ಸರಕಾರವು ತಾನಾಗಿ ಇದನ್ನು ನಿಷೇಧಿಸಬೇಕು !

೧. ಸರಕಾರವು ತಾನಾಗಿ ಇದನ್ನು ನಿಷೇಧಿಸಬೇಕು !

ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ಮೇಲೆ ಹಾಗೂ ಹಲಾಲ್ ಪ್ರಮಾಣಪತ್ರಗಳನ್ನು ನೀಡುವುದನ್ನು ನಿಷೇಧಿಸಬೇಕೆಂದು ವಿಭೋರ ಆನಂದ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.

೨. ಇಂತಹವರಿಂದ ಹಿಂದೂಗಳು ಆಭರಣಗಳನ್ನು ಏಕೆ ಖರೀದಿಸಬೇಕು ?

ಎಂ.ಪಿ. ಅಹಮ್ಮದ್ ಮಾಲೀಕತ್ವದ ‘ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್’ ಕಂಪನಿಯ ಅಕ್ಷಯತದಿಗೆಯ ನಿಮಿತ್ತದ ಜಾಹೀರಾತಿನಲ್ಲಿ ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಹಣೆಯಲ್ಲಿ ಕುಂಕುಮ ಹಚ್ಚಲಿಲ್ಲ.  ಇದರಿಂದ ಹಿಂದೂಗಳು ಈ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

೩. ಹಿಂದೂಗಳು ಮಾತ್ರ ನಿಯಮಗಳನ್ನು ಪಾಲಿಸಬೇಕೇ ?

ಮಥುರಾದ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಧ್ವನಿವರ್ಧಕದ ಮೂಲಕ ಆಗುವ ಧ್ವನಿಯನ್ನು ಕಡಿಮೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕರೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

೪. ಇಂತಹ ಇತಿಹಾಸವಿರುವ ಸಾವಿರಾರು ಸ್ಥಳಗಳು ದೇಶದಲ್ಲಿವೆ !

ದೆಹಲಿಯ ಕುತುಬಮಿನಾರ್‌ನಲ್ಲಿ ೨೭ ಹಿಂದೂ ಮತ್ತು ಜೈನ ದೇವಾಲಯಗಳನ್ನು ಕೆಡವಿ ಅಲ್ಲಿ ಈಗಿರುವ ‘ಕುವತ್ ಉಲ್ ಇಸ್ಲಾಂ ಮಸೀದಿ’ಯನ್ನು ನಿರ್ಮಿಸಲಾಗಿದೆ, ಎಂಬ ಮಾಹಿತಿ ಯನ್ನು ಖ್ಯಾತ ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮಹಮ್ಮದ್ ನೀಡಿದರು.

೫. ಅಂತಹ ಬೆದರಿಕೆ ಹಾಕಲು ನಿಮಗೆಷ್ಟು ಧೈರ್ಯ ?

ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಪಠಿಸಿದರೆ ನಾವೂ ದೇವಸ್ಥಾನಗಳ ಮುಂದೆ ಕುಳಿತು ಧ್ವನಿವರ್ಧಕದಲ್ಲಿ ಕುರಾನ್ ಪಠಿಸಬೇಕಾಗುತ್ತದೆ ಮತ್ತು ನಾವು ಮಹಿಳೆಯರು ಇದರಲ್ಲಿ ಮುಂಚೂಣಿಯಲ್ಲಿರುತ್ತೇವೆ ಎಂದು ಅಲಿಗಡದ ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಂ ಹೇಳಿದರು.

೬. ಇದು ಪೊಲೀಸರಿಗೆ ಲಜ್ಜಾಸ್ಪದ !

೨೦೧೨ ರಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ಗಲಭೆಗಳನ್ನು ನಡೆಸಿದ ರಜಾ ಅಕಾಡೆಮಿಯ ಇಫ್ತಾರ್ ಪಾರ್ಟಿಯಲ್ಲಿ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಉಪಸ್ಥಿತರಿದ್ದರು. ಗಲಭೆಯಲ್ಲಿ ಜಿಹಾದಿಗಳು ಮಹಿಳಾ ಪೊಲೀಸರ ಮಾನಭಂಗ ಮಾಡಿದ್ದರು.

೭. ಮತಾಂಧರ ಪೋಷಕರನ್ನು ಗುರುತಿಸಿ !

‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರವು ಬಿಡುಗಡೆಯಾದ ನಂತರ ಹಿಂದೂ-ಮುಸಲ್ಮಾನರಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ, ಎಂದು ಅನುಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ, ಎಂದು ಮಹಾರಾಷ್ಟ್ರ ಗೃಹಸಚಿವ ದಿಲೀಪ್ ವಳಸೆ ಪಾಟೀಲ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.