ಮೂರನೇಯ ಜಾಗತಿಕ ಮಹಾಯುದ್ಧದ ಭವಿಷ್ಯಕಥನ, ಮಹಾಯುದ್ಧದ ದುಷ್ಪರಿಣಾಮ ಮತ್ತು ಅದರಿಂದ ಬದುಕುಳಿಯಲು ಮಾಡುವ ಉಪಾಯ

ಪರಾತ್ಪರ ಗುರು ಡಾ. ಆಠವಲೆ

ಮೂರನೇಯ ಜಾಗತಿಕ ಮಹಾಯುದ್ಧದ ಹಂತಗಳು

ಮುಂದೆ ನೀಡಿದ ಕೋಷ್ಟಕದಲ್ಲಿ ಮೂರನೇಯ ಜಾಗತಿಕ ಮಹಾಯುದ್ಧದ ಆರಂಭದಿಂದ ಅದರ ಅಂತ್ಯದ ವರೆಗಿನ ಘಟನಾಕ್ರಮಗಳು ಮತ್ತು ಒಳ್ಳೆಯ ಶಕ್ತಿಗಳು ಕೆಟ್ಟ ಶಕ್ತಿಗಳ ಮೇಲೆ ಪಡೆದ ವಿಜಯ, ಅಂದರೆ ‘ಈಶ್ವರೀ ರಾಜ್ಯ’ದ ಸ್ಥಾಪನೆಯ ಕಾಲಾವಧಿಯನ್ನು ನೀಡಲಾಗಿದೆ.

೧. ಪ್ರಸ್ತಾವನೆ

ಕಳೆದ ಕೆಲವು ದಶಕಗಳಿಂದ ಇಡೀ ಜಗತ್ತು ‘ನೈಸರ್ಗಿಕ ಆಪತ್ತುಗಳು, ಭಯೋತ್ಪಾದನಾ ಕೃತ್ಯಗಳು, ಯುದ್ಧ ಮತ್ತು ರಾಜಕೀಯ ಉತ್ಕ್ರಾಂತಿ’ ಇಂತಹ ದುಷ್ಟಚಕ್ರಗಳಲ್ಲಿ ಸಿಲುಕಿಕೊಂಡಿದೆ. ಇವು ನಿಲ್ಲುವ ಲಕ್ಷಣಗಳು ಕಾಣುವುದಿಲ್ಲ. ಅಷ್ಟೇ ಅಲ್ಲದೇ, ಅವು ಕಡಿಮೆಯಾಗುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಡೀ ಜಗತ್ತು ಒಂದು ಅನಿಶ್ಚಿತ ಭವಿಷ್ಯದ ಕಡೆಗೆ ನಿಯಂತ್ರಣವಿಲ್ಲದೇ ಸೆಳೆಯಲ್ಪಡುವುದನ್ನು ನೋಡಿ ಎಷ್ಟೋ ಜನರ ಮನಸ್ಸಿನಲ್ಲಿ ಅಸಹಾಯಕತೆಯ ಭಾವನೆ ನಿರ್ಮಾಣವಾಗುತ್ತಿದೆ. ನಾಸ್ಟ್ರಡಾಮಸ್, ಎಡಗರ್ ಕೈಸಿರಂತಹ ದಾರ್ಶನಿಕರು ಜಗತ್ತಿನ ಭಯಂಕರ ವಿನಾಶದ ಭವಿಷ್ಯ ಕಥನವನ್ನು ಬರೆದಿಟ್ಟಿದ್ದಾರೆ. ‘ಜಗತ್ತನ್ನು ವಿನಾಶದ ಕೂಪಕ್ಕೆ ತಳ್ಳುವ ಘಟನೆಗಳ ಹಿಂದಿರುವ ಆಧ್ಯಾತ್ಮಿಕ ಕಾರಣಗಳು’ ಮತ್ತು ‘ಇಡೀ ಮನುಕುಲದ ಭವಿಷ್ಯ’ ಈ ಬಗ್ಗೆ ‘ಎಸ್.ಎಸ್.ಆರ್.ಎಫ್.’ ಸಂಸ್ಥೆ ಸಂಶೋಧನೆ ಮಾಡಿತು. ಈ ಸಂಶೋಧನೆಯು ಮುಖ್ಯವಾಗಿ ಮುಂದಿನ ಎರಡು ಅಂಶಗಳ ಮೇಲೆ ಆಧರಿಸಿದ್ದು ಈ ಸಂಶೋಧನೆಯಲ್ಲಿ ಗಮನಕ್ಕೆ ಬಂದ ಅಂಶಗಳನ್ನು ಲೇಖನದ ಸ್ವರೂಪದಲ್ಲಿ ಮಂಡಿಸಲು ಪ್ರಯತ್ನಿಸಿದ್ದೇವೆ.

