ಹಿಜಾಬ್‌ನ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದ ಅಭ್ಯಾಸಪೂರ್ಣ ನಿರ್ಣಯ !

೧. ಕರ್ನಾಟಕ ಉಚ್ಚ ನ್ಯಾಯಾಲಯವು ಹಿಜಾಬ್ ನಿಷೇಧದ ವಿರುದ್ಧದ ಅರ್ಜಿಯನ್ನು ತಳ್ಳಿ ಹಾಕಿ ಶಾಲೆ ಮತ್ತು ಮಹಾವಿದ್ಯಾಲಯಗಳು ಹೇರಿದ ಹಿಜಾಬ್ ನಿಷೇಧವನ್ನು ಸಮರ್ಥಿಸುವುದು

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣಪೀಠವು ಶಾಲೆ ಮತ್ತು ಮಹಾವಿದ್ಯಾಲಯಗಳು ಹಿಜಾಬ್ ಅನ್ನು ನಿಷೇಧಿಸಿದ್ದರ ವಿರುದ್ಧದ ಮತಾಂಧರ ಅರ್ಜಿಯನ್ನು ತಳ್ಳಿಹಾಕಿತು. ಇದು ಮಹತ್ವದ ವಿಷಯವಾಗಿದ್ದು ಉಚ್ಚ ನ್ಯಾಯಾಲಯದ ಈ ತೀರ್ಪು ಭವಿಷ್ಯದಲ್ಲಿಯೂ ಪರಿಣಾಮ ಬೀರಲಿದೆ. ಹಿಂದೆ-ಮುಂದೆ ನೋಡದೆ ಮುಲ್ಲಾ-ಮೌಲ್ವಿಗಳ ಮಾತು ಕೇಳಿ ಸಾರ್ವಜನಿಕ ಸ್ಥಳಗಳಲ್ಲಿ ಹಳೆಯ ರೂಢಿ-ಪರಂಪರೆಗಳನ್ನು ಪಾಲಿಸುವ ಅಟ್ಟಹಾಸದಡಿಯಲ್ಲಿ ಸಲ್ಲಿಸಲಾಗಿದ್ದ ಈ ಅರ್ಜಿಯನ್ನು ದಾಖಲಿಸಿದವರಿಗೆ ಮುಖಭಂಗವಾಯಿತು.

ಹಿಜಾಬ್ ಪ್ರಶ್ನೆಯ ವಿಷಯದಲ್ಲಿ ಒಟ್ಟು ೬ ಅರ್ಜಿಗಳು ದಾಖಲಾಗಿದ್ದವು. ಇದರಲ್ಲಿ ಮತಾಂಧ ವಿದ್ಯಾರ್ಥಿನಿಯರ ಹಿಜಾಬ್ ನಿರ್ಬಂಧಕ್ಕೆ ಸವಾಲು ನೀಡುವ ೪ ಅರ್ಜಿಗಳಿದ್ದವು. ಒಂದು ಅರ್ಜಿಯನ್ನು ‘ರಾಜ್ಯ ಮತ್ತು ಕೇಂದ್ರ ಸರಕಾರಗಳು ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕು’, ಎಂದು ಸಾಮಾಜಿಕ ಕಾರ್ಯಕರ್ತ ಡಾ. ವಿನೋದ ಕುಲಕರ್ಣಿ ಇವರು ದಾಖಲಿಸಿದ್ದರು. ಅದೇ ರೀತಿ ‘ಮಾತು ಮಾತಿಗೆ ಕೇಂದ್ರ ಸರಕಾರ ಮತ್ತು ಭಾಜಪ ಆಡಳಿತದ ರಾಜ್ಯ ಸರಕಾರಗಳನ್ನು ಗುರಿಯಾಗಿಸುವ ಮತಾಂಧರನ್ನು ಕೇಂದ್ರೀಯ ತನಿಖಾ ವಿಭಾಗ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಇವುಗಳ ಮೂಲಕ ತನಿಖೆ ನಡೆಸಬೇಕೆಂದು ಮತ್ತು ಈ ಷಡ್ಯಂತ್ರದಲ್ಲಿ ಸಹಾಯ ಮಾಡುವ ‘ಪಿ.ಎಫ್.ಐ’, ‘ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ’, ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ (ಸಿ.ಎಫ್.ಐ.), ‘ಜಮಾತ್-ಎ-ಇಸ್ಲಾಮೀ’ ಈ ಮತಾಂಧ ಸಂಘಟನೆಗಳ ಕೈವಾಡವಿದೆಯೇ ? ಎಂಬುದನ್ನು ಪತ್ತೆ ಹಚ್ಚಬೇಕು’, ಎಂದು ಘನಶ್ಯಾಮ ಉಪಾಧ್ಯಾಯ ಇವರು ಕೂಡ ಒಂದು ಅರ್ಜಿಯನ್ನು ದಾಖಲಿಸಿದ್ದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣಪೀಠವು ಈ ಎಲ್ಲ ಅರ್ಜಿಗಳನ್ನು ಒಟ್ಟಿಗೇ ಆಲಿಸಿತು. ನ್ಯಾಯಾಲಯವು ಡಾ. ಕುಲಕರ್ಣಿ ಮತ್ತು ಘನಶ್ಯಾಮ ಉಪಾಧ್ಯಾಯರ ಅರ್ಜಿಗಳಿಗೆ ಅಸಮ್ಮತಿ ತೋರಿಸಿತು. ಅದೇ ರೀತಿ ಮತಾಂಧರ ೪ ಅರ್ಜಿಗಳನ್ನೂ ತಳ್ಳಿಹಾಕಿತು. ಈ ರೀತಿಯಲ್ಲಿ ನ್ಯಾಯಾಲಯವು ಶಾಲೆ ಮತ್ತು ಮಹಾವಿದ್ಯಾಲಯಗಳ ಪರವಾಗಿ ರಾಜ್ಯ ಸರಕಾರವು ಹೇರಿದ್ದ ಹಿಜಾಬ್ ನಿಷೇಧವನ್ನು ಸಮರ್ಥಿಸಿತು.

೨. ಮುಸಲ್ಮಾನ ಹುಡುಗಿಯರು ಮತ್ತು ಮಹಿಳೆಯರು ಹಿಜಾಬ್ ಧರಿಸುವುದು, ಅವರ ಧಾರ್ಮಿಕ ಪರಂಪರೆಯ ಅವಿಭಾಜ್ಯ ಅಂಗವೆಂದು ಸುಳ್ಳು ಹೇಳುವ ಮತಾಂಧರು

ಇವೆಲ್ಲ ಪ್ರಕರಣಗಳಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಧರಿಸುವುದನ್ನು ಸಮರ್ಥಿಸುವಾಗ ಮತಾಂಧರ ಹೇಳಿಕೆ ಏನಿತ್ತೆಂದರೆ, ‘ಮುಸಲ್ಮಾನ ಹುಡುಗಿಯರು ಮತ್ತು ಮಹಿಳೆಯರು ಹಿಜಾಬ್ ಧರಿಸುವುದು, ತಮ್ಮ ಧಾರ್ಮಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು ಹಾಗೆ ಮಾಡುವುದು, ಅವರ ಮೂಲಭೂತ ಅಧಿಕಾರವಾಗಿದೆ. ಸಂವಿಧಾನವು ನೀಡಿರುವ ಕಲಮ್ ೧೪, ೧೫, ೧೯, ೨೧ ಮತ್ತು ೨೫ ಇವುಗಳ ಆಧಾರದಲ್ಲಿ ಅವರು ಅದನ್ನು ಆಚರಿಸಬಹುದು’. ಈ ವಿಷಯಕ್ಕಾಗಿ ಅವರು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನಿರ್ಣಯಗಳು, ಕೆಲವು ಅಂತರರಾಷ್ಟ್ರೀಯ ರೂಢಿಗಳ ಆಧಾರವನ್ನು ಪಡೆದರು. ಇದರೊಂದಿಗೆ ಅವರು ಹುಡುಗಿಯರು ಮತ್ತು ಮಹಿಳೆಯರ ಮೇಲಾಗುವ ಅತ್ಯಾಚಾರಗಳು ದೂರವಾಗಲು ಭಾರತ ಸರಕಾರ ಮಾಡಿರುವ ಒಪ್ಪಂದವನ್ನೂ ಆಗ್ರಹಿಸಿದರು. ಇದಕ್ಕೆ ನ್ಯಾಯಾಲಯವು ಮುಂದಿನಂತೆ ಹೇಳಿತು, ಸಂವಿಧಾನದ ಕಲಮ್ ೩೯ (ಫ), ೫೧-ಅ (ಈ) ಇವು ನಾಗರಿಕರ ಮೂಲಭೂತ ಕರ್ತವ್ಯಗಳು, ಇತರ ಧರ್ಮದ ವಿಷಯದಲ್ಲಿ ಬಂಧುತ್ವ, ಸೌಹಾರ್ದ, ಸಮಾನತೆಯನ್ನು ಕಲಿಸುತ್ತವೆ. ಭಾರತವು ಅನೇಕ ಜಾತಿ, ಧರ್ಮ, ಪಂಥ, ಬಹುಭಾಷಿಕ ಹಾಗೂ ವಿಭಿನ್ನ ಪರಂಪರೆಗಳು ಇರುವ ದೇಶವಾಗಿದೆ. ನ್ಯಾಯಾಲಯವು ಅವರಿಗೆ ಸದಾಚಾರದ ನಿಯಮಗಳು, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಇತ್ಯಾದಿ ಸಂವಿಧಾನದಲ್ಲಿನ ತತ್ತ್ವಗಳ ಮಾಹಿತಿಯನ್ನೂ ಹೇಳಿತು.

೩. ಶಾಲೆ ಮತ್ತು ಮಹಾವಿದ್ಯಾಲಯಗಳ ಪರಿಸರದಲ್ಲಿ ವೈಯಕ್ತಿಕ ಅಧಿಕಾರಕ್ಕಿಂತ ಶಿಸ್ತು ಮಹತ್ವದ್ದಾಗಿದೆ, ಎಂದು ನ್ಯಾಯಾಲಯವು ಹೇಳುವುದು ಮತ್ತು ರಾಜ್ಯ ಸರಕಾರದ ಸುತ್ತೋಲೆಗನುಸಾರ ಶಾಲೆ-ಮಹಾವಿದ್ಯಾಲಯಗಳ ಸಮವಸ್ತ್ರಗಳನ್ನು ನಿರ್ಧರಿಸುವ ಅಧಿಕಾರವು ಸರಕಾರ ನೇಮಿಸಿದ ಸಮಿತಿಗೆ ಮಾತ್ರ ಇರುವುದು

