‘ಈಶ್ವರನಲ್ಲಿ ೧೪ ವಿದ್ಯೆಗಳು ಮತ್ತು ೬೪ ಕಲೆಗಳಿವೆ. ಭಕ್ತನು ಇವುಗಳಲ್ಲಿ ಯಾವುದಾದರೊಂದು ಮಾರ್ಗದಿಂದ ಸಾಧನೆ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಅದೇ ರೀತಿ ಸನಾತನದಲ್ಲಿ ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗ, ಧ್ಯಾನಯೋಗ ಮುಂತಾದ ಹಲವು ಯೋಗಮಾರ್ಗಗಳನ್ನು (ವಿವಿಧ ವಿದ್ಯೆಗಳು) ಹಾಗೆಯೇ ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿಗಳನ್ನು ‘ಸಾಧನೆ’ ಎಂದು ಕಲಿಸಲಾಗುತ್ತದೆ. ಸನಾತನದಲ್ಲಿ ‘ಎಷ್ಟು ವ್ಯಕ್ತಿಗಳು ಅಷ್ಟು ಪ್ರಕೃತಿ, ಅಷ್ಟು ಸಾಧನಾಮಾರ್ಗಗಳು’ ಎಂಬ ತತ್ತ್ವಕ್ಕನುಸಾರ ಸಾಧಕನಿಗೆ ಅವಶ್ಯಕ ಮಾರ್ಗದ ಬೋಧನೆ ನೀಡಲಾಗುತ್ತದೆ. ಆದುದರಿಂದ ಗುರುಕೃಪಾಯೋಗಾನುಸಾರ ಸಾಧನೆ ಮಾಡುವ ಸಾಧಕರ ಸಾಧನೆಯಲ್ಲಿ ಶೀಘ್ರ ಪ್ರಗತಿಯಾಗುತ್ತಿದೆ. (೧೦.೨.೨೦೨೨ ರ ತನಕ ಸನಾತನದ ೧೧೯ ಸಾಧಕರು ಸಂತರಾಗಿದ್ದಾರೆ ಮತ್ತು ಅನೇಕ ಸಾಧಕರು ಸಂತರಾಗುವ ಮಾರ್ಗದಲ್ಲಿದ್ದಾರೆ.) ತದ್ವಿರುದ್ಧ ಹೆಚ್ಚಿನ ಸಂಪ್ರದಾಯಗಳಲ್ಲಿ ಅವರ ಗುರುಗಳಿಗೆ ತಿಳಿದಿರುವ ಒಂದೇ ಸಾಧನಾಮಾರ್ಗವನ್ನು ಕಲಿಸಲಾಗುತ್ತದೆ. ಆದ್ದರಿಂದ ವಿವಿಧ ಸಂಪ್ರದಾಯಗಳ ಭಕ್ತರ ವಿಶೇಷ ಆಧ್ಯಾತ್ಮಿಕ ಪ್ರಗತಿ ಆಗುವುದಿಲ್ಲ. ಅವರಿಗೆ ಹೆಚ್ಚಾಗಿ ಒಬ್ಬರೇ ಉತ್ತರಾಧಿಕಾರಿ ಇರುತ್ತಾರೆ ಅಥವಾ ಇಲ್ಲದೆಯೂ ಇರಬಹುದು !
– (ಪರಾತ್ಪರ ಗುರು) ಡಾ. ಆಠವಲೆ (೧೫.೯.೨೦೨೧)
‘ಎಲ್ಲವನ್ನೂ ದೇವರು ಮಾಡುತ್ತಾನೆ’, ಎಂದು ಅನೇಕ ಸಂತರು ಹೇಳುತ್ತಾರೆ; ಆದರೆ ಸನಾತನದ ಸಂತರು ಅದನ್ನು ಪ್ರತ್ಯಕ್ಷ ಅನುಭವಿಸುತ್ತಾರೆ !’
– ಪರಾತ್ಪರ ಗುರು ಡಾ. ಆಠವಲೆ (೨.೨.೨೦೨೨)
ದೇವರು ವ್ಯಷ್ಟಿ ಸಾಧನೆ ಮಾಡುವವರದ್ದಲ್ಲ ಕೇವಲ ಸಮಷ್ಟಿ ಸಾಧನೆ ಮಾಡುವ ಕುಟುಂಬದವರ ಕಾಳಜಿ ವಹಿಸುತ್ತಾನೆ !
– ಪರಾತ್ಪರ ಗುರು ಡಾ. ಆಠವಲೆ (೮.೨.೨೦೨೨)
ಆಧ್ಯಾತ್ಮಿಕ ಕ್ಷಮತೆ ಇಲ್ಲದ ಕಾರಣ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿಲ್ಲವೋ, ಅವರು ಸಂತರಿಗೆ ‘ಅವರು ಸಂತರಲ್ಲ’ ಎನ್ನುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ವೈದ್ಯರಿಗೆ ‘ಅವರು ವೈದ್ಯರಲ್ಲ’ ಎಂದು ಹೇಳುವಂತೆ ಹಾಸ್ಯಾಸ್ಪದವಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ (೮.೧.೨೦೨೨)