ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

೧. ಪಾಕ ಜೊತೆ ಯಾವುದೇ ವ್ಯವಹಾರ ಮಾಡಬೇಡಿ !

‘ಭಾರತದೊಂದಿಗೆ ವ್ಯಾವಹಾರಿಕ ಸಂಬಂಧವಿರುವುದು ಪ್ರಸ್ತುತ ಅಗತ್ಯವಾಗಿದೆ. ಇದರಿಂದ ಎರಡೂ ದೇಶಗಳಿಗೆ ಲಾಭವಿದೆ’, ಎಂದು ಪಾಕಿಸ್ತಾನ ಹೇಳಿದೆ. ಕಾಶ್ಮೀರದಿಂದ ೩೭೦ ನೇ ವಿಧಿಯನ್ನು ತೆಗೆದು ಹಾಕಿದ ನಂತರ, ಪಾಕಿಸ್ತಾನವು ಭಾರತದೊಂದಿಗಿನ ಎಲ್ಲಾ ವ್ಯಾಪಾರಿ ಸಂಬಂಧಗಳನ್ನು ಕೊನೆಗೊಳಿಸಿತ್ತು.

೨. ಪೊಲೀಸರ ಹಿಂದೂದ್ವೇಷವನ್ನು ತಿಳಿಯಿರಿ !

ಛತ್ರಪತಿ ಶಿವಾಜಿ ಮಹಾರಾಜರು ಕಟುಕನ ಕೈ ಕತ್ತರಿಸಿದ ಇತಿಹಾಸವನ್ನು ಫೇಸಬುಕ್ ಮೂಲಕ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಾರಾಷ್ಟ್ರದ ಧುಳೆಯ ಗೋರಕ್ಷಕ ಸಂಜಯ ಶರ್ಮಾ ಹಾಗೂ ಪ್ರಣಿಲ್ ಮಂಡಲಿಕ, ಜಯೇಶ ಪಾಟೀಲ್ ಮತ್ತು ಪ್ರದೀಪ ಜಾಧವ ಈ ಹಿಂದುತ್ವನಿಷ್ಠರನ್ನು ಬಂಧಿಸಿದ್ದಾರೆ.

೩. ಇಂತಹ ಹಿಂದುತ್ವನಿಷ್ಠರನ್ನು ಯಾರು ರಕ್ಷಿಸುವರು ?

ಭಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆಯ ಹಿಂದಿನ ಎಲ್ಲಕ್ಕಿಂತ ದೊಡ್ಡ ಕಾರಣವೆಂದರೆ ‘ಅವನೊಬ್ಬ ಹಿಂದೂ ಕಾರ್ಯಕರ್ತನಾಗಿದ್ದನು ಮತ್ತು ನಿರ್ಭೀತವಾಗಿ ಧ್ವನಿ ಎತ್ತುತ್ತಿದ್ದನು’, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ರಿಪಬ್ಲಿಕ್ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

೪. ಸರ್ವೋಚ್ಚ ನ್ಯಾಯಾಲಯದ ಇಂತಹ ಅಗೌರವ ಲಜ್ಜಾಸ್ಪದ !

‘ನ್ಯಾಯಾಲಯದ ಆದೇಶವನ್ನು ಪಾಲಿಸದಿದ್ದಲ್ಲಿ ಅಥವಾ ನ್ಯಾಯಾಲಯಕ್ಕೆ ಉತ್ತರವನ್ನು ಪ್ರಸ್ತುತ ಪಡಿಸಲು ವಿಳಂಬವಾದಲ್ಲಿ, ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರಕಾರದಿಂದ ೫ ಸಾವಿರ ರೂಪಾಯಿಯಿಂದ ಒಂದೂವರೆ ಲಕ್ಷದವರೆಗೆ ದಂಡವನ್ನು ವಸೂಲಿ ಮಾಡುವುದು’, ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

೫. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

‘ತಮಿಳುನಾಡಿನಲ್ಲಿ ಭಾಜಪದ ‘ಬೆಳವಣಿಗೆ’ಯನ್ನು ತಡೆಯಬೇಕಾದರೆ ಜನರನ್ನು ಮತಾಂತರಿಸುವುದು ಆವಶ್ಯಕ’ ಎಂದು ತಥಾಕಥಿತ ಪ್ರಗತಿಪರ ಲೇಖಕಿ ಶಾಲೀನ ಮಾರಿಯಾ ಲಾರೆನ್ಸ್ ಇವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ನೀಡಿದ್ದಾರೆ.

೬. ಜಾತ್ಯತೀತವಾದಿಗಳು ಈಗೇಕೆ ಸುಮ್ಮನಿದ್ದಾರೆ ?

ಆಂಧ್ರಪ್ರದೇಶದ ಆತ್ಮಕೂರ ಪೊಲೀಸ್ ಠಾಣೆಯ ಮೇಲೆ ಮತಾಂಧರು ನಡೆಸಿದ ದಾಳಿಯಲ್ಲಿ ಪಾಲ್ಗೊಂಡ ಪ್ರಕರಣದಲ್ಲಿ ಪೊಲೀಸರು ಮುಖ್ಯ ಪೊಲೀಸ್ ಹವಾಲದಾರ ಶೇಖ ಅಥಾಉಲ್ಲಾಹನನ್ನು ಬಂಧಿಸಿದ್ದಾರೆ. ಕರ್ತವ್ಯದಲ್ಲಿರುವಾಗಲೇ ಆತ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದನು.

೭. ಮತಾಂಧರಿಂದ ಇಂತಹ ಕೃತಿಗಳು ಎಂದಾದರೂ ನಡೆಯುತ್ತದೆಯೇ ?

 ಯುಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ, ಇಸ್ಕಾನ್ ಈ ಆಧ್ಯಾತ್ಮಿಕ ಸಂಸ್ಥೆಯು ಅಲ್ಲಿಯ ನಾಗರಿಕರಿಗೆ ಸಹಾಯ ಮಾಡಲು ಮುಂದಾಳತ್ವ ವಹಿಸಿದೆ. ಇದಕ್ಕಾಗಿ, ಯುಕ್ರೇನ್‌ನಲ್ಲಿರುವ ಎಲ್ಲಾ ೫೪ ದೇವಾಲಯಗಳನ್ನು ತೆರೆಯಲಾಗಿದೆ.