ಶ್ರೀ ಹನುಮಾನ ಚಾಲಿಸಾ ಪಠಿಸುವುದು, ಹಾಗೆಯೇ ಹನುಮಂತನ ತಾರಕ ಮತ್ತು ಮಾರಕ ನಾಮವನ್ನು ಜಪಿಸುವುದು ಇವು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿರುವುದು; ಆದರೆ ಸ್ತೋತ್ರಪಠಣದ ತುಲನೆಯಲ್ಲಿ ನಾಮಜಪದಿಂದ ಹೆಚ್ಚಿನ ಪರಿಣಾಮವಾಗುವುದು

ಸ್ತೋತ್ರ ಮತ್ತು ನಾಮಜಪದ ಬಗ್ಗೆ ಅದ್ವಿತೀಯ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಸಮಾಜದ ಬಹುಪಾಲು ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುತ್ತದೆ. ಕೆಲವೊಮ್ಮೆ ಕೆಟ್ಟ ಶಕ್ತಿಗಳಿಂದ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ, ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳ ನಿವಾರಣೆಯನ್ನು ಮಾಡುವ ದೇವತೆಗಳ ಪೈಕಿ ಒಬ್ಬರೆಂದರೆ ಮಾರುತಿ. ಎಲ್ಲ ದೇವತೆಗಳಲ್ಲಿ ಕೇವಲ ಮಾರುತಿಗೆ ಮಾತ್ರ ತೊಂದರೆ ನೀಡಲು ಕೆಟ್ಟ ಶಕ್ತಿಗಳಿಂದಾಗುವುದಿಲ್ಲ. ಲಂಕೆಯಲ್ಲಿ ಲಕ್ಷಗಟ್ಟಲೆ ರಾಕ್ಷಸರಿದ್ದರು, ಆದರೂ ಅವರಿಗೆ ಮಾರುತಿಗೆ ಏನೂ ಮಾಡಲು ಆಗಲಿಲ್ಲ. ಆದ್ದರಿಂದಲೇ ಮಾರುತಿಗೆ ‘ಭೂತಗಳ ಸ್ವಾಮಿ’, ಎಂದು ಹೇಳುತ್ತಾರೆ. ಯಾರಿಗಾದರೂ ಭೂತಬಾಧೆಯಾದರೆ, ಆ ವ್ಯಕ್ತಿಯನ್ನು ಮಾರುತಿಯ ದೇವಸ್ಥಾನಕ್ಕೆ ಕರೆದೊಯ್ಯುತ್ತಾರೆ ಅಥವಾ ಮಾರುತಿಸ್ತೋತ್ರ, ಹನುಮಾನಚಾಲಿಸಾ ಹೇಳುತ್ತಾರೆ. ಮಾರುತಿಯ (ಹನುಮಂತನ) ನಾಮಜಪದಿಂದ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗುತ್ತದೆ. (ಆಧಾರ : ಸನಾತನದ ಕಿರುಗ್ರಂಥ – ‘ಮಾರುತಿ’)

ಶ್ರೀ ಹನುಮಾನ ಚಾಲಿಸಾ ಪಠಿಸುವುದು ಮತ್ತು ಹನುಮಂತನ ನಾಮಜಪಮಾಡು ವುದು, ಇವುಗಳಿಂದ ಮಾಡುವವರ ಮೇಲೆ ಯಾವ ಪರಿಣಾಮವಾಗುತ್ತದೆ ?, ಎಂದು ವಿಜ್ಞಾನದ ಮೂಲಕ ಅಧ್ಯಯನಕ್ಕಾಗಿ ರಾಮನಾಥಿ, ಗೋವಾದ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣವನ್ನು ಉಪಯೋಗಿಸಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆಯನ್ನು ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧೬ ಎಪ್ರಿಲ್ ೨೦೨೨ ಈ ದಿನದಂದು ಹನುಮಾನ ಜಯಂತಿ ಇದೆ. ಈ ನಿಮಿತ್ತ…

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಈ ಪರೀಕ್ಷಣೆಯ ಅಂತರ್ಗತ ಒಟ್ಟು ೩ ಪ್ರಯೋಗಗಳನ್ನು ಮಾಡಲಾಯಿತು.

