ಪ್ರೇಮಭಾವ, ಬುದ್ಧಿವಂತಿಕೆ, ಸ್ವಯಂಶಿಸ್ತು ಮತ್ತು ಸಾಧನೆಯ ತೀವ್ರ ತಳಮಳವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ದೈವೀ ಬಾಲಕಿ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ದೈವಿ ಬಾಲಕರ ಪಾಲಕರ ವೈಶಿಷ್ಟ್ಯಗಳು !

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ಸಾಧಕರು ‘ಕುಟುಂಬದವರು ಏನು ಹೇಳಬಹುದು ?’ ಎಂಬ ವಿಚಾರದಿಂದ ಅವರ ಮಕ್ಕಳಿಗೆ ಸಾಧನೆ ಮಾಡಲು ವಿರೋಧಿಸುತ್ತಾರೆ; ಆದರೆ ‘ಇವರೆಲ್ಲ ಕೇವಲ ಈ ಜನ್ಮದ ಕುಟುಂಬದವರಾಗಿದ್ದಾರೆ’, ಎಂಬುದನ್ನು ಅವರು ಗಮನಿಸುವುದಿಲ್ಲ.  ಪಾಲಕರು ‘ಜನ್ಮಜನ್ಮಾಂತರ ಸಂಬಂಧವಿರುವ ದೇವರಿಗೆ ಏನು ಅಪೇಕ್ಷಿತವಿದೆ ?’, ಎಂಬುದರ ಬಗ್ಗೆ ಮೊದಲು ವಿಚಾರ ಮಾಡಬೇಕು ಮತ್ತು ಮಕ್ಕಳಿಗೆ ಸಾಧನೆ ಮಾಡಲು ಎಲ್ಲ ರೀತಿಯಿಂದ ಸಹಾಯ ಮಾಡಬೇಕು. ಇದರಿಂದ ಅವರ ಸಾಧನೆಯೂ ಆಗುವುದು.

– ಪರಾತ್ಪರ ಗುರು ಡಾ. ಆಠವಲೆ (೧೬.೧೧.೨೦೨೧)

‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರ ಸತ್ಸಂಗದಲ್ಲಿ ಕೆಲವು ದೈವೀ ಬಾಲಕರು ಉಪಸ್ಥಿತರಿದ್ದರು. ಆ ಸತ್ಸಂಗದಲ್ಲಿನ ಉಪಸ್ಥಿತ ಸಾಧಕರು ಅವರ ಸಂದೇಹಗಳನ್ನು, ಹಾಗೆಯೇ ಅವರು ಮಾಡುತ್ತಿರುವ ಸಾಧನೆಯ ಪ್ರಯತ್ನ ಮತ್ತು ಅವರಿಗೆ ಬಂದ ಅನುಭೂತಿಗಳನ್ನು ಗುರುದೇವರಿಗೆ (ಪರಾತ್ಪರ ಗುರು ಡಾ. ಆಠವಲೆಯವರಿಗೆ) ಹೇಳುತ್ತಿದ್ದರು. ಆಗ ಗುರುದೇವರು ಆ ದೈವೀ ಬಾಲಕರಿಗೆ, “ಇದನ್ನು ಕೇಳಿ ನಿಮಗೆ ಏನು ಅನಿಸುತ್ತದೆ ?” ಎಂದು ಕೇಳುತ್ತಿದ್ದರು. ಆಗ ದೈವೀ ಬಾಲಕರು ನೀಡಿದ ಉತ್ತರಗಳನ್ನು ಕೇಳಿ ನನಗೆ ಅವರಲ್ಲಿ ಅರಿವಾದ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇನೆ.

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ಉತ್ತಮ ಗ್ರಹಣಕ್ಷಮತೆ

ಈ ದೈವೀ ಬಾಲಕರ ವಯಸ್ಸನ್ನು ನೋಡಿದರೆ ಅವರಲ್ಲಿ ತಿಳಿದುಕೊಳ್ಳುವ ಕ್ಷಮತೆ ಬಹಳ ಹೆಚ್ಚಿದೆ. ಸತ್ಸಂಗದಲ್ಲಿ ನಡೆಯುತ್ತಿರುವ ವಿವಿಧ ವಿಷಯಗಳು ಅವರಿಗೆ ಸಹಜವಾಗಿ ತಿಳಿಯುತ್ತವೆ. ಅವುಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರು ಸಹಜತೆಯಿಂದ ಉತ್ತರಗಳನ್ನು ಕೊಡುತ್ತಾರೆ.

೨. ದೈವೀ ಬಾಲಕರಲ್ಲಿ ಬುದ್ಧಿಯ ಅಡಚಣೆ ಅತ್ಯಂತ ಕಡಿಮೆ ಇದೆ.

೩. ದೈವೀ ಬಾಲಕರಲ್ಲಿ ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಕ್ಷಮತೆ ಬಹಳ ಹೆಚ್ಚಿದೆ !

೩ ಅ. ಸತ್ಸಂಗದಲ್ಲಿ ಸಾಧಕರು ಮಾತನಾಡುತ್ತಿರುವಾಗ ‘ಸೂಕ್ಷ್ಮದಿಂದ ಏನು ಅರಿವಾಗುತ್ತದೆ ?’, ಎಂಬುದರ ಅಧ್ಯಯನವನ್ನು ಮಾಡುವ ದೈವೀ ಬಾಲಕರು ! : ಸತ್ಸಂಗದಲ್ಲಿನ ಉಪಸ್ಥಿತ ದೈವೀ ಬಾಲಕರು ಕೇವಲ ‘ಸಾಧಕರು ಏನು ಹೇಳುತ್ತಿದ್ದಾರೆ ?’, ಅಷ್ಟೇ ಹೇಳದೇ ಆ ಸಾಧಕರು ಮಾತನಾಡುತ್ತಿರುವಾಗ ‘ತಮಗೆ ಯಾವ ಸೂಕ್ಷ್ಮಗಂಧ ಬಂದಿತು ? ಮನಸ್ಸಿನ ಸ್ಥಿತಿ ಹೇಗಿತ್ತು ? ಸಾಧಕರು ಮಾತನಾಡುತ್ತಿರುವಾಗ ವಾತಾವರಣದಲ್ಲಿ ಯಾವ ಸ್ಪಂದನಗಳು ಹರಡುತ್ತಿದ್ದವು, ಉದಾ. ಭಾವ, ಚೈತನ್ಯ ಇತ್ಯಾದಿ. ಆ ಸಾಧಕರ ಮಾತುಗಳನ್ನು ಕೇಳುವಾಗ ಭಾವಜಾಗೃತಿ ಆಗುತ್ತಿತ್ತೇ ?’, ಈ ರೀತಿ ಹೇಳುತ್ತಿದ್ದರು. ಇದರಿಂದ ‘ಆ ದೈವೀ ಬಾಲಕರು ‘ಕೇವಲ ಕಿವಿಯಿಂದ ಕೇಳದೇ ಸೂಕ್ಷ್ಮ ಸ್ತರದಲ್ಲಿ ಏನು ಅರಿವಾಗುತ್ತದೆ ?’, ಎಂಬುದರ ಅಧ್ಯಯನವನ್ನೂ ಮಾಡುತ್ತಿದ್ದರು’, ಎಂಬುದು ನನ್ನ ಗಮನಕ್ಕೆ ಬಂದಿತು ಮತ್ತು ಇದು ನನಗೆ ತುಂಬಾ ವೈಶಿಷ್ಟ್ಯಪೂರ್ಣವೆನಿಸಿತು.

೩ ಆ. ದೇವರಿಗೆ ಕೇಳಿ ಮನಸ್ಸಿನಲ್ಲಿನ ಪ್ರಶ್ನೆಗಳ ಉತ್ತರಗಳನ್ನು ಪಡೆಯುವುದು : ದೈವೀ ಬಾಲಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಬರುತ್ತವೆ; ಆದರೆ ಅವರು ಆ ಪ್ರಶ್ನೆಗಳನ್ನು ಯಾರಿಗಾದರು ಕೇಳಲು ದಾರಿ ಕಾಯುವುದಿಲ್ಲ. ದೈವೀ ಬಾಲಕರು ಆ ಪ್ರಶ್ನೆಗಳನ್ನು ಭಗವಾನ ಶ್ರೀಕೃಷ್ಣ ಮತ್ತು ಪ.ಪೂ. ಗುರುದೇವರಿಗೆ (ಪರಾತ್ಪರ ಗುರು ಡಾ. ಆಠವಲೆ) ತಮ್ಮ ಮನಸ್ಸಿನಿಂದ ಮನಸ್ಸಿನಲ್ಲಿಯೇ ಕೇಳುತ್ತಾರೆ. ‘ಅವರಿಗೆ ಆ ಪ್ರಶ್ನೆಗಳ ಉತ್ತರಗಳು ಒಳಗಿನಿಂದಲೇ ಸಿಗುತ್ತವೆ ಮತ್ತು ಅವರಿಗೆ ದೊರಕುವ ಉತ್ತರಗಳು ಯೋಗ್ಯವೇ ಆಗಿರುತ್ತವೆ’, ಎಂಬುದು ನನ್ನ ಗಮನಕ್ಕೆ ಬಂದಿತು.

೪. ವ್ಯಷ್ಟಿ ಸಾಧನೆಯ ಗಾಂಭೀರ್ಯ

ಒಂದು ದಿನ ದೇವರ ಕೃಪೆಯಿಂದ ನನಗೆ ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೧, ೧೪ ವರ್ಷ) ಇವಳು ತೆಗೆದುಕೊಳ್ಳುತ್ತಿರುವ ಬಾಲಸಾಧಕರ ಪ್ರತಿದಿನದ ಸತ್ಸಂಗದಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿತು. ಆಗ ‘ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ದೈವೀ ಬಾಲಕರು ಪ್ರತಿದಿನ ಸಾಧನೆಯ ಧ್ಯೇಯವನ್ನಿಟ್ಟು, ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ ಮತ್ತು ಆ ಧ್ಯೇಯಕ್ಕನುಸಾರ ‘ಎಷ್ಟು ಪ್ರಯತ್ನಗಳು ಸಾಧ್ಯವಾದವು ಅಥವಾ ಯಾವ ಪ್ರಯತ್ನಗಳು ಸಾಧ್ಯವಾಗಲಿಲ್ಲ ?’, ಎಂಬುದನ್ನು ಅವರು ಮರುದಿನ ವರದಿಯ ಸಮಯದಲ್ಲಿ ಹೇಳುತ್ತಾರೆ ಮತ್ತು ‘ಪ್ರತಿಯೊಬ್ಬರೂ ಮಾಡಿದ ಪ್ರಯತ್ನಗಳು ವೈಶಿಷ್ಟ್ಯಪೂರ್ಣವಾಗಿರುತ್ತವೆ.’

೫. ಯಾವ ಸತ್ಸಂಗಕ್ಕೂ ಹೋಗದೇ ಸಹಜಸ್ಥಿತಿಯಲ್ಲಿ, ಭಾವದ ಮತ್ತು ಉಚ್ಚ ಆಧ್ಯಾತ್ಮಿಕ ಸ್ತರದಲ್ಲಿ ಮಾತನಾಡುವ ದೈವೀ ಬಾಲಕರು !

