ಜಿಹಾದಿ ಭಯೋತ್ಪಾದನೆ ತೋರಿಸಲಾಗಿದೆಯೆಂದು ದಕ್ಷಿಣ ಭಾರತದ ನಟ ವಿಜಯ ಇವರ ಚಲನಚಿತ್ರದ ಮೇಲೆ ಕುವೈತ್‍ನಲ್ಲಿ ನಿಷೇಧ

* ಜಿಹಾದಿ ಭಯೋತ್ಪಾದನೆಯ ನಿಜ ಸ್ವರೂಪ ಪ್ರಪಂಚದ ಎದುರು ಬಂದ ನಂತರ ಇಸ್ಲಾಮಿ ದೇಶಗಳಿಗೆ ಹೊಟ್ಟೆ ಉರಿ ಏಕೆ ಬರುತ್ತೆ ? ನೈಜಸ್ಥಿತಿ ತೋರಿಸಿದ ಕಾರಣ ಇಂತಹ ಚಲನಚಿತ್ರಗಳ ಮೇಲೆ ಅರಬ್ ದೇಶಗಳು ಎಷ್ಟೇ ನಿಷೇಧ ಹೇರಿದರೂ ಪ್ರಪಂಚಕ್ಕೆ ಸತ್ಯ ಏನು ಎಂಬುವುದು ತಿಳಿದಿದೆ ! – ಸಂಪಾದಕರು

ಕುವೈತ್ ಸಿಟಿ (ಕುವೈತ್) – ದಕ್ಷಿಣ ಭಾರತದ ಖ್ಯಾತ ನಟ ವಿಜಯ ಇವರ `ಬೀಸ್ಟ್’ (Beast) ಚಲನಚಿತ್ರ ಪ್ರದರ್ಶನದ ಮೇಲೆ ಕುವೈತ್ ನಿಷೇಧ ಹೇರಿದೆ. ಈ ಚಲನಚಿತ್ರದಲ್ಲಿ ಜಿಹಾದಿ ಭಯೋತ್ಪಾದನೆ ತೋರಿಸಲಾಗಿದ್ದರಿಂದ ಈ ನಿಷೇಧವನ್ನು ಹೇರಲಾಗಿದೆ. ಇದರಲ್ಲಿ ಪಾಕಿಸ್ತಾನ ಮತ್ತು ಭಯೋತ್ಪಾದನೆ ಇವರ ಸಂಬಂಧ ಹೊಂದಿರುವುದು ತೋರಿಸಲಾಗಿದೆ. ಯಾವ ಚಲನಚಿತ್ರಗಳಲ್ಲಿ ಅರಬ್ ಮತ್ತು ಇತರ ಇಸ್ಲಾಮಿ ದೇಶಗಳನ್ನು ಜಿಹಾದಿ ಭಯೋತ್ಪಾದನೆಯ ಸ್ಥಳಗಳೆಂದು ತೋರಿಸಲಾಗುತ್ತದೆ, ಆ ಚಲನಚಿತ್ರಗಳ ಮೇಲೆ ಈ ದೇಶಗಳಲ್ಲಿ ನಿಷೇಧ ಹೇರಲಾಗುತ್ತದೆ. ಕುವೈತ್‍ನಲ್ಲಿ ದೊಡ್ಡ ಪ್ರಮಾಣದಲ್ಲಿ ದಕ್ಷಿಣ ಭಾರತದ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ಮೊದಲು ದಿಕಲೆರ ಸಲ್ಮಾನ್ ಇವರ `ಕುರೂಪ’ ಮತ್ತು ವಿಷ್ಣು ವಿಶಾಲ್ ಇವರ `ಎಫ್.ಐ.ಆರ್’ ಈ ಚಲನಚಿತ್ರವನ್ನೂ ಸಹ ಕುವೈತ್‍ನಲ್ಲಿ ನಿಷೇಧಿಸಲಾಗಿತ್ತು.