ಮೊದಲ ಪ್ರಯೋಗದಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕರು ಶ್ರೀ ಹನುಮಾನ ಚಾಲಿಸಾವನ್ನು ಪಠಿಸುವ ಮೊದಲು ಮತ್ತು ಪಠಿಸಿದ ನಂತರ ‘ಯು.ಎ.ಎಸ್.’ ಉಪಕರಣದಿಂದ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ಹನುಮಾನ ಚಾಲಿಸಾ ಪಠಿಸಲು ೨ ಸಾಧಕರಿಗೆ ತಲಾ ೧೫ ನಿಮಿಷಗಳು ಬೇಕಾದವು.

ಎರಡನೇಯ ಪ್ರಯೋಗದಲ್ಲಿ ಇಬ್ಬರೂ ಸಾಧಕರು ಹನುಮಂತನ ‘ಶ್ರೀ ಹನುಮತೆ ನಮಃ |’ ಈ ತಾರಕ ನಾಮಜಪವನ್ನು ೧೫ ನಿಮಿಷಗಳ ಕಾಲ ಮಾಡಿದರು. ಸಾಧಕರು ಆ ನಾಮಜಪವನ್ನು ಮಾಡುವ ಮೊದಲು ಮತ್ತು ನಾಮಜಪವನ್ನು ಮಾಡಿದ ನಂತರ ‘ಯು.ಎ.ಎಸ್.’ ಉಪಕರಣದ ಮೂಲಕ ಅವರ ನಿರೀಕ್ಷಣೆಯನ್ನು ಮಾಡಲಾಯಿತು.

ಮೂರನೇಯ ಪ್ರಯೋಗದಲ್ಲಿ ಇಬ್ಬರೂ ಸಾಧಕರು ಹನುಮಂತನ ‘ಓಂ ಹಂ ಹನುಮತೆ ನಮಃ |’ ಈ ಮಾರಕ ನಾಮಜಪವನ್ನು ೧೫ ನಿಮಿಷಗಳ ಕಾಲ ಮಾಡಿದರು. ಸಾಧಕರು ಆ ನಾಮಜಪವನ್ನು ಮಾಡುವ ಮೊದಲು ಮತ್ತು ನಾಮಜಪವನ್ನು ಮಾಡಿದ ನಂತರ ‘ಯು.ಎ.ಎಸ್.’ ಉಪಕರಣದ ಮೂಲಕ ಅವರ ನಿರೀಕ್ಷಣೆಯನ್ನು ಮಾಡಲಾಯಿತು.

ಈ ಎಲ್ಲ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಬಗೆಗಿನ ನಿರೀಕ್ಷಣೆಗಳ ವಿಶ್ಲೇಷಣೆ – ಪರೀಕ್ಷಣೆಯಲ್ಲಿ ಮೂರೂ ಪ್ರಯೋಗಗಳಿಂದ ಸಾಧಕರ ಮೇಲಾದ ಪರಿಣಾಮ

ಇಲ್ಲಿ ಕೊಟ್ಟಿರುವ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ

೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯು ಶ್ರೀ ಹನುಮಾನ ಚಾಲಿಸ್‌ಅನ್ನು ಪಠಿಸಿದ ನಂತರ ಅವಳಲ್ಲಿದ್ದ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ಕಡಿಮೆಯಾಯಿತು ಮತ್ತು ಹನುಮಂತನ ತಾರಕ ಮತ್ತು ಮಾರಕ ನಾಮಜಪವನ್ನು ಮಾಡಿದ ನಂತರ ಅದರಲ್ಲಿನ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ಇಲ್ಲದಂತಾಯಿತು.

೨. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯು ಶ್ರೀ ಹನುಮಾನ ಚಾಲಿಸಾದ ಪಠಣ, ಹಾಗೆಯೇ ಹನುಮಂತನ ತಾರಕ ಮತ್ತು ಮಾರಕ ನಾಮಜಪವನ್ನು ಮಾಡಿದ ನಂತರ ಅವಳಲ್ಲಿನ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ಇಲ್ಲವಾಯಿತು.

