‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಆನ್‌ಲೈನ್ ಸಂಚಿಕೆಗಳು ಶೀಘ್ರದಲ್ಲೇ ಡಿಜಿಟಲ್ ನ್ಯೂಸ್ ಪೇಪರ ಅಂದರೆ ‘ಇ-ಪೇಪರ್’ನ ಸ್ವರೂಪದಲ್ಲಿ ಪ್ರಕಟಣೆಗೊಳ್ಳಲಿವೆ. ಇದರಿಂದ ಸಾಪ್ತಾಹಿಕ ‘ಸನಾತನ ಪ್ರಭಾತ’ನ ಕನ್ನಡ ಮತ್ತು ಮರಾಠಿ, ಅದೇ ರೀತಿ ಹಿಂದಿ ಹಾಗೂ ಆಂಗ್ಲ ಪಾಕ್ಷಿಕ ಹಾಗೂ ದೈನಿಕ ‘ಸನಾತನ ಪ್ರಭಾತ’ನ ಮಹಾರಾಷ್ಟ್ರ ಹಾಗೂ ಗೋವಾ ಈ ರಾಜ್ಯಗಳ ‘ಮುಂಬಯಿ, ಠಾಣೆ, ರಾಯಗಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ’, ‘ಪಶ್ಚಿಮ ಮಹಾರಾಷ್ಟ್ರ ಹಾಗೂ ಮರಾಠವಾಡಾ’, ‘ರತ್ನಾಗಿರಿ’ ಮತ್ತು ‘ಗೋವಾ-ಸಿಂಧುದುರ್ಗ’ ಈ ನಾಲ್ಕು ಸಂಚಿಕೆಗಳು ಪ್ರತ್ಯಕ್ಷವಾಗಿ ವಿತರಣೆಯೊಂದಿಗೆ ಅದರ ‘ಇ-ಪೇಪರ’ನ ಸ್ವರೂಪದಲ್ಲಿಯೂ ಸಂಚಾರವಾಣಿ, ಅದೇ ರೀತಿ ಗಣಕಯಂತ್ರಗಳಲ್ಲಿ ಓದಲು ವಾಚಕರಿಗೆ ಲಭ್ಯವಾಗಲಿದೆ.
ಆದ್ದರಿಂದ ಕೊರೋನಾ ಮಹಾಮಾರಿ ಇರಲಿ, ಸಾರಿಗೆ ಮುಷ್ಕರವಾಗಿರಲಿ ಅಥವಾ ಮೂರನೇ ಮಹಾಯುದ್ಧವಾಗಿರಲಿ ‘ಸನಾತನ ಪ್ರಭಾತ’ನ ಪ್ರತ್ಯಕ್ಷ ವಿತರಣೆಯ ಮೇಲೆ ಸ್ವಲ್ಪ ಪರಿಣಾಮವಾದರೂ ‘ಸನಾತನ ಪ್ರಭಾತ’ ಇ-ಪೇಪರ್‌ನ ಸ್ವರೂಪದಲ್ಲಿ ಎಲ್ಲರಿಗೆ ಓದಲು ಸಿಗಲಿದೆ. ಈ ಕುರಿತು ಸವಿಸ್ತಾರವಾದ ಮಾಹಿತಿ ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ.
– ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆಗಳು