ಶತಮಾನಗಳು ಕಳೆದರೂ ಆದಿಶಂಕರಾಚಾರ್ಯರ ಜನ್ಮಸ್ಥಾನಕ್ಕೆ ಸಂಬಂಧಿಸಿದ ಘಟಕಗಳಲ್ಲಿ ಚೈತನ್ಯಶಕ್ತಿ ಶಾಶ್ವತವಾಗಿರುವುದು

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ವೈಶಾಖ ಶುಕ್ಲ ಪಂಚಮಿ ಅಂದರೆ ೬ ಮೇ ೨೦೨೨ ಈ ದಿನದಂದು ಆದಿ ಶಂಕರಾಚಾರ್ಯರ  ಜಯಂತಿ ಇದೆ. ಅದರ ನಿಮಿತ್ತ …

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೩.೪.೨೦೨೧ ರಂದು ಆದಿ ಶಂಕಾರಾಚಾರ್ಯ ಇವರ ಜನ್ಮಸ್ಥಾನವಾಗಿರುವ ವೆಲಿಯಾನಾಡ (ಕೇರಳ) ಇಲ್ಲಿಯ ‘ಮೆಲಾಪಾಳೂರ ಮನಾ ಎಂಬ ಸ್ಥಳಕ್ಕೆ ಭೇಟಿ ನೀಡಿದರು. (ಅಲ್ಲಿ ಆದಿಶಂಕರಾಚಾರ್ಯ ಇವರ ತಾಯಿ ಆರ್ಯಾಂಬ ಇವರ ವಂಶಜರ ಮನೆ ಇದೆ. ಅದನ್ನು ‘ಮೇಲಪಾಳೂರ ಮನಾ’ ಎಂದು ಹೇಳುತ್ತಾರೆ. ಈ ಮನೆಯಲ್ಲಿ ಆದಿಶಂಕರಾಚಾರ್ಯ ಇವರ ಜನ್ಮವಾಗಿತ್ತು.) ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ‘ಮೆಲಪಾಳೂರು ಮನಾ’ ಇಲ್ಲಿಗೆ ತಲುಪಿದರು. ಆಗ ಆ ಮನೆಯ ನವೀಕರಣ ನಡೆಯುತ್ತಿತ್ತು ಅಲ್ಲಿ ಆಡಳಿತ ಮಂಡಳಿಯವರು ಈ ಬಗ್ಗೆ ಹೇಳುತ್ತಾ, ‘೧೯೮೯ ರಲ್ಲಿ ‘ಚಿನ್ಮಯ ಮಿಶನ್’ ಇದರ ಸಂಸ್ಥಾಪಕರಾದ ಪೂ. ಚಿನ್ಮಯಾನಂದರವರು ಈ ಮನೆಯನ್ನು ಆದಿಶಂಕರಾಚಾರ್ಯರ ವಂಶಜರಿಂದ ಖರೀದಿಸಿ ಅದರ ಜತನ ಮಾಡಿದರು’, ಎಂದರು, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಆಡಳಿತದವರಿಗೆ, “ಆದಿ ಶಂಕರಾಚಾರ್ಯರ ಜೀರ್ಣೋದ್ಧಾರವಾಗುತ್ತಿರುವ ಮನೆಯಲ್ಲಿನ ಬೇಡವಾದ ಏನಾದರೂ ವಸ್ತು (ಉದಾ. ಮನೆಯ ಹೊರಗಿನ ಮಣ್ಣು, ಮನೆಯ ಕಟ್ಟಿಗೆ, ಮನೆಯ ಮೇಲಿನ ಹಂಚು ಇತ್ಯಾದಿ) ಸಂಶೋಧನೆಗಾಗಿ ಸಿಗಬಹುದೇ ? ಎಂದು ಕೇಳಿದರು. ಅದಕ್ಕೆ ಆಡಳಿತವದರು ಕೂಡಲೇ ಒಪ್ಪಿದರು. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಈ ವಾಸ್ತುವಿನ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ವೈಜ್ಞಾನಿಕ ಉಪಕರಣದ ಮೂಲಕ ಸಂಶೋಧನೆ ಮಾಡಲಾಯಿತು. ಅದನ್ನು ಮುಂದೆ ನೀಡಲಾಗಿದೆ.

ಸೌ. ಮಧುರಾ ಕರ್ವೆ

೧. ನಿರೀಕ್ಷಣೆಯ ಘಟಕಗಳು

ಈ ಪರಿಶೀಲನೆಯಲ್ಲಿ ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಸಂಬಂಧಿಸಿದ ವಸ್ತುಗಳ (ಮನೆಯ ಹೊರಗಿನ ಮಣ್ಣು, ಮನೆಯ ಕಟ್ಟಿಗೆ,  ಮನೆಯ ಮೇಲಿನ ಹಂಚು (ಟಿಪ್ಪಣಿ) ಮತ್ತು ತುಂಡಾದ ಹಂಚಿನ ತುಂಡು ಇವುಗಳ) ‘ಯು.ಎ.ಎಸ್’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಅದನ್ನು ಮುಂದೆ ನೀಡಲಾಗಿದೆ.

ಟಿಪ್ಪಣಿ – ಈ ಹಂಚಿನ ಮೇಲೆ ‘೧೮೭೧’ ಎಂದು ಬರೆಯಲಾಗಿತ್ತು. ಇದರಿಂದ ಬಹುಶಃ ೧೫೦ ವರ್ಷಗಳ ಹಿಂದೆ ಈ ಮನೆಯ ನವೀಕರಣವನ್ನು ಮಾಡಿರಬಹುದು ಎಂಬುದು ಗಮನಕ್ಕೆ ಬರುತ್ತದೆ.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ – ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಸಂಬಂಧಿಸಿದ ವಸ್ತುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ (ಚೈತನ್ಯ) ಇರುವುದು

೨. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಆದಿಶಂಕರಾಚಾರ್ಯ – ಹಿಂದೂ ಧರ್ಮದ ಪುನರುತ್ಥಾನದ ಜನಕರು ! : ‘೭ ನೇ ಶತಮಾನದ ಮೊದಲು ಭಾರತದಲ್ಲಿ ಕೆಲವು ಪಂಥಗಳು ಹೊಸದಾಗಿ ಉದಯಿಸಿದವು ಮತ್ತು ವೈದಿಕ ಧರ್ಮದೊಂದಿಗೆ ಅವುಗಳ ಸಂಘರ್ಷ ಆರಂಭವಾಯಿತು. ಸಾಮ್ರಾಟ ಅಶೋಕನ ನಂತರ ಕೆಲವು ಪಂಥಗಳು ವೈದಿಕ ಧರ್ಮವನ್ನು ಕಾಲಿನಡಿ ತುಳಿಯಲು ಶತಪ್ರಯತ್ನ ಮಾಡಿದರು.

ಇತರ ಪಂಥಗಳ ಜೊತೆಗೆ ದೇಶದಲ್ಲಿನ ಶೈವ, ಶಾಕ್ತ, ವೈಷ್ಣವ, ಗಾಣಪತ್ಯ, ಕಾಪಾಲಿಕ ಇತ್ಯಾದಿ ಸಂಪ್ರದಾಯಗಳು ಅವರೊಳಗೆ ಜಗಳವಾಡಿ ಧರ್ಮವನ್ನು ಒಳಗಿಂದಲೇ ಕೊರೆಯುತಿದ್ದವು. ಕ್ರಮೇಣ ತಾಂತ್ರಿಕರ ಉದಯವಾಯಿತು ಹಾಗೂ ತಂತ್ರವಿದ್ಯೆಯ ಹೆಸರಿನಲ್ಲಿ ಅನಾಚಾರಗಳು ಹರಡಲು ಆರಂಭವಾದವು. ಉಪಾಸನೆಯ ಹೆಸರಿನಲ್ಲಿ ಜನಸಾಮಾನ್ಯರ ದಾರಿ ತಪ್ಪಿಸುವುದು ಆರಂಭವಾಯಿತು. ಅದರಿಂದ ಜನಸಾಮಾನ್ಯರು ಗೊಂದಲಕ್ಕೀಡಾಗಿದ್ದರು. ನಿಜವಾದ ಧರ್ಮವು ಮೂಲೆಗುಂಪಾಯಿತು. ಭಾರತದಲ್ಲಿ ಎಲ್ಲೆಡೆ ಧಾರ್ಮಿಕ ಅರಾಜಕತೆ ನಿರ್ಮಾಣವಾಗಿತ್ತು. ಇಂತಹ ಸಮಯದಲ್ಲಿ ಕೇರಳದ ಕಾಲಾಡಿಯಲ್ಲಿ ೬೩೨ ನೇ ಇಸವಿಯಲ್ಲಿ ಆದಿಶಂಕರಾಚಾರ್ಯರ ಜನ್ಮವಾಯಿತು. ಅವರ ಹೆಸರು ಶಂಕರ ಎಂದಿತ್ತು. ಅವರು ಸಂನ್ಯಾಸ ಸ್ವೀಕರಿಸಿ ತಮ್ಮ ಜೀವನವನ್ನು ಧರ್ಮಕಾರ್ಯಕ್ಕಾಗಿ ಅರ್ಪಿಸಲು ಬಾಲ್ಯದಲ್ಲಿಯೇ ಮನೆಯನ್ನು ತ್ಯಜಿಸಿದ್ದರು. ಗೋವಿಂದಯತಿಗಳು ಅವರನ್ನು ಶಿಷ್ಯರೆಂದು ಸ್ವೀಕರಿಸಿದರು. ಅವರಿಗೆ ವಿಧಿವತ್ತಾಗಿ ಸನ್ಯಾಸದೀಕ್ಷೆ ನೀಡಿ ‘ಶಂಕರಾಚಾರ್ಯ’ ಎಂದು ನಾಮಕರಣವನ್ನು ಮಾಡಿದರು.

