ಪುನಃ ನಾಥುರಾಮ !

 

ಜನವರಿಯಲ್ಲಿ ಮೋಹನದಾಸ ಗಾಂಧಿಯವರ ಪುಣ್ಯತಿಥಿ ಇತ್ತು. ಈ ದಿನದಂದು ದೇಶದಾದ್ಯಂತ ಗಾಂಧಿಯವರಿಗಿಂತ ಪಂಡಿತ ನಾಥುರಾಮ ಗೋಡ್ಸೆ ಇವರ ಬಗ್ಗೆಯೇ ಹೆಚ್ಚು ಚರ್ಚೆಯಾಗಿರುವುದು ಕಂಡು ಬಂದಿತು. ‘ಇದಕ್ಕೆ ಏನು ಹೇಳಬೇಕು ?’, ಈ ಬಗೆಗಿನ ವಿಚಾರವನ್ನು ಪ್ರತಿಯೊಬ್ಬ ದೇಶವಾಸಿಯೂ ಮಾಡಬೇಕು; ಏಕೆಂದರೆ ಗಾಂಧಿಯವರ ಬಗ್ಗೆ ಸಂವೇದನೆಯನ್ನು ವ್ಯಕ್ತಪಡಿಸಿದರೂ ‘ಈ ದೇಶದಲ್ಲಿನ ಜನರ ಮನಸ್ಸಿನಲ್ಲಿ ಪಂಡಿತ ನಾಥುರಾಮ ಗೊಡಸೆ ಇವರ ಬಗ್ಗೆ ಎಲ್ಲಿಯಾದರೂ ಏನೋ ಒಂದು ಭಾವನೆ ಇದೆ, ಎಂದು ಗಮನಿಸಬೇಕು. ಇದರಿಂದಲೇ ನಂತರ ಗೋಡ್ಸೆ ಇವರ ಬಗ್ಗೆ ಚರ್ಚೆಯಾಗುತ್ತದೆ. ಅವರ ಬಗ್ಗೆ ಟೀಕೆಯಾದರೂ, ಚರ್ಚೆಯಾಗುತ್ತದೆ ಎಂಬುದನ್ನು ಗಮನಿಸಬೇಕು. ಗಾಂಧಿಯವರ ನಂತರ ದೇಶದಲ್ಲಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಹತ್ಯೆಯೂ ಆಯಿತು. ಆದರೆ ಅವರ ಕೊಲೆಗಾರರ ಬಗ್ಗೆ ಅಷ್ಟು ಚರ್ಚೆಯಾಗುವುದಿಲ್ಲ, ಎಂಬುದನ್ನೂ ಗಮನಿಸಬೇಕು. ‘ಗಾಂಧಿಯವರ ಬದಲು ಗೋಡಸೆಯವರಿಗೆ ಮಹತ್ವವನ್ನು ನೀಡಲಾಗುತ್ತಿದೆ’, ಎಂದು ಗಾಂಧಿವಾದಿಗಳಿಂದ ವಿನಾಕಾರಣ ಟೀಕಿಸಲಾಗುತ್ತಿದೆ; ಆದರೆ ಗೋಡ್ಸೆ ಇವರ ಬಗ್ಗೆ ಚರ್ಚೆ ಮಾಡಲು ಗಾಂಧಿವಾದಿಗಳೇ ಮುಂಚೂಣಿಯಲ್ಲಿರುತ್ತಾರೆ, ಎಂಬುದು ಅಷ್ಟೇ ಸತ್ಯವಾಗಿದೆ ! ‘ಗೊಡಸೆ’ ಇವರನ್ನು ದೂಷಿಸಿ ಗಾಂಧಿಯವರಿಗೆ ಮಹತ್ವವನ್ನು ನೀಡಲು ಗಾಂಧಿವಾದಿಗಳಿಂದ ಪ್ರಯತ್ನಗಳಾಗುತ್ತವೆ; ಆದರೆ ಅದರಿಂದ ಗಾಂಧಿವಾದದ ಟೊಳ್ಳುತನ ಬೆಳಕಿಗೆ ಬರುತ್ತದೆ, ಆದರೆ ಅದು ಗಾಂಧಿವಾದಿಗಳ ಗಮನಕ್ಕೆ ಬರುವುದಿಲ್ಲವೆಂಬುದು ಅಷ್ಟೇ ಸತ್ಯ !

ನಾಥುರಾಮ ಗೋಡ್ಸೆ ಇವರು ಗಾಂಧಿಯವರ ಹತ್ಯೆಯನ್ನು ಮಾಡುವ ಮೊದಲು ಸಹ ಗಾಂಧಿಯವರ ಹತ್ಯೆಯ ಪ್ರಯತ್ನವಾಗಿತ್ತು. ಅದರಲ್ಲಿ ನಾಥುರಾಮರ ಸಹಭಾಗವಿರಲಿಲ್ಲ, ಎಂಬುದು ಇತಿಹಾಸವಾಗಿದೆ. ಈ ಬಗೆಗಿನ ಎಲ್ಲ ಮಾಹಿತಿಯು ಸರಕಾರದ ಕಡತದಲ್ಲಿದೆ. ಈ ಬಗ್ಗೆ ಯಾವತ್ತೂ ಚರ್ಚೆಯಾಗುವುದು ಕಂಡು ಬರುವುದಿಲ್ಲ. ಗಾಂಧಿಯವರ ಹತ್ಯೆಯ ಬಗ್ಗೆ ವಿವಿಧ ಮೊಕದ್ದಮೆಗಳನ್ನು ನಡೆಸಲಾಗುತ್ತದೆ. ಭಾಜಪದ ಹಿರಿಯ ನಾಯಕರು ಮತ್ತು ರಾಜ್ಯಸಭೆಯ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ಇವರು ಗಾಂಧಿಯವರ ಹತ್ಯೆಯ ತನಿಖೆಯನ್ನು ಮಾಡುವಂತೆ ಪುನಃ ಆಗ್ರಹಿಸಿದ್ದಾರೆ. ‘ಪಂಡಿತ ನಾಥುರಾಮ ಗೋಡ್ಸೆ’ಯವರು ‘ಗಾಂಧಿಯವರಿಗೆ ೩ ಗುಂಡುಗಳನ್ನು ಹೊಡೆದಿದ್ದರು’, ಎಂದು ಸಾಕ್ಷಿಯಲ್ಲಿ (ಮೌಖಿಕ ಹೇಳಿಕೆಯಲ್ಲಿ) ಹೇಳಿದ್ದರು; ಆದರೆ ಪ್ರತ್ಯಕ್ಷದಲ್ಲಿ ಗಾಂಧಿಯವರ ಶರೀರದಿಂದ ೪ ಗುಂಡುಗಳನ್ನು ಹೊರಗೆ ತೆಗೆಯಲಾಯಿತು. ಹಾಗಾದರೆ ನಾಲ್ಕನೇಯ ಗುಂಡನ್ನು ಅವರಿಗೆ ಯಾರು ಹೊಡೆದರು ? ಎಂಬುದನ್ನು ಆ ಸಮಯದಲ್ಲಿ ಏಕೆ ತನಿಖೆ ಮಾಡಿರಲಿಲ್ಲ ? ಎಂಬುದು ಅವರ ವಾದವಾಗಿದೆ. ಡಾ. ಸ್ವಾಮಿಯವರು ಹೇಳಿರುವಂತಹ ನಾಲ್ಕನೇಯ ಗುಂಡಿನ ಉಲ್ಲೇಖ ಪೊಲೀಸರ ವರದಿಯಲ್ಲಿರುವುದಾಗಿ ಹೇಳಿದ್ದಾರೆ. ‘ಗಾಂಧಿಯವರ ಹತ್ಯೆಯಾಗಬೇಕು’, ಎಂದು ನಾಥುರಾಮ ಗೋಡ್ಸೆಯವರ ಹೊರತಾಗಿ ಯಾರಿಗೆ ಅನಿಸುತ್ತಿತ್ತು, ಎಂಬುದನ್ನು ಬೆಳಕಿಗೆ ತರಬೇಕು’, ಎಂಬುದು ಡಾ. ಸ್ವಾಮಿಯವರ ಆಗ್ರಹವಾಗಿದೆ. ಡಾ. ಸ್ವಾಮಿಯವರಂತಹ ವ್ಯಕ್ತಿಯು ಈ ರೀತಿಯಲ್ಲಿ ಹೇಳುತ್ತಿದ್ದಾರೆ, ಎಂದರೆ ಆ ಬಗ್ಗೆ ಭಾಜಪ ಸರಕಾರವು ವಿಚಾರ ಮಾಡುವುದು ಆವಶ್ಯಕವಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರವು ಇದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿರಬಹುದು ಎಂಬುದರಲ್ಲಿ ಸಂದೇಹವಿಲ್ಲ; ಆದರೆ ‘ಸದ್ಯದ ಸರಕಾರವು ಅದನ್ನು ಮಾಡಬೇಕು’, ಎಂದು ಯಾರಾದರೂ ಹೇಳಿದರೆ ಅದರಲ್ಲಿ ಅಯೋಗ್ಯವಾದುದೇನಿಲ್ಲ.