ಸರಕಾರ, ಕೆಲವು ಸರಕಾರಿ ವಿಭಾಗಗಳು, ಶಾಲೆ, ಮಹಾವಿದ್ಯಾಲಯಗಳ ನಿಲುವೆಂದರೆ ಶಾಲೆ ಮತ್ತು ಮಹಾವಿದ್ಯಾಲಯಗಳ ಪರಿಸರದಲ್ಲಿ ವೈಯಕ್ತಿಕ ಅಧಿಕಾರಕ್ಕಿಂತ ಶಿಸ್ತು ಮಹತ್ವ ದ್ದಾಗಿದೆ. ತಮ್ಮ ಪರಂಪರೆಯನ್ನು ಇತರರ ಮೇಲೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹೇರಬಾರದು. ಭಾರತವು ಜಾತ್ಯತೀತ ದೇಶವಾಗಿದೆ. ಆದ್ದರಿಂದ ಸಮವಸ್ತ್ರಗಳನ್ನು ಧರಿಸುವುದು ಕಡ್ಡಾಯವಾಗಿದೆ. ನಿಜ ನೋಡಿದರೆ ಕುರಾನ್‌ನಲ್ಲಿ ಹಿಜಾಬ ಇದು ಅತ್ಯಾವಶ್ಯಕ ಅಥವಾ ಧಾರ್ಮಿಕ ಪರಂಪರೆ ಅಥವಾ ರೂಢಿ ಆಗಿದೆಯೆಂದು ಎಲ್ಲಿಯೂ ಹೇಳಿಲ್ಲ. ಸರಕಾರದ ವತಿಯಿಂದ ಹೇಳಲಾಗಿದೆಯೆಂದರೆ, ಈ ಹಿಂದೆ ವಿದ್ಯಾರ್ಥಿನಿಯರು ಯಾವತ್ತೂ ಹಿಜಾಬ್ ಧರಿಸುತ್ತಿರಲಿಲ್ಲ. ಅವರನ್ನು ‘ಪಿ.ಎಫ್.ಐ.’ ‘ಸಿ.ಎಫ್.ಐ’ ಮತ್ತು ಇತರ ಮತಾಂಧ ಸಂಘಟನೆಗಳು ಪ್ರಚೋದಿಸುತ್ತಿವೆ. ಅವರ ಒತ್ತಾಯಕ್ಕೆ ಮಣಿದು ಈ ಹಳೆಯ ಕಾಲದ ರೂಢಿ ಪರಂಪರೆಗಳನ್ನು ಆಗ್ರಹಿಸುತ್ತಿದ್ದಾರೆ.

ಸರಕಾರದ ಹೇಳಿಕೆಗನುಸಾರ ಶಿಕ್ಷಣಕ್ಕೆ ಸಂಬಂಧಿಸಿ ೧೯೮೩ ರಲ್ಲಿ ಕಾನೂನು ಮಾಡಲಾಯಿತು. ಆ ಕಾನೂನಿನ ಆಧಾರದಲ್ಲಿ ರಾಜ್ಯ ಸರಕಾರ ೩೧ ಜನವರಿ ೨೦೧೪ ರಂದು ಒಂದು ಸುತ್ತೋಲೆಯನ್ನು ಹೊರಡಿಸಿತು. ಅದಕ್ಕನುಸಾರ ಶಾಲೆ-ಮಹಾವಿದ್ಯಾಲಯಗಳ ಸಮವಸ್ತ್ರಗಳನ್ನು ನಿರ್ಧರಿಸುವ ಅಧಿಕಾರವು ಸರಕಾರ ನೇಮಿಸಿದ ಸಮಿತಿಗೆ ಇರುವುದು. ಇದು ಸ್ವಾಯತ್ತ ಸಮಿತಿಯಾಗಿದ್ದು ಅದು ಶಾಲೆ-ಮಹಾವಿದ್ಯಾಲಯಗಳಲ್ಲಿ ಸಮವಸ್ತ್ರ ಇರಬೇಕು, ಎಂದು ಹೇಳಿದೆ. ಹಿಜಾಬ್ ಮತ್ತು ಕೇಸರಿ ಶಾಲು ಇತ್ಯಾದಿ ಹಾಕುವುದು ಕಡ್ಡಾಯವಲ್ಲ ಮತ್ತು ಹಾಕಲು ಸಾಧ್ಯವೂ ಇಲ್ಲ.

೪. ನಿರ್ಣಯವನ್ನು ನೀಡುವಾಗ ದೇಶ-ವಿದೇಶಗಳಲ್ಲಿನ ಅನೇಕ ಹಿಜಾಬ್ ವಿರೋಧಿ ತೀರ್ಪುಗಳನ್ನು ಆಳವಾಗಿ ಅಭ್ಯಾಸ ಮಾಡಿದ ಉಚ್ಚ ನ್ಯಾಯಾಲಯ

