ಆಂಗ್ಲ ಮತ್ತು ಸಂಸ್ಕೃತ ಅಕ್ಷರಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಆಂಗ್ಲ ಅಕ್ಷರಗಳ ತುಲನೆಯಲ್ಲಿ ಸಂಸ್ಕೃತ (ಹಿಂದಿ, ಮರಾಠಿ) ಅಕ್ಷರಗಳಿಂದ ವಾಯುಮಂಡಲದ ಮೇಲಾಗುವ ಪರಿಣಾಮದ ಅಧ್ಯಯನಕ್ಕಾಗಿ ‘ಪಿಪ್ (ಪಾಲಿಕಾನ್ಟ್ರಾಸ್ಟ್ ಇಂಟರಫೆರನ್ಸ್ ಫೋಟೋಗ್ರಾಫಿ) ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ವೈಜ್ಞಾನಿಕ ಪರೀಕ್ಷಣೆ !
‘ಭಾಷೆ ಇದು ಸಂವಾದದ, ಹಾಗೆಯೇ ವಿಚಾರ ಮತ್ತು ಭಾವನೆಯನ್ನು ವ್ಯಕ್ತಪಡಿಸುವ ಮಹತ್ವದ ಮಾಧ್ಯಮವಾಗಿದೆ. ಭಾಷೆಯಲ್ಲಿನ ವಿವಿಧ ಧ್ವನಿಗಳನ್ನು ವ್ಯಕ್ತಪಡಿಸುವ ಲಿಖಿತ ಚಿಹ್ನೆಗಳನ್ನು ‘ಅಕ್ಷರ ಎಂದು ಹೇಳುತ್ತಾರೆ. ಆಂಗ್ಲ ಮತ್ತು ಸಂಸ್ಕೃತ (ಹಿಂದಿ, ಮರಾಠಿ) ಈ ಭಾಷೆಗಳಲ್ಲಿನ ಅಕ್ಷರಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳಿಂದ ವಾಯುಮಂಡಲದ ಮೇಲೆ ಯಾವ ಪರಿಣಾಮವಾಗುತ್ತದೆ, ಎಂದು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಉದ್ದೇಶದಿಂದ ಆಂಗ್ಲ ‘A’ ಮತ್ತು ಸಂಸ್ಕೃತ (ಹಿಂದಿ, ಮರಾಠಿ) ಭಾಷೆಯಲ್ಲಿನ ‘ए’ ಈ ಅಕ್ಷರಗಳ ಛಾಯಾಚಿತ್ರಗಳ ‘ಪಿಪ್ (ಪಾಲಿಕಾನ್ಟ್ರಾಸ್ಟ್ ಇಂಟರಫೆರನ್ಸ್ ಫೋಟೋಗ್ರಾಫಿ) ತಂತ್ರಜ್ಞಾನದ ಸಹಾಯದಿಂದ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳು ಮತ್ತು ಅವುಗಳ ವಿವರಣೆಯನ್ನು ಮುಂದೆ ನೀಡಲಾಗಿದೆ.
೧. ವೈಜ್ಞಾನಿಕ ಪರೀಕ್ಷಣೆಯಲ್ಲಿನ ಘಟಕಗಳ ಬಗೆಗಿನ ಮಾಹಿತಿ
೧ ಅ. ಆಂಗ್ಲ ಅಕ್ಷರಗಳು : ಆಂಗ್ಲ, ಫ್ರೆಂಚ್ ಮುಂತಾದ ಪಾಶ್ಚಾತ್ಯ ಭಾಷೆಗಳಲ್ಲಿ ಬರವಣಿಗೆಗಾಗಿ ‘ರೋಮನ್ ಲಿಪಿ’ಯನ್ನು ಬಳಸುತ್ತಾರೆ. ಆಂಗ್ಲ ಭಾಷೆಯ ವರ್ಣಮಾಲೆಯಲ್ಲಿ ‘A’, ‘B’, ‘C’ ಮುಂತಾದ ೨೬ ಮೂಲಾಕ್ಷರಗಳಿವೆ.
೧ ಆ. ಸಂಸ್ಕೃತ (ಹಿಂದಿ, ಮರಾಠಿ) ಅಕ್ಷರಗಳು : ಸಂಸ್ಕೃತ (ಮತ್ತು ಸಂಸ್ಕೃತೋದ್ಭವ) ಮರಾಠಿ, ಹಿಂದಿ ಇವುಗಳಂತಹ ಭಾರತೀಯ ಭಾಷೆಗಳಲ್ಲಿನ ಬರವಣಿಗೆಗಾಗಿ ‘ದೇವನಾಗರಿ ಲಿಪಿ’ಯನ್ನು ಬಳಸುತ್ತಾರೆ. ಸಂಸ್ಕೃತದಲ್ಲಿ ೬೪, ಮರಾಠಿ ಭಾಷೆಯಲ್ಲಿ ‘अ’, ‘आ’, ‘इ, ಮುಂತಾದ ೫೨ ಮೂಲಾಕ್ಷರಗಳಿವೆ ಮತ್ತು ಹಿಂದಿ ಭಾಷೆಯಲ್ಲಿ ೧೧ ಸ್ವರಗಳು (अं, अः ಬಿಟ್ಟು) + ೩೩ ವ್ಯಂಜನಗಳು (क्ष, त्र ಮತ್ತು ज्ञ ಬಿಟ್ಟು) = ೪೪ ವರ್ಣಗಳು ಮತ್ತು ಸಂತ ಕಬೀರರ ದ್ವಿಪದಿಗನುಸಾರ ೫೨ ಇವೆ.
‘ಪಿಪ್’ ಪರೀಕ್ಷಣೆಗಾಗಿ ಆಂಗ್ಲ’A’ ಮತ್ತು ಸಂಸ್ಕೃತ (ಹಿಂದಿ, ಮರಾಠಿ) ಭಾಷೆಯಲ್ಲಿನ ‘ए ಇದು ಒಂದೇ ರೀತಿಯ ಉಚ್ಚಾರವಿರುವ; ಆದರೆ ಭಿನ್ನ ಆಕೃತಿಯಿಂದ ದರ್ಶಿಸಲಾಗುವ ಅಕ್ಷರಗಳನ್ನು ಆಯ್ದುಕೊಳ್ಳಲಾಗಿದೆ.
೨. ಪರೀಕ್ಷಣೆಯ ಸ್ವರೂಪ
ಈ ಪರೀಕ್ಷಣೆಯಲ್ಲಿ ಆಂಗ್ಲ ‘A’ ಮತ್ತು ಸಂಸ್ಕೃತ (ಹಿಂದಿ, ಮರಾಠಿ) ಭಾಷೆಯಲ್ಲಿನ ‘ए’ ಈ ಅಕ್ಷರಗಳ ಛಾಯಾಚಿತ್ರಗಳನ್ನಿಡುವ ಮೊದಲಿನ ಮತ್ತು ನಂತರದ ವಾತಾವರಣದ ತೆಗೆದುಕೊಳ್ಳಲಾದ ‘ಪಿಪ್’ ಛಾಯಾಚಿತ್ರಗಳನ್ನು ಆಯ್ದುಕೊಳ್ಳಲಾಗಿದೆ. ಈ ಎರಡೂ ಅಕ್ಷರಗಳಿಂದ ಪ್ರಕ್ಷೇಪಿತವಾಗುತ್ತಿರುವ ಸ್ಪಂದನಗಳಿಂದ ವಾತಾವರಣದ ಮೇಲೆ ಯಾವ ಪರಿಣಾಮವಾಗುತ್ತವೆ, ಎಂಬುದನ್ನು ಈ ಪರೀಕ್ಷಣೆಯ ಮೂಲಕ ತಿಳಿದುಕೊಂಡೆವು.
