ಶ್ರೀಗುರುಗಳ ಆಜ್ಞೆ ಎಂದು ಮನೆಯಲ್ಲಿಯೇ ಕಾಯಿಪಲ್ಲೆ ಮತ್ತು ಔಷಧಿ ವನಸ್ಪತಿಗಳನ್ನು ಬೆಳೆಸಿದ ಪುಣೆ ಜಿಲ್ಲೆಯ ಸಾಧಕಿಯರು

ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ

ಸೌ. ಕಲ್ಪನಾ ಯಂದೆ ಇವರ ಮನೆಯಲ್ಲಿ ಬೆಳೆಸಿದ ಮೆಂತ್ಯೆ
ಸೌ. ಕಲ್ಪನಾ ಯಂದೆ ಇವರು ಮನೆಯಲ್ಲಿ ಬೆಳೆಸಿದ ಕೆಸುವು

‘ಆಪತ್ಕಾಲದ ಪೂರ್ವಸಿದ್ಧತೆ ಎಂದು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಸ್ವಲ್ಪವಾದರೂ ಕಾಯಿಪಲ್ಲೆ, ಹಣ್ಣಿನ ಗಿಡಗಳು ಮತ್ತು ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡಬೇಕು’, ಎಂಬ ಉದ್ದೇಶದಿಂದ ಪರಾತ್ಪರ ಗುರು ಡಾ. ಆಠವಲೆಯವರ ಆಶೀರ್ವಾದದಿಂದ ಸನಾತನವು ೨೦೨೧ ನೇ ಇಸವಿಯ ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧ ರಿಂದ) ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನವನ್ನು ಆರಂಭಿಸಿದೆ. ಇದರಲ್ಲಿ ‘ನೈಸರ್ಗಿಕ ಪದ್ಧತಿಯಿಂದ ಮನೆಯಲ್ಲಿಯೇ ಕೃಷಿಯನ್ನು ಹೇಗೆ ಮಾಡಬೇಕು’, ಎಂಬುದರ ಸವಿಸ್ತಾರವಾದ ಮಾಹಿತಿಯನ್ನು ಸನಾತನದ ಜಾಲತಾಣದಲ್ಲಿ ಪ್ರಾಯೋಗಿಕ ಭಾಗಗಳೊಂದಿಗೆ ನೀಡಲಾಗಿದೆ. ಇವುಗಳೊಂದಿಗೆ ‘ಆನ್‌ಲೈನ್’ನಲ್ಲಿಯೂ ವಿವಿಧ ಶಿಬಿರಗಳ ಮಾಧ್ಯಮದಿಂದಲೂ ಮಾರ್ಗದರ್ಶನವನ್ನು ಮಾಡಲಾಗುತ್ತಿದೆ. ಈ ಅಭಿಯಾನದ ಅಂತರ್ಗತ ಪುಣೆ ಜಿಲ್ಲೆಯ ಸಾಧಕರು ‘ತಮ್ಮ ಮನೆಯಲ್ಲಿ ಕೈದೋಟವನ್ನು ಮಾಡುವುದು’, ಶ್ರೀಗುರುಗಳ ಆಜ್ಞೆಯಾಗಿದೆ, ಎಂಬ ಭಾವವನ್ನಿಟ್ಟು ಬಹಳ ಚೆನ್ನಾಗಿ ಪ್ರಯತ್ನಿಸಿದ್ದಾರೆ. ಇವರಲ್ಲಿನ ಕೆಲವು ಸಾಧಕರ ಅನುಭವವನ್ನು ನೋಡೋಣ.

೧. ಸೌ. ಕಲ್ಪನಾ ಯಂದೆ, ಜುನ್ನರ

ಸೌ. ಕಲ್ಪನಾ ಯಂದೆ, ಜುನ್ನರ

೧ ಅ. ಕೃಷಿಗೆ ಸಂಬಂಧಿಸಿದ ಸೇವೆಯನ್ನು ಆರಂಭಿಸಿದ ನಂತರ ಕೃತಜ್ಞತಾ ಭಾವ ಜಾಗೃತವಾಗುವುದು : ಮನೆಯಲ್ಲಿ ಕಾಯಿಪಲ್ಲೆಗಳನ್ನು ಬೆಳೆಸಲು ಬೇಕಾದ ಮಣ್ಣು, ಕುಂಡ ಇತ್ಯಾದಿ ಸಾಹಿತ್ಯಗಳನ್ನು ಸಂಗ್ರಹಿಸಬೇಕಾಗಿತ್ತು. ಅದಕ್ಕಾಗಿ ಪ್ರಾರ್ಥನೆಯನ್ನು ಮಾಡಿ ಆರಂಭಿಸಿದೆನು. ಓರ್ವ ಸಾಧಕರ ಹೊಲಕ್ಕೆ ಮಣ್ಣು ತರಲು ಹೋದಾಗ, ನನಗೆ ಮಣ್ಣಿನ ಬಗ್ಗೆ ಬಹಳ ಕೃತಜ್ಞತೆ ಅನಿಸಿತು. ‘ಈ ಮಣ್ಣಿನಿಂದ ನಮಗೆ ಆಹಾರವು ಸಿಗುತ್ತದೆ, ಎಂಬುದರ ಅರಿವಾಯಿತು. ಇದಕ್ಕೂ ಮೊದಲು ಹೀಗೆ ಎಂದಿಗೂ  ಅನಿಸಿರಲಿಲ್ಲ. ಹೊಲದಿಂದ ಮನೆಯವರೆಗೆ ಮಣ್ಣನ್ನು ತರಲು ಸಾಧಕರು, ಹಾಗೆಯೇ ನನ್ನ ಯಜಮಾನರು ಸಹ ತುಂಬ ಸಹಾಯ ಮಾಡಿದರು. ಆಗ ಶ್ರೀಗುರುಗಳ ಬಗ್ಗೆ ಬಹಳ ಕೃತಜ್ಞತೆಯು ಅನಿಸಿತು.

೧ ಆ. ಸಾಧಕಿಯು ತನ್ನ ಮನೆಯಲ್ಲಿ ಬೆಳೆಸಿದ ಕಾಯಿಪಲ್ಲೆಗಳು : ಮೆಂತ್ಯೆ, ಸಬ್ಬಸಿಗೆ, ಕುಸಿಬಿ, ಪಾಲಕ್, ಕೊತ್ತಂಬರಿ, ಮೂಲಂಗಿ, ಹಾಗಲಕಾಯಿ, ಹೀರೆಕಾಯಿ, ಕಾಡುಹೀರೆ, ಬೆಂಡೆಕಾಯಿ, ಚವಳಿಕಾಯಿ, ಹಾಲುಗುಂಬಳಕಾಯಿ, ಬದನೆಕಾಯಿ, ಮೆಣಸಿನಕಾಯಿ, ಕೆಸುವು ಇತ್ಯಾದಿ ಸುಮಾರು ೨೦ ವಿಧದ ಕಾಯಿಪಲ್ಲೆಗಳನ್ನು ಬೆಳೆಸಿದೆವು. ಇವುಗಳೊಂದಿಗೆ ಶಂಖಪುಷ್ಟ, ಲಿಲೀ, ದಾಸವಾಳ ಮತ್ತು ಸೇವಂತಿಗೆ ಈ ಹೂವಿನ ಗಿಡಗಳನ್ನು, ಹಾಗೆಯೇ ಲೋಳೆಸರ, ಮಜ್ಜಿಗೆ ಹುಲ್ಲು, ಬಿಲ್ವಪತ್ರೆ ಮತ್ತು ತುಳಸಿ ಈ ಔಷಧಿ ವನಸ್ಪತಿಗಳನ್ನು ಬೆಳಸಿದೆವು. ಕೃಷಿಯನ್ನು ಪ್ರಾರಂಭಿಸಿದ ಮೇಲೆ ಕೆಲವು ದಿನಗಳಲ್ಲಿಯೇ ಒಂದು ದೊಡ್ಡ ಕಟ್ಟಿನಷ್ಟು ಮೆಂತ್ಯೆ ಸೊಪ್ಪು ಸಿಕ್ಕಿತು. ಈಗ ನಮಗೆ ನಿಯಮಿತವಾಗಿ ಪ್ರತಿದಿನ ಸ್ವಲ್ಪವಾದರೂ ತರಕಾರಿ ಸಿಗುತ್ತಿದೆ. ಮನೆಯ ತಾಜಾ ಕಾಯಿಪಲ್ಲೆಗಳನ್ನು ತಿನ್ನುವಾಗ ಬಹಳ ಒಳ್ಳೆಯದೆನಿಸುತ್ತದೆ.

