ಆಂದೋಲನಕಾರರಿಂದ ಹಿಂದೂ ದೇವಾಲಯ ಧ್ವಂಸ ಹಾಗೂ ಕೊಳ್ಳೆ !
|
ಒಟಾವಾ (ಕೆನಡಾ) – ಕ್ಯಾನಡಾದಲ್ಲಿ ಕೊರೊನಾ ತಡೆಗಟ್ಟುವಿಕೆ ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯ ಗೊಳಿಸಿದ್ದರಿಂದ ಕಳೆದ ಕೆಲವು ದಿನಗಳಿಂದ ಜನರು ಅದನ್ನು ವಿರೋಧಿಸುತ್ತಿದ್ದಾರೆ. ಈ ಕಾಲಾವಧಿಯಲ್ಲಿ ಕೆನಡಾದ ಹಿಂದೂಗಳ ಅನೇಕ ದೇವಾಲಯಗಳನ್ನು ಧ್ವಂಸಗೊಳಿಸುವುದರೊಂದಿಗೆ ದೇವಾಲಯದ ಕಾಣಿಕೆ ಹುಂಡಿಯಲ್ಲಿರುವ ಹಣ, ಒಡವೆಗಳು ಹಾಗೂ ಮೂರ್ತಿಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಆಂದೋಲನದಿಂದ ಗ್ರೇಟರ ಟೊರಂಟೋ ನಗರದಲ್ಲಿರುವ ದೇವಾಲಯದ ಅರ್ಚಕರು ಹಾಗೂ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಲಸಿಕೆಯನ್ನು ವಿರೋಧಿಸುತ್ತಿರುವ ಆಂದೋಲನದಿಂದ ಕೆನೆಡಾದ ಪ್ರಧಾನಮಂತ್ರಿ ಜಸ್ಟಿನ ಟ್ರುಡೋರವರು ಕಳೆದ ಕೆಲವು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದಾರೆ.
Canada: Priests, devotees scared as temples vandalised, burgled in Toronto area https://t.co/tcVmsUDzml
— Hindustan Times (@HindustanTimes) February 6, 2022
ಆಂದೋಲನಕಾರರು ಜನವರಿ ೧೫ರಂದು ಗ್ರೆಟರ ಟೊರಂಟೋ ನಗರದಲ್ಲಿರುವ ಬ್ರ್ಯಾಮ್ಟನದಲ್ಲಿನ ಹನುಮಾನ ದೇವಾಲಯದ ಮೇಲೆ ಮೊದಲು ದಾಳಿ ನಡೆಸಿ ಧ್ವಂಸ ಮಾಡಿದರು. ದೇವಾಲಯದಲ್ಲಿ ಕಳ್ಳತನ ಮಾಡಿದರು. ಅನಂತರ ಅಲ್ಲಿರುವ ಮಾ ಚಿಂತಪೂರ್ಣಿ ದೇವಾಲಯದ ಮೇಲೆ ದಾಳಿ ನಡೆಸಿದರು. ಅನಂತರ ಶ್ರೀ ಗೌರಿ ಶಂಕರ ದೇವಾಲಯ, ಶ್ರೀ ಜಗನ್ನಾಥ ದೇವಾಲಯ, ಮಿಸಿಸಾಗಾದಲ್ಲಿರುವ ‘ಹಿಂದು ಹೆರಿಟೇಜ ಸೆಂಟರ’ ಹಾಗೂ ಹಾಮಿಲ್ಟನ ಸಮಾಜ ದೇವಾಲಯಗಳನ್ನು ಧ್ವಂಸ ಮಾಡಿದರು.