ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಹಿಜಾಬ ಧರಿಸಿ ಬಂದ ೧೦ ವಿದ್ಯಾರ್ಥಿನಿಯರ ಮೇಲೆ ಅಪರಾಧ ನೋಂದಾಯಿಸಲಾಗಿದೆ !

ರಾಜ್ಯದಾದ್ಯಂತ ೫೮ ವಿದ್ಯಾರ್ಥಿನಿಯರನ್ನು ವಜಾಗೊಳಿಸಲಾಗಿದೆ.

* ಕರ್ನಾಟಕ ಸರಕಾರದ ಅಭಿನಂದನಾರ್ಹ ನಿರ್ಣಯ ! ಇಂತಹ ಕಠೋರತೆಯನ್ನು ತೋರಿಸಿದಾಗಲೇ ಕಾನೂನು ಉಲ್ಲಂಘಿಸುವವರು ಪಾಠ ಕಲಿಯುತ್ತಾರೆ ! – ಸಂಪಾದಕರು 

ತುಮಕೂರು (ಕರ್ನಾಟಕ) – ಕರ್ನಾಟಕ ಉಚ್ಚ ನ್ಯಾಯಾಲಯವು ಹಿಜಾಬ (ಮುಸಲ್ಮಾನ ಮಹಿಳೆಯರು ತಲೆ ಹಾಗೂ ಕುತ್ತಿಗೆಯನ್ನು ಮುಚ್ಚಲು ಬಳಸಿದ ಬಟ್ಟೆ) ಪ್ರಕರಣದಲ್ಲಿ ಅಂತಿಮ ತೀರ್ಪು ಬರುವ ವರೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬಟ್ಟೆಗಳ ಮೇಲೆ ನಿರ್ಬಂಧ ಹೇರುವ ಆದೇಶ ನೀಡಿದೆ. ಆದರೂ ತುಮಕೂರಿನಲ್ಲಿ ಈ ಆದೇಶವನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ೧೦ ಮುಸಲ್ಮಾನ ವಿದ್ಯಾರ್ಥಿನಿಯರ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಇಲ್ಲಿನ ‘ಗರ್ಲ್ಸ್‌ ಎಂಪ್ರೆಸ ಗವ್ಹರ್ನಮೆಂಟ ಪಿಯು ಕಾಲೇಜ’ನ ಈ ವಿದ್ಯಾರ್ಥಿನಿಯರು ೨ ದಿನಗಳ ವರೆಗೆ ಆದೇಶದ ಉಲ್ಲಂಘನೆ ಮಾಡಿ ಮಹಾವಿದ್ಯಾಲಯವನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು. ಹಿಜಾಬ ಧರಿಸಿ ಬರುವ ಹಾಗೂ ಪ್ರದರ್ಶನ ಮಾಡುವ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ವಿವಿಧ ಮಹಾವಿದ್ಯಾಲಯಗಳಲ್ಲಿನ ೫೮ ವಿದ್ಯಾರ್ಥಿನಿಯರನ್ನು ವಜಾಗೊಳಿಸಲಾಗಿದೆ.

ಮುಂದಿನ ಆದೇಶ ಬರುವ ವರೆಗೆ ರಾಜ್ಯದಲ್ಲಿನ ಶಾಲೆ ಮತ್ತು ಮಹಾವಿದ್ಯಾಲಯಗಳನ್ನು ಮುಚ್ಚುವ ಆದೇಶ

ನ್ಯಾಯಾಲಯದ ಆದೇಶ ಇರುವಾಗಲೂ ಫೆಬ್ರುವರಿ ೧೯ರಂದುಅ ನೇಕ ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ ಧರಿಸಿ ಪ್ರವೇಶಿಸಲು ಪ್ರಯತ್ನಿಸಿದ್ದರು. ಆಗ ಅವರಿಗೆ ಪ್ರವೇಶ ನೀಡಲು ನಿರಾಕರಿಸಲಾಯಿತು. ಒತ್ತಡ ಹೆಚ್ಚಾಗಿದ್ದರಿಂದ ರಾಜ್ಯ ಸರಕಾರವು ಶಾಲೆ ಮತ್ತು ಮಹಾವಿದ್ಯಾಲಯಗಳನ್ನು ಮುಚ್ಚಿದೆ. ಈ ವಿಷಯದಲ್ಲಿ ಮುಂದಿನ ಆದೇಶಗಳನ್ನು ನೀಡಲಾಗುವುದು.

ಹೊರಗಿನ ಜನರಿಂದ ಭ್ರಮೆಯ ಸ್ಥಿತಿ – ಮುಖ್ಯಮಂತ್ರಿ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿದ್ಯಾರ್ಥಿಗಳ ಮೇಲೆ ದೂರನ್ನು ನೋಂದಾಯಿಸಿರುವ ಬಗ್ಗೆ ಮಾತನಾಡುತ್ತ ‘ಹಿಜಾಬಿನ ಪ್ರಕರಣದಲ್ಲಿ ರಾಜ್ಯದ ಹೊರಗಿನ ಜನರ ಸಹಭಾಗವಿರುವುದರಿಂದ ಭ್ರಮೆಯ ಸ್ಥಿತಿ ನಿರ್ಮಾಣವಾಗಿದೆ. ಮಹಾವಿದ್ಯಾಲಯ, ಸರಕಾರ, ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಈ ಪ್ರಕರಣವನ್ನು ಬಗೆಹರಿಸಲು ಸಾಧ್ಯವಿದ್ದರೆ ಇಲ್ಲಿಯ ವರೆಗೆ ಬಗೆಹರಿಯುತ್ತಿತ್ತು. ನಾನು ಎಲ್ಲ ಪ್ರಕರಣಗಳ ಮಾಹಿತಿಯನ್ನು ಪಡೆದು ಅವುಗಳ ಮೇಲೆ ಗಮನ ನೀಡುವೆನು’ ಎಂದು ಹೇಳಿದರು.