ಢೋಂಗಿ ಗಾಂಧಿವಾದಿ ಕಾಂಗ್ರೆಸ್ !

‘ಹಿಂದುತ್ವನಿಷ್ಠರು ಗಾಂಧಿಯವರ ಹತ್ಯೆಯನ್ನು ಮಾಡಿದರು’, ಎಂದು ಟ್ವಿಟ್‌ನ ಮೂಲಕ ಕಾಂಗ್ರೆಸ್‌ನ ನಾಯಕ ರಾಹುಲ ಗಾಂಧಿಯವರು ಟೀಕಿಸಿದರು. ಪಂಡಿತ ನಾಥುರಾಮ ಗೊಡಸೆ ಇವರು ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮತ್ತು ನಂತರ ಹಿಂದೂ ಮಹಾಸಭೆಯಲ್ಲಿದ್ದರು. ಅವರ ಮತ್ತು ಸ್ವಾತಂತ್ರ್ಯವೀರ ಸಾವರಕರ ನಡುವೆ ಸಂಬಂಧವಿತ್ತು, ಎಂಬುದು ಇತಿಹಾಸವಾಗಿದೆ. ಇದರ ಇನ್ನೊಂದು ಭಾಗವನ್ನು ನೋಡುವುದೂ ಆವಶ್ಯಕವಾಗಿದೆ. ಹಿಂದುತ್ವನಿಷ್ಠರಾದ ಪಂಡಿತ ನಾಥುರಾಮ ಗೋಡ್ಸೆಯವರು ತಮ್ಮ ಮೃತ್ಯುಪತ್ರದಲ್ಲಿ, ‘ಸಿಂಧು ನದಿಯ ಹೊರತು ಭಾರತವು ಅಪೂರ್ಣವಾಗಿದೆ. ಯಾವ ದಿನ ಸಿಂಧು ನದಿಯು ಪುನಃ ಭಾರತದಲ್ಲಿ ಸಮಾವೇಶಗೊಳ್ಳುವುದೋ, ಆಗ ನನ್ನ ಅಸ್ಥಿಗಳನ್ನು ಅದರಲ್ಲಿ ವಿಸರ್ಜಿಸಬೇಕು’, ಎಂದು ಬರೆದಿಟ್ಟಿದ್ದಾರೆ. ಈ ರೀತಿಯ ಇಚ್ಛೆಯನ್ನು ಇಂದಿನವರೆಗೆ ಯಾವುದೇ ಪ್ರಧಾನಮಂತ್ರಿ, ರಕ್ಷಣಾಮಂತ್ರಿ, ಕಾಂಗ್ರೆಸ್‌ನ ಯಾವುದೇ ಒಬ್ಬ ನಾಯಕನೂ ಎಂದಿಗೂ ತನ್ನ ಮೃತ್ಯುಪತ್ರದಲ್ಲಿ ಬರೆದಿಟ್ಟಿಲ್ಲ ಎಂಬ ವಿಚಾರವನ್ನು ಜನತೆಯು ಮಾಡುತ್ತಿರಬಹುದು, ಎಂಬುದರಲ್ಲಿ ಸಂದೇಹವಿಲ್ಲ. ‘ಪಂಡಿತ ನಾಥುರಾಮ ಗೊಡಸೆ ಇವರು ಒಬ್ಬ ಉತ್ಕಟ ದೇಶಭಕ್ತರಾಗಿದ್ದರು ಎಂದು ಒಂದು ವರ್ಗ ಭಾವಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಅವರು ಬ್ರಾಹ್ಮಣರಾಗಿದ್ದರೆಂದು, ಕೆಲವು ವರ್ಗಗಳ ಕೆಂಗಣ್ಣುಗಳಿಗೆ ಅವರು ಗುರಿಯಾಗಿದ್ದರು. ಪಂಡಿತ ನಾಥುರಾಮ ಗೋಡ್ಸೆ ಇವರು ಹಿಂದುತ್ವನಿಷ್ಠರಾಗಿದ್ದರೆಂದೇ ಅವರ ಹೆಗಲುಗಳ ಮೇಲೆ ಬಂದೂಕನ್ನಿಟ್ಟು ಕಳೆದ ೭೫ ವರ್ಷಗಳ ಕಾಲದಿಂದ ಕಾಂಗ್ರೆಸ್ ಮತ್ತು ಇತರ ಢೋಂಗಿ ಜಾತ್ಯತೀತ ಮತ್ತು ಗಾಂಧಿವಾದಿ ಪಕ್ಷಗಳು ಹಿಂದುತ್ವನಿಷ್ಠ ಸಂಘಟನೆಗಳನ್ನು ಗುರಿ ಮಾಡಿವೆ ಮತ್ತು ಮಾಡುತ್ತಿವೆ. ಗಾಂಧಿಯವರ ಪರಂಪರೆಯನ್ನು ನಾವು ಮುನ್ನಡೆಸುತ್ತಿದ್ದೇವೆ ಎಂದು ತೋರಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ತಮ್ಮನ್ನು ತಾವು ಗಾಂಧಿವಾದಿಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್ ಗಾಂಧಿಯವರ ಹತ್ಯೆಯ ನಂತರ ದೇಶದಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಬ್ರಾಹ್ಮಣರ ಮೇಲೆ ಆಕ್ರಮಣಗಳನ್ನು ಮಾಡಿ ಅವರನ್ನು ಹತ್ಯೆಗೈದಿತು, ಅವರ ಮನೆಮಾರುಗಳನ್ನು ದೋಚಿತು. ದಿವಂಗತ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೆಹಲಿಯಲ್ಲಿ ಮೂರುವರೆ ಸಾವಿರ ಸಿಕ್ಖರನ್ನು ಕಾಂಗ್ರೆಸ್ಸಿಗರು ಹತ್ಯೆ ಮಾಡಿದರು, ಎಂಬ ಆರೋಪವೂ ಇದೆ. ಸಿಕ್ಖರ ಹತ್ಯೆಯನ್ನು ರಾಜೀವ ಗಾಂಧಿಯವರೇ  ಸಮರ್ಥನೆ ಮಾಡಿದ್ದರು, ಈ ಬಗ್ಗೆ ಅವರ ಮಗ ರಾಹುಲ ಗಾಂಧಿಯವರು ಎಂದಿಗೂ ಮಾತನಾಡುವುದಿಲ್ಲವೆಂದು ಜನತೆಗೆ ಗೊತ್ತಿದೆ. ‘ನಾಥುರಾಮ ಗೋಡ್ಸೆ’ ಇವರನ್ನು ಸತತವಾಗಿ ಗುರಿ ಮಾಡಿ ‘ನಾವು ಸಭ್ಯರಿದ್ದೇವೆ’, ಎಂದು ಅವರು ತೋರಿಸಲು ಪ್ರಯತ್ನಿಸುತ್ತಾರೆ, ಎಂದು ಸಹ ಜನತೆಗೆ ಗೊತ್ತಿದೆ. ಗಾಂಧಿಯವರು ಸ್ವಾತಂತ್ರ್ಯ ದೊರಕಿದ ನಂತರ ‘ಕಾಂಗ್ರೆಸ್ ಅನ್ನು ವಿಸರ್ಜಿಸಿರಿ’, ಎಂದು ಹೇಳಿದ್ದರು; ಆದರೆ ಭ್ರಷ್ಟ ಮತ್ತು ಅಧಿಕಾರದ ದುರಾಸೆಯ ಕಾಂಗ್ರೆಸ್ಸಿಗರು ಆ ಕಡೆಗೆ ದುರ್ಲಕ್ಷಿಸಿ ಪಕ್ಷವನ್ನು ಮುಂದುವರಿಸುತ್ತಾ ಅಧಿಕಾರದ ಫಲಗಳನ್ನು ಅನೇಕ ದಶಕಗಳ ಕಾಲ ಸವಿದರು. ದೇಶವನ್ನು ಕೊಳ್ಳೆ ಹೊಡೆದರು. ಗಾಂಧಿಯವರ ಮುಸಲ್ಮಾನರ ಓಲೈಕೆಯ ವಿಚಾರಧಾರೆಯ ವ್ಯತಿರಿಕ್ತ ಕಾಂಗ್ರೆಸ್ ಅವರ ಯಾವುದೇ ವಿಚಾರಗಳ ಪಾಲನೆಯನ್ನು ಮಾಡಿಲ್ಲ. ಗಾಂಧಿಯವರ ‘ಅಹಿಂಸೆ’, ‘ಸವಿನಯ’, ಈ ಶಬ್ದಗಳು ಕಾಂಗ್ರೆಸ್ಸಿಗರ ಶಬ್ದಕೋಶದಲ್ಲಿಯೇ ಉಳಿದಿಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ತಮಿಳರ ಮತಗಳು ಸಿಗಬೇಕೆಂದು ಗಾಂಧಿ ಪರಿವಾರವು ರಾಜೀವ ಗಾಂಧಿಯವರ ಹತ್ಯೆಯಲ್ಲಿ ಶಿಕ್ಷೆ ವಿಧಿಸಲಾದ ತಮಿಳು ಅಪರಾಧಿಗಳ ಬಗ್ಗೆ ಸೌಮ್ಯ ನಿಲುವನ್ನು ತೆಗೆದುಕೊಳ್ಳುತ್ತಿರುತ್ತದೆ, ಎಂಬುದನ್ನೂ ಜನತೆಯು ನೋಡಿದೆ. ‘ಈ ಕೊಲೆಗಾರರು ಹಿಂದುತ್ವನಿಷ್ಠರಲ್ಲವೆಂಬುದನ್ನು ಇಲ್ಲಿ ಗಮನಿಸಬೇಕು. ಗಾಂಧಿಯವರ ಹೆಸರು ಬಂದರೆ ಪಂಡಿತ ನಾಥುರಾಮ ಗೋಡ್ಸೆಯವರ ಉಲ್ಲೇಖ ಬಂದೇ ಬರುತ್ತದೆ. ಜಗತ್ತಿನ ಇತಿಹಾಸದಲ್ಲಿ ಇಂತಹ ಉದಾಹರಣೆ ಇರುವುದು ದುರ್ಲಭವೇ ಆಗಿದೆ, ಎಂಬುದರಲ್ಲಿ ಸಂದೇಹವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವು ಪ್ರತಿಯೊಬ್ಬನಿಗೆ ನೀಡಿದೆ. ಗಾಂಧಿಯವರ ವಿಚಾರಗಳನ್ನು ಯಾರು ನಿಜವಾದ ಅರ್ಥದಲ್ಲಿ ಗೌರವಿಸುವರೋ, ಅವರು ಎಂದಿಗೂ ಪಂಡಿತ ನಾಥುರಾಮ ಗೋಡ್ಸೆಯವರನ್ನು ದ್ವೇಷಿಸುವುದಿಲ್ಲ. ಪಂಡಿತ ನಾಥುರಾಮ ಗೋಡ್ಸೆ ಇವರು ಸಹ ಎಂದಿಗೂ ಗಾಂಧಿಯವರವನ್ನು ದ್ವೇಷಿಸಲಿಲ್ಲವೆಂದು, ಅವರು ಸಾಕ್ಷಿಯಲ್ಲಿ ಹೇಳಿದ್ದರು. ಗಾಂಧಿಯವರು ತಮ್ಮ ಮೇಲಾದ ಮೊದಲಿನ ಆಕ್ರಮಣದ ಆರೋಪಿಗಳನ್ನು ಕ್ಷಮಿಸಿದ್ದರು, ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು. ಒಟ್ಟಾರೆ ಗಾಂಧಿ ಮತ್ತು ಗೋಡ್ಸೆ ಈ ರೀತಿಯ ವೈಚಾರಿಕ ವಾದವು ಮುಂದುವರಿಯುತ್ತಲೇ ಇರುವುದು, ಇದು ಸತ್ಯ !