ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪಕ್ಕನುಸಾರ ಕೆಲವೇ ವರ್ಷಗಳಲ್ಲಿ ಈಶ್ವರೀ ರಾಜ್ಯ ಸ್ಥಾಪನೆಯಾಗಲಿಕ್ಕಿದೆ. ಅನೇಕ ಜನರ ಮನಸ್ಸಿನಲ್ಲಿ ‘ಈ ರಾಷ್ಟ್ರವನ್ನು ನಡೆಸುವವರು ಯಾರು ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿ ಈಶ್ವರನು ಉಚ್ಚ ಲೋಕದಿಂದ ದೈವೀ ಬಾಲಕರಿಗೆ ಪೃಥ್ವಿಯ ಮೇಲೆ ಜನ್ಮ ನೀಡಿ ಕಳುಹಿಸಿದ್ದಾನೆ. ಈ ದೈವೀ ಬಾಲಕರಲ್ಲಿನ ಕಲಿಯುವ ವೃತ್ತಿ, ವೈಚಾರಿಕ ಪ್ರಬುದ್ಧತೆ, ಅವರಲ್ಲಿ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಶ್ರೀ ಗುರುಗಳ ಆಜ್ಞಾಪಾಲನೆಯನ್ನು ತಕ್ಷಣ ಮಾಡುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರ ಸೂಕ್ಷ್ಮದ ವಿಷಯವನ್ನು ತಿಳಿದುಕೊಳ್ಳುವ ಕ್ಷಮತೆಯಂತಹ ಅಲೌಕಿಕ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಪ್ರಕಟಿಸುತ್ತಿದ್ದೇವೆ.

ಪರಾತ್ಪರ ಗುರು ಡಾ. ಆಠವಲೆ

‘ಕು. ಪ್ರಾರ್ಥನಾ ಪಾಠಕ ಇವಳು ಚಿಕ್ಕ ವಯಸ್ಸಿನಲ್ಲಿ ಓದಿರುವ ಗ್ರಂಥಗಳ ಪಟ್ಟಿಯನ್ನು ಈ ಲೇಖನದಲ್ಲಿ ಕೊಡಲಾಗಿದೆ. ವಯಸ್ಸಿನಲ್ಲಿ ದೊಡ್ಡವರಾದ ಎಷ್ಟು ಜನ ಸಾಧಕರು ಈ ರೀತಿ ಓದುತ್ತಾರೆ ? ಗ್ರಂಥಗಳನ್ನು ಓದುವುದರಿಂದ ಮತ್ತು ಅವುಗಳ ಅಧ್ಯಯನದಿಂದ ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಾರ್ಥನಾ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾಳೆ. ಮುಂದೆ ಅವಳು ಬೇಗನೇ ಸಂತಳಾಗುವಳು’.

– (ಪರಾತ್ಪರ ಗುರು) ಡಾ. ಆಠವಲೆ (೨.೨.೨೦೨೨)

ವಯಸ್ಸಿನ ೮ ನೇ ವರ್ಷದಿಂದ ವಿವಿಧ ಗ್ರಂಥಗಳನ್ನು ಮತ್ತು ದೈನಿಕ ‘ಸನಾತನ ಪ್ರಭಾತ’ವನ್ನು ಅಧ್ಯಯನಪೂರ್ಣವಾಗಿ ಓದುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ (೧೦ ವರ್ಷ) !

ಕು. ಪ್ರಾರ್ಥನಾ ಮಹೇಶ ಪಾಠಕ

 

ಸೌ. ಮನಿಷಾ ಪಾಠಕ

೧. ‘ಸನಾತನ’ದ ಗ್ರಂಥಗಳ ಮತ್ತು ದೈನಿಕ ‘ಸನಾತನ ಪ್ರಭಾತ’ದ ಬಗ್ಗೆ ಕು. ಪ್ರಾರ್ಥನಾಳಿಗಿರುವ ಸೆಳೆತ ಮತ್ತು ಅವಳ ಅಧ್ಯಯನದ ವೃತ್ತಿ !

ಅ. ‘ಕು. ಪ್ರಾರ್ಥನಾಳಿಗೆ ಬಾಲ್ಯದಿಂದಲೇ ಸನಾತನದ ಗ್ರಂಥಗಳ ಸೆಳೆತವಿದೆ. ಅವಳು ೪-೫ ತಿಂಗಳ ಮಗುವಾಗಿರುವಾಗ ಅವಳಿಗೆ ಸನಾತನದ ಗ್ರಂಥಗಳನ್ನು ತೋರಿಸಿದರೆ ಆನಂದವಾಗುತ್ತಿತ್ತು.

