Kerala Landslides : ಕೇರಳ ಭೂಕುಸಿತ : ಮೃತರ ಸಂಖ್ಯೆ ೨೭೦ ಕ್ಕೆ ಏರಿಕೆ, ನೂರಾರು ಜನರು ಈಗಲೂ ನಾಪತ್ತೆ !

ತಿರುವನಂತಪುರಂ (ಕೇರಳ) – ರಾಜ್ಯದಲ್ಲಿನ ವಾಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಈಗ ೨೭೦ ಕ್ಕೆ ಏರಿಕೆಯಾಗಿದೆ. ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇದಲ್ಲದೆ ೧೯೦ ಜನರು ಈಗಲೂ ನಾಪತ್ತೆ ಆಗಿದ್ದಾರೆ.

ಇಲ್ಲಿಯವರೆಗೆ ೧ ಸಾವಿರದ ೫೯೨ ಜನರನ್ನು ಮಣ್ಣಿನ ರಾಶಿಯಿಂದ ಹೊರತೆಗೆದಿರುವ ಕುರಿತು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇವರು ಮಾಹಿತಿ ನೀಡಿದರು. ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರೆದಿದ್ದು ಪ್ರತಿಕೂಲ ಹವಾಮಾನ ಮತ್ತು ಮಳೆಯಿಂದಾಗಿ ರಕ್ಷಣಾ ಕಾರ್ಯದಲ್ಲಿ ಅಡಚಣೆಗಳು ನಿರ್ಮಾಣವಾಗುತ್ತಿವೆ.

೧. ಜನರಿಗೆ ಜೀವನೋಪಯೋಗಿ ವಸ್ತುಗಳು ದೊರೆಯುವದಕ್ಕಾಗಿ ಸೈನ್ಯದಿಂದ ಕೋಳಿಕೊಡ ಇಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

೨. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರೊಂದಿಗೆ ಚರ್ಚೆ ನಡೆಸಿದ್ದು ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ನೀಡಲಾಗುವುದೆಂದು ಆಶ್ವಾಸನೆ ನೀಡಿದ್ದಾರೆ. ಸಾವನ್ನಪ್ಪಿರುವ ಪ್ರತಿಯೊಂದು ಕುಟುಂಬದವರಿಗೆ ತಲಾ ೨ ಲಕ್ಷ ರೂಪಾಯ ಹಾಗೂ ಗಾಯಗೊಂಡಿರುವವರಿಗೆ ೫೦ ಸಾವಿರ ರೂಪಾಯಿ ಆರ್ಥಿಕ ಸಹಾಯ ನೀಡಲಾಗುವುದೆಂದು ಕೇಂದ್ರ ಸರಕಾರದಿಂದ ಘೋಷಿಸಿದೆ.

೩. ಮುಖ್ಯಮಂತ್ರಿ ವಿಜಯನ್ ಇವರು ಸರ್ವಪಕ್ಷಗಳ ಸಭೆ ಕರೆದಿದ್ದು ಅದರಲ್ಲಿ ಒಟ್ಟಾರೆ ಪರಿಸ್ಥಿತಿಯ ಕುರಿತು ಚರ್ಚೆ ನಡೆಯಲಿದೆ.

೪. ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿನ ಇಡುಕ್ಕಿ, ತ್ರಿಶೂರ್, ಪಲಕ್ಕಡ್, ಮಲಪ್ಪುರಂ, ಕೋಳಿಕೊಡ, ಕನ್ನೂರ್ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಮುಂದಿನ ೨ ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಸ್ಥಳಗಳಲ್ಲಿ ಮತ್ತೆ ಭೂಕುಸಿತದ ಘಟನೆ ಘಟಿಸುವ ಸಾಧ್ಯತೆ ಇದೆ. ಕೇರಳ ಸರಕಾರವು 9656938689 ಮತ್ತು 8086010833 ಹೀಗೆ ಎರಡು ಹೆಲ್ಪ್ ಲೈನ್ ಕೂಡ ಜಾರಿ ಮಾಡಿದೆ.

೫. ವಾಯನಾಡದ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಇವರು ಕುರುಂಬಲಾಕೊಟ್ಟ, ಲಕೀತಿ ಮಣಿಕೂನು ಮಾಲಾ, ಮುಟ್ಟಿಲ ಕೋಲಪಾರಾ ಕಾಲೋನಿ, ಕಪಿಕಲಂ, ಸುಧಾಂಗಿರಿ ಮತ್ತು ಪೋಶುಧಾನ ಪ್ರದೇಶದಲ್ಲಿ ವಾಸಿಸುವವರಿಗೆ ಧಾರಾಕಾರ ಮಳೆ ಮತ್ತು ಭೂಕುಸಿತ ಆಗುವ ಸಾಧ್ಯತೆಯಿಂದ ಮನೆಗಳನ್ನು ಬಿಡಲು ಹೇಳಿದ್ದಾರೆ.

೬. ಮುಂಡಕ್ಕಾಯಿ ಯಿಂದ ಚುರಲಮಾಲಾ ಜೋಡಿಸಲು ಭಾರತೀಯ ಸೈನ್ಯ ೮೫ ಅಡಿ ಉದ್ದದ ಸೇತುವೆ ಕಟ್ಟುತ್ತಿದೆ. ಈ ಸೇತುವೆ ೨೪ ಟನ್ ತೂಕ ತಡೆಯಬಹುದಾಗಿದೆ. ಸೇತುವೆ ಕಟ್ಟಿದ ನಂತರ ರಕ್ಷಣಾ ಕಾರ್ಯಕ್ಕೆ ಗತಿ ಬರುವುದು, ಇದರಿಂದ ಸೇತುವೆ ಮೂಲಕ ರಕ್ಷಣಾ ಕಾರ್ಯಕ್ಕಾಗಿ ಸಹಾಯವಾಗುವ ಯಂತ್ರಗಳು ಘಟನಾಸ್ಥಳಕ್ಕೆ ತಲುಪಲು ಸಾಧ್ಯವಾಗುವುದು.