು ಪ್ರಾಣಿಯಾಗಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಅದಕ್ಕೆ ತಿನ್ನಲು ಏನು ಕೊಡಬೇಕು ? ಹಾಗೆ ನೋಡಿದರೆ, ಇವುಗಳ ಸಂಖ್ಯೆಯು ಹೆಚ್ಚಾಗಿದೆ; ಆದರೆ ದುರ್ದೈವದಿಂದ ಗುಣಮಟ್ಟವು ಮಾತ್ರ ಕಡಿಮೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಪ್ರಸಾರಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ. ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ. – ಓರ್ವ ಹಿರಿಯ ಪತ್ರಕರ್ತರು (ಆಧಾರ : ಲೋಕ ಕಲ್ಯಾಣ ಸೇತು, ಜನವರಿ ೨೦೧೩) |
ಚೀನಾ ಕಬಳಿಸಿದ ಭೂಮಿಯನ್ನು ಪಡೆಯಲು ಬುಮಲಾ (ಅರುಣಾಚಲ ಪ್ರದೇಶ) ದಲ್ಲಿ ಭೂಮಾತೆಯ ಪೂಜೆಇಂಡೋ-ಟಿಬೆಟ್ ಸಹಕಾರ ವೇದಿಕೆಯು ಪ್ರತಿವರ್ಷ ತವಾಂಗ್ ತೀರ್ಥಯಾತ್ರೆಯನ್ನು ಆಯೋಜಿಸುತ್ತದೆ. ಯಾತ್ರಿಕರು ಇಂಡೋ-ಟಿಬೆಟಿಯನ್ ಗಡಿಯಲ್ಲಿರುವ ಬುಮಲಾಗೆ ಕಾಲ್ನಡಿಗೆಯಿಂದ ಹೋಗಿ ಮಾತೃಭೂಮಿಗೆ ಪೂಜೆ ಸಲ್ಲಿಸುತ್ತಾರೆ. ೧೯೬೨ ರಲ್ಲಿ ಚೀನಾ ವಶಪಡಿಸಿಕೊಂಡ ಭೂಮಿಯನ್ನು ಪುನಃ ಪಡೆದುಕೊಳ್ಳಲು ಅವರು ಸಂಕಲ್ಪ ಮಾಡುತ್ತಾರೆ. – ಡಾ. ಕುಲದೀಪ್ ಚಂದ್ ಅಗ್ನಿಹೋತ್ರಿ |