ಆ. ಪ್ರಾರ್ಥನಾಗೆ ೬ ತಿಂಗಳಿರುಗಿರುವಾಗಿನಿಂದ ‘ಸನಾತನ ಪಂಚಾಂಗ, ಸನಾತನದ ಗ್ರಂಥ ಮತ್ತು ದೈನಿಕ ‘ಸನಾತನ ಪ್ರಭಾತ’ಗಳಲ್ಲಿನ ಪ.ಪೂ. ಭಕ್ತರಾಜ ಮಹಾರಾಜರು, ಅವರ ಶಿಷ್ಯರಾದ ಪ.ಪೂ. ರಾಮಾನಂದ ಮಹಾರಾಜರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಗಳನ್ನು ಗುರುತಿಸುತ್ತಾಳೆ.

ಇ. ಅವಳು ಎಂದಿಗೂ ಸನಾತನದ ಗ್ರಂಥಗಳ ಮತ್ತು ದೈನಿಕ ‘ಸನಾತನ ಪ್ರಭಾತ’ದ ಪುಟಗಳನ್ನು ಹರಿಯಲಿಲ್ಲ. ಅವಳು ಸನಾತನದ ಗ್ರಂಥಗಳನ್ನು ಮತ್ತು ದೈನಿಕ ‘ಸನಾತನ ಪ್ರಭಾತ’ವನ್ನು ಅತ್ಯಂತ ಪ್ರೀತಿಯಿಂದ ಉಪಯೋಗಿಸುತ್ತಿದ್ದಳು. ಇತರ ಚಿಕ್ಕ ಮಕ್ಕಳಂತೆ ಅವಳು ಎಂದಿಗೂ ಸನಾತನ ಗ್ರಂಥ ಮತ್ತು ದೈನಿಕ ‘ಸನಾತನ ಪ್ರಭಾತ’ದ ಮೇಲೆ ಗೆರೆಗಳನ್ನು (ರೇಖೆಗಳನ್ನು) ಎಳೆಯಲಿಲ್ಲ.

ಈ. ಶಾಲೆಯಲ್ಲಿ ‘ಅ, ಆ, ಇ, ಈ…’ ಈ ಮೂಲಾಕ್ಷರಗಳನ್ನು ಕಲಿತ ನಂತರ ಪ್ರಾರ್ಥನಾ ದೈನಿಕ ‘ಸನಾತನ ಪ್ರಭಾತ’ದ ಪುಟಗಳ ಮೇಲಿನ  ಶಿರೋನಾಮೆಗಳನ್ನು (ತಲೆಬರಹಗಳನ್ನು) ಓದಲು ಪ್ರಯತ್ನಿಸುತ್ತಿದ್ದಳು. ಅವಳು ೪ ವರ್ಷದವಳಾದಾಗಿನಿಂದ ಅವಳ ತಂದೆಗೆ (ಶ್ರೀ. ಮಹೇಶ ಪಾಠಕ ಇವರಿಗೆ, ಆಧ್ಯಾತ್ಮಿಕ ಮಟ್ಟ ಶೇ. ೬೮) ದೈನಿಕ ‘ಸನಾತನ ಪ್ರಭಾತ’ವನ್ನು ಓದಿ ಹೇಳುತ್ತಿದ್ದಳು.

. ಪ್ರಾರ್ಥನಾ ೭ ವರ್ಷದವಳಾದಾಗಿನಿಂದ ಸ್ವತಃ ದೈನಿಕ ‘ಸನಾತನ ಪ್ರಭಾತ’ವನ್ನು ಓದುತ್ತಾಳೆ. ಅವಳು ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುವ ಪ.ಪೂ. ಭಕ್ತರಾಜ ಮಹಾರಾಜರ ಅಮೃತವಚನಗಳ ಅರ್ಥವನ್ನು ಕೇಳುತ್ತಿದ್ದಳು. ಅವಳು ದೈನಿಕದಲ್ಲಿ ಬರುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರವರ ‘ಓಂ ಆನಂದಂ ಹಿಮಾಲಯಂ ವಿಷ್ಣುಂ ಗರುಡಧ್ವಜಂ ಓಂ | ಓಂ ಶಿವಂ ದತ್ತಂ ಗಾಯತ್ರಿ ಸರಸ್ವತೀ ಮಹಾಲಕ್ಷ್ಮೀ ಪ್ರಣಮಾಮ್ಯಹಂ ಓಂ ||’ ಈ ಮಂತ್ರವನ್ನು ಓದಲು ಪ್ರಯತ್ನಿಸುತ್ತಿದ್ದಳು. ಅವಳು ಬಾಲಸಾಧಕರ ಮತ್ತು ಸಾಧಕರ ಅನುಭೂತಿಗಳನ್ನು ಓದಲು ಪ್ರಯತ್ನಿಸುತ್ತಿದ್ದಳು.

