ತಿರುವನಂತಪುರಂ – ಭಾರತವು ನಿಷೇಧಿಸಿದ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯಾದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿಎಫ್‌ಐ’) ಕುರಿತು ಅವಹೇಳನಕಾರಿ ಲೇಖನ ಪ್ರಕಟಿಸಿದ್ದ ‘ಆರ್ಗನೈಸರ್’ ಮತ್ತು ‘ಭಾರತ್ ಪ್ರಕಾಶ’ನ ವಿರುದ್ಧದ ಪ್ರಕರಣವನ್ನು ಕೇರಳ ಹೈಕೋರ್ಟ್ ತಳ್ಳಿಹಾಕಿದೆ. ‘ಪಿ.ಎಫ್.ಐ’ ಭಾರತದಲ್ಲಿ ನಿಷೇಧಿತ ಸಂಘಟನೆಯಾಗಿರುವುದರಿಂದ ಮತ್ತು ಯಾವುದೇ ಕಾನೂನು ಅಸ್ತಿತ್ವವನ್ನು ಹೊಂದಿಲ್ಲದ ಕಾರಣ, ಅದರ ವಿರುದ್ಧ ಬರೆಯುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
1. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ವಿ. ಕುನ್ಹಿಕೃಷ್ಣನ್ ಇವರು, ನಿಷೇಧಿತ ಸಂಘಟನೆಯು ಮಾನನಷ್ಟ ಮೊಕದ್ದಮೆ ದಾಖಲಿಸುವಂತಿಲ್ಲ. ‘PFI’ ಸಂಘಟನೆಯು IPC ಯ ಸೆಕ್ಷನ್ 499 ಅಡಿಯಲ್ಲಿ ಬರುವುದಿಲ್ಲ; ಏಕೆಂದರೆ ಅದರ ಕಾನೂನುಬದ್ಧ ಅಸ್ತಿತ್ವವಿಲ್ಲ ಎಂದು ನ್ಯಾಯಾಲಯ ಹೇಳಿದೆ.
2. ಭಾರತ್ ಪ್ರಕಾಶನ (ದೆಹಲಿ) ಪಿಎಫ್‌ಐ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದೆ ಎಂದು ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಬಶೀರ್ ಆರೋಪಿಸಿದ್ದರು. ‘ಪಿಎಫ್‌ಐ’ ನಿಷೇಧಿತ ‘ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ (ಸಿಮಿ)ಯ ಹೊಸ ಆವೃತ್ತಿಯಾಗಿದೆ ಮತ್ತು ಸಂಘಟನೆಯು ‘ಲವ್ ಜಿಹಾದ್’ ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿತ್ತು.
3. ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಇವರು, ಈ ಲೇಖನದಲ್ಲಿ ಮಾಡಿರುವ ಆರೋಪಗಳು ಸಾರ್ವಜನಿಕ ವಲಯದಲ್ಲೂ ಲಭ್ಯವಾಗಿದೆ. ಹಾಗಾಗಿ ಇದರಿಂದ ಅವಮಾನ ಆಗುವುದಿಲ್ಲ ಎಂದು ಹೇಳಿ ನ್ಯಾಯಾಲಯ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿತು.