ಸೇವಾಭಾವಿ ವೃತ್ತಿ ಇರುವ ಹಾಗೂ ‘ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಲಿ’ ಎಂದು ಪ್ರಾರ್ಥನೆ ಮಾಡುವ ಶೇ. ೬೭ ಆಧ್ಯಾತ್ಮಿಕ ಮಟ್ಟದ ಪುಣೆಯ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಪರಾತ್ಪರ ಗುರು ಡಾ.ಆಠವಲೆಯವರ ಸಂಕಲ್ಪಕ್ಕನುಸಾರ ಕೆಲವೇ ವರ್ಷಗಳಲ್ಲಿ ಈಶ್ವರೀ ರಾಜ್ಯ ಸ್ಥಾಪನೆಯಾಗಲಿಕ್ಕಿದೆ. ಅನೇಕ ಜನರ ಮನಸ್ಸಿನಲ್ಲಿ ‘ಈ ರಾಷ್ಟ್ರವನ್ನು ನಡೆಸುವವರು ಯಾರು ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿ ಈಶ್ವರನು ಉಚ್ಚ ಲೋಕದಿಂದ ದೈವೀ ಬಾಲಕರಿಗೆ ಪೃಥ್ವಿಯ ಮೇಲೆ ಜನ್ಮ ನೀಡಿ ಕಳುಹಿಸಿದ್ದಾನೆ. ಈ ದೈವೀ ಬಾಲಕರಲ್ಲಿನ ಕಲಿಯುವ ವೃತ್ತಿ, ವೈಚಾರಿಕ ಪ್ರಬುದ್ಧತೆ, ಅವರಲ್ಲಿ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಶ್ರೀ ಗುರುಗಳ ಆಜ್ಞಾಪಾಲನೆಯನ್ನು ತಕ್ಷಣ ಮಾಡುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರ ಸೂಕ್ಷ್ಮದ ವಿಷಯವನ್ನು ತಿಳಿದುಕೊಳ್ಳುವ ಕ್ಷಮತೆಯಂತಹ ಅಲೌಕಿಕ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಪ್ರಸಿದ್ಧಪಡಿಸುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/57886.html

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು’. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಸೇವಾಭಾವಿ ವೃತ್ತಿ ಇರುವ ಹಾಗೂ ‘ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಲಿ’ ಎಂದು ಪ್ರಾರ್ಥನೆ ಮಾಡುವ ಶೇ. ೬೭ ಆಧ್ಯಾತ್ಮಿಕ ಮಟ್ಟದ ಪುಣೆಯ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ಕು. ಪ್ರಾರ್ಥನಾ ಮಹೇಶ ಪಾಠಕ

 

ಸೌ. ಮನಿಷಾ ಪಾಠಕ

೧. ಚಿಕ್ಕಂದಿನಿಂದಲೇ ಧನ್ವಂತರಿ ದೇವರನ್ನು ಇಷ್ಟಪಡುವ ಪ್ರಾರ್ಥನಾ

‘ಪ್ರಾರ್ಥನಾ ೨ ವರ್ಷದವಳಿದ್ದಾಗಿನಿಂದ ಅವಳಿಗೆ ಧನ್ವಂತರಿ ದೇವರು ಇಷ್ಟವಾಗುತ್ತಿದ್ದರು. ಧನ್ವಂತರಿ ದೇವರ ಮೂರ್ತಿ ಅಥವಾ ಚಿತ್ರವನ್ನು ನೋಡಿದಾಗ ಅವಳಿಗೆ ಆನಂದವಾಗುತ್ತದೆ. ಪ್ರಾರ್ಥನಾ ೪ ವರ್ಷದವಳಿರುವಾಗ ನಾನು ಮತ್ತು ಪ್ರಾರ್ಥನಾ ರಾಮನಾಥಿ ಆಶ್ರಮದಲ್ಲಿ ಒಂದು ಶಿಬಿರಕ್ಕೆ ಹೋಗಿದ್ದೆವು. ಆ ಸಮಯದಲ್ಲಿಯೂ ಅವಳು ಅಲ್ಲಿದ್ದ ವೈದ್ಯರ ಸಮೀಪ ಹೋಗಿ ‘ವೈದ್ಯರ ಸೇವೆ ಹೇಗೆ ನಡೆಯುತ್ತದೆ ?’, ಎಂದು ನೋಡುತ್ತಿದ್ದಳು.

೨. ಪ್ರೇಮಭಾವ

೨ ಅ. ವಯಸ್ಸಿನಲ್ಲಿ ಸಣ್ಣವಳಿದ್ದರೂ ಇತರರನ್ನು ಪ್ರೇಮದಿಂದ ವಿಚಾರಿಸಿಕೊಳ್ಳುತ್ತಾಳೆ : ಚಿಕ್ಕಂದಿನಿಂದಲೇ ಪ್ರಾರ್ಥನಾಳಿಗೆ ಯಾವಾಗಲಾದರೂ ಅನಾರೋಗ್ಯವಾದಾಗ ನಾವು ಅವಳನ್ನು ಉಪಚಾರಕ್ಕಾಗಿ ಪುಣೆಯ ಒಂದು ಬಾಲರೋಗತಜ್ಞರಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೆವು. ಆ ಬಾಲರೋಗತಜ್ಞರು ಜೈನ ಸಂಪ್ರದಾಯದವರಾಗಿದ್ದು ಹಾಗೂ ಸಾತ್ತ್ವಿಕ ವೃತ್ತಿಯವರಾಗಿದ್ದಾರೆ. ಅವರು ಪ್ರಾರ್ಥನಾಳಿಗೆ ‘ನಿನಗೆ ಏನಾಗುತ್ತಿದೆ ?’, ಎಂದು ಪ್ರೇಮದಿಂದ ವಿಚಾರಿಸಿ ಅವಳನ್ನು ತಪಾಸಣೆ ಮಾಡುತ್ತಿದ್ದರು. ಆಗ ಪ್ರಾರ್ಥನಾಳೂ ಅವರಿಗೆ ‘ನೀವು ಹೇಗಿದ್ದೀರಿ ?’, ಎಂದು ಅಕ್ಕರೆಯಿಂದ ವಿಚಾರಿಸುತ್ತಿದ್ದಳು. (ಆಗ ಅವಳಿಗೆ ೪ ವರ್ಷ) ‘ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ಪ್ರಾರ್ಥನಾ ಇತರರನ್ನು ಎಷ್ಟು ಪ್ರೇಮದಿಂದ ವಿಚಾರಿಸಿಕೊಳ್ಳುತ್ತಾಳೆ ?’, ಎಂದು ಆ ವೈದ್ಯರಿಗೆ ತುಂಬಾ ಆಶ್ಚರ್ಯವೆನಿಸುತ್ತಿತ್ತು.

೨ ಆ. ಚಿಕಿತ್ಸಾಲಯಕ್ಕೆ ಬರುವ ಸಾಧಕ ರೋಗಿಗಳಿಗೆ ಸಹಾಯ ಮಾಡುವುದು : ಪ್ರಾರ್ಥನಾ ೮-೯ ವರ್ಷದವಳಾಗಿರುವಾಗ ರಾಮನಾಥಿ ಆಶ್ರಮದಲ್ಲಿ ವಾಸಿಸುತ್ತಿದ್ದಳು. ಆಗ ಅವಳಿಗೆ ವೈದ್ಯರು ಮಾಡುತ್ತಿದ್ದ ಎಲ್ಲ ಸೇವೆಗಳು ಇಷ್ಟವಾಗುತ್ತಿದ್ದವು. ಅವಳಿಗೆ ವೈದ್ಯ ಸಾಧಕರ ವಿಷಯದಲ್ಲಿ ಆತ್ಮೀಯತೆ ಅನಿಸುತ್ತದೆ. ಅವರಲ್ಲಿಗೆ ಬರುವ ಸಾಧಕ ರೋಗಿಗಳಿಗೆ ಅವಳು ತಾನಾಗಿಯೇ ಸಹಾಯ ಮಾಡುತ್ತಿದ್ದಳು. ಆ ಸೇವೆಯಿಂದ ಅವಳಿಗೆ ತುಂಬಾ ಆನಂದ ಸಿಗುತ್ತಿತ್ತು.

೩. ತಾಯಿಯನ್ನು ಆಸ್ಪತ್ರೆಗೆ ಸೇರಿಸಿದಾಗ ಚಿಕ್ಕವಳಾಗಿದ್ದರೂ ಪ್ರಾರ್ಥನಾಳಿಗೆ ಆಸ್ಪತ್ರೆಯ ವಾತಾವರಣದಿಂದ ಭಯವೆನಿಸದೇ ಅವಳು ಅಲ್ಲಿದ್ದ ರೋಗಿಗಳಿಗೆ ಸಾಧನೆಯನ್ನು ತಿಳಿಸಿಕೊಡಲು ತಾಯಿಗೆ ಹೇಳುವುದು

ಪ್ರಾರ್ಥನಾಳಿಗೆ ರಕ್ತ ಕಾಣಿಸಿದರೆ ಅಥವಾ ಅಪಘಾತವನ್ನು ನೋಡಿದರೆ ಭಯವೆನಿಸುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ನನ್ನನ್ನು ೨-೩ ಬಾರಿ ಪುಣೆಯ ನವಲೆ ಆಸ್ಪತ್ರೆಗೆ ಸೇರಿಸಲಾಗಿತ್ತು, ಅದೇ ರೀತಿ ಅದರ ಮುಂಚೆಯೂ ನನ್ನನ್ನು ಇತರ ಆಸ್ಪತ್ರೆಗಳಿಗೂ ವಿವಿಧ ಶಾರೀರಿಕ ತೊಂದರೆಗಾಗಿ ಸೇರಿಸಲಾಗಿತ್ತು. ಆಗ ಆ ಆಸ್ಪತ್ರೆಗಳಲ್ಲಿನ ವಾತಾವರಣವನ್ನು ನೋಡಿ ಪ್ರಾರ್ಥನಾಳಿಗೆ ಭಯವಾಗುತ್ತಿರಲಿಲ್ಲ. ಅವಳಿಗೆ ಆ ವಿಷಯದಲ್ಲಿ ಕೇಳಿದಾಗ ಅವಳು ‘ಅಮ್ಮಾ, ಆಪತ್ಕಾಲದಲ್ಲಿ ಎಲ್ಲ ಕಡೆಗಳಲ್ಲಿಯೂ ಇಂತಹ ವಾತಾವರಣವೇ ಇರಬಹುದಲ್ಲ ? ನಾವು ಭಯ ಪಡಬಾರದು’, ಎನ್ನುತ್ತಿದ್ದಳು. ಇಲ್ಲಿರುವ ಎಲ್ಲ ರೋಗಿಗಳಿಗೆ ನಾವು ನಾಮಜಪ ಮಾಡಲು ಹೇಳೋಣ ಎನ್ನುತ್ತಿದ್ದಳು. ಅವಳಿಗೆ ಹಲವಾರು ಬಾರಿ ನನ್ನ ಜೊತೆಗೆ ಆಸ್ಪತ್ರೆಯಲ್ಲಿರಬೇಕಾಗುತ್ತಿತ್ತು. ‘ಅವಳಿಗೆ ಆಸ್ಪತ್ರೆಯಲ್ಲಿರಲು ಯಾವತ್ತೂ ಬೇಸರವಾಗದೇ ಅಲ್ಲಿಯೂ ಅಭ್ಯಾಸ ಮಾಡುತ್ತಿದ್ದಳು’.

೪. ವಿವಿಧ ಚಿಕಿತ್ಸಾಪದ್ಧತಿ ಮತ್ತು ಸೇವೆ ಕಲಿಯುವ ಆಸಕ್ತಿ

೪ ಅ. ಪ್ರಥಮಚಿಕಿತ್ಸೆಯನ್ನು ಕಲಿಯುವುದು

೪ ಅ ೧. ಪ್ರಥಮಚಿಕಿತ್ಸಾವರ್ಗದಲ್ಲಿ ಕಲಿಸುವ ಪ್ರಾತ್ಯಕ್ಷಿಕೆ ಮತ್ತು ಹೇಳುವ ವಿಷಯಗಳನ್ನು ಗಮನವಿಟ್ಟು ಕೇಳುವುದು : ಪ್ರಥಮಚಿಕಿತ್ಸಾ ವರ್ಗದಲ್ಲಿ ಕಲಿಸುವ ಪ್ರಾತ್ಯಕ್ಷಿಕೆಯನ್ನು ತಾನು ಸ್ವತಃ ಮಾಡಿ ನೋಡಬೇಕೆನ್ನುವ ತುಡಿತ ಅವಳಲ್ಲಿತ್ತು. ಪ್ರಾರ್ಥನಾ ೬-೭ ವರ್ಷದವಳಿರುವಾಗ ‘ಆನ್‌ಲೈನ್’ ಪ್ರಥಮಚಿಕಿತ್ಸಾವರ್ಗಗಳನ್ನು ನಡೆಸಲಾಗುತ್ತಿತ್ತು. ಆಗ ಆ ವರ್ಗಕ್ಕೆ ತಪ್ಪದೇ ಹಾಜರಾಗುತ್ತಿದ್ದಳು. ಪ್ರಥಮ ಚಿಕಿತ್ಸೆಯ ವಿಷಯದಲ್ಲಿ ತೋರಿಸುವ ಮಾಹಿತಿಯ ಬಗ್ಗೆ ವಿಡಿಯೊ ಅಥವಾ ಹೇಳುವ ವಿಷಯಗಳನ್ನು ಗಮನವಿಟ್ಟು ಆಲಿಸುತ್ತಿದ್ದಳು.

೪ ಅ ೨. ಪ್ರಥಮಚಿಕಿತ್ಸೆಯಲ್ಲಿ ಒಳಗೊಂಡಿರುವ ಪ್ರತ್ಯಕ್ಷ ಕೃತಿಗಳಿಗಾಗಿ ಸಿದ್ಧತೆ ಮಾಡಲು ಸಾಧ್ಯವಾಗುವುದು : ಪ್ರಥಮಚಿಕಿತ್ಸೆಯಲ್ಲಿ ‘ಗಾಜ್ ಬ್ಯಾಂಡೆಜ್’ ಸಿದ್ಧಪಡಿಸುವುದು, ತ್ರಿಕೋನ ಪಟ್ಟಿಯ ಸಹಾಯದಿಂದ ಕೈಯ ‘ಬ್ಯಾಂಡೇಜ್’ ತಯಾರಿಸುವುದು, ತಲೆಗೆ ಪೆಟ್ಟಾದಾಗ ತಲೆಯ ‘ಬ್ಯಾಂಡೆಜ್’ ಸಿದ್ಧಪಡಿಸುವುದು, ‘ಸ್ಟ್ರೆಚರ್’ ಇತ್ಯಾದಿ ಎಲ್ಲವನ್ನೂ ಅವಳು ಚೆನ್ನಾಗಿ ಮಾಡುತ್ತಾಳೆ. ಸನಾತನದ ಪ್ರಥಮಚಿಕಿತ್ಸೆಯ ವಿಷಯದಲ್ಲಿ ಎಲ್ಲ ಗ್ರಂಥಗಳನ್ನು ಅವಳು ಓದಿದ್ದಾಳೆ ಹಾಗೂ ಅವುಗಳ ಅಭ್ಯಾಸವನ್ನೂ ಮಾಡಿದ್ದಾಳೆ.

೪ ಆ. ಬಿಂದುಒತ್ತಡ (ಎಕ್ಯುಪ್ರೆಶರ್) ಚಿಕಿತ್ಸಾಪದ್ಧತಿಯನ್ನು ಜಿಜ್ಞಾಸೆಯಿಂದ ಕಲಿಯುವುದು : ೨೦೨೦ ರಲ್ಲಿ ಬಿಂದುಒತ್ತಡ ಚಿಕಿತ್ಸಾ ಪದ್ಧತಿಯ ವಿಷಯದಲ್ಲಿ ಕೆಲವು ಅಭ್ಯಾಸವರ್ಗಗಳನ್ನು ನಡೆಸಲಾಗಿತ್ತು. ಪ್ರಾರ್ಥನಾ ಆ ವರ್ಗಗಳಲ್ಲಿಯೂ ತಪ್ಪದೆ ಕುಳಿತುಕೊಳ್ಳುತ್ತಿದ್ದಳು. ಸೌ. ಕಾವ್ಯಾ ಚೆವೂಲಕರ ಇವರು ಬಿಂದುಒತ್ತಡ ಕಲಿತಿದ್ದರು. ಅವರು ನಮ್ಮ ಕೋಣೆಗೆ ಬಂದಾಗ ಪ್ರಾರ್ಥನಾ ಅವರ ಬಳಿ ಪ್ರಶ್ನೆ ಕೇಳಿ ಬಿಂದುಒತ್ತಡದ ಅಭ್ಯಾಸ ಮಾಡುತ್ತಿದ್ದಳು.

೪ ಇ. ಹೊಸ ಚಿಕಿತ್ಸಾಪದ್ಧತಿಯನ್ನು ಕಲಿಯುವುದು : ಅವಳಿಗೆ ಹೊಸ ಚಿಕಿತ್ಸಾ ಪದ್ಧತಿಯನ್ನು ಕಲಿಯುವ ಆಸಕ್ತಿ ಇದೆ. ನಾಡಿ ತಪಾಸಣೆ, ಮಾಲೀಶ ಮಾಡುವುದು, ರೋಗಿಗಳಿಗೆ ಜಿಗಣೆಯ ಉಪಚಾರ ಮಾಡುವುದು ‘ಮ್ಯಾಗ್‌ನೆಟ್ ಥೆರಪಿ’ ಇತ್ಯಾದಿಗಳನ್ನು ಅವಳು ಕಲಿತುಕೊಂಡಿದ್ದಾಳೆ. ಯಾವುದೇ ಹೊಸ ವಿಷಯವನ್ನು ಕಲಿತಾಗ ಅವಳು ಆ ವಿಷಯವನ್ನು ಪುಸ್ತಕದಲ್ಲಿ ಬರೆದಿಡುತ್ತಾಳೆ.

೫. ಸೇವೆ ಮಾಡುವಾಗ ಭಾವವನ್ನಿಡುವುದು

೫ ಅ. ಸಾಧಕ ರೋಗಿಗಳಿಗೆ ಔಷಧಗಳನ್ನು ತಲುಪಿಸುವಾಗ ‘ಸಾಧಕರಿಗೆ ಚೈತನ್ಯವನ್ನು ನೀಡುತ್ತಿದ್ದೇನೆ. ಪರಾತ್ಪರ ಗುರುದೇವರು ಮತ್ತು ಶ್ರೀಕೃಷ್ಣನ ಚೈತನ್ಯವು ಔಷಧಗಳಲ್ಲಿದೆ’, ಎನ್ನುವ ಭಾವವನ್ನಿಡುವುದು : ಪ್ರಾರ್ಥನಾ ‘ಸಾಧಕ ರೋಗಿಗಳಿಗೆ ಔಷಧಗಳನ್ನು ತಲುಪಿಸುವುದು ಮತ್ತು ಅವುಗಳನ್ನು ಸಣ್ಣ ಸಣ್ಣ ಕಟ್ಟುಗಳನ್ನಾಗಿ ಮಾಡಿ ರೋಗಿಗಳಿಗೆ ಕೊಡುವುದು’, ಈ ಸೇವೆಯನ್ನು ಮಾಡುವಾಗ ‘ಸಾಧಕರಿಗೆ ಚೈತನ್ಯವನ್ನು ಕೊಡುತ್ತಿದ್ದೇನೆ. ಪರಾತ್ಪರ ಗುರುದೇವರು ಮತ್ತು ಶ್ರೀಕೃಷ್ಣನ ಚೈತನ್ಯವು ಔಷಧದಲ್ಲಿದೆ’, ಎನ್ನುವ ಭಾವವನ್ನಿಡುತ್ತಾಳೆ. ಆಯುರ್ವೇದದ ಕಷಾಯ, ಆಯುರ್ವೇದ ಔಷಧಗಳ ವಾಸನೆ, ‘ಅಲೋಪಥಿ’ ಔಷಧಗಳ ವಿಷಯದಲ್ಲಿ ಅವಳಿಗೆ ಏನೂ ಅನಿಸುವುದಿಲ್ಲ. ಹಳೆಯ ಔಷಧಗಳ ಬಾಟ್ಲಿಗಳನ್ನು ತೊಳೆಯುವುದು ಹಾಗೂ ಅವುಗಳನ್ನು ಸ್ವಚ್ಛಗೊಳಿಸಿ ಇಡುವುದು ಇತ್ಯಾದಿ ಸೇವೆ ಮಾಡುವಾಗ ಅವಳಿಗೆ ತುಂಬಾ ಉತ್ಸಾಹ ಇರುತ್ತದೆ. ಒಮ್ಮೆ ಅವಳು ನನಗೆ “ಅಮ್ಮಾ, ಆಪತ್ಕಾಲದಲ್ಲಿ ‘ಅನ್ನಪೂರ್ಣಾಕಕ್ಷೆ ಮತ್ತು ವೈದ್ಯ ಸಾಧಕರ ಸೇವೆ ನಿರಂತರ ನಡೆಯುತ್ತಾ ಇರುವುದು’ ಎಂದು ಹೇಳಿದಳು.