ಪ್ರಚಂಡ ಬುದ್ಧಿಶಕ್ತಿ ಮತ್ತು ತಪಶ್ಚರ್ಯೆಯ ಪ್ರಭಾವದಿಂದ ಶಂಕರಾಚಾರ್ಯರು ಆ ಪಂಥಗಳನ್ನು ಸೋಲಿಸಿ  ಹಿಂದೂ ಧರ್ಮದ ಪುನರುತ್ಥಾನ ಮಾಡಿದರು. ಶಂಕರಾಚಾರ್ಯರು ವೈದಿಕ ಧರ್ಮದ ಮೇಲಿನ ಆಘಾತವನ್ನು ಹಿಮ್ಮೆಟ್ಟಿಸಿ ಧರ್ಮದಲ್ಲಿ ನಿರ್ಮಾಣವಾದ ವಿಕೃತಿಗಳನ್ನು ದೂರ ಮಾಡಿದರು, ಕಾಲದ ಪ್ರಭಾವದಿಂದ ಧರ್ಮದ ಮೇಲೆ ಬಂದಿರುವ ಸಂಕಟವನ್ನು ದೂರಗೊಳಿಸಿ ಆಚಾರಪ್ರಧಾನ ಮತ್ತು ಅದ್ವೈತ ಪ್ರಧಾನವಾದ ವೈದಿಕ ಧರ್ಮದ ಪ್ರಕಾಶವನ್ನು ಭಾರತಭೂಮಿಯಲ್ಲಿ ಎಲ್ಲೆಡೆ ಹರಡಿಸಿದರು; ಧರ್ಮಕ್ಕೆ ತೇಜತ್ವವು ಪ್ರಾಪ್ತಿಯಾಯಿತು. ಆದಿಶಂಕರಾಚಾರ್ಯರು ಓರ್ವ ಶ್ರೇಷ್ಠ ಯತಿ, ಗ್ರಂಥಕರ್ತ, ಅದ್ವೈತ ಮತದ ಪ್ರಚಾರಕ, ಸ್ತೋತ್ರ ರಚನಾಕಾರ ಮತ್ತು ಧರ್ಮ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದರು. ಈ ಲೋಕಕಲ್ಯಾಣ ಕಾರ್ಯದಿಂದ ಶಂಕರಾಚಾರ್ಯರು ‘ಜಗದ್ಗುರು’ ಆದರು. (ಆಧಾರ – ಸನಾತನ ಸಂಸ್ಥೆಯ ಜಾಲತಾಣ – sanatan.org)