ಈ ಬಾರಿ ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯದ ಸಾಯರಾ ಬಾನೋ, ಈ ತ್ರಿವಳಿ ತಲಾಕ್ ಪ್ರಕರಣ, ಮುಂಬಯಿಯ ಹಿಜಾಬ್ ವಿಷಯದ ಹಳೆಯ ನಿರ್ಣಯ, ಪ್ರಯಾಗದಾಸ ವಿರುದ್ಧ ಬುಲಂದಶಹರ ಹೀಗೆ ಉಚ್ಚ ನ್ಯಾಯಾಲಯದ ತೀರ್ಪುಪತ್ರಗಳ ಆಧಾರವನ್ನು ತೆಗೆದುಕೊಂಡಿತು. ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣಪೀಠವು ಈ ಪ್ರಕರಣದಲ್ಲಿ ೩ ಅಂಶಗಳನ್ನು ನಿರ್ಧರಿಸಿತು. ಅದೆಂದರೆ, ಹಿಜಾಬ್ ಧರಿಸುವುದು, ಒಂದು ಅತ್ಯಾವಶ್ಯಕ ಧಾರ್ಮಿಕ ಪರಂಪರೆ ಆಗಿದೆಯೆ ? ಅದನ್ನು ನಿಷೇಧಿಸುವುದು ಸಂವಿಧಾನದ ೧೯ ಮತ್ತು ೨೧ ಈ ಕಲಮ್‌ಗಳ ವಿರುದ್ಧ ಆಗಿದೆಯೆ ? ಹಾಗೂ ೫.೨.೨೦೨೨ ರ ಹಿಜಾಬ್‌ಗೆ ನಿಷೇಧ ಹೇರುವ ಆದೇಶ ನೀಡುವ ಅಧಿಕಾರ ಸರಕಾರಕ್ಕೆ ಇದೆಯೇ ? ಈ ಮೂರು ಅಂಶಗಳಿಗೆ ಮಾನ್ಯ ನ್ಯಾಯಾಲಯದ ಪೂರ್ಣ ಪೀಠವು ವಾದಿ ಮತ್ತು ಪ್ರತಿವಾದಿ ಇವರಿಗೆ ಸಾಕಷ್ಟು ಅವಕಾಶವನ್ನು ನೀಡಿ ಆಲಿಕೆಯನ್ನು ಮಾಡಿತು.  ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಸಂವಿಧಾನದ ಅನೇಕ ಕಲಮ್‌ಗಳು, ಅನೇಕ ರಾಜ್ಯಗಳ ಉಚ್ಚ ನ್ಯಾಯಾಲಯದ ನಿರ್ಣಯಗಳು, ಸರ್ವೋಚ್ಚ ನ್ಯಾಯಾಲಯದ ಅನೇಕ ನಿರ್ಣಯಗಳು ಹಾಗೂ ಆಸ್ಟ್ರೇಲಿಯಾ ಮತ್ತು ಅಮೇರಿಕಾದ ನ್ಯಾಯಾಂಗವ್ಯವಸ್ಥೆಗಳು ನೀಡಿರುವ ಮಹತ್ವದ ತೀರ್ಪುಪತ್ರಗಳನ್ನು ನೋಡಿತು. ಗುರುಕುಲ ಶಿಕ್ಷಣಪದ್ಧತಿ, ಸಮವಸ್ತ್ರಗಳು ಹಾಗೂ ಸಂವಿಧಾನದ ನಿರ್ಮಾಣದ ಸಮಯದಲ್ಲಿ ಇದ್ದ ಸಮಿತಿಯಲ್ಲಿನ ಆಚಾರ್ಯ ಜಗದೀಶ್ವರಾನಂದ, ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್ ಮುಂತಾದ ಗಣ್ಯರು ಮಾಡಿದ ಮೂಲಭೂತ ಅಧಿಕಾರದ ಮೇಲಿನ ಕೆಲವು ಭಾಷಣಗಳನ್ನೂ ನೋಡಿತು. ಅದೇ ರೀತಿ ಡಾ. ಬಾಬಾಸಾಹೇಬ ಆಂಬೇಡ್ಕರ್ ಇವರು ಪಾಕಿಸ್ತಾನ ಅಥವಾ ಭಾರತದ ವಿಭಜನೆಯ ವಿಷಯದಲ್ಲಿ ಬರೆದಿರುವ ಪುಸ್ತಕಗಳ ಆಧಾರವನ್ನು ತೆಗೆದುಕೊಳ್ಳಲಾಯಿತು. ಇವೆಲ್ಲ ವಿಷಯಗಳನ್ನು ವಿಸ್ತಾರವಾಗಿ ಕೇಳಿಸಿಕೊಂಡಿತು ಹಾಗೂ ನಂತರ ಅದರ ತೀರ್ಪುಪತ್ರಗಳ ತರ್ಕ-ವಿತರ್ಕ ಮಾಡಿತು.

೫. ಉಚ್ಚ ನ್ಯಾಯಾಲಯವು ತೀರ್ಪು ನೀಡುವಾಗ ಮುಸಲ್ಮಾನರ ಧಾರ್ಮಿಕ ಗ್ರಂಥ ಹಾಗೂ ರೂಢಿ-ಪರಂಪರೆಯ ವಿಚಾರ ಮಾಡುವುದು ಹಾಗೂ ಹಿಜಾಬ್‌ನ ಅವಶ್ಯಕತೆ ಎಲ್ಲಿಯೂ ಕಂಡು ಬರದಿದ್ದಾಗ ನ್ಯಾಯಾಲಯವು ಎಲ್ಲ ಅರ್ಜಿಗಳನ್ನು ತಳ್ಳಿಹಾಕುವುದು

ಉಚ್ಚ ನ್ಯಾಯಾಲಯವು ನಿರ್ಣಯ ನೀಡುವಾಗ ಮುಸಲ್ಮಾನರ ಧಾರ್ಮಿಕ ಗ್ರಂಥ ಮತ್ತು ಅದಕ್ಕೆ ಸಂಬಂಧಿಸಿದ ಪುಸ್ತಕಗಳ ವಿಚಾರ ಮಾಡಿತು. ಕುರಾನ್‌ನಲ್ಲಿನ ಸುರಾ ಮತ್ತು ಆಯಾತಕ್ಕನುಸಾರ ಹಿಜಾಬ್ ಧರಿಸುವುದು ಅನಾದಿಕಾಲದಿಂದ ನಡೆದುಬಂದಿರುವ ರೂಢಿಯಲ್ಲ. ಆದ್ದರಿಂದ ಅದನ್ನು ಪಾಲಿಸುವುದು ಕಡ್ಡಾಯವಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ನಿರ್ಧಾರವೆಂಬುದನ್ನು ಪರಿಗಣಿಸಿತು.ಕುರಾನ್ ನಲ್ಲಿನ ಹಾದೀಸ ಮತ್ತು ಕಿಯಾಸ ಇವುಗಳ ಉದಾಹರಣೆಯನ್ನು ನೀಡಿದ ನ್ಯಾಯಾಲಯ, ಎಲ್ಲಿ ಧರ್ಮದ ಸಂಬಂಧ ಬರುತ್ತದೆಯೋ, ಅಲ್ಲಿ ಬಲವಂತ ಮಾಡುವ ಹಾಗಿಲ್ಲ; ಏಕೆಂದರೆ ಧರ್ಮವು ಶ್ರದ್ಧೆಯನ್ನು ಆಧರಿಸಿರುತ್ತದೆ. ಆದ್ದರಿಂದ ಹಿಜಾಬ್ ಧರಿಸುವುದು ಕಡ್ಡಾಯವಲ್ಲ. ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇಲ್ಲವೇ ಇಲ್ಲ. ಆ ಕಾಲದಲ್ಲಿ ಮಧ್ಯಪೂರ್ವದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ‘ಅತ್ಯಾಚಾರಗಳಿಂದ ರಕ್ಷಣೆ ಮಾಡಿಕೊಳ್ಳಲು ಬುರ್ಖಾ, ಪರದೆ ಪದ್ಧತಿ ಮತ್ತು ಹಿಜಾಬ್ ಇತ್ಯಾದಿ ವಿಷಯಗಳನ್ನು ಮಹಿಳೆಯರು ಉಪಯೋಗಿಸಿದರು, ಅದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವರನ್ನು ಗೌರವಿಸಲಾಗುವುದು ಹಾಗೂ ಅತ್ಯಾಚಾರಗಳಿಂದ ಅವರ ರಕ್ಷಣೆಯಾಗಬಹುದು, ಎಂದು ವಿಚಾರ ಮಾಡಿ ಮುಸಲ್ಮಾನರು ಇದನ್ನು ಉಪಯೋಗಿಸುತ್ತಿದ್ದರು, ಎಂದಿತು.

ನ್ಯಾಯಾಲಯವು ಮುಂದೆ ಹೇಳುತ್ತಾ, ಆ ಕಾಲದಲ್ಲಿ ಮಹಿಳೆಯರಿಗೆ ಕೇವಲ ಅವರ ಸಹೋದರ, ಚಿಕ್ಕಪ್ಪ, ಮಾವ, ಹತ್ತಿರದ ಸಂಬಂಧಿಕರು ಮುಂತಾದವರ ಎದುರಿಗೆ ಮಾತ್ರ ಬರುವ ಹಾಗೂ ಅವರೊಂದಿಗೆ ಮಾತನಾಡುವ ಅನುಮತಿಯಿತ್ತು. ಇದು ಒಂದು ರೀತಿಯಲ್ಲಿ ಅವರನ್ನು ಮನೆಯಲ್ಲಿ ಕೂಡಿ ಹಾಕುವ ಕುಂತಂತ್ರವಾಗಿತ್ತು.