೫ ಆ. ಅನಾರೋಗ್ಯ ಪೀಡಿತ ವ್ಯಕ್ತಿಯ ಸೇವೆ ಮಾಡುವಾಗ ‘ಪರಾತ್ಪರ ಗುರು ಡಾ. ಆಠವಲೆಯವರ ಸೇವೆ ಮಾಡುತ್ತಿದ್ದೇನೆ’, ಎನ್ನುವ ಭಾವವನ್ನಿಡುವುದು : ‘ಅನಾರೋಗ್ಯದಲ್ಲಿರುವ ವ್ಯಕ್ತಿಯ ಸೇವೆ ಮಾಡುವಾಗ ಪರಾತ್ಪರ ಗುರು ಡಾಕ್ಟರರ ಸೇವೆ ಮಾಡುತ್ತಿದ್ದೇನೆ ಹಾಗೂ ಅದರಿಂದ ನನ್ನ ಸಾಧನೆಯಾಗುತ್ತಿದೆ’, ಎನ್ನುವ ಭಾವವಿರುತ್ತದೆ. ನನಗೆ ವಿವಿಧ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಬೇಕಾಗುತ್ತಿತ್ತು. ಆಗ ಕೂಡ ಅವಳು ಯಾವತ್ತೂ ಬೇಸರಪಟ್ಟುಕೊಳ್ಳಲಿಲ್ಲ ಅಥವಾ ‘ನಾನು ಬರುವುದಿಲ್ಲ’, ಎಂದು ಕೂಡ ಹೇಳಿಲ್ಲ.

೬. ಗುಣಗಳನ್ನು ಗ್ರಹಿಸುವುದು

ಪ್ರಾರ್ಥನಾ ತನಗೆ ವೈದ್ಯ ಸಾಧಕರಿಂದ ಕಲಿಯಲು ಸಿಕ್ಕಿದ ವಿಷಯಗಳನ್ನು ತಪ್ಪದೆ ಬರೆದುಕೊಟ್ಟಿದ್ದಾಳೆ.

‘ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಬೇಕು’, ಎಂದು ಪ್ರಾರ್ಥನೆ ಮಾಡುವ ಕು. ಪ್ರಾರ್ಥನಾ !

“ಪರಾತ್ಪರ ಗುರು ದೇವರೆ, ನನಗೆ ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಬಹುದೇ ? ಧನ್ವಂತರಿ ದೇವತೆಯ ಸೇವೆ ಮಾಡಲು ಸಿಗಬಹುದಲ್ಲವೇ ? ಈ ಸೇವೆಯನ್ನು ನನಗೆ ಕಲಿಯಲು ಸಾಧ್ಯವಾಗಲಿ”, ಎಂದು ಅವಳು ನಿರಂತರ ಪ್ರಾರ್ಥನೆ ಮಾಡುತ್ತಾ ಇರುತ್ತಾಳೆ’.

– ಸೌ. ಮನಿಷಾ ಪಾಠಕ (ಆಧ್ಯಾತ್ಮಿಕ ಮಟ್ಟ ಶೇ.೬೮) (ಕು. ಪ್ರಾರ್ಥನಾಳ ತಾಯಿ), ಪುಣೆ (೫.೧೦.೨೦೨೧)