ಅ. ಮೂರನೇಯ ಮಹಾಯುದ್ಧ ಮತ್ತು ನೈಸರ್ಗಿಕ ಆಪತ್ತುಗಳಲ್ಲಿ ಹೆಚ್ಚಳವಾಗುವುದು, ಇಂತಹ ಆಪತ್ತುಗಳನ್ನು ಜಾಗತಿಕ ಸ್ತರದಲ್ಲಿ ಘಟಿಸುವಂತೆ ಮಾಡುವ ಆಧ್ಯಾತ್ಮಿಕ ಶಕ್ತಿಗಳು

ಆ. ಈ ಘಟನೆಗಳ ಪ್ರಭಾವವನ್ನು ಕಡಿಮೆ ಮಾಡಲು ಅಥವಾ ಮೂರನೇಯ ಮಹಾಯುದ್ಧದ ಸಮಯದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಅಖಿಲ ಮನುಕುಲವು ಮಾಡಬೇಕಾದ ಉಪಾಯ

೨. ಮೂರನೇಯ ಜಾಗತಿಕ ಮಹಾಯುದ್ಧದ ಬಗ್ಗೆ ಮಾಡಲಾದ ಭವಿಷ್ಯಕಥನ ಮತ್ತು ಸೂಕ್ಷ್ಮದಲ್ಲಿನ ಯುದ್ಧ

ಶ್ರೀ. ಶಾನ್ ಕ್ಲಾರ್ಕ್

ಇಡೀ ವಿಶ್ವದಲ್ಲಿ ಸೂಕ್ಷ್ಮದಲ್ಲಿ ಒಂದು ಮಹಾಯುದ್ಧ ನಡೆದಿದೆ; ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಸೂಕ್ಷ್ಮದಲ್ಲಿನ ಯುದ್ಧವು ಒಳ್ಳೆಯ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ನಡುವಿನದ್ದಾಗಿದೆ. ಪ್ರಸ್ತುತ ಪೃಥ್ವಿಯಲ್ಲಿ ಘಟಿಸುತ್ತಿರುವ ಕೆಲವು ಘಟನೆಗಳು ಸೂಕ್ಷ್ಮ ಯುದ್ಧದ ದೃಶ್ಯ ಪರಿಣಾಮಗಳಾಗಿವೆ. ಈ ಸೂಕ್ಷ್ಮದಲ್ಲಿನ ಯುದ್ಧದ ಪರಿಣಾಮ ಭವಿಷ್ಯದಲ್ಲಿ ಜಗತ್ತಿನ ವಿವಿಧ ಸ್ತರಗಳಲ್ಲಿ ಅತ್ಯಂತ ವೇಗದಿಂದ ಆಗುವುದು. ಅವುಗಳ ಬೀಜಗಳನ್ನು ಈಗಾಗಲೇ ಬೀಜ ಸ್ವರೂಪದಲ್ಲಿ ಬಿತ್ತಲಾಗಿದೆ. ಈ ಪರಿಣಾಮಗಳು ೨ ಸ್ವರೂಪದ್ದಾಗಿವೆ.

