ವ್ಯಕ್ತಿಯು ಕಲ್ಲುಪ್ಪು ಮಿಶ್ರಿತ ನೀರಿನಿಂದ ಅಥವಾ ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ

ಆಚಾರಧರ್ಮದ  ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಆಧ್ಯಾತ್ಮಿಕ ತೊಂದರೆಗಳಾಗುತ್ತಿದ್ದರೆ ಅವು ದೂರವಾಗಬೇಕೆಂದು ಮತ್ತು ಮುಂದೆಯೂ ತೊಂದರೆಗಳು ಆಗಬಾರದೆಂದು ಮಾಡಲಾಗುವ ಉಪಾಯಗಳಿಗೆ ‘ಆಧ್ಯಾತ್ಮಿಕ ಉಪಾಯಗಳು’, ಎಂದು ಹೇಳುತ್ತಾರೆ. ಸದ್ಯ ಬಹಳಷ್ಟು ಜನರಿಗೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಆಧ್ಯಾತ್ಮಿಕ ತೊಂದರೆಗಳಿವೆ. ಕಲ್ಲುಪ್ಪು ಮಿಶ್ರಿತ ನೀರಿನಿಂದ ಅಥವಾ ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು, ಒಂದು ಆಧ್ಯಾತ್ಮಿಕ ಸ್ತರದಲ್ಲಿನ ಪ್ರಭಾವಿ ಉಪಾಯವಾಗಿದೆ. ‘ಕಲ್ಲುಪ್ಪು ಮಿಶ್ರಿತ ನೀರಿನಿಂದ ಅಥವಾ ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡಿದರೆ ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಯಾವ ಲಾಭವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಅಕ್ಟೋಬರ ೨೦೧೮ ರಲ್ಲಿ ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್.’ ಉಪಕರಣದ ಉಪಯೋಗವನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳನ್ನು ಮತ್ತು ಅವುಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಪರೀಕ್ಷಣೆಯ ನಿರೀಕ್ಷಣೆ

ಸೌ. ಮಧುರಾ ಕರ್ವೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇರುವ ಒಬ್ಬ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಒಬ್ಬ ಸಾಧಕ ಹೀಗೆ ಇಬ್ಬರು ಸಾಧಕರು ಪಾಲ್ಗೊಂಡಿದ್ದರು. ಮೊದಲ ಪ್ರಯೋಗದಲ್ಲಿ ಅವರಿಗೆ ೧ ಬಕೇಟ್ ಸಾಮಾನ್ಯ ನೀರಿನಲ್ಲಿ ೧೦೦ ಗ್ರಾಮ್ ಕಲ್ಲುಪ್ಪು ಹಾಕಿ ಆ ನೀರಿನಿಂದ ಸ್ನಾನ ಮಾಡಲು ಹೇಳಲಾಯಿತು. ಅವರು ಉಪ್ಪು ಮಿಶ್ರಣ ಮಾಡಿದ ನೀರಿನಿಂದ ಸ್ನಾನ ಮಾಡುವ ಮೊದಲು ಮತ್ತು ಸ್ನಾನ ಮಾಡಿದ ನಂತರ ಅವರನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು.

ಇನ್ನೊಂದು ಪ್ರಯೋಗದಲ್ಲಿ ಅವರಿಗೆ ೧ ಬಕೇಟ್ ಸಾಮಾನ್ಯ ನೀರಿನಲ್ಲಿ ೧೦ ಮಿ.ಲೀ. ಗೋಮೂತ್ರವನ್ನು (ಸನಾತನ-ನಿರ್ಮಿತ ಗೋಮೂತ್ರ-ಅರ್ಕ) ಹಾಕಿ ಆ ನೀರಿನಿಂದ ಸ್ನಾನ ಮಾಡಲು ಹೇಳಲಾಯಿತು. ಅವರು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವ ಮೊದಲು ಮತ್ತು ಸ್ನಾನ ಮಾಡಿದ ನಂತರ ಅವರನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆಯನ್ನು  ಮಾಡಲಾಯಿತು.

ಟಿಪ್ಪಣಿ – ಆಧ್ಯಾತ್ಮಿಕ ತೊಂದರೆಗಳು : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

೧ ಅ. ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕನಲ್ಲಿನ ನಕಾರಾತ್ಮಕ ಊರ್ಜೆಯು ಕಡಿಮೆ ಆಗುವುದು ಅಥವಾ ಇಲ್ಲವಾಗುವುದು : ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕನಲ್ಲಿ ಸಕಾರಾತ್ಮಕ ಊರ್ಜೆಯು ಕಂಡು ಬರಲಿಲ್ಲ. ಅವನು ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡಿದ ನಂತರ ಅವನಲ್ಲಿನ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ಕಡಿಮೆಯಾಯಿತು ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಇಂಧನವು ಇಲ್ಲವಾಯಿತು.

ಟಿಪ್ಪಣಿ ೧ – ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕನಲ್ಲಿ ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ‘ಅಲ್ಟ್ರಾವೈಲೆಟ್ ನಕಾರಾತ್ಮಕ ಊರ್ಜೆ ಇತ್ತು; ಆದರೆ ಅದರ ಪ್ರಭಾವಲಯ ಇರಲಿಲ್ಲ. ಅವನು ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವ ಮೊದಲು ಅವನ ಸಂದರ್ಭದಲ್ಲಿ ‘ಔರಾ ಸ್ಕ್ಯಾನರ್ ನ ಭುಜಗಳು ಅನುಕ್ರಮವಾಗಿ ೮೦ ಮತ್ತು ೧೨೦ ಅಂಶದ ಕೋನಗಳನ್ನು ಮಾಡಿದವು. (ಔರಾ ಸ್ಕ್ಯಾನರ್‌ನ ಭುಜಗಳು ೧೮೦ ಅಂಶದ ಕೋನವನ್ನು ಮಾಡಿದರೆ ಮಾತ್ರ ಪ್ರಭಾವಲಯವನ್ನು ಅಳೆಯಲು ಬರುತ್ತದೆ.)

ಟಿಪ್ಪಣಿ ೨ – ಎರಡೂ ಪ್ರಕಾರದ ಸ್ನಾನ ಮಾಡಿದ ನಂತರ ಸಾಧಕನಲ್ಲಿ ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ. (ಆಗ ಸಾಧಕನ ‘ಔರಾ ಸ್ಕ್ಯಾನರ್ನ ಭುಜಗಳು ೦ ಅಂಶದ ಕೋನವನ್ನು ಮಾಡಿದವು.)

೧ ಆ. ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡಿದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು : ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ. ಅವನು ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡಿದ ನಂತರ ಅವನಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಕಲ್ಲುಪ್ಪು ಮಿಶ್ರಿತ ನೀರಿನಿಂದ ಸ್ನಾನ ಮಾಡುವುದರಿಂದ ವ್ಯಕ್ತಿಯ ಸ್ಥೂಲದೇಹದ ಶುದ್ಧಿಯಾಗುವುದು : ಕಲ್ಲುಪ್ಪಿನಲ್ಲಿ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಂಡು ಅವುಗಳನ್ನು ಘನೀಕರಣಗೊಳಿಸುವ ಕ್ಷಮತೆಯಿರುತ್ತದೆ. ಕಲ್ಲುಪ್ಪಿನ ಸುತ್ತಲೂ ಇರುವ ಆಪತತ್ತ್ವಯುಕ್ತ ಸೂಕ್ಷ್ಮ ಕೋಶದಲ್ಲಿ ಬಾಹ್ಯವಾತಾವರಣದಲ್ಲಿನ ರಜ-ತಮವನ್ನು ಸೆಳೆದುಕೊಳ್ಳುವ ಕ್ಷಮತೆ ಅತಿಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಸ್ನಾನದ ನೀರಿನಲ್ಲಿ ಉಪ್ಪನ್ನು ಹಾಕುವುದರಿಂದ ಉಪ್ಪಿನ ಸಂಪರ್ಕದಿಂದ ದೇಹದಿಂದ ಸೆಳೆದುಕೊಂಡಿರುವ ರಜ-ತಮಾತ್ಮಕ ಲಹರಿಗಳು ತಕ್ಷಣ ನೀರಿನಲ್ಲಿ ವಿಸರ್ಜಿಸಲ್ಪಡುತ್ತವೆ ಮತ್ತು ಅವುಗಳ ಕಾರ್ಯ ಮಾಡುವ ತೀವ್ರತೆಯು ತಕ್ಷಣ ಕಡಿಮೆಯಾಗುತ್ತದೆ. ನೀರಿನ ಸಂಪರ್ಕದಿಂದ ಉಪ್ಪಿನಲ್ಲಿನ ರಜ-ತಮವು ತಕ್ಷಣ ನೀರಿನಲ್ಲಿ ಸೇರಿಕೊಳ್ಳುತ್ತದೆ; ಇದರಿಂದ ವ್ಯಕ್ತಿಯ ಸ್ಥೂಲದೇಹದ ಶುದ್ಧಿಯಾಗುತ್ತದೆ.

 ೨. ಆ. ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹದ ಸುತ್ತಲೂ ಚೈತನ್ಯದ ಕವಚ ನಿರ್ಮಾಣವಾಗಿ ದೇಹದ ಸುತ್ತಲಿನ ತೊಂದರೆದಾಯಕ ಶಕ್ತಿಯ ಆವರಣ ನಾಶವಾಗುವುದು : ಗೋಮೂತ್ರದಲ್ಲಿನ ಸಾತ್ತ್ವಿಕತೆ ಮತ್ತು ಸ್ನಾನದ ನೀರಿನಲ್ಲಿನ ಗೋಮೂತ್ರದಲ್ಲಿ ಆಕರ್ಷಿಸಲ್ಪಟ್ಟಿರುವ ದೇವತೆಗಳ ತತ್ತ್ವಗಳಿಂದ ವ್ಯಕ್ತಿಯ ದೇಹದ ಸುತ್ತಲೂ ಚೈತನ್ಯದ ಕವಚ ನಿರ್ಮಾಣವಾಗುತ್ತದೆ. ಈ ಕವಚವು ನಿಧಾನವಾಗಿ ದೇಹದಲ್ಲಿನ ಎಲ್ಲ ತೊಂದರೆದಾಯಕ ಸ್ಪಂದನಗಳನ್ನು ಮತ್ತು ದೇಹದ ಸುತ್ತಲೂ ಇರುವ ತೊಂದರೆದಾಯಕ ಶಕ್ತಿಯ ಆವರಣವನ್ನು ನಾಶ ಮಾಡುತ್ತದೆ. ಗೋಮೂತ್ರದಲ್ಲಿನ ಸಾತ್ತ್ವಿಕತೆಯಿಂದ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳು ಕಡಿಮೆ ಆಗುತ್ತವೆ.

೨ ಇ. ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನವನ್ನು ಮಾಡಿದ್ದರಿಂದ ಪರೀಕ್ಷಣೆಗೊಳಗಾದ ಸಾಧಕರಿಗೆ ಈ ಮುಂದಿನ ಆಧ್ಯಾತ್ಮಿಕ ಸ್ತರದ ಲಾಭವಾಯಿತು

೨ ಇ ೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕ : ಈ ಸಾಧಕನಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿದೆ. ಅವನ ಸುತ್ತಲೂ ತೊಂದರೆದಾಯಕ ಶಕ್ತಿಯ (ನಕರಾತ್ಮಕ ಸ್ಪಂದನಗಳ) ಆವರಣವಿದೆ. ಈ ಸಾಧಕನಿಗೆ ತೊಂದರೆಗಳನ್ನು ಕೊಡುವ ಕೆಟ್ಟಶಕ್ತಿಯು ಸಾಧಕನ ದೇಹದಲ್ಲಿ ತೊಂದರೆದಾಯಕ ಶಕ್ತಿಯ ಸ್ಥಾನವನ್ನು ನಿರ್ಮಾಣ ಮಾಡಿ ಅದರಲ್ಲಿ ತೊಂದರೆದಾಯಕ ಶಕ್ತಿಯನ್ನು ಸಂಗ್ರಹಿಸಿದೆ. ಸಾಧಕನು ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನ ಮಾಡಿದ ನಂತರ ಅವನಲ್ಲಿನ ನಕಾರಾತ್ಮಕ ಇಂಧನವು ಕಡಿಮೆ ಅಥವಾ ಇಲ್ಲವಾಯಿತು.

೨ ಇ ೨. ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ : ಈ ಸಾಧಕನಿಗೆ ಆಧ್ಯಾತ್ಮಿಕ ತೊಂದರೆ ಇಲ್ಲ. ಅವನಲ್ಲಿ ನಕಾರಾತ್ಮಕ ಸ್ಪಂದನಗಳು ಇರಲಿಲ್ಲ, ಸಕಾರಾತ್ಮಕ ಸ್ಪಂದನಗಳಿದ್ದವು. ಸಾಧಕನು ಕಲ್ಲುಪ್ಪು ಮಿಶ್ರಿತ ನೀರಿನಿಂದ ಮತ್ತು ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನವನ್ನು ಮಾಡಿದಾಗ ಅವನಲ್ಲಿನ ಸಕಾರಾತ್ಮಕ ಇಂಧನವು ಹೆಚ್ಚಾಯಿತು.
ಸಂಕ್ಷಿಪ್ತದಲ್ಲಿ ‘ಕಲ್ಲುಪ್ಪು ಮಿಶ್ರಿತ ನೀರಿನಿಂದ ಅಥವಾ ಗೋಮೂತ್ರ ಮಿಶ್ರಿತ ನೀರಿನಿಂದ ಸ್ನಾನವನ್ನು ಮಾಡಿದರೆ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ’, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.(೧೩.೨.೨೦೨೦)
ವಿ-ಅಂಚೆ : [email protected]