ತಾಯಿಯ ಅನುಮತಿಯಿಲ್ಲದೆ ಮತಾಂತರ ನಡೆದಿತ್ತು

ಕೌಲಾಲಂಪುರ (ಮಲೇಷ್ಯಾ) – ಇಬ್ಬರು ಹಿಂದೂ ಬಾಲಕರನ್ನು ಇಸ್ಲಾಂಗೆ ಮತಾಂತರಿಸಿರುವುದನ್ನು ಕಾನೂನುಬದ್ಧಗೊಳಿಸಬೇಕೆಂಬ ಸರಕಾರದ ಮನವಿಯನ್ನು ಮಲೇಷ್ಯಾದ ನ್ಯಾಯಾಲಯವು ತಿರಸ್ಕರಿಸಿದೆ. ಈ ಮತಾಂತರವನ್ನು ಮಕ್ಕಳ ತಾಯಿಯ ಒಪ್ಪಿಗೆಯಿಲ್ಲದೆ ಮಾಡಲಾಗಿದೆ. ಇಬ್ಬರೂ ಪೋಷಕರ ಒಪ್ಪಿಗೆಯಿಲ್ಲದೆ ಮತಾಂತರಗೊಳ್ಳುವುದು ಕಾನೂನುಬದ್ಧವಲ್ಲ, ಎಂದು ನ್ಯಾಯಾಲಯ ಹೇಳಿದೆ.
ಲೋಹ್ ಸೀವ್ ಹಾಂಗ್ ಎಂಬ ಹಿಂದೂ ಮಹಿಳೆ ತನ್ನ ಮಕ್ಕಳ ಪಾಲನೆ ಪಡೆಯಲು ಮತ್ತು ಅವರ ಇಸ್ಲಾಂಗೆ ಮತಾಂತರವನ್ನು ಅಕ್ರಮವೆಂದು ಘೋಷಿಸಲು 8 ವರ್ಷಗಳ ಸುದೀರ್ಘ ಹೋರಾಟ ನಡೆಸಿದರು. 2022 ರಲ್ಲಿ, ಹಾಂಗ್ ಅವರು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ಸೋತರು. ನಂತರ ಅವರು ಉಚ್ಚ ನ್ಯಾಯಾಲಯದ ತೀರ್ಪನ್ನು ಫೆಡರಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಹಿರಿಯ ನ್ಯಾಯಾಲಯವು ಈ ಮತಾಂತರವನ್ನು ಅಕ್ರಮವೆಂದು ತೀರ್ಪು ನೀಡಿತು. ಈ ಮತಾಂತರವು ಮಲೇಷ್ಯಾದ ಪೆರ್ಲಿಸ್ ರಾಜ್ಯದಲ್ಲಿ ನಡೆದಿತ್ತು. ವಿಚಾರಣೆಯ ಸಮಯದಲ್ಲಿ, ಫೆಡರಲ್ ನ್ಯಾಯಾಲಯವು ಪೆರ್ಲಿಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. “ಪೆರ್ಲಿಸ್ ಸರಕಾರದ ಪರವಾಗಿ ವಾದಿಸಲು ಅವಕಾಶ ನೀಡಿದರೆ, ಮತಾಂತರದಂತಹ ಸಂವಿಧಾನ ವಿರೋಧಿ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ” ಎಂದು ಫೆಡರಲ್ ನ್ಯಾಯಾಲಯ ಹೇಳಿತ್ತು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump