ಮಹಾಶಿವರಾತ್ರಿಯ ದಿನಂದು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರೆ ಅದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ

ಪೂಜೋಪಚಾರದ ವಿಷಯದಲ್ಲಿ ನಾವೀನ್ಯಪೂರ್ಣ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

‘ಮಹಾಶಿವರಾತ್ರಿ’ ವ್ರತವನ್ನು ಮಾಘ ಕೃಷ್ಣ ಪಕ್ಷ ಚತುರ್ದಶಿ ತಿಥಿಯಂದು ಮಾಡುತ್ತಾರೆ. ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ಒಂದು ಸಾವಿರ ಪಟ್ಟು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಮಹಾಶಿವರಾತ್ರಿಯ ದಿನ ಶಿವನ ಉಪಾಸನೆ, ಅಭಿಷೇಕ, ಪೂಜೆ ಮತ್ತು ಜಾಗರಣೆಯನ್ನು ಮಾಡುವ ಪರಂಪರೆಯಿದೆ. ಮಹಾಶಿವರಾತ್ರಿಯ ದಿನ (೨೧.೨.೨೦೨೦ರಂದು) ಸನಾತನದ ಕೆಲವು ಸಾಧಕರು ಗೋವಾದ ಧಾಮಸೆಯಲ್ಲಿರುವ ಪೂ. ಭಯ್ಯಾಜಿಯವರ ಆಶ್ರಮದಲ್ಲಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರು.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಮಹಾಶಿವರಾತ್ರಿಯಂದು ಶಿವಲಿಂಗದ ಮೇಲೆ ಅಭಿಷೇಕ ಮಾಡಿದರೆ ವ್ಯಕ್ತಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಲಾಭವಾಗುತ್ತದೆ ?’, ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ಪರೀಕ್ಷಿಸಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಯು.ಎ.ಎಸ್.(ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ

ಸೌ. ಸ್ವಾತಿ ಸಣಸ

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ – ಶಿವಲಿಂಗದ ಮೇಲೆ ಅಭಿಷೇಕ ಮಾಡಿದರೆ ಸಾಧಕರ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ: ಇದು ಮುಂದೆ ನೀಡಿರುವ ಕೋಷ್ಠಕದಿಂದ ಗಮನಕ್ಕೆ ಬರುತ್ತದೆ.

ಮೇಲಿನ ಕೋಷ್ಠಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೧. ಅಭಿಷೇಕದ ಬಳಿಕ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿದ್ದ ನಕಾರಾತ್ಮಕ ಊರ್ಜೆ ಕಡಿಮೆ ಆಯಿತು.

೨. ಅಭಿಷೇಕದ ಬಳಿಕ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಮಹಾಶಿವರಾತ್ರಿಯಂದು ಶಿವನ ಉಪಾಸನೆಯನ್ನು ಮಾಡುವುದರಿಂದ ಕೆಟ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುವುದು : ‘ಭಗವಾನ ಶಿವನು ಮಾಘ ಕೃಷ್ಣ ಪಕ್ಷ ಚತುರ್ದಶಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿನ ಒಂದು ಪ್ರಹರದಲ್ಲಿ ವಿಶ್ರಾಂತಿ ಪಡೆಯುತ್ತಾನೆ. (ಮಹಾಶಿವರಾತ್ರಿಯಂದು ಶಿವಪೂಜೆಯ ಸಮಯವು ಉತ್ತರರಾತ್ರಿ ೧೨ ರಿಂದ ೧.೩೦ ಈ ಕಾಲಾವಧಿಯಲ್ಲಿರುತ್ತದೆ. ಈ ಕಾಲವು ಸಾಧಾರಣ ಒಂದೂವರೆ ಗಂಟೆಯಷ್ಟಿರುತ್ತದೆ). ಮಹಾಶಿವರಾತ್ರಿಯಂದು ಶಿವನ ಉಪಾಸನೆಯನ್ನು ಮಾಡುವುದರ ಹಿಂದಿನ ಶಾಸ್ತ್ರ ಮುಂದಿನಂತಿದೆ. ‘ಶಿವನ ವಿಶ್ರಾಂತಿಯ ಸಮಯದಲ್ಲಿ ಶಿವತತ್ತ್ವದ ಕಾರ್ಯವು ನಿಲ್ಲುತ್ತದೆ / ಸ್ಥಗಿತಗೊಳ್ಳುತ್ತದೆ’. ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಅವಸ್ಥೆಯೆಂದರೆ ಶಿವನು ತನಗಾಗಿ ಸಾಧನೆಯನ್ನು ಮಾಡುವ ಕಾಲ.

ಇದರಿಂದಾಗಿ ವಿಶ್ವದಲ್ಲಿನ ಅಥವಾ ಬ್ರಹ್ಮಾಂಡದಲ್ಲಿನ ತಮೋಗುಣವನ್ನು ಅಥವಾ ಹಾಲಾಹಲವನ್ನು ಶಿವತತ್ತ್ವವು ಆ ಕಾಲಾವಧಿಯಲ್ಲಿ ಸ್ವೀಕರಿಸುವುದಿಲ್ಲ. ಆಗ ಬ್ರಹ್ಮಾಂಡದಲ್ಲಿರುವ ಹಾಲಾಹಲದ ಪ್ರಮಾಣವು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಅಥವಾ ಕೆಟ್ಟ ಶಕ್ತಿಗಳ ಒತ್ತಡವು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದರ ಪರಿಣಾಮ ನಮ್ಮ ಮೇಲೆ ಆಗಬಾರದೆಂದು ಹೆಚ್ಚೆಚ್ಚು ಶಿವತತ್ತ್ವವನ್ನು ಆಕರ್ಷಿಸುವ ಬಿಲ್ವಪತ್ರೆ, ಬಿಳಿ ಹೂವು, ರುದ್ರಾಕ್ಷಿಗಳ ಮಾಲೆಗಳನ್ನು ಶಿವಲಿಂಗದ ಮೇಲೆ ಅರ್ಪಿಸುತ್ತಾರೆ ಅಥವಾ ಅಭಿಷೇಕ ಮಾಡಿ ವಾತಾವರಣದಲ್ಲಿರುವ ಶಿವತತ್ತ್ವವನ್ನು ಆಕರ್ಷಿಸುತ್ತಾರೆ. ಇದರಿಂದ ಹೆಚ್ಚಳವಾಗಿರುವ ಕೆಟ್ಟ ಶಕ್ತಿಗಳ ಪ್ರಭಾವದ ಪರಿಣಾಮವು ಅಷ್ಟು ಅರಿವಾಗುವುದಿಲ್ಲ.

೨ ಆ. ಅಭಿಷೇಕದ ಬಳಿಕ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿರುವ ನಕಾರಾತ್ಮಕ ಊರ್ಜೆ ಕಡಿಮೆಯಾದುದರ ಕಾರಣ :

‘ಇನ್‌ಫ್ರಾರೆಡ್’ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ಸುತ್ತಲಿರುವ ತೊಂದರೆದಾಯಕ ಆವರಣವನ್ನು (ನಕಾರಾತ್ಮಕ ಸ್ಪಂದನಗಳನ್ನು) ತೋರಿಸುತ್ತದೆ ಮತ್ತು ‘ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆಯು ವ್ಯಕ್ತಿಯ ದೇಹದಲ್ಲಿ ಕೆಟ್ಟ ಶಕ್ತಿಗಳು ನಿರ್ಮಾಣ ಮಾಡಿರುವ ಸ್ಥಾನಗಳಲ್ಲಿರುವ ತೊಂದರೆದಾಯಕ ಶಕ್ತಿಯನ್ನು (ತೊಂದರೆದಾಯಕ ಸ್ಪಂದನಗಳನ್ನು) ತೋರಿಸುತ್ತದೆ. ಈ ಸಾಧಕನಿಗೆ ಕೆಟ್ಟ ಶಕ್ತಿಗಳ ತೊಂದರೆ ಇರುವುದರಿಂದ ಅವನಲ್ಲಿ ಅಭಿಷೇಕ ಮಾಡುವ ಮೊದಲು ‘ಇನ್‌ಫ್ರಾರೆಡ್’ ಮತ್ತು ‘ಅಲ್ಟಾವೈಲೆಟ್’ ಈ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳು ಕಂಡು ಬಂದವು.

ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಅದರಿಂದ ಪ್ರಕ್ಷೇಪಿತವಾದ ಚೈತನ್ಯ(ಶಿವತತ್ತ್ವ)ವನ್ನು ಸಾಧಕನು ತನ್ನ ಕ್ಷಮತೆಗನುಸಾರ ಗ್ರಹಣ ಮಾಡಿದನು. ಇದರಿಂದ ಅವನ ದೇಹದಲ್ಲಿದ್ದ ತೊಂದರೆದಾಯಕ ಶಕ್ತಿಯಲ್ಲಿನ ಸ್ಥಾನದಲ್ಲಿನ ತೊಂದರೆದಾಯಕ ಶಕ್ತಿ ಹಾಗೂ ಅವನ ಸುತ್ತಲಿನ ತೊಂದರೆದಾಯಕ ಆವರಣ ಕಡಿಮೆ ಆಯಿತು. ಇದರಿಂದ ಅವನಲ್ಲಿದ್ದ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆಗಳು ಕಡಿಮೆಯಾದವು.

೨ ಇ. ಅಭಿಷೇಕದ ಬಳಿಕ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿರುವುದರ ಕಾರಣ : ಈ ಸಾಧಕನಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ. ಕೇವಲ ಸಕಾರಾತ್ಮಕ ಊರ್ಜೆ ಮಾತ್ರ ಇತ್ತು. ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದ ಬಳಿಕ ಅದರಿಂದ ಪ್ರಕ್ಷೇಪಿತವಾದ ಚೈತನ್ಯ (ಶಿವತತ್ತ್ವ)ವನ್ನು ಸಾಧಕನು ಗ್ರಹಿಸಿದನು. ಆದುದರಿಂದ ಅವನಲ್ಲಿದ್ದ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.

– ಸೌ. ಸ್ವಾತಿ ವಸಂತ ಸಣಸ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೩.೮.೨೦೨೦)

ವಿ-ಅಂಚೆ : [email protected]

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.