‘ಸನಾತನ ಪ್ರಭಾತ’ದ ರೂಪದಲ್ಲಿ ೫ ನೆಯ ವೇದವನ್ನು ರಚಿಸಿ ಸಮಾಜಕ್ಕೆ ಬಹಳ ಉಪಕಾರ ಮಾಡಿರುವ ಪರಾತ್ಪರ ಗುರು ಡಾ. ಜಯಂತ ಆಠವಲೆ ! – ಶ್ರೀ. ಚಂದ್ರಕಾಂತ (ಭಾಯಿ) ಪಂಡಿತ, ಅಧ್ಯಕ್ಷರು, ಗೋಮಾಂತಕ ಮಂದಿರ ಮಹಾಸಂಘ, ಗೋವಾ

೧. ಪರಾತ್ಪರ ಗುರು ಡಾ. ಜಯಂತ ಆಠವಲೆ ಎಂದರೆ ಅಸಾಮಾನ್ಯ ವ್ಯಕ್ತಿತ್ವದ ತ್ರಿಕಾಲದರ್ಶಿ ಮಹಾಪುರುಷ !

ಪರಾತ್ಪರ ಗುರು ಡಾ. ಜಯಂತ ಆಠವಲೆ

೧ ಅ. ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ದರ್ಶನವಾದ ನಂತರ ಅವರ ಸ್ಥಾನದಲ್ಲಿ ಶ್ರೀಕೃಷ್ಣ ಕಾಣಿಸುವುದು, ಆಗ ‘ಅವರು ಸಾಕ್ಷಾತ್ ಶ್ರೀಕೃಷ್ಣನ ಅವತಾರವೇ ಆಗಿದ್ದಾರೆ’, ಎಂದು ಅನಿಸಿವುದು : ‘ಸನಾತನ ಪ್ರಭಾತ’ದ ವರ್ಧಂತ್ಯುತ್ಸವದ ನಿಮಿತ್ತ ಹಾರ್ದಿಕ ಶುಭಾಶಯಗಳು ! ಈ ಪತ್ರಿಕೆಯ ವಿಷಯದಲ್ಲಿ ಮಾತನಾಡುವ ಮೊದಲು ನನಗೆ ಈ ಪತ್ರಿಕೆಯ ನಿರ್ಮಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ವಿಷಯದಲ್ಲಿ ಮಾತನಾಡಲಿಕ್ಕಿದೆ. ಪರಾತ್ಪರ ಗುರು ಡಾಕ್ಟರರ ದರ್ಶನವಾದ ನಂತರ ನನಗೆ ಅವರ ಸ್ಥಾನದಲ್ಲಿ ಸಾಕ್ಷಾತ್ ಶ್ರೀಕೃಷ್ಣನು ಕಾಣಿಸಿದನು. ಆಗ ನನಗೆ ‘ಅವರು ಸಾಕ್ಷಾತ್ ಶ್ರೀಕೃಷ್ಣನ ಅವತಾರವಾಗಿದ್ದಾರೆ’, ಎಂದು ಅನಿಸಿತು. ಪರಾತ್ಪರ ಗುರು ಡಾ. ಆಠವಲೆಯವರು ಸಾಮಾನ್ಯ ವ್ಯಕ್ತಿಯಾಗಿರದೆ ಅವರು ಅಸಾಮಾನ್ಯ ವ್ಯಕ್ತಿತ್ವವುಳ್ಳ ತ್ರಿಕಾಲದರ್ಶಿ ಮಹಾಪುರುಷರಾಗಿದ್ದಾರೆ’, ಎಂಬುದು ನನಗೆ ಅರಿವಾಯಿತು. ‘ನನಗೆ ಅವರ ದರ್ಶನವಾಗುವುದು’, ನನ್ನ ಮಹಾಭಾಗ್ಯವೆಂದು ತಿಳಿಯುತ್ತೇನೆ.

