ಹಿಜಾಬ್-ಬುರಖಾ ತೊಡುವ ಇಸ್ಲಾಮಿಕ್ ದೇಶಗಳಲ್ಲಿ ಏಕೆ ಅತ್ಯಾಚಾರಗಳು ನಡೆಯುತ್ತವೆ ?

೧. ಹಿಜಾಬ್-ಬುರಖಾ ತೊಡುವ ಇಸ್ಲಾಮಿಕ್ ದೇಶಗಳಲ್ಲಿ ಏಕೆ ಅತ್ಯಾಚಾರಗಳು ನಡೆಯುತ್ತವೆ ?

‘ವಿಶ್ವದಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ಭಾರತದಲ್ಲಿ ನಡೆಯುತ್ತವೆ; ಏಕೆಂದರೆ ಇಲ್ಲಿನ ಮಹಿಳೆಯರು ಹಿಜಾಬ್‌ನಿಂದ ಮುಖ ಮುಚ್ಚಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಹೇಳಿಕೆ ನೀಡಿ ಅನಂತರ ವಿರೋಧವಾದಾಗ ಕ್ಷಮೆಯಾಚಿಸಿದ್ದಾರೆ.

೨. ಇಸ್ಲಾಮಿ ದೇಶಗಳಲ್ಲಿನ ಹಿಂದೂಗಳ ರಕ್ಷಣೆಗಾಗಿ ಭಾರತವು ಯಾವಾಗ ಮಾತನಾಡಲಿದೆ ?

‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ ಈ ಇಸ್ಲಾಮೀ ದೇಶಗಳ ಸಂಘಟನೆಯು ಹಿಜಾಬ್ ವಿಷಯದಲ್ಲಿ ‘ಭಾರತವು, ಮುಸಲ್ಮಾನರು ಮತ್ತು ಮಹಿಳೆಯರಿಗೆ ರಕ್ಷಣೆ ನೀಡಬೇಕು, ಎಂದು ವಿಶ್ವಸಂಸ್ಥೆಯ ಬಳಿ ಆಗ್ರಹಿಸಿದೆ.

೩. ಇಂತಹವರು ಇಸ್ಲಾಮಿಕ್ ದೇಶಕ್ಕೆ ತೆರಳಲಿ !

ಉಚ್ಚ  ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಕೆಲವು ಶಾಲೆಗಳಲ್ಲಿ ಮುಸಲ್ಮಾನ ಹೆಣ್ಣುಮಕ್ಕಳು ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಧರಿಸಿ ಬಂದಿದ್ದರು. ಅವರಿಗೆ ಹಿಜಾಬ್ ತೆಗೆಯಲು ಹೇಳಿದಾಗ ಅವರು ನಿರಾಕರಿಸಿದರು ಮತ್ತು ಪರೀಕ್ಷೆಯನ್ನು  ಬರೆಯದೇ ಹೊರಟು ಹೋದ ಪ್ರಕರಣಗಳೂ ನಡೆದಿರುತ್ತವೆ.

೪. ಇಂತಹ ಘಟನೆಗಳ ಬಗ್ಗೆ ಮಹಿಳಾ ಸಂಘಟನೆಗಳು ಏಕೆ ಮಾತನಾಡುವುದಿಲ್ಲ?

ದೆಹಲಿಯ ೭ ವರ್ಷದ ಬಾಲಕಿಯ ಮೇಲೆ ಖಲೀಲ್ ಉಸ್ಮಾನ್ ಎಂಬ ಆಕೆಯ ಸೋದರ ಮಾವನೇ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಬಿಹಾರದ ಕಿಶನ್‌ಗಂಜನಿಂದ ಉಸ್ಮಾನ್‌ನನ್ನು ಬಂಧಿಸಿದ್ದಾರೆ.

೫. ಇದು ಕಾಂಗ್ರೆಸ್ಸಿನ ಗಾಂಧಿಗಿರಿ ಆಗಿದೆಯೇ ?

ನಮ್ಮ ಹೆಣ್ಣುಮಕ್ಕಳನ್ನು ಹಿಜಾಬ್ ಧರಿಸದಂತೆ ತಡೆಯುವವರನ್ನು ತುಂಡು ತುಂಡಾಗಿ ಕತ್ತರಿಸಲಾಗು ವುದು ಎಂದು ಕಾಂಗ್ರೆಸ್ ಮುಖಂಡ ಮುಕರ್ರಮ ಖಾನ್ ಇವರು ಬೆದರಿಕೆ ಹಾಕಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ.

೬. ಆಮ್ ಆದ್ಮಿ ಪಕ್ಷದ ಲಂಚಕೋರ ಜನಪ್ರತಿನಿಧಿಯನ್ನು ಅರಿತುಕೊಳ್ಳಿ

ಭ್ರಷ್ಟಾಚಾರವನ್ನು ವಿರೋಧಿಸಲು ಸ್ಥಾಪಿಸಲಾದ ಆಮ್ ಆದ್ಮಿ ಪಕ್ಷದಲ್ಲಿಯೂ ಭ್ರಷ್ಟಾಚಾರಿಗಳಿದ್ದಾರೆ. ನವ ದೆಹಲಿಯಲ್ಲಿನ ‘ಆಪ್ನ ನಗರಸೇವಕಿ ಗೀತಾ ರಾವತ್ ಇವರು ೨೦ ಸಾವಿರ ರೂಪಾಯಿಗಳ ಲಂಚ ಪಡೆಯುವಾಗ ‘ಸಿಬಿಐ ಅವರನ್ನು ಬಂಧಿಸಿದೆ.

೭.ಕೇರಳದ ಭ್ರಷ್ಟ ಕಮ್ಯುನಿಸ್ಟ್ ಸರಕಾರ

ಕೇರಳ ಸರಕಾರದ ಸಚಿವರು ಕೇರಳ ಜನರ ಹಣವನ್ನು ದುರುಪಯೋಗಿಸುತ್ತಿದ್ದಾರೆ ಎಂದು ಕೇರಳ ರಾಜ್ಯದ ರಾಜ್ಯಪಾಲ ಅರಿಫ್ ಮಹಮ್ಮದ್ ಖಾನ್ ಅವರು ವಿಧಾನಸಭೆಯ ಭಾಷಣದಲ್ಲಿ ಆರೋಪಿಸಿದ್ದಾರೆ.