ಸೌ. ಮಧುರಾ ಕರ್ವೆ

೩. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿ ಶ್ರೀ ಹನುಮಾನ ಚಾಲಿಸಾದ ಪಠಣ, ಹಾಗೆಯೇ ಹನುಮಂತನ ತಾರಕ ಮತ್ತು ಮಾರಕ ನಾಮಜಪವನ್ನು ಮಾಡಿದ ನಂತರ ಅವಳಲ್ಲಿ  ಸಕಾರಾತ್ಮಕ ಊರ್ಜೆಯು ಉತ್ತರೋತ್ತರವಾಗಿ ಹೆಚ್ಚು ನಿರ್ಮಾಣವಾಯಿತು.

೪. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನು ಶ್ರೀ ಹನುಮಾನ ಚಾಲಿಸಾದ ಪಠಣ, ಹಾಗೆಯೇ ಹನುಮಂತನ ತಾರಕ ಮತ್ತು ಮಾರಕ ನಾಮಜಪವನ್ನು ಮಾಡಿದ ನಂತರ ಅವನ ಸಕಾರಾತ್ಮಕ ಊರ್ಜೆಯ ಪ್ರಭಾವಲಯದಲ್ಲಿ ಉತ್ತರೋತ್ತರ ಹೆಚ್ಚಳವಾಯಿತು.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಶ್ರೀ ಹನುಮಾನ ಚಾಲಿಸಾ : ‘ಶ್ರೀ ಹನುಮಾನ ಚಾಲಿಸಾ’ ಈ ಸ್ತೋತ್ರವನ್ನು ಸಂತ ಗೋಸ್ವಾಮಿ ತುಲಸಿದಾಸರು ೧೬ ನೇ ಶತಮಾನದಲ್ಲಿ ರಚಿಸಿದ್ದರು. ಶ್ರೀ ಹನುಮಾನ ಚಾಲಿಸಾವು ಅವಧಿ ಭಾಷೆಯಲ್ಲಿದೆ.

ಈ ಸ್ತೋತ್ರವು ೪೦ ಶ್ಲೋಕಗಳದ್ದಾಗಿದೆ. ಆದ್ದರಿಂದ ಅದಕ್ಕೆ ಚಾಲಿಸಾ ಎಂದು ಹೇಳುತ್ತಾರೆ. (ಆಧಾರ : https://mr.wikipedia.org/wiki/  ಹನುಮಾನ ಚಾಲಿಸಾ)

‘ಸ್ತೂಯತೆ ಅನೆನ ಇತಿ’ ಅಂದರೆ ಯಾವ ಮಾಧ್ಯಮದಿಂದ ದೇವತೆಯ ಸ್ತುತಿ ಮಾಡಲಾಗುತ್ತದೋ ಆ ಸ್ತೋತ್ರ, ಎಂದು ಸ್ತೋತ್ರ ಈ ಶಬ್ದದ ವ್ಯಾಖ್ಯೆ ಇದೆ. ಸ್ತೋತ್ರದಲ್ಲಿ ದೇವತೆಯ ಸ್ತುತಿಯೊಂದಿಗೆ ಸ್ತೋತ್ರಪಠಣ ಮಾಡುವವರ ಸುತ್ತಲೂ ಕವಚವನ್ನು (ಸಂರಕ್ಷಕ ಕವಚ) ನಿರ್ಮಿಸುವ ಶಕ್ತಿಯೂ ಇರುತ್ತದೆ. ಸ್ತೋತ್ರಗಳಲ್ಲಿ ನೀಡಿದ ಫಲಶ್ರುತಿಯ ಹಿಂದೆ ರಚನಾಕಾರರ ಸಂಕಲ್ಪವಿರುವುದರಿಂದ ಅದನ್ನು ಪಠಿಸುವವರಿಗೆ ಫಲಶ್ರುತಿಯಿಂದಾಗಿ ಫಲ ಸಿಗುತ್ತದೆ. (ಆಧಾರ : ಸನಾತನದ ಕಿರುಗ್ರಂಥ – ‘ಶ್ರೀರಾಮರಕ್ಷಾಸ್ತೋತ್ರ’)