೧ ಇ. ಗಿಡಗಳಿಗೆ ಆಧ್ಯಾತ್ಮಿಕ ಉಪಾಯಗಳನ್ನೂ ಮಾಡುವುದು : ತರಕಾರಿಗಳ ಗಿಡಗಳನ್ನು ನೆಡುವಾಗ ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡುವುದು, ಕುಂಡಗಳ ಸುತ್ತಲೂ ನಾಮಪಟ್ಟಿಗಳ ಮಂಡಲ ಹಾಕುವುದು, ವಿಭೂತಿಯನ್ನು ಊದುವುದು, ನೀರು ಹಾಕುವಾಗ ಅದರಲ್ಲಿ ಸ್ವಲ್ಪ ಗೋಮೂತ್ರ ಹಾಕುವುದು ಇಂತಹ ಆಧ್ಯಾತ್ಮಿಕ ಉಪಾಯಗಳನ್ನೂ ಈಶ್ವರನು ನನ್ನಿಂದ ಮಾಡಿಸಿಕೊಂಡನು. ಈಗ ನಾನು ನಿಯಮಿತವಾಗಿ ಬೆಳಗ್ಗೆ ಗಿಡಗಳಿಗೆ ನೀರು ಹಾಕುವಾಗಲೂ ಪ್ರಾರ್ಥನೆಯನ್ನು ಮಾಡುತ್ತೇನೆ. ಗಿಡಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತೇನೆ. ಆದ್ದರಿಂದ ನನಗೆ ‘ಗಿಡಗಳು ನಮ್ಮ ದಾರಿಯನ್ನು ಕಾಯುತ್ತಿರುತ್ತವೆ, ಎಂದು ಅನಿಸುತ್ತದೆ, ಹಾಗೆಯೇ ಗಿಡಗಳ ಬಗ್ಗೆ ಪ್ರೇಮವೆನಿಸುತ್ತದೆ.

೨. ಸೌ. ಜಾನಕಿ ಪವಳೆ, ಚಂದನನಗರ

ಸೌ. ಜಾನಕಿ ಪವಳೆ

೨ ಅ. ಕಾಯಿಪಲ್ಲೆಗಳನ್ನು ಬೆಳೆಸುವುದು : ಮೊದಲು ನಾನು ತೊಪ್ಪಲು ಪಲ್ಲೆ, ಹಾಗೆಯೇ ಮನೆಯಲ್ಲಿನ ಮೊಳಕೆ ಬಂದ ಈರುಳ್ಳಿಯನ್ನು ಹಚ್ಚಿದೆನು. ಈ ಈರುಳ್ಳಿಗಳ ತೊಪ್ಪಲನ್ನು ೩ ಸಲ ಪಲ್ಯಕ್ಕಾಗಿ ಉಪಯೋಗಿಸಿದೆವು. ಕೊತ್ತಂಬರಿ ಬೀಜಗಳನ್ನು ಬಿತ್ತಿದೆನು. ಅದರಿಂದ ಒಳ್ಳೆಯ ಕೊತ್ತಂಬರಿ ಬಂದಿತು. ಅದನ್ನು ೨-೩ ಸಲ ಬಳಸಿದೆನು. ಮೆಂತ್ಯೆ ಸೊಪ್ಪು ಚೆನ್ನಾಗಿ ಬೆಳೆಯಿತು ಮೆಣಸಿನಕಾಯಿಗಳು ಬಂದವು. ಬಟಾಟೆಗಳನ್ನು ನೆಟ್ಟಿದ್ದೇವೆ. ಸ್ವಲ್ಪ ಬೆಳ್ಳುಳ್ಳಿಯನ್ನೂ ನೆಟ್ಟಿದ್ದೆವು. ಅವು ಸಹ ಚೆನ್ನಾಗಿ ಬೆಳೆದಿವೆ. ಪಾಲಕ್, ಪುದೀನಾ, ಮೂಲಂಗಿ, ಅವರೆ ಇವುಗಳೂ ಚೆನ್ನಾಗಿ ಬೆಳೆದಿವೆ.

೨ ಆ. ಔಷಧಿ ವನಸ್ಪತಿಗಳು ಮತ್ತು ಹೂವಿನ ಗಿಡಗಳನ್ನು ಬೆಳೆಸುವುದು : ಅಮೃತಬಳ್ಳಿ ಮತ್ತು ತುಳಸಿ ಈ ಔಷಧಿ ವನಸ್ಪತಿಗಳನ್ನು ಬೆಳೆಸಿದೆನು. ತುಳಸಿಯ ಬೀಜಗಳನ್ನು ಸಂಗ್ರಹಿಸಿದೆನು. ಬಿಳಿ ಮತ್ತು ಗುಲಾಬಿ ಬಣ್ಣದ ನಿತ್ಯಪುಷ್ಪ, ಹಾಗೆಯೇ ಕೆಂಪು ದಾಸವಾಳ ಈ ಹೂವಿನ ಗಿಡಗಳು ತುಂಬಾ ಚೆನ್ನಾಗಿ ಬೆಳೆದಿವೆ.