ಊ. ಪ್ರಾರ್ಥನಾ ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟವಾಗುವ ವಿವಿಧ ವಿಷಯಗಳನ್ನು ಮತ್ತು ಸಂಪಾದಕೀಯ ಲೇಖನಗಳಲ್ಲಿನ ಅವಳಿಗೆ ತಿಳಿಯುವ ವಿಷಯಗಳನ್ನು ಓದುತ್ತಿದ್ದಳು. ಅವಳು ನಿಯಮಿತವಾಗಿ ಲೇಖನಗಳಲ್ಲಿನ ಶಬ್ದಗಳು ತಿಳಿಯದಿದ್ದರೆ ನಮ್ಮನ್ನು ಕೇಳುತ್ತಿದ್ದಳು ಮತ್ತು ನೆನಪಿನಲ್ಲಿಡಲು ಪ್ರಯತ್ನಿಸುತ್ತಿದ್ದಳು.

೨. ಗ್ರಂಥ ವಾಚನದಲ್ಲಿ ಕು. ಪ್ರಾರ್ಥನಾಳಿಗಿರುವ ಆಸಕ್ತಿ

ಅ. ಪ್ರಾರ್ಥನಾ ೮ ವರ್ಷದವಳಾದಾಗಿನಿಂದ ನಿಯಮಿತವಾಗಿ ಗ್ರಂಥಗಳನ್ನು ಓದುತ್ತಾಳೆ. ಮಾರ್ಚ್ ೨೦೨೦ ರಲ್ಲಿ ನಾವು (ಶ್ರೀ. ಮಹೇಶ ಪಾಠಕ, ಸೌ. ಮನಿಷಾ ಪಾಠಕ ಮತ್ತು ಕು. ಪ್ರಾರ್ಥನಾ ಪಾಠಕ) ಗೋವಾದಲ್ಲಿನ ಸನಾತನದ ರಾಮನಾಥಿ ಆಶ್ರಮಕ್ಕೆ ಹೋಗಿದ್ದೆವು. ಅಂದಿನಿಂದ ಪ್ರಾರ್ಥನಾ ಗ್ರಂಥಗಳನ್ನು ಓದಿ ಗ್ರಂಥಗಳಲ್ಲಿನ ಅಂಶಗಳನ್ನು ಬರೆದಿಡಲು ಪ್ರಯತ್ನಿಸುತ್ತಾಳೆ.

ಆ. ಗ್ರಂಥವನ್ನು ಓದಲು ಪ್ರಾರಂಭಿಸಿದ ನಂತರ ಗ್ರಂಥವನ್ನು ಪೂರ್ತಿ ಓದುವವರೆಗೂ ಪ್ರಾರ್ಥನಾಳಿಗೆ ಸಮಾಧಾನವಾಗುವುದಿಲ್ಲ. ಗ್ರಂಥವನ್ನು ಓದಲು ಪ್ರಾರಂಭಿಸುವಾಗ ಅವಳು ಗ್ರಂಥದ ಮುಖಪುಟ, ಅನುಕ್ರಮಣಿಕೆ, ಗ್ರಂಥದ ಪುಟಗಳ ಸಂಖ್ಯೆ, ಸಂಕಲನದ ಪದ್ಧತಿ (ಗ್ರಂಥದ ಕೊನೆಗೆ ಆಧಾರಗಳನ್ನು ಬರೆದಿರುತ್ತಾರೆ, ಉದಾ. ೧೨ ರಿಂದ ೧೨ ಅ ೨ ಉ) ಅವುಗಳ ಅಧ್ಯಯನವನ್ನು ಮಾಡುತ್ತಾಳೆ.

೩. ‘ಪರಾತ್ಪರ ಗುರು ಡಾ. ಆಠವಲೆಯವರು ಬರೆದಿರುವ ಗ್ರಂಥಗಳೆಂದರೆ ಜ್ಞಾನಮಾರ್ಗದೊಂದಿಗೆ ಭಕ್ತಿಮಾರ್ಗವೂ ಆಗಿವೆ’, ಎಂದು ಹೇಳುವ ೧೦ ವರ್ಷದ ಕು. ಪ್ರಾರ್ಥನಾ !