೨ ಆ. ಹನುಮಂತನ ನಾಮಜಪ : ‘ಮಾರುತಿಯಲ್ಲಿ ಪ್ರಕಟ ಶಕ್ತಿ (ಶೇ. ೭೨ ರಷ್ಟು) ಇತರ ದೇವತೆಗಳ (ಶೇ. ೧೦ ರಷ್ಟು) ತುಲನೆಯಲ್ಲಿ ಅತ್ಯಂತ ಹೆಚ್ಚು ಇರುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ನಿವಾರಣೆಗಾಗಿ, ಹಾಗೆಯೇ ರೋಗನಿವಾರಣೆಗಾಗಿ ಮಾರುತಿಯ ಉಪಾಸನೆಯನ್ನು ಮಾಡುತ್ತಾರೆ. ಮಾರುತಿಯ (ಹನುಮಂತನ) ನಾಮಜಪದಿಂದ ಕೆಟ್ಟ ಶಕ್ತಿಗಳ ತೊಂದರೆಯಿಂದ ರಕ್ಷಣೆಯಾಗುತ್ತದೆ’. (ಆಧಾರ : ಸನಾತನದ ಕಿರುಗ್ರಂಥ – ‘ಮಾರುತಿ’)

ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರಿಗೆ ಶ್ರೀ ಹನುಮಾನ ಚಾಲಿಸಾದ ಪಠಣ, ಹಾಗೆಯೇ ಹನುಮಂತನ ತಾರಕ ಮತ್ತು ಮಾರಕ ನಾಮಜಪವನ್ನು ಮಾಡಿದಾಗ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು. ಅದನ್ನು ಮುಂದೆ ನೀಡಲಾಗಿದೆ.

೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿ : ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯ ಸುತ್ತಲೂ ಕೆಟ್ಟ ಶಕ್ತಿಗಳ ತೊಂದರೆಯಿಂದ ತೊಂದರೆದಾಯಕ ಶಕ್ತಿಯ ಆವರಣವೂ ಇತ್ತು. ಶರೀರದಲ್ಲಿನ ತೊಂದರೆದಾಯಕ ಶಕ್ತಿಯ ಸ್ಥಾನದಲ್ಲಿ ತೊಂದರೆದಾಯಕ ಶಕ್ತಿಯನ್ನು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯಿಂದ ದರ್ಶಿಸಲಾಗುತ್ತದೆ ಮತ್ತು ಶರೀರದ ಸುತ್ತಲೂ ತೊಂದರೆದಾಯಕ ಶಕ್ತಿಯ ಆವರಣವನ್ನು ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯಿಂದ ದರ್ಶಿಸಲಾಗುತ್ತದೆ. ಶ್ರೀ ಹನುಮಾನ ಚಾಲಿಸಾದ ಪಠಣ, ಹಾಗೆಯೇ ಶ್ರೀ ಹನುಮಂತನ ನಾಮಜಪವನ್ನು ಮಾಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯ ಶರೀರದಲ್ಲಿನ ತೊಂದರೆದಾಯಕ ಶಕ್ತಿಯ ಸ್ಥಾನದಲ್ಲಿನ ನಕಾರಾತ್ಮಕ ಊರ್ಜೆ (‘ಅಲ್ಟ್ರಾವೈಲೆಟ್’ ಊರ್ಜೆ) ಮತ್ತು ಸಾಧಕಿಯ ಸುತ್ತಲಿನ ನಕಾರಾತ್ಮಕ ಊರ್ಜೆ (‘ಇನ್ಫ್ರಾರೆಡ್’ ಊರ್ಜೆ) ಯು ಬಹಳ ಪ್ರಮಾಣದಲ್ಲಿ ಕಡಿಮೆಯಾಯಿತು. ಅಥವಾ ಇಲ್ಲದಂತಾಯಿತು, ಹಾಗೆಯೇ ಅವಳಲ್ಲಿ ಸಕಾರಾತ್ಮಕ ಊರ್ಜೆಯು ನಿರ್ಮಾಣವಾಯಿತು. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು, ಇದು ಸಹ ವಿಶೇಷವಾಗಿದೆ.

