ಭಾರತದ ರಾಜಕಾರಣಿಗಳು ಹೀಗೆ ಎಂದಾದರೂ ಮಾತನಾಡಬಹುದೇ ?

೧. ಇಂತಹ ಆದೇಶವನ್ನು ಎಲ್ಲ ರಾಜ್ಯಗಳೂ ನೀಡಬೇಕು !

ಕರ್ನಾಟಕ ಸರಕಾರವು ‘ಯಾವುದೇ ಪ್ರಾಣಿಯನ್ನು ಕೊಲ್ಲುವಾಗ ಅದರ ಪ್ರಜ್ಞೆ ತಪ್ಪಿಸುವುದು ಅಗತ್ಯವಿದೆ’ ಎಂದು ಆದೇಶಿಸಿದೆ. ಹಲಾಲ್ ಮಾಂಸದ ಸಮಯದಲ್ಲಿ, ಪ್ರಾಣಿಗಳ ಕೊರಳಿನ ರಕ್ತನಾಳವನ್ನು ಕತ್ತರಿಸಿ ರಕ್ತಸ್ರಾವದಿಂದ ಪ್ರಾಣಿಯನ್ನು ಕೊಲ್ಲಲಾಗುತ್ತದೆ. ಅಂತಹ ಹತ್ಯೆಗಳನ್ನು ಈ ಆದೇಶವು ನಿಷೇಧಿಸುತ್ತದೆ.

೨. ಮೌಲಾನಾ ಮತ್ತು ಮೌಲ್ವಿಗಳು ಈ ಸತ್ಯವನ್ನು ಏಕೆ ಹೇಳುವುದಿಲ್ಲ ?

ಹಲಾಲ್ ಮಾಂಸವು ಇಸ್ಲಾಮೇತರ ಜನರಿಗೆ ಅಲ್ಲ; ಅಂದರೆ ಇದು ಇಸ್ಲಾಂನ ಅನುಯಾಯಿಗಳಿಗೆ ಮಾತ್ರ ಎಂಬ ಸ್ಪಷ್ಟನೆಯನ್ನು ಖ್ಯಾತ ಗಾಯಕ ಲಕ್ಕಿ ಅಲಿಯವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ.

೩. ಕಾಂಗ್ರೆಸ್‌ನ ಮತಾಂಧ ಶಾಸಕನ ಹಿಂದೂದ್ವೇಷವನ್ನು ತಿಳಿಯಿರಿ !

ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲನಾಥ ಅವರು ಶ್ರೀರಾಮ ನವಮಿ ಮತ್ತು ಹನುಮ ಜಯಂತಿಯನ್ನು ಆಚರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಲಿಖಿತ ಆದೇಶವನ್ನು ನೀಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್, ‘ಇಂತಹ ಆದೇಶವು ತಪ್ಪು ಆಚರಣೆಗೆ ದಾರಿ ಮಾಡಿಕೊಡುತ್ತದೆ’ ಎಂದರು.

೪. ಭಾರತದ ರಾಜಕಾರಣಿಗಳು ಹೀಗೆ ಎಂದಾದರೂ ಮಾತನಾಡಬಹುದೇ ?

ಫ್ರಾನ್ಸ್‌ನ ರಾಷ್ಟ್ರಪತಿ ಮರೀನ್ ಲಿ ಪೆನ್

ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಫ್ರಾನ್ಸ್‌ನ ರಾಷ್ಟ್ರಪತಿ ಹುದ್ದೆಯ ಮಹಿಳಾ ಅಭ್ಯರ್ಥಿ ಮರೀನ್ ಲಿ ಪೆನ್ ಇವರು ಆಶ್ವಾಸನೆ ನೀಡಿದ್ದಾರೆ.

೫. ಇಂತಹ ಘಟನೆಗಳು ಯಾವಾಗ ನಿಲ್ಲುವವು ?

ಕೋಲಾರದಲ್ಲಿ ಶ್ರೀರಾಮನವಮಿ ಹಿನ್ನೆಲೆಯಲ್ಲಿ ಶೋಭಾ ಯಾತ್ರೆಯ ನಡೆಯುವಾಗ ಮುಸಲ್ಮಾನ ಬಹುಸಂಖ್ಯಾತ ರಿರುವ ಪ್ರದೇಶದಲ್ಲಿನ ಮತಾಂಧರು ಅದರ ಮೇಲೆ ಕಲ್ಲುತೂರಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

೬. ಅಂತಹವರಿಗೆ ಗಲ್ಲುಶಿಕ್ಷೆಯನ್ನೇ ವಿಧಿಸಬೇಕು !

ಗುರುಗ್ರಾಮ್ (ಹರಿಯಾಣ)ದಲ್ಲಿ ಗೋರಕ್ಷಕರು ಮತ್ತು ಪೊಲೀಸರು ೨೨ ಕಿ.ಮೀ.ಗಳ ವರೆಗೆ ಬೆನ್ನಟ್ಟಿ ಟ್ರಕ್‌ನಿಂದ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ೬ ಗೋಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದ್ದಾರೆ. ಬೆನ್ನಟ್ಟುವಾಗ ಕಳ್ಳ ಸಾಗಾಣಿಕೆ ಮಾಡುವವರು ಚಲಿಸುವ ಟ್ರಕ್‌ನಿಂದ ೭ ಗೋವುಗಳನ್ನು ಚಲಿಸುತ್ತಿರುವ ಟ್ರಕ್‌ನಿಂದ ರಸ್ತೆಗೆ ಎಸೆದಿದ್ದಾರೆ.

೭. ಈ ಕುರಿತು ಮಹಿಳಾ ಸಂಘಟನೆಗಳು ಎಂದಿಗೂ ಏನನ್ನೂ ಮಾತನಾಡುವುದಿಲ್ಲ, ಎನ್ನುವುದನ್ನು ಗಮನಿಸಿ !

ಮಧ್ಯಪ್ರದೇಶದ ದಮೋಹ ಎಂಬಲ್ಲಿ ಓರ್ವ ಮಹಿಳೆಯು ತನ್ನ ಮಾವ (ಪತಿಯ ತಂದೆ) ರಶೀದ ಖಾನ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮಾವನ ವಿರುದ್ಧ ದೂರು ದಾಖಲಿಸಿ, ಅವನನ್ನು ಬಂಧಿಸಲಾಗಿದೆ.