ಇಂತಹ ಜನ್ಮಹಿಂದೂಗಳು ಧರ್ಮಕ್ಕೆ ಕಳಂಕ !

೧. ಇಂತಹ ರಾಜಕೀಯ ಪಕ್ಷಗಳು ರಾಷ್ಟ್ರಘಾತಕವಾಗಿವೆ !

ತೆಲಂಗಾಣದ ಬೋಧನ್ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಿದ್ದರಿಂದ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಎಮ್. ಐ.ಎಮ್.ನವರು ಹಿಂಸಾಚಾರ ನಡೆಸಿದರು. ಇದರಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು.

೨. ಬಂಗಾಲವನ್ನು ಮತ್ತೊಂದು ಕಾಶ್ಮೀರವಾಗದಂತೆ ತಡೆಯಿರಿ !

ಬಂಗಾಲದ ಬೀರಭೂಮ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕ ಭಾದು ಶೇಖ್ ಅವರ ಹತ್ಯೆಯ ನಂತರ, ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಇದರಲ್ಲಿ ಹತ್ತು ಜನರಿಗೆ ಸಜೀವ ದಹನ ಮಾಡಲಾಯಿತು.

೩. ಹಿಂದೂಗಳಿಗೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಪ್ರಮೇಯ ಏಕೆ ಬಂತು ?

ಹಿಜಾಬ್‌ಅನ್ನು ನಿಷೇಧಿಸುವ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಕರ್ನಾಟಕ ರಾಜ್ಯದಲ್ಲಿ ಮುಸಲ್ಮಾನರು ಬಂದ್ ಆಚರಿಸಿದರು. ಮುಸಲ್ಮಾನ ಅಂಗಡಿಯವರೂ ಇದರಲ್ಲಿ ಸಹಭಾಗಿಯಾಗಿದ್ದರು. ಇದರಿಂದಾಗಿ ರಾಜ್ಯದ ಕೆಲವು ದೇವಸ್ಥಾನಗಳು ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಿಂದೂಯೇತರರಿಗೆ ಅಂಗಡಿಗಳನ್ನು ಹಾಕುವ ಅನುಮತಿಯನ್ನು ನಿರಾಕರಿಸಿದೆ.

೪. ಇಂತಹ ಕಾನೂನನ್ನು ಇಡೀ ದೇಶದಲ್ಲಿ ತನ್ನಿ !

ಕರ್ನಾಟಕ ರಾಜ್ಯದಲ್ಲಿ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು ೨೦೦೨’ ರ ನಿಯಮ ೧೨ ರ ಪ್ರಕಾರ, ಹಿಂದೂಗಳ ಧಾರ್ಮಿಕ ಸ್ಥಳದ ಸಮೀಪವಿರುವ ಭೂಮಿಯನ್ನು ಹಿಂದೂಯೇತರರಿಗೆ ನೀಡಲಾಗುವುದಿಲ್ಲ.

೫. ಇಂತಹ ಜನ್ಮಹಿಂದೂಗಳು ಧರ್ಮಕ್ಕೆ ಕಳಂಕ !

‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ಟ್ಯಾಕ್ಸ್ ಫ್ರೀ ಮಾಡಲು ಆಗ್ರಹಿಸಿದಾಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ‘ಯೂಟ್ಯೂಬ್’ನಲ್ಲಿ ತೋರಿಸುವಂತೆ ಹೇಳಿದ್ದಾರೆ. ಈ ಚಲನಚಿತ್ರವು ಸತ್ಯ ಘಟನೆಗಳ ಮೇಲಿರದೇ ಅಸತ್ಯವನ್ನಾಧರಿಸಿದೆ ಎಂದು ಖೇದಕರ ಹೇಳಿಕೆ ನೀಡಿದ್ದಾರೆ.

೬. ಬಂಗಾಲದಲ್ಲಿ ಪ್ರಜಾಪ್ರಭುತ್ವ ಇದೆಯೇ ?

 ಬೀರಭೂಮ(ಬಂಗಾಳ)ದಲ್ಲಿ, ಪೊಲೀಸರು ೨೦೦ ಕ್ಕೂ ಹೆಚ್ಚು ನಾಡ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದ ಪಶ್ಚಿಮ ಬರ್ದ್ವಾನ್ ಜಿಲ್ಲೆಯ ಸಲಾನ್‌ಪುರದಲ್ಲಿರುವ ಶಸ್ತ್ರಾಸ್ತ್ರ ಕಾರ್ಖಾನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

೭. ಇಂತಹ ಘಟನೆಗಳು ಯಾವಾಗ ನಿಲ್ಲುತ್ತವೆ ?

ಕರ್ನಾಟಕ ರಾಜ್ಯದ ಚಿಂಚಣಿ ಗ್ರಾಮದ ಸರಕಾರಿ ಶಾಲೆಯಲ್ಲಿ ಶ್ರೀ ಸರಸ್ವತಿದೇವಿಯ ಮೂರ್ತಿ ಮತ್ತು ಹಾರೋಹಳ್ಳಿ ಗ್ರಾಮದ ಶಾಲೆಯಲ್ಲಿರುವ ಶ್ರೀ ಸರಸ್ವತಿದೇವಿ, ಮ. ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಮೂರ್ತಿಗಳನ್ನೂ ಧ್ವಂಸಗೊಳಿಸಲಾಗಿದೆ.