೨. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ : ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನ ಸುತ್ತಲೂ ನಕಾರಾತ್ಮಕ ಊರ್ಜೆ ಇರಲಿಲ್ಲ. ಶ್ರೀ ಹನುಮಾನ ಚಾಲಿಸಾ ಪಠಣ, ಹಾಗೆಯೇ ಹನುಮಂತನ ನಾಮಜಪವನ್ನು ಮಾಡಿದ ನಂತರ ಅವನ ಸಕಾರಾತ್ಮಕ ಊರ್ಜೆಯ ಪ್ರಭಾವಲಯದಲ್ಲಿ ಹೆಚ್ಚಳವಾಯಿತು.

ಈ ಎಲ್ಲ ಪರಿಣಾಮಗಳು ಶ್ರೀ ಹನುಮಾನ ಚಾಲಿಸಾದ ಪಠಣ, ಹಾಗೆಯೇ ಶ್ರೀ ಹನುಮಂತನ ನಾಮಜಪ ಇವುಗಳಲ್ಲಿನ ಸಕಾರಾತ್ಮಕ ಊರ್ಜೆಗಳಿಂದಾಯಿತು. ಸಕಾರಾತ್ಮಕ ಊರ್ಜೆಯಿಂದ ಯಾರಾದರೊಬ್ಬರ ಸುತ್ತಲೂ ಇರುವ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗಲು ಸುಲಭವಾಗುತ್ತದೆ; ಆದರೆ ಒಬ್ಬನಲ್ಲಿನ ತೊಂದರೆದಾಯಕ ಶಕ್ತಿಯ ಸ್ಥಾನದಲ್ಲಿನ ತೊಂದರೆದಾಯಕ ಶಕ್ತಿ ದೂರವಾಗಲು ಅತಿಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯು ಆವಶ್ಯಕವಾಗಿರುತ್ತದೆ. ಶ್ರೀ ಹನುಮಾನ ಚಾಲಿಸಾದ ಕೇವಲ ೧೫ ನಿಮಿಷಗಳ ಪಠಣದಿಂದ, ಹಾಗೆಯೇ ಹನುಮಂತನ ಕೇವಲ ೧೫ ನಿಮಿಷಗಳ ನಾಮಜಪದಿಂದ ಇವೆರಡೂ ಸಾಧ್ಯವಾಯಿತು.

ಇಲ್ಲಿ ವಿಶೇಷವಾಗಿ ಗಮನದಲ್ಲಿಡಬೇಕಾದ ಅಂಶವೆಂದರೆ ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರ ಮೇಲೆ ಶ್ರೀ ಹನುಮಾನ ಚಾಲಿಸಾಕ್ಕಿಂತ ಹನುಮಂತನ ನಾಮಜಪದಿಂದ  ಹೆಚ್ಚು ಪ್ರಮಾಣದಲ್ಲಿ ಪರಿಣಾಮವಾಯಿತು. ಅದರಲ್ಲಿಯೂ ಹನುಮಂತನ ತಾರಕ ಸ್ವರೂಪದ ನಾಮಜಪಕ್ಕಿಂತ ಮಾರಕ ಸ್ವರೂಪದ ನಾಮಜಪದಿಂದ ಅತ್ಯಧಿಕ ಪರಿಣಾಮವಾಯಿತು. ಇದಕ್ಕೆ ‘ಹನುಮಂತನ ತಾರಕ ಸ್ವರೂಪದ ನಾಮಜಪಕ್ಕಿಂತ ಮಾರಕ ಸ್ವರೂಪದ ನಾಮಜಪದಲ್ಲಿ ಹೆಚ್ಚು ಶಕ್ತಿ ಇರುತ್ತದೆ’,  ಎಂಬುದೇ ಕಾರಣವಾಗಿದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೬.೪.೨೦೧೯)

ವಿ-ಅಂಚೆ : [email protected]

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.