೨ ಆ. ಆದಿಶಂಕರಾಚಾರ್ಯರ ಜನ್ಮಸ್ಥಳಕ್ಕೆ ಸಂಬಂಧಿಸಿದ ವಾಸ್ತುವಿನಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವಿರುವುದು : ‘ಆದಿ ಶಂಕರಾಚಾರ್ಯರು ಭಗವಾನ ಶಿವನ ಅವತಾರವಾಗಿದ್ದರು’, ಎಂಬ ನಂಬಿಕೆಯಿದೆ. ಅವರು ಹಿಂದೂ ಧರ್ಮದ ಪುನರುತ್ಥಾನದಂತಹ ಮಹತ್ವದ ಕಾರ್ಯವನ್ನು ಮಾಡಿದರು. ವೈದಿಕ ಹಿಂದೂ ಧರ್ಮವು ಭವಿಷ್ಯದಲ್ಲಿ ಶಾಶ್ವತವಾಗಿ ಉಳಿಯಬೇಕೆಂದು ಅವರು ಭಾರತದ ನಾಲ್ಕೂ ದಿಕ್ಕುಗಳಲ್ಲಿ ೪ ಧರ್ಮಪೀಠಗಳನ್ನು ಸ್ಥಾಪಿಸಿದರು. ಈ ರೀತಿಯಲ್ಲಿ ಆದಿ ಶಂಕರಾಚಾರ್ಯರ ವಿದ್ವತ್ತು ಮತ್ತು ಅವರ ಮಹಾನ್ ಕಾರ್ಯಗಳಿಂದಾಗಿ ಅವರು ಸ್ವತಃ ಚೈತನ್ಯದ ಸ್ರೋತರಾಗಿದ್ದರು. ಆದುದರಿಂದ ಅವರ ಜನ್ಮಸ್ಥಳವು ಸಹ ಸಹಜವಾಗಿಯೇ ಚೈತನ್ಯಮಯವಾಗಿದೆ. ಅವರ ವಾಸ್ತುವಿನಲ್ಲಿನ ಚೈತನ್ಯವು ಆ ವಾಸ್ತುವಿಗೆ ಸಂಬಂಧಿಸಿದ ವಸ್ತುಗಳಲ್ಲಿಯೂ ತುಂಬಿಕೊಂಡಿದೆ. ಒಂದು ಸಾವಿರದ ಮುನ್ನೂರೈವತ್ತು ವರ್ಷಗಳಾದರೂ ಆ ವಾಸ್ತುವಿನಲ್ಲಿ ಚೈತನ್ಯ ಉಳಿದಿದೆ.

೩. ಹಿಂದೂ ಧರ್ಮದಲ್ಲಿರುವ ಸಂತರ ಜನ್ಮಸ್ಥಾನ, ತಪೋ ಭೂಮಿ ಇತ್ಯಾದಿಗಳನ್ನು ಕಾಪಾಡುವ ಪ್ರಾಚೀನ ಪರಂಪರೆ

ಸಂತರು ಮತ್ತು ಗುರುಗಳೆಂದರೆ ಈಶ್ವರನ ಸಗುಣರೂಪವಾಗಿರುತ್ತಾರೆ ! ಅವರಲ್ಲಿ ತುಂಬಾ ಚೈತನ್ಯವಿರುತ್ತದೆ. ಅದರಿಂದ ಭಕ್ತರಿಗೆ, ಸಾಧಕರಿಗೆ ಮತ್ತು ಶಿಷ್ಯರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ. ಆದ್ದರಿಂದಲೆ ಇಂದಿನ ವಿಜ್ಞಾನಯುಗದಲ್ಲಿಯೂ ಭಕ್ತರು ಸಂತರ ಪಾದುಕೆಗಳಿಗೆ ಶರಣಾಗತರಾಗಿ ಶಿರಬಾಗಿ ನಮಸ್ಕಾರ ಮಾಡುತ್ತಾರೆ. ಅದೇ ರೀತಿ ಸಂತರ ಜನ್ಮಸ್ಥಾನ, ಅವರ ತಪೋಭೂಮಿ, ಅವರು ಸ್ಥಾಪಿಸಿದ ಮಠ ಅಥವಾ ಆಶ್ರಮ ಇವುಗಳ ಭಾವಪೂರ್ಣ ದರ್ಶನ ಪಡೆಯುತ್ತಾರೆ. ಸಂತರು ದೇಹತ್ಯಾಗ ಮಾಡಿದ ನಂತರವೂ ಅವರು ಸೂಕ್ಷ್ಮದಲ್ಲಿ ಭಕ್ತರ ಕರೆಗೆ ಓಗೊಟ್ಟು ಅವರಿಗೆ ಅನುಭೂತಿಯನ್ನು ಕೊಡುತ್ತಾರೆ. ಹಿಂದೂ ಧರ್ಮದಲ್ಲಿ ಸಂತರ ಜನ್ಮಸ್ಥಾನ, ಅವರ ತಪೋಭೂಮಿ, ಅವರು ಸ್ಥಾಪಿಸಿದ ಮಠ, ಆಶ್ರಮ, ಅವರ ನಿತ್ಯ ಬಳಕೆಯ ವಸ್ತು ಮತ್ತು ಅವರ ಸಮಾಧಿಸ್ಥಾನ ಇತ್ಯಾದಿಗಳಲ್ಲಿ ತುಂಬಾ ಸಾತ್ತ್ವಿಕತೆ ಇರುವುದರಿಂದ ಅದನ್ನು ಜೋಪಾನ ಮಾಡುವ ಪರಂಪರೆ ನಡೆದುಬಂದಿದೆ.

– ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ,

ವಿ-ಅಂಚೆ : [email protected]