೩. ನಿರೀಕ್ಷಣೆಗಳು ಮತ್ತು ಅವುಗಳ ವಿವೇಚನೆ
ಮುಂದಿನ ಕೋಷ್ಟಕದಲ್ಲಿ ‘ಮೂಲಭೂತ ನೋಂದಣಿ’ಯ ಪ್ರಭಾವಲಯದಲ್ಲಿನ (ಪರೀಕ್ಷಣೆಯಲ್ಲಿನ ಘಟಕಗಳನ್ನು ಪರೀಕ್ಷಣೆ ಗಾಗಿ ಇಡುವ ಮೊದಲಿನ ವಾತಾವರಣದ ಪ್ರಭಾವಲಯದಲ್ಲಿನ) ಮತ್ತು ಪರೀಕ್ಷಣೆಯಲ್ಲಿನ ಘಟಕಗಳ ಪ್ರಭಾವಲಯದಲ್ಲಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ದರ್ಶಿಸುವ ಬಣ್ಣಗಳ ಪ್ರಮಾಣವನ್ನು ನೀಡಲಾಗಿದೆ. ಮುಂದೆ ನೀಡಲಾದ ವಿವೇಚನೆಯಲ್ಲಿ ಪರೀಕ್ಷಣೆಯಲ್ಲಿನ ಘಟಕಗಳ ಪ್ರಭಾವಲಯಗಳ ತುಲನೆಯನ್ನು ‘ಮೂಲಭೂತ ನೋಂದಣಿ’ಯ ಪ್ರಭಾವಲಯ ದೊಂದಿಗೆ ಮಾಡಲಾಗಿದೆ.
ಟಿಪ್ಪಣಿ – ಘಟಕದ ಕೇವಲ ಬಾಹ್ಯ ಸ್ತರದ ನಕಾರಾತ್ಮಕ ಸ್ಪಂದನ ಗಳನ್ನು ನಾಶ ಮಾಡುವ ಮತ್ತು ಸಕಾರಾತ್ಮಕ ಸ್ಪಂದನಗಳ ವೃದ್ಧಿ ಮಾಡುವ ಕ್ಷಮತೆ
– ಶ್ರೀ ರೂಪೇಶ ಲಕ್ಷ್ಮಣ ರೆಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೯.೯.೨೦೧೫)
೩. ವಿವೇಚನೆ
೧. ಆಂಗ್ಲ ಅಕ್ಷರ ‘A’ದಲ್ಲಿ ನಕಾರಾತ್ಮಕ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗಿವೆ.
೨. ಸಂಸ್ಕೃತ (ಹಿಂದಿ, ಮರಾಠಿ) ಅಕ್ಷರ ‘ए ಯಿಂದ ಸಕಾರಾತ್ಮಕ ಸ್ಪಂದನಗಳು ಬಹಳಷ್ಟು ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿವೆ.
೪. ನಿಷ್ಕರ್ಷ
ಮೇಲಿನ ಪರೀಕ್ಷಣೆಯಿಂದ ಏನು ಗಮನಕ್ಕೆ ಬರುವ ಅಂಶವೆಂದರೆ,
ಅ. ಆಂಗ್ಲ ಅಕ್ಷರ ‘A’ ನಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವು ದಾಗಿರುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಹಾನಿಕರವಾಗಿವೆ.
ಆ. ಸಂಸ್ಕೃತ (ಹಿಂದಿ, ಮರಾಠಿ) ಅಕ್ಷರ ‘ए’ ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವುದಾಗಿರುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ.
ಇದರ ಹಿಂದಿನ ಕಾರಣವನ್ನು ಮುಂದಿನ ಅಂಶದಲ್ಲಿ ಕೊಡಲಾಗಿದೆ.
