ಮಾಸ್ಕೋ (ರಷ್ಯಾ) – ರಷ್ಯಾವು ಉಕ್ರೇನ್ ನ ಪೋಲ್ಟವಾ ನಗರದ ಮೇಲೆ 2 ಬ್ಯಾಲೆಸ್ಟಿಕ್ ಕ್ಷಿಪಣಿಯಿಂದ ನಡೆಸಿದ ದಾಳಿಯಲ್ಲಿ 51 ಜನರು ಸಾವನ್ನಪ್ಪಿದ್ದಾರೆ ಹಾಗೂ 271 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಈ ದಾಳಿಯ ನಂತರ, ಪೋಲ್ಟವಾದಲ್ಲಿ 3 ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ.
ಝೆಲೆನ್ಸ್ಕಿ ಮಾತನಾಡಿ, ರಷ್ಯಾವು ನಮ್ಮ ಒಂದು ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡಿದೆ. ಹಾಗೂ ಕಟ್ಟಡಗಳಿಗೆ ದೊಡ್ಪ್ರಮಾಣದಲ್ಲಿ ಹಾನಿಯಾಗಿದೆ. ಅನೇಕ ನಾಗರಿಕರು ಅವಶೇಷಗಳ ಅಡಿಯಲ್ಲಿ ಸಿಕ್ಕಿ ಕೊಂಡಿದ್ದಾರೆ ಎಂದು ಹೇಳಿದ್ದಾರೆ.