ಶ್ರೀ. ಚಂದ್ರಕಾಂತ (ಭಾಯಿ) ಪಂಡಿತ

೧ ಆ. ‘ಇಡೀ ಜಗತ್ತಿನಲ್ಲಿ ರಾಮರಾಜ್ಯ ಬರಬೇಕು’, ಎಂಬ ಉದಾತ್ತ ಕನಸನ್ನು ಕಾಣುವ ಪರಾತ್ಪರ ಗುರು ಡಾ. ಆಠವಲೆ ! : ಪರಾತ್ಪರ ಗುರು ಡಾಕ್ಟರರು ತಮ್ಮ ದೇಹದ ಪರಿವೆಯಿಲ್ಲದೆ ‘ನಮ್ಮೆಲ್ಲ ಹಿಂದೂಗಳ ರಕ್ಷಣೆಯಾಗಬೇಕು ಹಾಗೂ ನಮ್ಮ ದೇಶ ಅಖಂಡ ಮತ್ತು ಬಲಶಾಲಿಯಾಗಬೇಕು’, ಎಂದು ಪ್ರಯತ್ನಿಸುತ್ತಿದ್ದಾರೆ. ‘ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಹಿಂದೂ ರಾಷ್ಟ್ರ ಬರಬೇಕು’, ರಾಮರಾಜ್ಯ ಬರಬೇಕು, ಎಂಬುದಕ್ಕಾಗಿ ಅವರು ಪ್ರಯತ್ನಿಸುತ್ತಿದ್ದಾರೆ. ‘ಭಾರತವು ಹಿಂದೂ ರಾಷ್ಟ್ರವಾಗಬೇಕು’, ಎಂಬುದು ಪರಾತ್ಪರ ಗುರು ಡಾ. ಆಠವಲೆಯವರ ಕನಸಾಗಿದೆ ಹಾಗೂ ಇಚ್ಛೆಯೂ ಆಗಿದೆ. ಅವರ ಈ ಇಚ್ಛೆಯೆಂದರೆ ‘ಶ್ರೀ’ಗಳ ಇಚ್ಛೆಯಾಗಿರುವುದರಿಂದ ಹಿಂದೂ ರಾಷ್ಟ್ರವು ಖಂಡಿತವಾಗಿ ಉದಯವಾಗಲಿದೆ !

೧ ಇ. ಪರಾತ್ಪರ ಗುರು ಡಾ. ಆಠವಲೆಯವರು ‘ಹಿಂದೂ ರಾಷ್ಟ್ರ ಬರುವುದು ಕಾಲಾನುಸಾರ ಅವಶ್ಯಕತೆಯಿದೆ’, ಎಂಬುದನ್ನು ‘ಸನಾತನ ಪ್ರಭಾತ’ದ ಮೂಲಕ ಸಮಾಜದ ಮನಸ್ಸಿನಲ್ಲಿ ಬಿಂಬಿಸುವುದು : ‘ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ನುಸುಳುವಿಕೆ, ನಕ್ಸಲವಾದಿಗಳ ಹಾವಳಿ, ಉಗ್ರವಾದ, ಗೋಹತ್ಯೆ, ಲವ್ ಜಿಹಾದ್ ಮತ್ತು ‘ಬಿಲಿವರ್ಸ್’ನವರ ಪ್ರಕರಣಗಳು’, ಇವೆಲ್ಲ ಘಟನೆಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ‘ಸನಾತನ ಪ್ರಭಾತ’ದ ಮೂಲಕ ಸಮಾಜದ ಮುಂದಿಟ್ಟರು. ಈ ಆಘಾತಗಳಿಂದ ರಕ್ಷಿಸಲು ‘ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರ್ಯಾಯವಾಗಿದೆ’, ಎಂಬುದನ್ನು ಅವರು ‘ಸನಾತನ ಪ್ರಭಾತ’ದ ಮೂಲಕ ತೋರಿಸಿಕೊಟ್ಟರು.

೧ ಈ. ಜಗತ್ತಿನಲ್ಲಿ ಹಿಂದೂಗಳಿಗಾಗಿ ತಮ್ಮದೇ ಆದ ಒಂದೂ ರಾಷ್ಟ್ರವಿಲ್ಲವೆಂಬ ಚಿಂತೆಯಿಂದ ‘ಹಿಂದೂ ರಾಷ್ಟ್ರ ಆಗಬೇಕು’, ಎಂಬುದಕ್ಕಾಗಿ ಹಗಲಿರುಳು ಪ್ರಯತ್ನಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆ ! :

ಜಗತ್ತಿನಲ್ಲಿ ಕ್ರೈಸ್ತ, ಮುಸಲ್ಮಾನ, ಜ್ಯೂ ಅಥವಾ ಬೌದ್ಧ ಇವರಿಗೆ ಸ್ವತಂತ್ರರಾಷ್ಟ್ರಗಳಿವೆ; ಆದರೆ ೧೦೦ ಕೋಟಿ ಹಿಂದೂಗಳಿಗಾಗಿ ಒಂದೂ ರಾಷ್ಟ್ರವಿಲ್ಲ. ಹಿಂದುಸ್ಥಾನದ ಎಲ್ಲ ನಾಗರಿಕರಿಗಾಗಲಿ ಅಥವಾ ಹಿಂದೂ ರಾಜಕಾರಣಿಗಳಿಗಾಗಲಿ ಇದರ ಬಗ್ಗೆ ಏನೂ ದುಃಖವಿಲ್ಲ; ಆದರೆ ಪರಾತ್ಪರ ಗುರು ಡಾ. ಆಠವಲೆಯವರಿಗೆ ಇದರ ದುಃಖವಿದೆ. ‘ಹಿಂದುಸ್ಥಾನದ ಪ್ರತಿಯೊಬ್ಬ ಹಿಂದೂವಿನ ರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆ’ಯು ಕಾಲದ ಅವಶ್ಯಕತೆಯಾಗಿದೆ ಎಂಬುದನ್ನು ಅವರು ‘ಸನಾತನ ಪ್ರಭಾತ’ದ ಮೂಲಕ ಹಿಂದೂಗಳಲ್ಲಿ ಬಿಂಬಿಸಿದರು. ಇದು ಅವರ ಕನಸಾಗಿದ್ದು ಅವರು ಅದನ್ನು ನಮಗೆ ‘ಸನಾತನ ಪ್ರಭಾತ’ದ ಮೂಲಕ ತೋರಿಸಿದ್ದಾರೆ.

೨. ‘ಸನಾತನ ಪ್ರಭಾತ’ವೆಂದರೆ ೫ ನೆಯ ವೇದವಾಗಿದೆ !

೨ ಅ. ಪರಶುರಾಮಭೂಮಿ ಅಥವಾ ದೇವಭೂಮಿಯಾಗಿರುವ ಗೋವಾ ರಾಜ್ಯ ! : ಗೋವಾ ಪರಶುರಾಮ ಭೂಮಿಯಾಗಿದೆ. ಭಗವಾನ ಪರಶುರಾಮರು ಗೋವಾಕ್ಕೆ ಆಗಮಿಸಿ ಗೋವಾವನ್ನು ನಂದನವನ ಮಾಡಿದರು. ಅವರ ಆಶೀರ್ವಾದದಿಂದ ಗೋವಾದಲ್ಲಿ ಅನ್ನ, ವಸ್ತ್ರ, ಉತ್ಪನ್ನ, ಸಾಧನಸಾಮಗ್ರಿ ಇತ್ಯಾದಿಗಳಿಗೆ ಯಾವತ್ತೂ ಕೊರತೆಯಿಲ್ಲ. ಆದ್ದರಿಂದ ಗೋವಾವನ್ನು ‘ದೇವಭೂಮಿ’ ಅಥವಾ ‘ಸ್ವರ್ಗಭೂಮಿ’ ಎಂದು ಹೇಳಲಾಗುತ್ತದೆ. ಈಗ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಗೋವಾದಲ್ಲಿ ಕಾಲಿಟ್ಟರು ಹಾಗೂ ಗೋವಾದ ನಮ್ಮೆಲ್ಲರಿಗೂ ‘ಸನಾತನ ಪ್ರಭಾತ’ದ ಮೂಲಕ ೫ ನೆ ವೇದವನ್ನೆ ಉಪಲಬ್ಧ ಮಾಡಿಕೊಟ್ಟರು.

೨ ಆ. ಅನೇಕ ವಿಷಯಗಳ ಬೋಧನೆ ನೀಡುವ ಸನಾತನ ಪ್ರಭಾತ ! :

‘ಹಿಂದೂ ಎಂದರೇನು ? ಹಿಂದೂ ಸಂಸ್ಕೃತಿ ಎಂದರೇನು ? ಸಂಸ್ಕಾರವೆಂದರೇನು ?’, ಇವೆಲ್ಲ ವಿಷಯಗಳನ್ನು ‘ಸನಾತನ ಪ್ರಭಾತ’ದಿಂದಾಗಿ ನಮಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ‘ಮಗು ಜನ್ಮ ತಾಳಿದಾಗ ಯಾವ ಸಂಸ್ಕಾರ ಮಾಡಬೇಕು ? ಯಾವ ವಿಧಿ ಮಾಡಬೇಕು ? ಅದನ್ನು ಹೇಗೆ ಮಾಡಬೇಕು ? ಬಾಲ್ಯಾವಸ್ಥೆಯು ಹೇಗಿರುತ್ತದೆ ? ಮಕ್ಕಳಿಗೆ ಸಂಸ್ಕಾರ ಮಾಡಿ ಅವರನ್ನು ಹೇಗೆ ಸಿದ್ಧಪಡಿಸಬೇಕು ? ಮರಣದ ನಂತರ ೧೨ ದಿನ ಏನು ಮಾಡಬೇಕು ? ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಹೇಗೆ ಮಾಡಬೇಕು ? ಸಾಧನೆಯೆಂದರೇನು ? ಅದನ್ನು ಹೇಗೆ ಮಾಡಬೇಕು ? ಅದರಿಂದ ನಮಗೆ ಬರುವ ಸಂಕಟಗಳನ್ನು ಹೇಗೆ ಜಯಿಸಲು ಸಾಧ್ಯ ? ಇದರಿಂದ ‘ಮನೆ ಹೇಗೆ ಸ್ವರ್ಗವಾಗುತ್ತದೆ ?’, ಇವೆಲ್ಲವನ್ನೂ ‘ಸನಾತನ ಪ್ರಭಾತ’ವು ನಮಗೆ ಉತ್ತಮ ರೀತಿಯಲ್ಲಿ ಕಲಿಸುತ್ತದೆ. ಅದರಲ್ಲಿ ಹಬ್ಬ-ಉತ್ಸವಗಳ ಮಾಹಿತಿ ಇರುತ್ತದೆ. ಮಹಿಳೆಯರಿಗೆ ಅಥವಾ ಹಿಂದೂಗಳಿಗೆ ಅನ್ಯಾಯ ಅಥವಾ ಅತ್ಯಾಚಾರವಾದರೆ ಅದರ ವಾರ್ತೆಯು ಮೊತ್ತಮೊದಲು ‘ಸನಾತನ ಪ್ರಭಾತ’ದಲ್ಲಿಯೇ ನಮಗೆ ಓದಲು ಸಿಗುತ್ತದೆ.