– ಶ್ರೀ. ರೂಪೇಶ ಲಕ್ಷ್ಮಣ ರೆಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
೫. ಸಂಸ್ಕೃತ (ಹಿಂದಿ, ಮರಾಠಿ) ಭಾಷೆಯಲ್ಲಿನ ಅಕ್ಷರಗಳ ರೂಪ ಮತ್ತು ಉಚ್ಚಾರವು ಒಂದೇ ರೀತಿಯಿದೆ ಹಾಗಾಗಿ ಅದರಲ್ಲಿ ಸಕಾರಾತ್ಮಕ (ಸಾತ್ತ್ವಿಕ) ಸ್ಪಂದನಗಳು ಹೆಚ್ಚಾಗಿರುವುದು
‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳೊಂದಿಗೆ ಸಂಬಂಧಿತ ಶಕ್ತಿಯು ಒಟ್ಟಿಗೆ ಇರುತ್ತವೆ, ಇದು ಅಧ್ಯಾತ್ಮದಲ್ಲಿನ ತತ್ತ್ವವಾಗಿದೆ. ಇದಕ್ಕನುಸಾರ ಎಲ್ಲಿ ಶಬ್ದ, ಅಂದರೆ ಉಚ್ಚಾರ ವಿರುತ್ತದೋ ಅಲ್ಲಿ ಅದರ ರೂಪವೂ ಇರುತ್ತದೆ, ಅಂದರೆ ಅದರ ಆಕಾರವಿರುತ್ತದೆ. ‘ए’ ದ ಉಚ್ಚಾರದ, ಅಂದರೆ ‘ಶಬ್ದದ ಯಾವ ರೂಪವಾಗಿದೆ, ಅಂದರಂತೆ ಸಂಸ್ಕೃತ ಭಾಷೆಯ ‘ए’ ಬರೆಯಲಾಗುತ್ತದೆ; ಆದುದರಿಂದ ಸಂಸ್ಕೃತ (ಹಿಂದಿ, ಮರಾಠಿ) ಅಕ್ಷರ ‘ए’ ನಲ್ಲಿ ಸಕಾರಾತ್ಮಕ (ಸಾತ್ತ್ವಿಕ) ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದೇ ಅಂಶವನ್ನು ಸಂಸ್ಕೃತದೊಂದಿಗೆ ಮರಾಠಿ, ಹಿಂದಿ ಈ ಭಾಷೆಗಳಲ್ಲಿನ (ದೇವನಾಗರಿ ಲಿಪಿಯಲ್ಲಿನ) ಎಲ್ಲ ಅಕ್ಷರಗಳಿಗೂ ಅನ್ವಯಿಸುತ್ತದೆ.
ಆಂಗ್ಲ ಅಕ್ಷರ “A’ದ ಉಚ್ಚಾರ ಮತ್ತು ರೂಪ ಇವುಗಳಲ್ಲಿ ವಿರೋಧಾಭಾಸವಿರುವುದರಿಂದ ಅದರಲ್ಲಿ ನಕಾರಾತ್ಮಕ (ತಾಮಸಿಕ) ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿವೆ. ದೇವನಾಗರಿ ಲಿಪಿಯ ಆಧ್ಯಾತ್ಮಿಕ ಸ್ತರದಲ್ಲಿನ ಮಹತ್ವವನ್ನು ತಿಳಿದುಕೊಂಡು ಋಷಿಮುನಿಗಳು ದೇವನಾಗರಿ ಲಿಪಿಯಂತಹ ಅತ್ಯಂತ ಸಾತ್ತ್ವಿಕ ಲಿಪಿಯ ನಿರ್ಮಿಸಿ ಮನುಷ್ಯನ ಮೇಲೆ ಅಪಾರ ಉಪಕಾರವನ್ನೇ ಮಾಡಿದ್ದಾರೆ, ಎಂಬುದರ ಅರಿವಾಗುತ್ತದೆ.
೬. ಎಲ್ಲ ವ್ಯವಹಾರಗಳನ್ನು ಭಾರತೀಯ ಭಾಷೆಗಳ ಮಾಧ್ಯಮದಿಂದಲೇ ಮಾಡಿರಿ !