ದೈವೀ ಬಾಲಕರು ಈಗಾಗಲೇ ಸಾಧನೆಯಲ್ಲಿನ ಮುಂದಿನ ಹಂತದಲ್ಲಿದ್ದಾರೆ. ‘ಅವರು ಆಧ್ಯಾತ್ಮಿಕ ಸ್ತರದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ.’ ನಿಜ ಹೇಳುವುದಾದರೆ ಅವರು ವಯಸ್ಸಿನಲ್ಲಿ ತುಂಬಾ ಚಿಕ್ಕವರಾಗಿದ್ದಾರೆ. ‘ನಮ್ಮ ಎದುರಿಗೆ ಪ್ರತ್ಯಕ್ಷ ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ಇದ್ದಾರೆ, ಹಾಗೆಯೇ ಸತ್ಸಂಗದಲ್ಲಿ ಉಪಸ್ಥಿತ ಸಾಧಕರು ವಯಸ್ಸಿನಲ್ಲಿ ತುಂಬಾ ದೊಡ್ಡವರಿದ್ದಾರೆ’, ಎಂಬುದರ ಬಗ್ಗೆ ಅವರ ಮೇಲೆ ಯಾವುದೇ ಒತ್ತಡ ಬರುವುದಿಲ್ಲ. ಅವರ ನಡೆನುಡಿಗಳು (ಮಾತು, ನಡತೆ ಇತ್ಯಾದಿ) ಅತ್ಯಂತ ಸಹಜಸ್ಥಿತಿಯಲ್ಲಿರುತ್ತವೆ. ಅವರ ಮಾತುಗಳು ಉಚ್ಚ ಆಧ್ಯಾತ್ಮಿಕ ಸ್ತರದಲ್ಲಿರುತ್ತವೆ. ಈ ದೈವೀ ಬಾಲಕರು ಯಾವ ಸತ್ಸಂಗಕ್ಕೂ ಹೋಗಲಿಲ್ಲ. ಅವರ ವಯಸ್ಸು ೫ ರಿಂದ ೧೫ ವರ್ಷಗಳದ್ದಾಗಿದೆ, ಆದರೂ ಅವರು ‘ಸೂಕ್ಷ್ಮ-ಗಂಧ’, ‘ಕೆಟ್ಟ ಶಕ್ತಿ’, ‘ಒಳ್ಳೆಯ-ಕೆಟ್ಟ ಸ್ಪಂದನಗಳು’, ಹಾಗೆಯೇ ‘ಭಕ್ತಿ, ಆಪತತ್ತ್ವ, ತೇಜತತ್ತ್ವ, ಚೈತನ್ಯ, ಆನಂದ, ಶಾಂತಿ, ಶರಣಾಗತಿ’, ಇಂತಹ ಶಬ್ದಗಳನ್ನು ಸಹಜತೆಯಿಂದ ಬಳಸುತ್ತಾರೆ.

೬. ದೈವೀ ಬಾಲಕರ ಪ್ರತಿದಿನದ ಜೀವನವು ಅನುಭೂತಿಮಯವಾಗಿದೆ

ಅವರಿಗೆ ಸತ್ಸಂಗದಲ್ಲಿ ಮಾತನಾಡಲು ಹೇಳಲಾಗುತ್ತದೆ. ಆಗ ಅವರು ‘ಪ್ರತಿದಿನದ ಜೀವನದಲ್ಲಿನ ಪ್ರಸಂಗಗಳಲ್ಲಿ ಈಶ್ವರನು ಅವರಿಗೆ ಹೇಗೆ ಸಹಾಯ ಮಾಡಿದನು ? ಎಂತಹ ಅನುಭೂತಿಗಳು ಬಂದವು ?’, ಇಂತಹ ಎಲ್ಲ ರೀತಿಯ ಪ್ರಯತ್ನಗಳನ್ನು ಹೇಳುತ್ತಾರೆ. ಅವರ ಪ್ರತಿದಿನದ ಜೀವನವು ಅನುಭೂತಿಮಯವಾಗಿರುತ್ತದೆ. ‘ಅವರ ಭಾವಸ್ಥಿತಿಯಿಂದ ಅವರು ಸತತವಾಗಿ ಭಗವಂತನ ಅನುಭೂತಿಯನ್ನು ಪಡೆಯುತ್ತಿದ್ದಾರೆ’, ಎಂಬುದು ನನ್ನ ಗಮನಕ್ಕೆ ಬಂದಿತು.

