೧. ಜಾತ್ಯತೀತರು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?
ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾಜಪದ ಗೆಲುವಿನ ಸಂಭ್ರಮವನ್ನು ಆಚರಿಸುವ ರಾಜ್ಯದ ಕಠಘರಹಿ ಗ್ರಾಮದ ಬಾಬರ್ ಎಂಬ ಮುಸಲ್ಮಾನ ಯುವಕನಿಗೆ ತಮ್ಮವರೇ ಧರ್ಮಬಾಂಧವರು ಥಳಿಸಿದ್ದಾರೆ. ಅದರಲ್ಲಿ ಆತ ಮೃತಪಟ್ಟನು.
೨. ಭಾರತದಲ್ಲಿ ಇದು ಯಾವಾಗ ಸಂಭವಿಸುತ್ತದೆ ?
ಸೌದಿ ಅರೇಬಿಯಾ ಸರಕಾರವು ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಧ್ವನಿಯನ್ನು ಕಡಿಮೆ ಮಾಡಲು ಮತ್ತು ಕೇವಲ ‘ಅಜಾನ್’ (ನಮಾಜುಪಠಣ ಮಾಡಲು ಆಹ್ವಾನಿಸುವುದು) ಮತ್ತು ‘ಇಕಾಮತ್’ (ಎರಡನೇ ಬಾರಿ ನಮಾಜುಗಾಗಿ ಆಹ್ವಾನಿಸುವುದು) ಗೆ ಮಾತ್ರ ಬಳಸಬೇಕೆಂದು ಆದೇಶಿಸಿದೆ.
೩. ಹಲಾಲ್ ಮಾಂಸದ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಅಗತ್ಯ !
ಹಲಾಲ್ ಮಾಂಸವು ಒಂದು ‘ಆರ್ಥಿಕ ಜಿಹಾದ್’ ಆಗಿದೆ. ‘ಹಲಾಲ್’ ಮಾಂಸವನ್ನು ಮಾತ್ರ ಬಳಸಬೇಕು ಎಂದು ಅವರು (ಮುಸಲ್ಮಾನರು) ಭಾವಿಸಿದಾಗ, ‘ಅದನ್ನು ಬಳಸಬೇಡಿ’ ಎಂದು ಹೇಳುವುದರಲ್ಲಿ ತಪ್ಪೇನಿದೆ? ಎಂದು ಭಾಜಪದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿಯವರು ಪ್ರಶ್ನಿಸಿದ್ದಾರೆ.
೪. ಕ್ರೈಸ್ತ ಮಿಶನರಿಗಳ ನಿಜಸ್ವರೂಪವನ್ನು ತಿಳಿಯಿರಿ !
ಕರ್ನಾಟಕದ ಈರಣ್ಣ ನಾಗೂರ್ ಅವರು ತಮ್ಮ ಮಗನ ಚಿಕಿತ್ಸೆಗಾಗಿ ತಮಿಳುನಾಡಿನ ವೆಲ್ಲೂರಿನ ಕ್ರೈಸ್ತ ಮಿಶನರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಮಾಹಿತಿ ಕೇಳಿದಾಗ, ಅಲ್ಲಿ ಅವರ ಮಗನ ಉಚಿತ ಚಿಕಿತ್ಸೆಗಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಹೇಳಲಾಯಿತು.
೫. ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವಾಗಿಸಲು ಪ್ರಯತ್ನಿಸಬೇಕು !
ಕೆಲವು ದೇಶಗಳು ತಮ್ಮನ್ನು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಿ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಇರುವಾಗ ನೇಪಾಳ ಸಹ ಪ್ರಜಾಪ್ರಭುತ್ವ ಪ್ರಧಾನ ‘ಹಿಂದೂ ರಾಷ್ಟ್ರ ಎಂದು ಘೋಷಿಸಲು ಏಕೆ ಸಾಧ್ಯವಿಲ್ಲ ? ಎಂದು ನೇಪಾಳದ ಪ್ರವಾಸೋದ್ಯಮ ಸಚಿವ ಪ್ರೇಮ ಅಲೆಯುವರು ಪ್ರಶ್ನಿಸಿದ್ದಾರೆ.
೬. ಪಾಕಿಸ್ತಾನವನ್ನು ನಾಶ ಮಾಡುವುದೇ ಭಯೋತ್ಪಾದನೆ ನಾಶಕ್ಕಿರುವ ಉಪಾಯವಾಗಿದೆ !
ರಾಷ್ಟ್ರೀಯ ತನಿಖಾ ದಳದ ಮುಂಬೈ ಶಾಖೆಗೆ ಬಂದಿರುವ ಒಂದು ‘ಈ-ಮೇಲ್ನಲ್ಲಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
೭. ಭಾರತದಲ್ಲಿ ‘ದ ಕಾಶ್ಮೀರಿ ಫೈಲ್ಸ್’ ಚಲನಚಿತ್ರದಿಂದ ಕೋಮುದ್ವೇಷ ಹಬ್ಬುತ್ತದೆ ಎನ್ನುವ ಢೋಂಗಿ ಜಾತ್ಯತೀತರಿಗೆ ಏನು ಹೇಳಲಿಕ್ಕಿದೆ ?
ಈಗ ಸಂಯುಕ್ತ ಅರಬ್ ಅಮೀರತ್ ಈ ಇಸ್ಲಾಮಿ ದೇಶದಲ್ಲಿ ಏಪ್ರಿಲ್ ೭ ರಿಂದ ‘ದ ಕಶ್ಮೀರಿ ಫೈಲ್ಸ್ ಈ ಚಲನಚಿತ್ರವನ್ನು ಯಾವುದೇ ದೃಶ್ಯ ತೆಗೆಯದೆ ಪ್ರದರ್ಶಿಸಲಾಗುವುದು. ಇದರ ಬಗ್ಗೆ ಈ ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿಯವರು ಮಾಹಿತಿ ನೀಡಿದ್ದಾರೆ.