ನನ್ನ ತಾಯಿಗೆ (ಶ್ರೀಮತಿ ಸುರೇಖಾ ಸರಸರ, ೬೫ ವರ್ಷ) ಓದುವುದರಲ್ಲಿ ತುಂಬಾ ಆಸಕ್ತಿಯಿದೆ. ನಾನು ಅನಾರೋಗ್ಯದಲ್ಲಿದ್ದಾಗ ಅವಳು ನನ್ನ ಸಹಾಯಕ್ಕಾಗಿ ರಾಮನಾಥಿ ಆಶ್ರಮಕ್ಕೆ ಬಂದಿದ್ದಳು. ನನ್ನ ತಾಯಿ ಗ್ರಂಥಗಳನ್ನು ಓದಲು ಪ್ರಾರಂಭಿಸಿದ ನಂತರ ಪ್ರಾರ್ಥನಾಳೂ ಗ್ರಂಥಗಳನ್ನು ಓದುತ್ತಿದ್ದಳು. ತಾಯಿ ಪ.ಪೂ. ಭಕ್ತರಾಜ ಮಹಾರಾಜರ ಬಗೆಗಿನ ಗ್ರಂಥಗಳನ್ನು ಓದುತ್ತಿದ್ದಳು. ಅವರ ಬೋಧನೆ ಮತ್ತು ಇತರ ಗ್ರಂಥಗಳನ್ನು ಓದುವಾಗ ತಾಯಿಗೆ ತುಂಬಾ ಭಾವಜಾಗೃತಿ ಆಗುತ್ತಿತ್ತು. ಅದನ್ನು ನೋಡಿ ಪ್ರಾರ್ಥನಾಳ ಭಾವವೂ ಜಾಗೃತವಾಗುತ್ತಿತ್ತು. ಒಮ್ಮೆ ಪ್ರಾರ್ಥನಾ, “ಅಮ್ಮಾ, ನಮ್ಮ ಪರಾತ್ಪರ ಗುರು ಡಾಕ್ಟರರು ಬರೆದಿರುವ ಗ್ರಂಥಗಳು ಜ್ಞಾನಮಾರ್ಗಿ ಆಗಿವೆ; ಅಲ್ಲದೇ ಅವು ಭಕ್ತಿಮಾರ್ಗಿಯೂ ಆಗಿವೆ. ಕೆಲವು ಗ್ರಂಥಗಳಲ್ಲಿನ ಕೆಲವು ಪುಟಗಳನ್ನು ಓದಿದ ನಂತರ ನನಗೆ ಭಾವಜಾಗೃತವಾಗುತ್ತದೆ. ಆದುದರಿಂದ ಭಾವಜಾಗೃತಿಗಾಗಿ ಗ್ರಂಥಗಳನ್ನು ಓದಬೇಕಲ್ಲವೇ ?” ಎಂದಳು.

೪. ಕು. ಪ್ರಾರ್ಥನಾ ಓದಿದ ಕೆಲವು ಗ್ರಂಥಗಳು ಮತ್ತು ಗ್ರಂಥಗಳಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಆಚರಣೆಯಲ್ಲಿ ತರಲು ಪ್ರಯತ್ನಿಸುವುದು