ಮುಂದೆ ಕಾಲ ಬದಲಾಯಿತು ಹಾಗೂ ಶಿಕ್ಷಣ, ನೌಕರಿ, ವ್ಯಾಪಾರ, ವ್ಯವಸಾಯದ ನೆಪದಲ್ಲಿ ಮುಸಲ್ಮಾನ ಮಹಿಳೆಯರು ಕೂಡ ಸಮಾಜದಲ್ಲಿ ವ್ಯವಹರಿಸಲು ಪ್ರಾರಂಭಿಸಿದರು. ೨೦೧೭ ರಲ್ಲಿ ೧೪೦೦ ವರ್ಷಗಳ ಪರಂಪರೆಯಿರುವ ತ್ರಿವಳಿ ತಲಾಕ್‌ಗೆ ನಿರ್ಬಂಧ ಹೇರುವ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಆದೇಶ ನೀಡಿತು. ಹೀಗಿರುವಾಗ ಭಾರತದಲ್ಲಿ ಯಾವುದು ಹಿಂದಿನಿಂದಲೂ ಪರಂಪರೆಯಾಗಿರಲಿಲ್ಲವೊ, ಆ ಹಿಜಾಬ್ ಕೂಡ ಕಡ್ಡಾಯವಲ್ಲ. ಅದರ ಉಗಮ ಧಾರ್ಮಿಕ ಗ್ರಂಥದಲ್ಲಿ ಅಥವಾ ಇನ್ನೆಲ್ಲಿಯೂ ಇಲ್ಲ. ಹಿಜಾಬ್ ಧರ್ಮದ ಪಾಲನೆ ಮಾಡುವ ರೂಢಿ-ಪರಂಪರೆಯಾಗಿರುವ ಯಾವುದೇ ಪುರಾವೆಯನ್ನು ಮತಾಂಧರು ನ್ಯಾಯಾಲಯದಲ್ಲಿ ಕೊಟ್ಟಿಲ್ಲ. ಕುರಾನ್ ಸಹಿತ ಎಲ್ಲ ಗ್ರಂಥಗಳನ್ನು ಮತ್ತು ಇತರ ವಿಷಯಗಳನ್ನು ಕರ್ನಾಟಕ ರಾಜ್ಯದ ನ್ಯಾಯಾಲಯವು ಪರಿಶೀಲನೆ ಮಾಡಿತು; ಆದರೆ ಅವರಿಗೆ ಎಲ್ಲಿಯೂ ‘ಹಿಜಾಬ್ ಒಂದು ಅತ್ಯಾವಶ್ಯಕ ಧಾರ್ಮಿಕ ವಿಷಯವಾಗಿದೆ’, ಎಂದು ಬರೆದಿರುವುದು ಕಂಡುಬರಲಿಲ್ಲ. ಆದ್ದರಿಂದ ಅದಕ್ಕಾಗಿ ಆಗ್ರಹಿಸುತ್ತಾ ‘ನಾವು ಹಿಜಾಬ್ ಹಾಕಿಕೊಂಡೇ ಶಾಲೆಗೆ ಬರುತ್ತೇವೆ’, ಎಂದು ಹೇಳುವುದು ತಪ್ಪಾಗುತ್ತದೆ, ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನ್ಯಾಯಾಲಯವು ಎಲ್ಲ ಅರ್ಜಿಗಳನ್ನು ತಳ್ಳಿಹಾಕಿತು.

೬. ಮತಾಂಧರು ಸೋತ ನಂತರ ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳು, ಪ್ರಗತಿಪರರು ಹಾಗೂ ವಾರ್ತಾವಾಹಿನಿಗಳು ನ್ಯಾಯಾಲಯದ ವಿರುದ್ಧ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ; ಆದರೆ ಹಿಂದೂ ಧರ್ಮದ ವಿಷಯ ಬಂದರೆ ಅವರು ಬಾಯಿಗೆ ಬೀಗ ಜಡಿದು ಕುಳಿತುಕೊಳ್ಳುತ್ತಾರೆ

ಇಲ್ಲಿ ಮತಾಂಧರ ಮಾನಸಿಕತೆಯು ಗಮನ ಸೆಳೆಯುವಂತಿದೆ. ಅವರು ಪ್ರತಿಯೊಂದು ವಿಷಯವನ್ನು ಮಾಡುವಾಗ ಧರ್ಮದ ಆಧಾರವನ್ನು ನೀಡುತ್ತಾರೆ ಹಾಗೂ ಅದನ್ನು ಪಟ್ಟು ಹಿಡಿದು ಮುಂದೆ ಕೊಂಡೊಯ್ಯುತ್ತಾರೆ. ಯಾವಾಗ ಅವರಿಗೆ ವಿರೋಧವಾಗುತ್ತದೋ, ಆಗ ಆ ವಿರೋಧ ಅಥವಾ ಸರಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಪ್ರಶ್ನಿಸುತ್ತಾರೆ. ಆಗ ಅವರಿಗೆ ನ್ಯಾಯವ್ಯವಸ್ಥೆಯೇ ಆಧಾರವೆನಿಸುತ್ತದೆ; ಆದರೆ ನ್ಯಾಯಾಲಯವು ಅವರ ಮನಸ್ಸಿನ ವಿರುದ್ಧ ತೀರ್ಪು ನೀಡಿದರೆ, ಅವರು ನ್ಯಾಯಾಲಯವನ್ನು ಕೂಡ ಟೀಕಿಸುತ್ತಾರೆ. ಈ ವಿಷಯದಲ್ಲಿ ಮಾಜಿ ಮುಖ್ಯ ಚುನಾವಣೆಯ ಆಯುಕ್ತ ಎಸ್.ವೈ. ಕುರೇಶಿ ಇವರ ಉದಾಹರಣೆ ಕೊಡಬಹುದು. ಅವರು ಒಂದು ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ‘ಹಿಜಾಬ್ ಕುರಾನ್‌ನ ಭಾಗವಲ್ಲ; ಆದರೆ ಶುಭ್ರವಾದ ವಸ್ತ್ರವನ್ನು ಧರಿಸಬೇಕು’, ಎಂದು ಅದರಲ್ಲಿ ಹೇಳಲಾಗಿದೆ. ಶಾಲಾಸಮವಸ್ತ್ರದಲ್ಲಿ ಸಿಕ್ಖ್‌ರಿಗೆ ಮುಂಡಾಸು ಹಾಗೂ ಇತರರಿಗೆ ತಿಲಕ ಹಚ್ಚುವ ಅನುಮತಿ ಕೊಡಲಾಗುತ್ತದೆ, ಆದರೆ ಹಿಜಾಬ್‌ಗೆ ಅನುಮತಿ ಕೊಡಲು ಏನು ಅಡಚಣೆ ?

ಹಿಜಾಬ್ ಆವಶ್ಯಕ ಇದೆಯೇ ಇಲ್ಲವೇ, ಎಂಬುದನ್ನು ಮೌಲಾನಾ ಹೇಳಬಹುದು. ಆ ವಿಷಯವು ಅವರ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ತದ್ವಿರುದ್ಧ ಮೌಲಾನಾ ಒಂದು ವೇಳೆ ಭಾರತೀಯ ದಂಡಸಂಹಿತೆಯ ವಿಷಯದಲ್ಲಿ ನಿರ್ಣಯ ನೀಡಲು ಆರಂಭಿಸಿದರೆ, ಅದು ಯೋಗ್ಯವೆನಿಸಬಹುದೇ ?, ಎಂದಿದ್ದಾರೆ. ಇದರಿಂದ ಅರಿವಾಗುತ್ತದೆ ಏನೆಂದರೆ, ಮುಸಲ್ಮಾನ ವ್ಯಕ್ತಿ ಎಷ್ಟೇ ದೊಡ್ಡ ಜಾತ್ಯತೀತ ಹುದ್ದೆಯಲ್ಲಿದ್ದರೂ ಅಥವಾ ಹುದ್ದೆಯಿಂದ ನಿವೃತ್ತನಾಗಿದ್ದರೂ, ಅವನು ಮಾತ್ರ ಮೊದಲ ಪ್ರಾಧಾನ್ಯತೆಯನ್ನು ಧರ್ಮಕ್ಕೆ ನೀಡುತ್ತಾನೆ. ಹಿಂದೂ ಸಮಾಜದ ವಿರುದ್ಧ ಅನೇಕ ತೀರ್ಪುಗಳು ಬರುತ್ತವೆ, ಆಗ ಸರ್ವಧರ್ಮಸಮಭಾವವನ್ನು ಪುರಸ್ಕರಿಸುವವರು, ಜಾತ್ಯತೀತವಾದಿಗಳು, ಇತಿಹಾಸತಜ್ಞರು, ವಿಚಾರವಂತರು ಮುಂತಾದವರು ಯಾವತ್ತೂ ಹಿಂದೂಗಳ ಪರವಾಗಿ ಮಾತನಾಡುವುದಿಲ್ಲ. ಆ ತೀರ್ಪಿನ ಬಗ್ಗೆ ಹಿಂದೂಗಳ ವಿರುದ್ಧ ಎಷ್ಟು ಸಾಧ್ಯವಿದೆಯೋ ಅಷ್ಟು ಸಮರ್ಥನೆ ಮಾಡುತ್ತಾರೆ. ಆದ್ದರಿಂದ ಹಿಜಾಬ್‌ನ ವಿರುದ್ಧ ತೀರ್ಪು ನೀಡುವ ನ್ಯಾಯಾಧೀಶರನ್ನೇ ಕೊಲೆ ಮಾಡುವಂತಹ ಬೆದರಿಕೆಯನ್ನು ನೀಡುವಷ್ಟು ಮತಾಂಧರು ಧೈರ್ಯ ತೋರಿಸುತ್ತಾರೆ. ೧೯೮೯ ರಲ್ಲಿ ಉಗ್ರವಾದಿ ಕೃತ್ಯದಲ್ಲಿನ ಆರೋಪಿಗೆ ನ್ಯಾಯಾಲಯವು ಗಲ್ಲುಶಿಕ್ಷೆಯನ್ನು ವಿಧಿಸಿತು, ಆಗ ನ್ಯಾಯಾಧೀಶ ನೀಲಕಂಠ ಗಂಜೂ ಇವರು ನಿವೃತ್ತರಾದ ನಂತರ  ಉಗ್ರವಾದಿಗಳು ಅವರನ್ನು ಕೊಲೆ ಮಾಡಿದರು. ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಚ ನ್ಯಾಯಾಲಯಗಳಿಗೆ ತಮಗಾದ ಅವಮಾನವನ್ನು ದೂರ ಮಾಡಿಕೊಳ್ಳಲು ಮಿತಿಮೀರಿದ ಅಧಿಕಾರವಿದೆ. ಈ ಅಧಿಕಾರಗಳನ್ನು ಉಪಯೋಗಿಸಿ ಅವರು ಅಪರಾಧಿಗಳಿಗೆ ಯೋಗ್ಯವಾದ ಪಾಠವನ್ನು ಕಲಿಸಬೇಕು; ಏಕೆಂದರೆ ನ್ಯಾಯವ್ಯವಸ್ಥೆಯ ಭೀತಿಯಿರುವುದು ಅತ್ಯಂತ ಆವಶ್ಯಕವಾಗಿದೆ.

೭. ದೇಶವನ್ನು ಒತ್ತೆಯಲ್ಲಿಟ್ಟುಕೊಳ್ಳುವ ಮತಾಂಧರ ಕೆಟ್ಟಚಾಳಿಯನ್ನು ಶಾಶ್ವತವಾಗಿ ನಿಲ್ಲಿಸಲು ಹಿಂದೂ ರಾಷ್ಟ್ರ ಸ್ಥಾಪನೆಯ ಹೊರತು ಪರ್ಯಾಯವಿಲ್ಲ !

ಇತ್ತೀಚೆಗಷ್ಟೆ ಕೇಂದ್ರ ಸರಕಾರವನ್ನು ಅಡಚಣೆಯಲ್ಲಿ ಸಿಲುಕಿಸಲು ಅನೇಕ ಆಂದೋಲನಗಳನ್ನು ನಡೆಸಲಾಯಿತು. ಇದರಿಂದ ಜಗತ್ತಿನಾದ್ಯಂತ ಭಾರತದ ಅವಮಾನ ಮತ್ತು ನಿಂದೆಯೂ ಆಗಬೇಕೆಂದು ಉದ್ದೇಶಪೂರ್ವಕ ಪ್ರಯತ್ನಿಸಲಾಗುತ್ತದೆ. ಈ ಆಂದೋಲನದಲ್ಲಿ ‘ಪಿ.ಎಫ್.ಐ.’, ‘ಸಿ.ಎಫ್.ಐ.’ ಮತ್ತು ‘ಜಮಾತ್-ಎ-ಇಸ್ಲಾಮೀ’ಯ ಕೈವಾಡವಿತ್ತು. ಕೇಂದ್ರೀಯ ತನಿಖಾ ದಳ ಅಥವಾ ರಾಷ್ಟ್ರೀಯ ತನಿಖಾ ದಳ ಇವರಿಂದ ಅವರ ತನಿಖೆಯಾಗಬೇಕು, ಎಂದು ಘನಶ್ಯಾಮ ಉಪಾಧ್ಯಾಯ ಇವರ ಅರ್ಜಿ ಇತ್ತು, ಈ ಅರ್ಜಿಗೆ ಪೂರಕ ಆದೇಶ ಬರಬೇಕಿತ್ತು; ಏಕೆಂದರೆ ಮಹಾವಿದ್ಯಾಲಯದ ವತಿಯಿಂದಲೂ ನ್ಯಾಯಾಲಯದ ಮುಂದೆ ಅಂತಹ ಪುರಾವೆಗಳನ್ನು ಪ್ರಸ್ತುತಪಡಿಸಲಾಗಿತ್ತು. ಆದ್ದರಿಂದ ಇಂತಹ ಸಂಘಟನೆಗಳಿಗೆ ಭೀತಿ ಹುಟ್ಟಿಸಬಹುದಿತ್ತು. ಅಂದರೆ ಯಾವ ಅರ್ಜಿಯನ್ನು ಪರಿಗಣಿಸಬೇಕು ಹಾಗೂ ತೀರ್ಪು ನೀಡಬೇಕು, ಎಂಬುದು ನ್ಯಾಯಸಂಸ್ಥೆಯ ಹೊಣೆಯಾಗಿದೆ. ಅವರು ನೀಡುವ ತೀರ್ಪು ಭಾರತದ ನಾಗರಿಕರು ಮತ್ತು ಪಕ್ಷಕಾರರಿಗೆ ಕಡ್ಡಾಯವಾಗಿರುತ್ತದೆ.

ಇವೆಲ್ಲ ಘಟನೆಗಳ ಸಮಯದಲ್ಲಿ ಮತಾಂಧರು ಜಾತ್ಯತೀತತೆಯನ್ನು ಮೂಲೆಗುಂಪಾಗಿಸುತ್ತಾರೆ, ಎಂಬುದು ಅರಿವಾಗುತ್ತದೆ. ಅದಕ್ಕಾಗಿ ಸರಕಾರ ಶೀಘ್ರಗತಿಯಲ್ಲಿ ಸಮಾನ ನಾಗರಿಕ ಕಾನೂನನ್ನು ತರಬೇಕು. ಮತಾಂಧರಿಗೆ ಸಿಗುವ ಮಿತಿಮೀರಿದ ಸೌಲಭ್ಯಗಳು ಹಾಗೂ ಅವರಿಗೆ ಎಲ್ಲ ಪಕ್ಷಗಳ ರಾಜಕಾರಣಿಗಳು ಕಲಿಸಿರುವ ದುರಾಚಾರದ ಕೆಟ್ಟಚಾಳಿಯನ್ನು ತೊಲಗಿಸಲು ಹಿಂದೂಗಳಲ್ಲಿ ಜಾಗೃತಿ ಹಾಗೂ ಸಂಘಟನೆಯಾಗಬೇಕು. ಅದಕ್ಕಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅತ್ಯಂತ ಆವಶ್ಯಕವಾಗಿದೆ. ‘ಇಂದಿನ ನ್ಯಾಯವ್ಯವಸ್ಥೆಯು ತುಂಬಾ ಚೆನ್ನಾಗಿ ಕಾರ್ಯ ಮಾಡುತ್ತಿದೆ’, ಎಂಬುದನ್ನು ನಾನು ನಮ್ರತೆಯಿಂದ ಒಪ್ಪಿಕೊಳ್ಳುತ್ತೇನೆ. ಮತಾಂಧರ ಗಲಾಟೆಯನ್ನು ಕಡಿಮೆಗೊಳಿಸಲು ನ್ಯಾಯವ್ಯವಸ್ಥೆಯು ತತ್ಪರತೆಯಿಂದ ನೀಡಿದ ತೀರ್ಪನ್ನೂ ನಾನು ಗೌರವಿಸುತ್ತೇನೆ.

– (ಪೂ) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ, ಹಿಂದೂ ವಿಧಿಜ್ಞ ಪರಿಷತ್ತು ಹಾಗೂ ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (೨೨.೩.೨೦೨೨)