ಅ. ಇಡೀ ಜಗತ್ತಿನ ಸಾತ್ತ್ವಿಕತೆ ಕಡಿಮೆಯಾಗುವುದು

ಆ. ಅಖಿಲ ಮನುಕುಲದ ಮೇಲೆ ಕೆಟ್ಟ ಶಕ್ತಿಗಳ ಪ್ರಭಾವ ಹೆಚ್ಚಾಗುವುದು : ೧೯೯೩ ನೇ ಇಸವಿಯಿಂದ ಸೂಕ್ಷ್ಮದಲ್ಲಿನ ಬಲಿಷ್ಠ ಕೆಟ್ಟ ಶಕ್ತಿಗಳು ಸಮಾಜದ ಮೇಲೆ ನಿಯಂತ್ರಣವನ್ನು ಪಡೆದು ಅಧರ್ಮಾಚರಣೆಗೆ ನೀರುಗೊಬ್ಬರವನ್ನು ಹಾಕಿದವು ಮತ್ತು ಅಲ್ಲಿಂದಲೇ ಅಧೋಗತಿಯು ಆರಂಭವಾಯಿತು. ಅದಕ್ಕೂ ಮೊದಲು ಸಮಾಜದ ರಜ-ತಮ ಹೆಚ್ಚಾದುದರಿಂದ ವಿವಿಧ ಮಾಧ್ಯಮಗಳಿಂದ ಅಧೋಗತಿ ಆರಂಭವಾಗಿತ್ತು. ಇದರ ಪ್ರಮುಖ ಕಾರಣಗಳೆಂದರೆ ‘ಮನುಷ್ಯನ ಮಾಯೆಯ ಕಡೆಗಿರುವ ಒಲವು ಮತ್ತು ಸಾಧನೆಯಿಂದ ದೂರವಿರುವುದರಿಂದ ನಿರ್ಮಾಣವಾದ ಧರ್ಮಾಚರಣೆಯ ಅಭಾವ.’ ಏಳನೇಯ ಪಾತಾಳದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳ ಪ್ರಭಾವದಿಂದ ಸಮಾಜದ ಅಧೋಗತಿ ವೇಗವಾಗಿ ಮತ್ತು ತೀವ್ರವಾಗಿ ಆಗುತ್ತಿದೆ. ಹೇಗೆ ಸಮಾಜವು ಹೆಚ್ಚೆಚ್ಚು ಅಧರ್ಮಿ ಆಯಿತೋ, ಹಾಗೆ ಕೆಟ್ಟ ಶಕ್ತಿಗಳು ಸಮಾಜದ ಮೇಲೆ ಹೆಚ್ಚೆಚ್ಚು ನಿಯಂತ್ರಣವನ್ನು ಪಡೆದವು ಮತ್ತು ಅದರ ಪರಿಣಾಮಸ್ವರೂಪ ವಾತಾವರಣದಲ್ಲಿನ ರಜ-ತಮ ಬಹಳ ಹೆಚ್ಚಾಗುತ್ತಿದೆ. ಈ ರಜ-ತಮದ ಹೆಚ್ಚಳದಿಂದಾಗಿ ವಾತಾವರಣ ಮತ್ತು ಸಮಾಜ ಅಸ್ಥಿರವಾಗುತ್ತಿದೆ. ‘ಇವುಗಳ ಪರಿಣಾಮವು ಭೀಕರ ನೈಸರ್ಗಿಕ ಆಪತ್ತುಗಳು ಮತ್ತು ಮೂರನೇಯ ಮಹಾಯುದ್ಧಕ್ಕೆ ಕಾರಣವಾಗುವವು’, ಎಂಬುದರಲ್ಲಿ ಸಂದೇಹವೇ ಇಲ್ಲ.

೩. ಮೂರನೇಯ ಜಾಗತಿಕ ಮಹಾಯುದ್ಧದ ತೀವ್ರತೆ

ಪೃಥ್ವಿಯ ಮೇಲೆ  ಸ್ಥೂಲದಲ್ಲಿ ನಡೆಯುವ ಯುದ್ಧಗಳು ಸೂಕ್ಷ್ಮದಲ್ಲಿ ಘಟಿಸುವ ಘಟನೆಗಳ ಪರಿಣಾಮವಾಗಿರುತ್ತವೆ. ಸೂಕ್ಷ್ಮದಲ್ಲಿನ ಯುದ್ಧಕ್ಕೆ ಕಾರಣವಾಗಿರುವ ಮೂಲ ಕಾರಣಗಳು ಕೇವಲ ಸೂಕ್ಷ್ಮವನ್ನು ಅರಿತುಕೊಳ್ಳುವ ಕ್ಷಮತೆಯಿರುವ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಜೀವಗಳಿಗೆ ಮಾತ್ರ ಗೊತ್ತಿರುತ್ತವೆ. ವಾಸ್ತವದಲ್ಲಿ ಈ ಸೂಕ್ಷ್ಮ ಯುದ್ಧದ ಸ್ವಲ್ಪ ಅಂಶವನ್ನು ಮಾತ್ರ ಭೂಮಿಯ ಮೇಲೆ ಪ್ರತ್ಯಕ್ಷ ಅನುಭವಿಸಬಹುದು; ಆದರೆ ಈ ಸ್ವಲ್ಪ ಅಂಶವೂ ಜಗತ್ತಿನ ದೃಷ್ಟಿಯಿಂದ ಅತ್ಯಂತ ವಿನಾಶಕಾರಿ ಮತ್ತು ಪ್ರಚಂಡ ಹಾನಿಯನ್ನು ಮಾಡುವುದಾಗಿರುತ್ತದೆ. ಈ ಕಾಲವು ಸಂಪೂರ್ಣ ಮನುಕುಲಕ್ಕೆ ಹೆಚ್ಚುತ್ತಾ ಹೋಗುವ ನೈಸರ್ಗಿಕ ಆಪತ್ತುಗಳು ಮತ್ತು ಮೂರನೇಯ ಮಹಾಯುದ್ಧದ ಸ್ವರೂಪದಲ್ಲಿ ಭೋಗಿಸಬೇಕಾಗುವುದು. ಮೂರನೇಯ ಮಹಾಯುದ್ಧದಲ್ಲಿ ಬಳಸ ಲಾಗುವ ಅಣು ಶಸ್ತ್ರಗಳಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಲಿದೆ. ಅಧರ್ಮಾಚರಣೆಯಲ್ಲಿ ಹೆಚ್ಚಳವಾದುದರಿಂದ ಪೃಥ್ವಿಯ ಸಾತ್ತ್ವಿಕತೆಯು ಲಯವಾಗಿದೆ; ಇದರ ಪರಿಣಾಮದಿಂದ ನೆರೆ, ಭೂಕಂಪ ಮತ್ತು ಜ್ವಾಲಾಮುಖಿಗಳಂತಹ ನೈಸರ್ಗಿಕ ವಿಕೋಪಗಳಲ್ಲಿ ಹೆಚ್ಚಳವಾಗುತ್ತಿದೆ. ಸಪ್ತಪಾತಾಳಗಳಲ್ಲಿನ ದೊಡ್ಡ ಕೆಟ್ಟ ಶಕ್ತಿಗಳ ನಿಯಂತ್ರಣದಲ್ಲಿರುವ ಜನರು ಮತ್ತು ಅವರಿಂದ ಘಟಿಸುವ ಪ್ರಸಂಗಗಳು ಮೂರನೇಯ ಮಹಾಯುದ್ಧದ ಚಿತೆಯತ್ತ ದೂಡಲಿವೆ.

೩ ಅ. ಸ್ಥೂಲದಲ್ಲಿನ ಮತ್ತು ಸೂಕ್ಷ್ಮದಲ್ಲಿನ ಯುದ್ಧದ ತೀವ್ರತೆ : ಸ್ಥೂಲದಲ್ಲಿನ ಮತ್ತು ಸೂಕ್ಷ್ಮದಲ್ಲಿನ ಘಟಕಗಳ ಆಧಾರದಲ್ಲಿ ಜಾಗತಿಕ ಮಹಾಯುದ್ಧದ ತೀವ್ರತೆಯ ಬಗ್ಗೆ ಮಾಡಿದ ತುಲನಾತ್ಮಕ ಅಧ್ಯಯನವನ್ನು ಮುಂದೆ ನೀಡಲಾಗಿದೆ.

ಮೂರನೇಯ ಜಾಗತಿಕ ಮಹಾಯುದ್ಧದಲ್ಲಾಗುವ ಹಾನಿಯು ಮೊದಲನೇ ಮಹಾಯುದ್ಧದ ತುಲನೆಯಲ್ಲಿ ನಾಲ್ಕೂವರೆ ಪಟ್ಟು ಹೆಚ್ಚು ಮತ್ತು ಎರಡನೇಯ ಮಹಾಯುದ್ಧದ ತುಲನೆಯಲ್ಲಿ ಮೂರು ಪಟ್ಟು ಹೆಚ್ಚಿರುವುದು.

– (ಪರಾತ್ಪರ ಗುರು) ಡಾ. ಆಠವಲೆ

ಇದರಿಂದ ಸೂಕ್ಷ್ಮದಲ್ಲಿನ ಯುದ್ಧ ಮತ್ತು ಮೂರನೇಯ ಜಾಗತಿಕ ಮಹಾಯುದ್ಧ ಇವುಗಳ ಪರಸ್ಪರ ಸಂಬಂಧದ ಸ್ವಲ್ಪ ಕಲ್ಪನೆಯು ಬರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನ ಮೇಲೆ ಬಂದಿರುವ ದೊಡ್ಡ ಸಂಕಟಗಳು ಮತ್ತು ಭಯೋತ್ಪಾದಕರ ಆಕ್ರಮಣಗಳು ಈ ಸೂಕ್ಷ್ಮ ಯುದ್ಧಕ್ಕೆ ಸಂಬಂಧಿಸಿವೆ. ಪಾತಾಳದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳು, ಕೆಟ್ಟ ಮನೋವೃತ್ತಿ ಇರುವ ಜನರ ಮೇಲೆ ನಿಯಂತ್ರಣವನ್ನು ಪಡೆದು ಅವರಿಂದ ಕೆಟ್ಟ ಕೃತಿಗಳನ್ನು ಮಾಡಿಸಿಕೊಳ್ಳುತ್ತವೆ ಮತ್ತು ಸಮಾಜಕ್ಕೆ ಹಾನಿಯನ್ನು ಮಾಡುತ್ತವೆ.

– ಶ್ರೀ. ಶಾನ್ ಕ್ಲಾರ್ಕ್ (ಆಧ್ಯಾತ್ಮಿಕ ಮಟ್ಟ ಶೇ. ೬೪), ಸಂಪಾದಕರು,

೪. ಮೂರನೇಯ ಮಹಾಯುದ್ಧ ಮತ್ತು ಸೂಕ್ಷ್ಮದ ಯುದ್ಧ ಇವುಗಳಲ್ಲಿನ ಪ್ರಮುಖ ಹಂತಗಳು

೪ ಅ. ಮೂರನೇಯ ಜಾಗತಿಕ ಮಹಾಯುದ್ಧಕ್ಕೆ ಕಾರಣವಾಗುವ ಘಟಕಗಳು : ಮೂರನೇಯ ಮಹಾಯುದ್ಧವು ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳಿಂದ ಆರಂಭವಾಗಲಿದೆ. ದೊಡ್ಡ ಕೆಟ್ಟ ಶಕ್ತಿಗಳು ಸಮಾಜದಲ್ಲಿನ ಧಾರ್ಮಿಕ ಸಂವೇದನಾಶೀಲತೆಯ ದುರ್ಲಾಭ ಪಡೆದು ಸಮಾಜಕ್ಕೆ ತುತ್ತ ತುದಿಯ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುವವು ಮತ್ತು ಅದರಿಂದ ಜಗತ್ತಿನ ಕೆಲವು ರಾಷ್ಟ್ರಗಳು ಪರಸ್ಪರರ ವಿರುದ್ಧವಾಗುವವು. ಮೂರೂ ಜಾಗತಿಕ ಮಹಾಯುದ್ಧಗಳು ಆಗುವುದರ ಹಿಂದೆ ಸಪ್ತಪಾತಾಳಗಳಲ್ಲಿನ ಎಲ್ಲಕ್ಕಿಂತ ಕೆಳಗಿನ ಪಾತಾಳಗಳಲ್ಲಿರುವ ದೊಡ್ಡ ಕೆಟ್ಟ ಶಕ್ತಿಗಳು ಕಾರಣವಾಗಿವೆ. ಇವು ಅನೇಕ ದೇಶಗಳನ್ನು ಪರಸ್ಪರರ ವಿರುದ್ಧ ಯುದ್ಧ ಮಾಡಲು ಪ್ರವೃತ್ತಗೊಳಿಸಿದ್ದವು ಮತ್ತು ಈಗ ಮೂರನೇಯ ಮಹಾಯುದ್ಧಕ್ಕಾಗಿ ಪ್ರವೃತ್ತಗೊಳಿಸುತ್ತಿವೆ. ‘ಈ ಯುದ್ಧಗಳನ್ನು ಘಟಿಸಲು ಸಪ್ತಪಾತಾಳಗಳಲ್ಲಿನ ಯಾವ ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿದ್ದವು ಮತ್ತು ಕಾರ್ಯನಿರತವಾಗಿವೆ ?’, ಎಂಬುದು ಮುಂದಿನ ಅಂಶಗಳಿಂದ ಗಮನಕ್ಕೆ ಬರುವುದು.

೪ ಅ ೧. ಮೊದಲನೇ ಜಾಗತಿಕ ಮಹಾಯುದ್ಧ : ಎರಡನೇ ಪಾತಾಳದಲ್ಲಿನ ಕೆಟ್ಟ ಶಕ್ತಿಗಳು

೪ ಅ ೨. ಎರಡನೇ ಜಾಗತಿಕ ಮಹಾಯುದ್ಧ : ಎರಡನೇ ಮಹಾಯುದ್ಧವನ್ನು ಘಟಿಸುವಲ್ಲಿ ಮೂರನೇ ಪಾತಾಳದಲ್ಲಿನ ಕೆಟ್ಟ ಶಕ್ತಿಗಳ ದೊಡ್ಡ ಸಹಭಾಗವಿತ್ತು. ಇದರ ಉದಾಹರಣೆ ಎಂದು ಹಿಟ್ಲರ್‌ನನ್ನು ತೆಗೆದುಕೊಳ್ಳಬಹುದು. ಹಿಟ್ಲರ್‌ನ ಸಂಪೂರ್ಣ ರಾಜ್ಯಾಡಳಿತದ ಕಾಲದಲ್ಲಿ ಅವನು ಐದನೇ ಪಾತಾಳದಲ್ಲಿನ ಕೆಟ್ಟ ಶಕ್ತಿಗಳ ನಿಯಂತ್ರಣದಲ್ಲಿದ್ದನು. ಆದುದರಿಂದ ಅತ್ಯಂತ ನಾಟಕೀಯ ರೀತಿಯಲ್ಲಿ ಅವನಿಗೆ ಅಧಿಕಾರವನ್ನು ಗಳಿಸಲು ಸಾಧ್ಯವಾಯಿತು, ಹಾಗೆಯೇ ಅವನ ಸಂಪೂರ್ಣ ಆಳ್ವಿಕೆಯ ಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವವಿತ್ತು.

೪ ಅ ೩. ಮೂರನೇ ಜಾಗತಿಕ ಮಹಾಯುದ್ಧ : ಮೂರನೇಯ ಜಾಗತಿಕ ಮಹಾಯುದ್ಧವನ್ನು ಪ್ರತ್ಯಕ್ಷ ಘಟಿಸುವಲ್ಲಿ ನಾಲ್ಕನೇ ಪಾತಾಳದಲ್ಲಿನ ಕೆಟ್ಟ ಶಕ್ತಿಗಳು ಕಾರಣವಾಗುವವು; ಆದರೆ ಸೂಕ್ಷ್ಮದಲ್ಲಿನ ಯುದ್ಧದಲ್ಲಿ ಏಳನೇ ಪಾತಾಳದಲ್ಲಿನ ಕೆಟ್ಟ ಶಕ್ತಿಗಳ ಸಹಭಾಗ ಇರುವುದು. ೨೦೧೭ ರಿಂದ ೨೦೨೪ ನೇ ಇಸವಿಯ ಕಾಲಾವಧಿಯಲ್ಲಿ ಸಂಭವಿಸಲಿರುವ ಸೂಕ್ಷ್ಮದಲ್ಲಿನ ಯುದ್ಧದಲ್ಲಿ ಆರನೇ ಮತ್ತು ಏಳನೇ ಪಾತಾಳಗಳಲ್ಲಿನ ಕೆಟ್ಟ ಶಕ್ತಿಗಳ ಸಹಭಾಗ ಇರುವುದು.

ಮೂರನೇ ಜಾಗತಿಕ ಮಹಾಯುದ್ಧವು ಸೂಕ್ಷ್ಮದಲ್ಲಿ ೨೦೧೫ ರಲ್ಲಿ ಆರಂಭವಾಗಿ ಅದು ಮುಂದೆ ೯ ವರ್ಷಗಳ ಕಾಲ, ಅಂದರೆ ೨೦೨೪ ನೇ ಇಸವಿಯವರೆಗೆ ನಡೆಯುವುದು. ಈ ಕಾಲಾವಧಿಯಲ್ಲಾಗುವ ಯುದ್ಧಗಳು ಇದೇ ಜಾಗತಿಕ ಮಹಾಯುದ್ಧಕ್ಕೆ ಸಂಬಂಧಿಸಿರುವವು; ಆದರೆ ಜಗತ್ತಿಗೆ ಅದರ ಅರಿವಾಗಲಾರದು. ಈ ಕಾಲಾವಧಿಯ ಕೊನೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುವ ಅಣುಶಸ್ತ್ರಗಳ ಬಳಕೆಯನ್ನು ಮಾಡಲಾಗುವುದು. ಇದರಿಂದ ಅಪಾರ ಮನುಷ್ಯಹಾನಿಯಾಗಿ ಜಗತ್ತಿನ ಶೇ. ೫೦ ರಷ್ಟು ಜನಸಂಖ್ಯೆಯು ನಾಶವಾಗುವುದು. ಈ ಯುದ್ಧದಿಂದ ಜಗತ್ತಿನ ಕೆಲವು ದೇಶಗಳ ಹಾನಿಯು ಇತರ ದೇಶಗಳಿಗಿಂತ ಹೆಚ್ಚಾಗುವುದು; ಆದರೆ ಎಲ್ಲ ಜಗತ್ತು ಪರಸ್ಪರ ಜೋಡಿಸಲ್ಪಟಿದ್ದರಿಂದ ಎಲ್ಲ ದೇಶಗಳಿಗೆ ಹಾನಿಯಾಗಲಿದೆ.

(ಮುಂದುವರಿಯುವುದು…)

(ಈ ಲೇಖನ http://ssrf.org/ww3 ಈ ಲಿಂಕ್‌ನಲ್ಲಿ ಲಭ್ಯವಿದೆ.)   (ಪೂರ್ವಾರ್ಧ)

– ಶ್ರೀ. ಶಾನ್ ಕ್ಲಾರ್ಕ್ (ಆಧ್ಯಾತ್ಮಿಕ ಮಟ್ಟ ಶೇ. ೬೪), ಸಂಪಾದಕರು, ಎಸ್.ಎಸ್.ಆರ್.ಎಫ್. ಮತ್ತು ಸಂಶೋಧನೆ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (ವರ್ಷ ೨೦೧೬)