ಸಂತರ ಕಥೆಗಳು, ನೀತಿಕಥೆಗಳು, ರಾಮಾಯಣದಲ್ಲಿನ ಕಥೆಗಳು, ಸಂತ ಸಾವತಾಮಾಳಿ ಇವರ ಕಥೆಗಳು, ಶ್ರೀಸಮರ್ಥರ ಗ್ರಂಥಸಂಪತ್ತು, ರಾಮಕೃಷ್ಣ ಪರಮಹಂಸರ ವಾಕ್‌ಸುಧಾ, ಸಂಸ್ಕಾರ ಠೇವಾ, ಲೋಕಮಾನ್ಯ ತಿಲಕ, ಸುಭಾಷಚಂದ್ರ ಬೋಸ, ‘ನರೇಂದ್ರದಿಂದ ಸ್ವಾಮೀ ವಿವೇಕಾನಂದ’ ಮುಂತಾದ ಗ್ರಂಥಗಳನ್ನು ಅವಳು ಓದಿದ್ದಾಳೆ. ಆ ಗ್ರಂಥಗಳನ್ನು ಓದಿದ ನಂತರ ‘ಅವಳಿಗೆ ಅವುಗಳಿಂದ ಏನು ಕಲಿಯಲು ಸಿಕ್ಕಿತು ?’ ಅವಳು ಎಲ್ಲಿ ಕಡಿಮೆ ಬೀಳುತ್ತಾಳೆ ?’, ಈ ಕುರಿತು ಹೇಳುತ್ತಾಳೆ. ಅವಳು ಗ್ರಂಥದಲ್ಲಿನ ಯಾವುದಾದರೊಂದು ಅಂಶವನ್ನು ಆಚರಣೆಯಲ್ಲಿ ತರಲು ಪ್ರಯತ್ನಿಸುತ್ತಾಳೆ, ಉದಾ. ‘ರಾಮಕೃಷ್ಣ ಪರಮಹಂಸರ ವಾಕ್‌ಸುಧಾ’ ಈ ಗ್ರಂಥವನ್ನು ಓದಿದ ನಂತರ ‘ಅವಳು ಅದರಲ್ಲಿನ ಉದಾಹರಣೆಗಳನ್ನು ಹೇಗೆ ಕೃತಿಯಲ್ಲಿ ತರಬಹುದು ?’, ಎಂಬುದನ್ನು ನಿಶ್ಚಯಿಸಿದಳು. ಆ ಗ್ರಂಥದಲ್ಲಿನ ಒಂದು ಪ್ರಸಂಗದಲ್ಲಿ ರಾಜಸ್ಥಾನದ ಮಹಿಳೆಯರು ತಲೆಯ ಮೇಲೆ ನೀರಿನ ಬಿಂದಿಗೆಗಳನ್ನು (ಕಳಸಗಳನ್ನು) ತೆಗೆದುಕೊಂಡು ಹೋಗುವಾಗ ಗೆಳತಿಯರೊಂದಿಗೆ ಮಾತನಾಡುತ್ತಿರುತ್ತಾರೆ. ಆಗ ಅವರ ಗಮನವು ಬಿಂದಿಗೆಗಳ ಕಡೆಗೆ ಮತ್ತು ಮಾತನಾಡುವುದರ ಕಡೆಯೂ ಇರುತ್ತದೆ. ಇದರಿಂದ ಅವಳಿಗೆ ‘ಅನುಸಂಧಾನದಲ್ಲಿ ಹೇಗೆ ಇರಬೇಕು ?’, ಎಂಬುದು ಕಲಿಯಲು ಸಿಕ್ಕಿತು. ಆಗ ಅವಳು, “ಅಮ್ಮಾ, ನಾನು ಸಹ ಆಡುವಾಗ, ನಡೆದಾಡುವಾಗ ಮತ್ತು ಯಾವುದೇ ಕೃತಿಯನ್ನು ಮಾಡುವಾಗ ಈಶ್ವರನ ಅನುಸಂಧಾನದಲ್ಲಿರಲು ಮಾಡಬೇಕಾದ ಪ್ರಯತ್ನಗಳನ್ನು ಹೆಚ್ಚಿಸುತ್ತೇನೆ. ನೀನು ಸಹಾಯ ಮಾಡು”, ಎಂದಳು.

೫. ದೈನಿಕ ‘ಸನಾತನ ಪ್ರಭಾತ’ದಲ್ಲಿನ ಲೇಖನಮಾಲೆಗಳ ಅಧ್ಯಯನ ಮಾಡುವುದು

ಪ್ರಾರ್ಥನಾ ದೈನಿಕ ‘ಸನಾತನ ಪ್ರಭಾತ’ದಲ್ಲಿ ಬರುವ ಮುಂದಿನ ಲೇಖನಮಾಲೆಗಳ ಅಧ್ಯಯನವನ್ನು ಮಾಡುತ್ತಾಳೆ.

ಅ. ಪರಾತ್ಪರ ಗುರು ಡಾ. ಆಠವಲೆಯವರ ದೈನಿಕ ‘ಸನಾತನ ಪ್ರಭಾತ’ದಲ್ಲಿನ ತಪ್ಪುಗಳ ಬಗೆಗಿನ ಲೇಖನಗಳು

ಆ. ಕು. ಸುಪ್ರಿಯಾ ನವರಂಗೆ ಇವರು ಮರಾಠಿ ವ್ಯಾಕರಣದ ಬಗ್ಗೆ ‘ಸನಾತನದ ಅಧ್ಯಾತ್ಮದ ಮೇಲೆ ಆಧಾರಿತ ಮರಾಠಿ ವ್ಯಾಕರಣ’ ಈ ಕುರಿತು ಬರೆದಿರುವ ಲೇಖನಗಳು

ಇ. ಪರಾತ್ಪರ ಗುರು ಡಾ. ಆಠವಲೆಯವರ ತಾಯಿ-ತಂದೆಯರ ಕುರಿತು ಪ್ರಕಟಿಸಲಾದ ಲೇಖನಗಳಿಂದ ‘ಅವರು ಮಕ್ಕಳ ಮೇಲೆ ಹೇಗೆ ಸಂಸ್ಕಾರಗಳನ್ನು ಮಾಡಿದರು ?’, ಎಂಬುದನ್ನು ಕಲಿತಳು. ‘ಈ ಲೇಖನಮಾಲಿಕೆಯಲ್ಲಿನ ಮುಂದಿನ ಭಾಗವು ಯಾವಾಗ ಬರುತ್ತದೆ ?’, ಎಂದು ಅವಳು ಆತುರದಿಂದ ದಾರಿ ಕಾಯುತ್ತಿದ್ದಳು.

೬. ದೈನಿಕ ‘ಸನಾತನ ಪ್ರಭಾತ’ದಲ್ಲಿನ ಚೌಕಟ್ಟುಗಳ ಬಗ್ಗೆ ಪ್ರಾರ್ಥನಾ ಮಾಡಿದ ಚಿಂತನೆ

ಆಗಸ್ಟ್ಟ್ ೨೦೨೦ ರಲ್ಲಿ ‘ವಿಮಾನ ಪ್ರವಾಸದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿ’ ಈ ಕುರಿತು ದೈನಿಕ ‘ಸನಾತನ ಪ್ರಭಾತ’ದಲ್ಲಿ ಒಂದು ಚೌಕಟ್ಟು ಪ್ರಕಟವಾಗಿತ್ತು. ಆ ಚೌಕಟ್ಟಿನ ಕೆಳಗೆ ಲೇಖಕರ ಹೆಸರು ಇರಲಿಲ್ಲ. ಅವಳು ಅದನ್ನು ಓದಿ, “ಅಮ್ಮ, ಈ ಸಾಧಕನು ಎಷ್ಟು ಮನಃಪೂರ್ವಕವಾಗಿ ಮತ್ತು ಭಾವಪೂರ್ಣವಾಗಿ ಸೂತ್ರಗಳನ್ನು ಬರೆದಿದ್ದಾನೆ. ಯಾರೂ ಓದಿದರೂ, ಅವರಿಗೆ ‘ಏನು ಕಾಳಜಿ ತೆಗೆದುಕೊಳ್ಳಬೇಕು ?’, ಎಂಬುದು ತಿಳಿಯುವುದು, ಎಂದು ಹೇಳಿದಳು. ಅವಳಿಗೆ ಆ ಚೌಕಟ್ಟಿನಲ್ಲಿನ ಲೇಖನದಲ್ಲಿ ಭಾವ ಅರಿವಾಯಿತು.

ಪರಾತ್ಪರ ಗುರು ಡಾ. ಆಠವಲೆಯವರಿಗೆ ಒಮ್ಮೆ ಸತ್ಸಂಗದಲ್ಲಿ ಈ ವಿಷಯವನ್ನು ಹೇಳಿದಾಗ, ಅವರು, “ಇದು ಬೇರೆಯೇ ಆಗಿದೆಯಲ್ಲ ! ‘ಚೌಕಟ್ಟನ್ನು ಓದಿ ಆ ಸಾಧಕರ ಭಾವ ಹೇಗಿದೆ ?’, ಇಲ್ಲಿಯವರೆಗೆ ಯಾರು ತಲುಪುವುದಿಲ್ಲವಲ್ಲ ! ಕವಿತೆಗಳು, ಬರವಣಿಗೆ ಇತ್ಯಾದಿಗಳನ್ನು ಓದಿ ಇತರರ ಭಾವಜಾಗೃತವಾಗುತ್ತದೆ; ಆದರೆ ಚೌಕಟ್ಟನ್ನು ಓದಿ ಇಷ್ಟು ವಿಚಾರ ಯಾರೂ ಮಾಡುವುದಿಲ್ಲ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಪ್ರಾರ್ಥನಾಳಿಗೆ ಅದರ ಅರಿವಾಯಿತು, ಇದು ವಿಶೇಷವಾಗಿದೆ”, ಎಂದರು.

– ಸೌ. ಮನೀಷಾ ಪಾಠಕ (ತಾಯಿ) (ಆಧ್ಯಾತ್ಮಿಕ ಮಟ್ಟ ಶೇ. ೬೮), ಪುಣೆ (೧.೧.೨೦೨೧)

ಕು. ಪ್ರಾರ್ಥನಾ ಓದಿದ ಮತ್ತು ಓದುತ್ತಿರುವ ಸನಾತನ ಗ್ರಂಥ ಮಾಲಿಕೆಯಲ್ಲಿರುವ ಗ್ರಂಥಗಳು

ಅ. ಆಪತ್ಕಾಲದಲ್ಲಿ ಜೀವರಕ್ಷಣೆಯ ಕುರಿತು ಗ್ರಂಥಮಾಲಿಕೆ

ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ ! (ಆಹಾರ, ನೀರು, ವಿದ್ಯುತ್ ಇತ್ಯಾದಿಗಳ ವಿಷಯಗಳ ಸಿದ್ಧತೆ)

ಆಪತ್ಕಾಲವು ಸಹನೀಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆ ಮಾಡಿ ! (ಸ್ವಯಂಸೂಚನೆಗಳ ಉಪಾಯ, ಸಾಧನೆಯ ಮಹತ್ವ ಇತ್ಯಾದಿ)

ಆ. ಆರೋಗ್ಯಕರ ಮತ್ತು ದೀರ್ಘಾಯುಷ್ಯ ಜೀವನಕ್ಕಾಗಿ ಉಪಯುಕ್ತ ‘ಆಯುರ್ವೇದ’ ವಿಷಯದಲ್ಲಿನ ಗ್ರಂಥಮಾಲಿಕೆ

೧.  ಆಯುರ್ವೇದದ ಔಷಧಗಳ ಗುಣಧರ್ಮ ಮತ್ತು ಔಷಧಗಳ ನಿರ್ಮಿತಿ

೨. ರೋಗ ಮತ್ತು ಉಪಚಾರಗಳ ಕುರಿತು ಮೂಲಭೂತ ಆಯುರ್ವೇದದ ದೃಷ್ಟಿಕೋನ

೩. ಆಯುರ್ವೇದಕ್ಕನುಸಾರ ದಿನಚರಿಯಲ್ಲಿನ ಸ್ನಾನದಿಂದ ಹಿಡಿದು ಮಲಗುವವರೆಗೆ ಕೃತಿ ಮತ್ತು ದಿನಚರಿ

ಇ. ಬಾಲಕಭಾವದಲ್ಲಿನ ಚಿತ್ರಗಳು

೧. ಬಾಲಕಭಾವದಲ್ಲಿನ ಚಿತ್ರಗಳು ಭಾಗ ೧ (ಕೃಷ್ಣಭಕ್ತಿಯ ಆನಂದ ಕೊಡುವ ಚಿತ್ರಗಳು ಗುಣವೈಶಿಷ್ಟ್ಯಗಳ ಸಹಿತ)

೨. ಬಾಲಕಭಾವದಲ್ಲಿನ ಚಿತ್ರಗಳು ಭಾಗ ೨ (ಧರ್ಮಸಂದೇಶ ಕೊಡುವ ಶ್ರೀಕೃಷ್ಣನ ಚಿತ್ರಗಳು ಮತ್ತು ಅನುಭೂತಿಗಳ ಸಹಿತ)

ಈ. ಸದ್ಗುರು (ಕು.) ಅನುರಾಧಾ ವಾಡೆಕರ ಇವರ ಸಾಧನೆಯ ಮೊದಲಿನ ಜೀವನ ಮತ್ತು ಸಾಧನಾಪ್ರವಾಸ

ಉ. ಅಮೃತಮಯ ಗುರುಗಾಥಾ

೧. ಖಂಡ ೧ : ಡಾ. (ಸೌ.) ಕುಂದಾ ಆಠವಲೆ ಇವರ ಆಧ್ಯಾತ್ಮಿಕ ಜೀವನದ ಆರಂಭ ಮತ್ತು ಅವರಿಗೆ ಆದ ಗುರುಪ್ರಾಪ್ತಿ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವ ಸಮಾರಂಭಗಳ ಸಹಿತ)

೨. ಖಂಡ ೨ : ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಅಗಮ್ಯ ಲೀಲೆ ಮತ್ತು ಬೋಧನೆ (ಗುರುಗಳ ಸಾನಿಧ್ಯದಲ್ಲಿನ ಅವಿಸ್ಮರಣೀಯ (ಮರೆಯಲಾರದ) ಪ್ರಸಂಗಗಳ ಸಹಿತ)

೩.  ಖಂಡ ೩ : ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಅನಾರೋಗ್ಯದ ಕೊನೆಯ ಅವಧಿಯಲ್ಲಿ ಮಾಡಿದ ಅವರ ಸೇವೆ (ಗುರುಸೇವೆಯಲ್ಲಿನ ಅನುಭೂತಿಗಳು ಮತ್ತು ಗುರುಗಳ ಮಹಾನಿರ್ವಾಣ ಸಹಿತ)

೪.  ಖಂಡ ೪ : ಪ.ಪೂ. ರಾಮಾನಂದ ಮಹಾರಾಜರ ಸಾನಿಧ್ಯದಲ್ಲಿನ ಅನುಭವಗಳು ಮತ್ತು ಅವರ ಬಗೆಗಿನ ಅನುಭೂತಿಗಳು

ಊ. ಭಾವೀ ಪೀಳಿಗೆಯಲ್ಲಿ ಧರ್ಮನಿಷ್ಠೆ ಮತ್ತು ರಾಷ್ಟ್ರಭಕ್ತಿಯನ್ನು ಮೂಡಿಸುವ ಗ್ರಂಥಮಾಲಿಕೆ

ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು

ದೋಷ ನಿವಾರಿಸಿ ಮತ್ತು ಆನಂದಿತರಾಗಿರಿ !

ಗುಣ ವೃದ್ಧಿಸಿ ಮತ್ತು ಆದರ್ಶರಾಗಿರಿ !

ಅಧ್ಯಯನ ಹೇಗೆ ಮಾಡಬೇಕು ? (ವೈಫಲ್ಯಗಳನ್ನು ಜಯಿಸುವ ಉಪಾಯಗಳ ಸಹಿತ)

ನೀತಿಕಥೆಗಳು

ಎ. ಆಪತ್ಕಾಲದಲ್ಲಿ ಸಂಜೀವನಿಯಾಗಿರುವ ಗ್ರಂಥಮಾಲಿಕೆ

೧. ಜಾಗದ ಲಭ್ಯತೆಗನುಸಾರ ಔಷಧೀಯ ಸಸ್ಯಗಳನ್ನು ಬೆಳೆಸಿ

೨. ಆಯುರ್ವೇದವನ್ನು ಪಾಲಿಸಿ ಔಷಧಗಳಿಲ್ಲದೇ ಆರೋಗ್ಯವಂತರಾಗಿ !

೩. ಪ್ರತಿನಿತ್ಯದ ಕಾಯಿಲೆಗಳಿಗೆ ಬಿಂದುಒತ್ತಡ ಉಪಚಾರ

೪. ರೋಗಿಯ ಜೀವರಕ್ಷಣೆ ಮತ್ತು ಮರ್ಮಾಘಾತ ಮುಂತಾದ ರೋಗಗಳಿಗೆ ಪ್ರಥಮ ಚಿಕಿತ್ಸೆ

೫. ರಕ್ತಸ್ರಾವ, ಗಾಯ, ಮೂಳೆಮುರಿತ ಮುಂತಾದವುಗಳಿಗೆ ಪ್ರಥಮ ಚಿಕಿತ್ಸೆ

೬. ಉಸಿರುಗಟ್ಟುವುದು, ಸುಟ್ಟುಕೊಳ್ಳುವುದು, ಪ್ರಾಣಿಗಳ ಕಡಿತ ಇತ್ಯಾದಿಗಳಿಗೆ ಪ್ರಥಮ ಚಿಕಿತ್ಸೆ

ಐ. ಹಿಂದೂ ಧರ್ಮದಲ್ಲಿನ ನಿತ್ಯ ಆಚಾರಗಳ ಪಾಲನೆ ಕಲಿಸುವ ಗ್ರಂಥಮಾಲಿಕೆ

ದಿನಚರಿ ಖಂಡ ೧ – ಸ್ನಾನದ ಮೊದಲಿನ ಆಚಾರಗಳ ಹಿಂದಿನ ಶಾಸ್ತ್ರ

ಓ. ಸುಖ ಜೀವನ ಮತ್ತು ವ್ಯಕ್ತಿತ್ವ ಅಭಿವೃದ್ಧಿಗಳಿಗಾಗಿ ಉಪಯುಕ್ತ ಗ್ರಂಥಮಾಲಿಕೆ

ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿಯ ಪ್ರಕ್ರಿಯೆ ನಮ್ಮಲ್ಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?

ಔ. ಪ.ಪೂ. ಬಾಳಾಜಿ ಆಠವಲೆ ಇವರ ವಿಚಾರಸಂಪತ್ತು ಖಂಡ ೩ – ಸುಗಮ ಅಧ್ಯಾತ್ಮ

ಕ. ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು (ರಾಷ್ಟ್ರಜಾಗೃತಿ, ಧರ್ಮರಕ್ಷಣೆ ಮುಂತಾದ ವಿಷಯಗಳಲ್ಲಿನ ಮಾರ್ಗದರ್ಶನ !)

ಖ. ಪರಾತ್ಪರ ಗುರು ಡಾ. ಆಠವಲೆ ಇವರು ರಚಿಸಿದ ಆಧ್ಯಾತ್ಮಿಕ ಕಾವ್ಯಸಂಗ್ರಹ

ಗ. ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರ ಪ್ರಶಂಸೆ ಮಾಡುವ ಕವಿತೆ – ‘ಸಾಧಕರೇ, ನೀವು ಗೆದ್ದಿರಿ, ನಾನು ಸೋತೆನು !’

ಘ. ಭಜನೆಗಳು ಮತ್ತು ಅವುಗಳ ಭಾವಾರ್ಥ – ಭಾಗ ೧ – ಚಂದ್ರಕಾಂತದಾದಾ ದಳವಿ

ಚ. ಸಂತ ಭಕ್ತರಾಜ ಮಹಾರಾಜ ಇವರ ಬೋಧನೆ

ಛ. ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ (ಗುಣವೈಶಿಷ್ಟ್ಯಗಳು, ಕಾರ್ಯ, ಸಿದ್ಧಿ ಮತ್ತು ದೇಹತ್ಯಾಗ)