‘ಸನಾತನ ಪ್ರಭಾತ’ ನಿಯತಕಾಲಿಕೆ ಶೀಘ್ರದಲ್ಲೇ ಬರಲಿದೆ ಇ-ಪೇಪರ್ ರೂಪದಲ್ಲಿ

‘ಸನಾತನ ಪ್ರಭಾತ’ ನಿಯತಕಾಲಿಕೆಯ ಆನ್‌ಲೈನ್ ಆವೃತ್ತಿಗಳನ್ನು ಶೀಘ್ರದಲ್ಲೇ ಡಿಜಿಟಲ್ ಪತ್ರಿಕೆಯ ರೂಪದಲ್ಲಿ ಅಂದರೆ ‘ಇ-ಪೇಪರ್ ಸ್ವರೂಪದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ. ಇದರಿಂದಾಗಿ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿನ ‘ಸನಾತನ ಪ್ರಭಾತ’ ದೈನಿಕದ ನಾಲ್ಕು ಆವೃತ್ತಿಗಳನ್ನು ಹಾಗೆಯೇ ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತವನ್ನು ನೇರವಾಗಿ ವಿತರಿಸುವುದರ ಜೊತೆಗೆ ಓದುಗರು ‘ಇ-ಪೇಪರ್ ರೂಪದಲ್ಲಿ ಮೊಬೈಲ್‌ನಲ್ಲಿಯೂ ಓದಬಹುದಾಗಿದೆ. ಗಣಕಯಂತ್ರಗಳಲ್ಲಿ ಸನಾತನ ಪ್ರಭಾತದ ಮರಾಠಿ ಸಾಪ್ತಾಹಿಕ, ಹಾಗೆಯೇ ಹಿಂದಿ ಮತ್ತು ಆಂಗ್ಲ ಪಾಕ್ಷಿಕವೂ ‘ಇ-ಪೇಪರ್ ರೂಪದಲ್ಲಿ ವಾಚಕರಿಗೆ ಲಭ್ಯವಿರುತ್ತದೆ. ಇದರಿಂದ ಕೊರೋನಾ ಮಹಾಮಾರಿಯಾಗಲೀ, ಬಸ್ ಮುಷ್ಕರವಾಗಲೀ ಅಥವಾ ಮುಂಬರುವ ಮೂರನೇ ಮಹಾಯುದ್ಧವಾಗಲೀ, ‘ಸನಾತನ ಪ್ರಭಾತ’ದ ನೇರ ವಿತರಣೆಯು ಸ್ವಲ್ಪ ಮಟ್ಟಿಗೆ ಪರಿಣಾಮ

ಬೀರುತ್ತದೆ, ಆದರೆ ‘ಸನಾತನ ಪ್ರಭಾತ’ ಅನ್ನು ಇ-ಪೇಪರ್‌ನಲ್ಲಿ ಎಲ್ಲ ವಾಚಕರಿಗೂ ಓದಲು ಸಿಗಲಿದೆ. ಈ ಬಗ್ಗೆ ವಿವರವಾದ ಮಾಹಿತಿಯನ್ನು ನಾವು ಶೀಘ್ರದಲ್ಲೇ ಪ್ರಕಟಿಸುತ್ತೇವೆ. – ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