‘ವಿಜ್ಞಾನದ ಪರೀಕ್ಷೆಯಲ್ಲಿ ಯಾವುದು ಸಿದ್ಧವಾಗುತ್ತದೋ ಅದನ್ನು ಸ್ವೀಕರಿಸುವ ಆಧುನಿಕ ಜಗತ್ತಿನಲ್ಲಿ ದೇವನಾಗರಿ ಲಿಪಿಯ ವೈಜ್ಞಾನಿಕ ದೃಷ್ಟಿಯಲ್ಲಿರುವ ಉಪಯುಕ್ತತೆಯು ಸಿದ್ಧವಾದರೂ ಇಂದಿನವರೆಗೆ ಅದು ಎಲ್ಲೆಡೆ ಪ್ರಚಲಿತವಾಗದಿರುವುದು, ಅಷ್ಟೇ ಅಲ್ಲದೇ ‘ಭಾರತದಲ್ಲಿಯೂ ಎಲ್ಲ ವ್ಯವಹಾರಗಳು ಸಾತ್ತ್ವಿಕ ಭಾರತೀಯ ಭಾಷೆಗಳಲ್ಲಾಗದಿರುವುದು, ಇದು ಭಾರತೀಯ ರಾಜಕಾರಣಿಗಳ ವೈಫಲ್ಯವಲ್ಲವೇ ? ಈ ಸ್ಥಿತಿಯನ್ನು ಬದಲಾಯಿಸಲು ಎಲ್ಲ ವ್ಯವಹಾರಗಳು ಸಂಸ್ಕೃತ ಮತ್ತು ಸಂಸ್ಕೃತೋದ್ಭವ ಮರಾಠಿ, ಹಿಂದಿ ಇವುಗಳಂತಹ ಭಾರತೀಯ ಭಾಷೆಗಳಲ್ಲಿಯೇ ಇರಬೇಕು !
– ಶ್ರೀ. ರೂಪೇಶ ಲಕ್ಷ್ಮಣ ರೆಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೯.೯.೨೦೧೫)
ವಿ-ಅಂಚೆ : mav[email protected]
ಯಾವುದೇ ಸ್ಥೂಲ ಉಪಕರಣವನ್ನು ಬಳಸದೇ ಅಧ್ಯಾತ್ಮಶಾಸ್ತ್ರದ ಬಗ್ಗೆ ಜ್ಞಾನವನ್ನು ನೀಡುವ ಋಷಿಮುನಿಗಳು ವಿಜ್ಞಾನಕ್ಕಿಂತ ಶ್ರೇಷ್ಠರು !‘ಪ್ರಾಚೀನ ಋಷಿಮುನಿಗಳು ದೇವನಾಗರಿಯಂತಹ ಅತ್ಯಂತ ಸಾತ್ತ್ವಿಕ ಲಿಪಿಯನ್ನು ತಯಾರಿಸಿದರು ಅವರಿಗೆ ಧ್ವನಿ ಮತ್ತು ಅದರೊಂದಿಗೆ ಸಂಬಂಧಿತ ರೂಪ (ಆಕೃತಿ) ಇವುಗಳ ಬಗ್ಗೆ ದೊರಕಿದ ಜ್ಞಾನವು ಯಾವುದೇ ಸ್ಥೂಲ ಉಪಕರಣದಿಂದಲ್ಲ, ಆದರೆ ಸಾಧನೆಯಿಂದ ಪ್ರಾಪ್ತವಾಗಿತ್ತು. ಅವರು ಪಡೆದುಕೊಂಡ ಆಳವಾದ ಜ್ಞಾನದಲ್ಲಿನ ಕೇವಲ ಅಂಶಮಾತ್ರ ಜ್ಞಾನದ ಸತ್ಯತೆಯನ್ನು ‘ಪಿಪ್ ಈ ವೈಜ್ಞಾನಿಕ ಉಪಕರಣದ ಮೂಲಕ ತಿಳಿದುಕೊಳ್ಳಲಾಯಿತು. ಇದರಿಂದ ಋಷಿಮುನಿಗಳು ಯಾವುದೇ ಸ್ಥೂಲ ಉಪಕರಣವನ್ನು ಬಳಸದೇ ಸಾಧನೆಯಿಂದ ಸೂಕ್ಷ್ಮದಿಂದ ತಿಳಿದುಕೊಂಡಿರುವುದು ಎಷ್ಟು ಯೋಗ್ಯವಾಗಿದೆ, ಎಂಬುದೇ ಗಮನಕ್ಕೆ ಬರುತ್ತದೆ ! |