೭. ದೈವೀ ಬಾಲಕರಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಜೀವನದಲ್ಲಿನ ಸಾಧನೆಯ ಮಹತ್ವ ತಿಳಿಯುವುದು

ದೈವೀ ಬಾಲಕರಲ್ಲಿನ ಬಹಳಷ್ಟು ಮಕ್ಕಳು ಶಾಲೆಗೆ ಹೋಗುತ್ತಿದ್ದರು; ಆದರೆ ಜೀವನದಲ್ಲಿನ ಸಾಧನೆಯ ಮಹತ್ವ ತಿಳಿದ ನಂತರ ಈಗ ಅವರು ಹೆಚ್ಚೆಚ್ಚು ಸಾಧನೆಯನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರಿಗೆ ಸಾಧನೆಯ ಗಾಂಭೀರ್ಯ ಮತ್ತು ಮಹತ್ವ ಗಮನಕ್ಕೆ ಬಂದಿದೆ. ‘ಅಧ್ಯಾತ್ಮದಲ್ಲಿ ಸರ್ವಸ್ವವನ್ನು ತ್ಯಾಗ ಮಾಡಬೇಕಾಗುತ್ತದೆ’, ಎಂಬುದು ಅವರಿಗೆ ತಿಳಿದಿದೆ.

೮. ದೈವೀ ಬಾಲಕರಲ್ಲಿನ ಕೃತಜ್ಞತಾಭಾವ

‘ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮಗೆ ಆಶ್ರಮದಲ್ಲಿರಲು ಸಿಕ್ಕಿದೆ. ಸಾಧನೆಯನ್ನು ಕಲಿಯಲು ಸಿಕ್ಕಿದೆ ಮತ್ತು ಪ.ಪೂ. ಗುರುದೇವರ ಮಾರ್ಗದರ್ಶನ ಸಿಗುತ್ತಿದೆ’, ಇದರ ಬಗ್ಗೆ ಆ ದೈವೀ ಬಾಲಕರಲ್ಲಿ ತುಂಬಾ ಕೃತಜ್ಞತೆ ಇದೆ.

೯. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ದೈವೀ ಬಾಲಕರಿಗೆ ಇರುವ ಉತ್ಕಟ ಭಾವ !

ದೈವೀ ಬಾಲಕರು ಮಾತನಾಡುತ್ತಿರುವಾಗ ‘ಅವರಲ್ಲಿ ಗುರುದೇವರ ಬಗ್ಗೆ ತುಂಬಾ ಉತ್ಕಟ ಭಾವವಿದೆ’, ಎಂದು ನನಗೆ ಅರಿವಾಯಿತು. ‘ಪ.ಪೂ. ಗುರುದೇವರು ಶ್ರೀವಿಷ್ಣುವಿನ ಅವತಾರರಾಗಿದ್ದು ಅವರು ಸಾಕ್ಷಾತ್ ಈಶ್ವರರೇ ಆಗಿದ್ದಾರೆ’, ಎಂಬ ದೃಢ ಶ್ರದ್ಧೆ ಅವರ ಮನಸ್ಸಿನಲ್ಲಿ ನಿರ್ಮಾಣವಾಗಿದೆ ಮತ್ತು ಅದೇ ಭಾವದಿಂದ ಅವರು ಪ.ಪೂ. ಗುರುದೇವರೊಂದಿಗೆ ಮಾತನಾಡುತ್ತಾರೆ.

೧೦. ದೈವೀ ಬಾಲಕರ ಸತ್ಸಂಗದಲ್ಲಿ ನನಗೆ ತುಂಬಾ ಸಮಯದವರೆಗೆ ಸೂಕ್ಷ್ಮಗಂಧದ ಅನುಭೂತಿ ಬಂದಿತು.

೧೧. ವೈಶಿಷ್ಟ್ಯಪೂರ್ಣ ದೈವೀ ಗುಣಗಳಿರುವುದರಿಂದ ದೈವೀ ಬಾಲಕರಿಗೆ ‘ಈಶ್ವರೀ ರಾಜ್ಯ’ವನ್ನು ನಡೆಸಲು ಸಾಧ್ಯವಾಗುವುದು

ಗುರುದೇವರು, ‘ಮುಂಬರುವ ‘ಈಶ್ವರೀ ರಾಜ್ಯ’ವನ್ನು ಈ ಮಕ್ಕಳು ನಡೆಸಲಿದ್ದಾರೆ.’ ಇದರ ಕಾರಣವೇನೆಂದರೆ ಈ ಬಾಲಕರಲ್ಲಿರುವ ಪ್ರೌಢಿಮೆ (ಪ್ರತಿಭೆ), ಅವರ ಈಶ್ವರನೊಂದಿಗಿನ ಅನುಸಂಧಾನ, ಜಿಜ್ಞಾಸುವೃತ್ತಿ, ಸಾಧನೆಯ ಗಾಂಭೀರ್ಯತೆ ಮತ್ತು ತಳಮಳ, ಆಜ್ಞಾಪಾಲನೆ ಮಾಡುವ ವೃತ್ತಿ ಇತ್ಯಾದಿ ದೈವೀ ಗುಣಗಳು ! ‘ಈ ದೈವೀ ಗುಣಗಳಿಂದ ಈ ಮಕ್ಕಳು ಮುಂದೆ ‘ಈಶ್ವರೀ ರಾಜ್ಯ’ವನ್ನು ನಡೆಸಲಿದ್ದಾರೆ’, ಎಂಬುದು ಸಹಜವಾಗಿ ನನ್ನ ಗಮನಕ್ಕೆ ಬಂದಿತು.

೧೨. ಇಲ್ಲಿಯ ವರೆಗೆ ಧರ್ಮಗ್ರಂಥಗಳಿಂದ ಭಕ್ತ ಪ್ರಹ್ಲಾದ, ಬಾಲಕ ಧ್ರುವ ಇತ್ಯಾದಿ ದೈವೀ ಬಾಲಕರ ಬಗ್ಗೆ ಗೊತ್ತಿತ್ತು; ಆದರೆ ಕೇವಲ ಪ.ಪೂ. ಗುರುದೇವರ ಕೃಪೆಯಿಂದ ಕಲಿಯುಗದಲ್ಲಿನ ದೈವೀ ಮತ್ತು ಸಂತ ಬಾಲಕರನ್ನು ಪ್ರತ್ಯಕ್ಷ ನೋಡುವ ಅವಕಾಶ ಸಿಗುವುದು

ನಮಗೆ ಇಲ್ಲಿಯವರೆಗೆ ಹಿಂದೂ ಧರ್ಮಗ್ರಂಥಗಳಿಂದ ಭಕ್ತ ಪ್ರಹ್ಲಾದ, ಬಾಲಕ ಧ್ರುವ ಮೊದಲಾದ ಕೆಲವು ದೈವೀ ಬಾಲಕರ ಬಗ್ಗೆ ಗೊತ್ತಿತ್ತು, ಆದರೆ ಈಗ ಸನಾತನದಲ್ಲಿ ಇಂತಹ ಅಸಂಖ್ಯಾತ ದೈವೀ ಬಾಲಕರಿದ್ದಾರೆ. ನಾವು ಅವರನ್ನು ನೋಡಬಹುದು ಮತ್ತು ಅವರೊಂದಿಗೆ ಮಾತನಾಡಬಹುದು. ಅವರಲ್ಲಿನ ಇಬ್ಬರು ಬಾಲಕರು ಪೂ. ಭಾರ್ಗವರಾಮ (ವಯಸ್ಸು ೪ ವರ್ಷ)  ಮತ್ತು ಪೂ. ವಾಮನ (ವಯಸ್ಸು ೩ ವರ್ಷ) ಇವರು ಜನ್ಮದಿಂದಲೇ ಸಂತರಾಗಿದ್ದಾರೆ. ಇದು ನಮಗಾಗಿ ಎಷ್ಟೊಂದು ಭಾಗ್ಯದ ವಿಷಯವಾಗಿದೆ ! ಈ ಘೋರ ಕಲಿಯುಗದಲ್ಲಿ ಇಂತಹ ದೈವೀ ಬಾಲಕರನ್ನು ನೋಡುವ ಭಾಗ್ಯವು ಕೇವಲ ಪರಾತ್ಪರ ಗುರುದೇವರ ಕೃಪೆಯಿಂದಲೇ ನಮಗೆ ಲಭಿಸಿದೆ. ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ.

ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿನ ಆಧುನಿಕ ವೈದ್ಯರಾದ ಭಿಕಾಜಿ ಭೊಸಲೆ (೭೦ ವರ್ಷ) ಇವರ ಬಗ್ಗೆ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) ಇವಳಿಗೆ ಅರಿವಾದ ಗುಣವೈಶಿಷ್ಟ್ಯಗಳು !