೩. ಶ್ರೀಮತಿ ಹೇಮಲತಾ ಚವ್ಹಾಣ, ಭೋರ

ಶ್ರೀಮತಿ ಹೇಮಲತಾ ಚವ್ಹಾಣ

೩ ಅ. ಗಿಡಗಳಿಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿದ ನಂತರ ಅವುಗಳಿಗೆ ಹೂವುಗಳು ಬರುವುದು : ಮೇಲ್ಛಾವಣಿಯಲ್ಲಿನ (ಟೆರೇಸನಲ್ಲಿನ) ಕುಂಡಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದೆನು; ಆದರೆ ಅವುಗಳ ಬೆಳವಣಿಗೆ ಆಗದಿರುವುದು, ಹೂವುಗಳು ಬಿಡದಿರುವುದು, ಗಿಡಗಳು ಒಣಗುವುದು ಹೀಗೆ ಆಗುತ್ತಿತ್ತು ಅವುಗಳಿಗೆ ಆಧ್ಯಾತ್ಮಿಕ ಉಪಾಯವೆಂದು ನೀರಿನಲ್ಲಿ ವಿಭೂತಿ, ಗೋಮೂತ್ರ ಮತ್ತು ಕರ್ಪೂರವನ್ನು ಹಾಕಿ ಆ ನೀರನ್ನು ಗಿಡಗಳಿಗೆ ಹಾಕಿದೆನು. ನೀರು ಹಾಕುವಾಗ ನಾಮಜಪವನ್ನು ಮಾಡುತ್ತಾ ‘ಗುರುದೇವರ ಚರಣಗಳ ತೀರ್ಥವನ್ನು ಗಿಡಗಳಿಗೆ ಹಾಕುತ್ತಿದ್ದೇನೆ’, ಎಂಬ ಭಾವವನ್ನು ಇಟ್ಟೆನು. ಈ ಕೃತಿಯನ್ನು ಮಾಡಿದ ನಂತರ ದಾಸವಾಳ, ಗೊಂಡೆ, ಕಾಕಡಾ ಮತ್ತು ಮಲ್ಲಿಗೆ ಇವುಗಳ ಗಿಡಗಳಿಗೆ ಚಿಗುರೊಡೆದು ಕೆಲವು ದಿನಗಳಲ್ಲಿ ಹೂವುಗಳು ಬಂದವು.

೩ ಆ. ಸ್ವತಃ ಕೃಷಿಯನ್ನು ಮಾಡಿರಿ ಮತ್ತು ಇತರರಿಗೂ ಕೃಷಿ ಮಾಡಲು ಪ್ರೋತ್ಸಾಹ ನೀಡಿ : ಮೇಲ್ಛಾವಣಿಯಲ್ಲಿ (ಟೆರೇಸ್) ಮತ್ತು ಗೋಡೆಯ ಆಧಾರದಲ್ಲಿ ‘ಸಾಸಿವೆ, ಸಾಂಬಾರಸೊಪ್ಪು, ಪುದೀನಾ, ನಿಂಬೆ, ಅಮೃತಬಳ್ಳಿ, ವೀಳ್ಯೆದೆಲೆಯ ಬಳ್ಳಿ ಇವುಗಳಂತಹ ಔಷಧಿ ವನಸ್ಪತಿಗಳನ್ನು ಹಚ್ಚಿದ್ದೇವೆ. ಅವುಗಳ ಬೆಳವಣಿಗೆ ಚೆನ್ನಾಗಿ ಆಗುತ್ತಿದೆ. ಸನಾತನದ ಜಾಲತಾಣದಲ್ಲಿ ಶ್ರೀಮತಿ ಜ್ಯೋತಿ ಶಹಾ ಇವರ ಜೀವಾಮೃತದ ಪ್ರಾಯೋಗಿಕ ಭಾಗವನ್ನು ನೋಡಿ ಜೀವಾಮೃತವನ್ನು ತಯಾರಿಸಿದೆನು ಮತ್ತು ಇತರ ಸಾಧಕರಿಗೂ ಇದಕ್ಕಾಗಿ ಪ್ರೋತ್ಸಾಹಿಸಿದೆನು’.

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ ವಿನಂತಿ !

ಸಾಧಕರಿಗೆ ಕೃಷಿಯನ್ನು ಮಾಡುವಾಗ ಬಂದ ಅನುಭವಗಳು, ಕೃಷಿಗೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಪ್ರಯೋಗ ಇವುಗಳ ಬಗೆಗಿನ ಬರವಣಿಗೆಯನ್ನು ತಮ್ಮ ಛಾಯಾಚಿತ್ರದೊಂದಿಗೆ ಮುಂದಿನ ವಿಳಾಸಕ್ಕೆ ಕಳುಹಿಸಿರಿ.

ಬರವಣಿಗೆಯನ್ನು ಕಳುಹಿಸಲು ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, c/o ‘ಸನಾತನ ಆಶ್ರಮ, ೨೪/ಬಿ ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ವಿ-ಅಂಚೆ ವಿಳಾಸ : [email protected]