೩. ‘ಸನಾತನ ಪ್ರಭಾತ’ದ ಪ್ರಕಾಶನ ಮತ್ತು ಹೇರಳವಾದ ಗ್ರಂಥಗಳನ್ನು ರಚಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ತುಂಬಾ ಉಪಕಾರ ಮಾಡಿದ್ದಾರೆ

‘ಸನಾತನ ಪ್ರಭಾತ’ದ ಪ್ರಕಾಶನ ಮತ್ತು ಹೇರಳವಾದ ಗ್ರಂಥಗಳನ್ನು ರಚಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ತುಂಬಾ ಉಪಕಾರ ಮಾಡಿದ್ದಾರೆ. (ಸನಾತನವು ಇದುವರೆಗೆ ಅಂದರೆ ಡಿಸೆಂಬರ್ ೨೦೨೧ ರ ವರೆಗೆ ೩೫೦ ಗ್ರಂಥಗಳನ್ನು ೧೭ ಭಾಷೆಗಳಲ್ಲಿ ಭಾಷಾಂತರ ಮಾಡಿದೆ ಹಾಗೂ ಅವುಗಳ ಒಟ್ಟು ೮೪ ಲಕ್ಷದ ೭೩ ಸಾವಿರ ಪ್ರತಿಗಳನ್ನು ಪ್ರಕಾಶಿಸಿದೆ. – ಸಂಕಲನಕಾರರು) ನಾವು ಅವರ ಈ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಇಂತಹ ಕಾರ್ಯವನ್ನು ಕೇವಲ ಶ್ರೀಕೃಷ್ಣನೇ ಮಾಡಲು ಸಾಧ್ಯ.

೪. ಪ್ರಾರ್ಥನೆ

‘ಸನಾತನ ಪ್ರಭಾತ’ ಮತ್ತು ಸನಾತನದ ಗ್ರಂಥಗಳು ನಮ್ಮೆಲ್ಲರಿಗೂ ಮತ್ತು ಇಡೀ ಜಗತ್ತಿಗೆ ಆತ್ಮಬಲವನ್ನು ನೀಡಲಿ !’, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ ! ‘ಭಾರತ ಹಿಂದೂ ರಾಷ್ಟ್ರವಾಗಬೇಕು’, ಎನ್ನುವ ಕನಸನ್ನಿಟ್ಟುಕೊಂಡು ‘ಅದು ಪೂರ್ಣವಾಗಬೇಕೆಂದು’, ಕಾರ್ಯನಿರತರಾಗಿರುವ ಸಂತ ಶಿರೋಮಣಿ ಪರಾತ್ಪರ ಗುರು ಡಾ. ಆಠವಲೆಯವರ ಆರೋಗ್ಯ ಸುಧಾರಿಸಲಿ’, ಎಂದು ಈಶ್ವರ ಚರಣಗಳಲ್ಲಿ ಪ್ರಾರ್ಥನೆ !’

|| ಜಯತು ಜಯತು ಹಿಂದೂ ರಾಷ್ಟ್ರಮ್ ||

– ಶ್ರೀ. ಚಂದ್ರಕಾಂತ (ಭಾಯಿ) ಪಂಡಿತ, ಮ್ಹಾಪ್ಸಾ ಗೋವಾ. (ಅಧ್ಯಕ್ಷರು, ಗೋಮಾಂತಕ ಮಂದಿರ ಮಹಾಸಂಘ ಗೋವಾ.) (೨೩.೪.೨೦೨೧)