ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಲು ಭಗವಂತನ ಭಕ್ತನಾಗುವುದು ಆವಶ್ಯಕ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗದಗದಲ್ಲಿ ಹಿಂದೂರಾಷ್ಟ್ರ ಸಂಘಟಕ ಕಾರ್ಯಶಾಲೆ

ಪೂ. ರಮಾನಂದ ಗೌಡ

ಗದಗ : ‘ಹಿಂದೂ ರಾಷ್ಟ್ರದ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಿದೆ. ಅದಕ್ಕಾಗಿ ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ತಮ್ಮಲ್ಲಿರುವ ಸತ್ತ್ವಗುಣವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಭಗವಂತನ ಭಕ್ತರಾಗಬೇಕಾಗಿದೆ’ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರ ಸಂಘಟನಾ ಕಾರ್ಯಶಾಲೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು.

ಈ ಎರಡು ದಿನದ ಕಾರ್ಯಾಶಾಲೆಯಲ್ಲಿ ಹುಬ್ಬಳ್ಳಿ, ಗದಗ, ಹಗರಿಬೊಮ್ಮನಹಳ್ಳಿ, ಧಾರವಾಡ ಸೇರಿದಂತೆ ಇನ್ನೂ ಹಲವು ಕಡೆಗಳಿಂದ ಧರ್ಮಪ್ರೇಮಿಗಳು ಸಹಭಾಗಿಯಾಗಿ ಈ ಕಾರ್ಯಶಾಲೆಯನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಶಾಲೆಯ ಮೊದಲನೆಯ ದಿನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಕರ್ನಾಟಕದ ಸಮನ್ವಯಕರಾದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿಜಯ ರೇವಣಕರ್ ಮತ್ತು ಧಾರವಾಡ ಸಮನ್ವಯಕರಾದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವೆಂಕಟರಮಣ ನಾಯಕ್ ಇವರು ಹಿಂದೂ ರಾಷ್ಟ್ರದ ಸಂಕಲ್ಪನೆ ಬಗ್ಗೆ ಮಾಹಿತಿಯನ್ನು  ನೀಡಿದರು. ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಇವರು ಸಾಧನೆಯ ಮಹತ್ವ ಮತ್ತು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಬಗ್ಗೆ ಮಾಹಿತಿ ಹೇಳಿದರು.

ವೈಶಿಷ್ಟ್ಯಪೂರ್ಣ

ಈ ಕಾರ್ಯಶಾಲೆಯ ನಂತರ ೯ ಸ್ಥಳಗಳಲ್ಲಿ ಧರ್ಮಸಭೆಯನ್ನು ತೆಗೆದುಕೊಳ್ಳುವ ಹಾಗೂ ೩ ಕಡೆ ಸ್ವರಕ್ಷಣಾ ತರಬೇತಿ ವರ್ಗ ಆರಂಭಿಸುವ ಬಗ್ಗೆ ಬೇಡಿಕೆ ನೀಡಿದರು. ಅದೇ ರೀತಿ ಕೆಲವು ಧರ್ಮಪ್ರೇಮಿಗಳು ಸಮಿತಿ ಕಾರ್ಯದಲ್ಲಿ ಕೃತಿಶೀಲ ಸಹಭಾಗವನ್ನು ತೋರಿಸಿದರು. ಕಾರ್ಯಶಾಲೆಯ ನಂತರ ಕೆಲವು ಧರ್ಮಪ್ರೇಮಿಗಳು ಸ್ವತಃ ಉಪ್ಪು-ನೀರಿನ ಉಪಾಯ, ನಾಮಜಪ ಮಾಡುವುದು ಇತ್ಯಾದಿ ಸಹಿತ ವ್ಯಷ್ಟಿ ಸಾಧನೆ ಆರಂಭಿಸಿರುವುದಾಗಿ ತಿಳಿಸಿದರು.

ಕಾರ್ಯಶಾಲೆಯಲ್ಲಿ ಸಹಭಾಗಿಯಾದ ಧರ್ಮಪ್ರೇಮಿಗಳ ಅಭಿಪ್ರಾಯಗಳು

೧. ಶ್ರೀಮತಿ ಪಾರ್ವತಿ : ಇಲ್ಲಿ ಸಮಯಪಾಲನೆ ಹೇಗೆ ಮಾಡಬೇಕೆಂದು ಕಲಿಯಲು ಸಿಕ್ಕಿತು

೨. ಶ್ರೀ. ಶ್ರೀಧರ ಪುರೋಹಿತ, ಹಗರಿಬೊಮ್ಮನಹಳ್ಳಿ – ಇತರೆಡೆ ವ್ಯಕ್ತಿತ್ವ ವಿಕಸನಕ್ಕಾಗಿ ಸಾವಿರಾರು ರೂಪಾಯಿ ಹಣ ತೆಗೆದುಕೊಂಡು ಹೇಳಿಕೊಡುತ್ತಾರೆ. ಆದರೆ ಅದು ಮಾನಸಿಕ ಸ್ತರದಲ್ಲಿ ಇರುತ್ತದೆ.  ಆದರೆ ಕಾರ್ಯಶಾಲೆಯಲ್ಲಿ ಸ್ವಭಾವದೋಷ-ಅಹಂ ನಿರ್ಮೂಲನೆ ಹೇಗೆ ಮಾಡಬೇಕು ? ಎಂದು ಹೇಳಿಕೊಟ್ಟು ನಮ್ಮ ವ್ಯಕ್ತಿತ್ವವಿಕಸನಕ್ಕೆ ಸಹಾಯ ಮಾಡಿದ್ದಾರೆ. ಅದಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ. ಇದು ಕೇವಲ ಹಿಂದೂ ಜನಜಾಗೃತಿ ಸಮಿತಿಯಿಂದ ಮಾತ್ರ ಸಾಧ್ಯ

೩. ಶ್ರೀ. ದುಂಡಪ್ಪ ಸವಣೂರ, ಲಕ್ಮೇಶ್ವರ – ಸ್ವಯಂಶಿಸ್ತುಬದ್ಧವಾಗಿರಲು ಕಲಿಯಲು ಸಿಕ್ಕಿತು  ಹಾಗೂ ಕೆಟ್ಟ ಶಕ್ತಿಗಳ ತೊಂದರೆಗಳಿಗೆ ನಾಮಜಪ ಮುಂತಾದ ಉಪಾಯವನ್ನು ಕಲಿತೆನು.

೪. ಶ್ರೀ. ಬಸವರಾಜ ಗರಗ, ಹಗರಿಬೊಮ್ಮನಹಳ್ಳಿ – ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಾವೆಲ್ಲರೂ ಸಂಘಟಿತರಾಗಿ ಆಧ್ಯಾತ್ಮಿಕ ಬಲದಿಂದ ಹೋರಾಡಬೇಕೆಂಬುದು ಕಲಿಯಲು ಸಿಕ್ಕಿತು.