ಈ ಲೇಖನದಿಂದ ದೈವೀ ಬಾಲಕಿ ಕು. ಪ್ರಾರ್ಥನಾ ಪಾಠಕ ಇವಳ ‘ಇತರರನ್ನು ಅರಿತುಕೊಳ್ಳುವ’ ವೈಶಿಷ್ಟ್ಯವು ಗಮನಕ್ಕೆ ಬರುತ್ತದೆ.

ಕು. ಪ್ರಾರ್ಥನಾ ಮಹೇಶ ಪಾಠಕ
ಆಧುನಿಕ ವೈದ್ಯ(ಡಾ.) ಭಿಕಾಜಿ ಭೊಸಲೆ

೧. ಪ್ರೇಮಭಾವ

೧ ಅ. ಚಿಕ್ಕವರೊಂದಿಗೆ ಚಿಕ್ಕವರಂತೆ ನಡೆದುಕೊಳ್ಳುವುದು : ‘ಭೊಸಲೆಕಾಕಾ ಇವರು ನನ್ನ ಅಜ್ಜನ ವಯಸ್ಸಿನವರಾಗಿದ್ದಾರೆ, ಆದರೂ ಅವರು ನನ್ನೊಂದಿಗೆ ನನ್ನ ವಯಸ್ಸಿನವರಿದ್ದಂತೆ ಮಾತನಾಡುತ್ತಾರೆ. ಅವರ ಮಾತು ಮತ್ತು ನನ್ನೊಂದಿಗೆ ನಡೆದುಕೊಳ್ಳುವುದನ್ನು ನೋಡಿ ‘ನನಗೆ ಅವರ ಜೊತೆಗೆ  ಸೇವೆಯನ್ನು ಮಾಡಲು ಯಾವಾಗ ಸಿಗುತ್ತದೆ ?, ಎಂದು ಅನಿಸುತ್ತದೆ.

೧ ಆ. ಪ್ರೀತಿಯಿಂದ ತಪ್ಪುಗಳನ್ನು ಹೇಳುವುದು : ಕಾಕಾ ಯಾವಾಗಲೂ ಪ್ರೀತಿಯಿಂದಲೇ ಮಾತನಾಡುತ್ತಾರೆ. ಅವರು ನನಗೆ ನನ್ನ ತಪ್ಪುಗಳನ್ನೂ ಪ್ರೀತಿಯಿಂದಲೇ ಹೇಳುತ್ತಾರೆ. ಆದುದರಿಂದ ನನಗೆ ಕೆಡುಕೆನಿಸುವುದಿಲ್ಲ, ಖೇದವೆನಿಸುತ್ತದೆ.

೨. ಸೇವೆಯಲ್ಲಿನ ಸಣ್ಣಪುಟ್ಟ ವಿಷಯಗಳನ್ನು ತಿಳಿಸಿ ಹೇಳುವುದು

ಅವರು ನನಗೆ ರಾಮನಾಥಿ ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ‘ಆರತಿಯ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸಿದರು. ನನ್ನಿಂದ ತಪ್ಪಾಗುತ್ತಿದ್ದರೆ, ಅವರು ನನಗೆ ತಕ್ಷಣ ಅರಿವು ಮಾಡಿಕೊಡುತ್ತಾರೆ.

೩. ಅಂತರ್ಮುಖತೆ

‘ಸಾಧಕರಿಂದ ಯಾವುದಾದರೊಂದು ತಪ್ಪಾಗಿದ್ದರೆ ಅಥವಾ ಸಾಧಕರು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಿದ್ದರೆ, ಕಾಕಾ ಕೂಡಲೇ ಅಂತರ್ಮುಖರಾಗಿ ‘ತಮ್ಮಿಂದ ಇಂತಹ ತಪ್ಪು ಆಗುವುದಿಲ್ಲವಲ್ಲ ?’ ಎಂದು ಚಿಂತನೆಯನ್ನು ಮಾಡುತ್ತಾರೆ.

– ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ), ಆಧ್ಯಾತ್ಮಿಕ ಮಟ್ಟ ಶೇ. ೬೭), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೦.೨೦೨೧)