‘ಕೊರೊನಾವು ಸೈತಾನ ಆಗಿದ್ದು ಅದನ್ನು ಅಲ್ಲಾ ಕಳುಹಿಸಿದ್ದಾನೆ !’(ಅಂತೆ) – ಟಿ.ಕೆ. ಹಾಮಜಾ, ಮುಖಂಡ, ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷ

‘ಧರ್ಮ ಎನ್ನುವುದು ಅಫಿಮಿನ ಮಾತ್ರೆಯಾಗಿದೆ’, ಇದು ಕಮ್ಯುನಿಸ್ಟರ ವಿಚಾರಸರಣಿಯಾಗಿದೆ; ಆದರೆ ಕೇರಳದ ಆಡಳಿತಾರೂಢ ಮಾರ್ಕ್ಸವಾದಿ ಮುಖಂಡರು ಇಂತಹ ಹೇಳಿಕೆಯನ್ನು ನೀಡಿ ಎಲ್ಲ ಕಮ್ಯುನಿಸ್ಟವಾದಿಗಳು ಸುಮ್ಮನಿದ್ದಾರೆ. ಇದರಿಂದ ಕಮ್ಯುನಿಸ್ಟಗಳು ಕೇವಲ ಹಿಂದೂ ಧರ್ಮ ಮತ್ತು ಪರಂಪರೆಯನ್ನು ವಿರೋಧಿಸುತ್ತಾರೆ; ಆದರೆ ಇಸ್ಲಾಂ ವಿಷಯದಲ್ಲಿ ಮಾತನಾಡಲು ಹಿಂಜರಿಯುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಓರ್ವ ಹಿಂದುತ್ವನಿಷ್ಠ ಜನಪ್ರತಿನಿಧಿ ಇಂತಹ ಹೇಳಿಕೆಯನ್ನು ನೀಡಿದ್ದರೆ, ಇಲ್ಲಿಯವರೆಗೆ ಜಾತ್ಯತೀತವಾದಿ ಮತ್ತು ಪ್ರಗತಿ(ಅಧೋ)ಪರರು ಆಕಾಶಪಾತಾಳವನ್ನು ಒಂದು ಮಾಡಿರುತ್ತಿದ್ದರು. ಇದರಿಂದ ಅವರ ಮುಸಲ್ಮಾನಪ್ರೇಮ ಮತ್ತು ಹಿಂದೂದ್ವೇಷ ಕಂಡು ಬರುತ್ತದೆ !

ತಿರುವನಂತಪುರಮ್ – ಕೋಳಿಕೋಡನಲ್ಲಿ ‘ವಕ್ಫ ಬೋರ್ಡ’ ಆಯೋಜಿಸಿದ್ದ ಒಂದು ಸಭೆಯಲ್ಲಿ ಆಡಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ(ಮಾಕಪ) ಹಿರಿಯ ಮುಖಂಡ ಟಿ.ಕೆ. ಹಾಮಜಾ ಇವರು ‘ಕೊರೊನಾವು ಸೈತಾನ ಆಗಿದ್ದು, ಅದನ್ನು ಅಲ್ಲಾ ಕಳುಹಿಸಿದ್ದಾನೆ. ದಿಕ್ಕುತಪ್ಪಿರುವ ಮನುಷ್ಯನನ್ನು ಸರಿಯಾದ ದಾರಿಗೆ ತರಲು ಕೊರೊನಾ ಹೆಚ್ಚಾಗಿದ್ದು, ಎಲ್ಲಿಯವರೆಗೆ ಮನುಷ್ಯ ಸರಿಯಾದ ಮಾರ್ಗದಲ್ಲಿ ನಡೆಯುವುದಿಲ್ಲವೋ, ಅಲ್ಲಿಯವರೆಗೆ ಸೈತಾನ ಮರಳಿ ಹೋಗುವುದಿಲ್ಲ’, ಎಂದು ಹೇಳಿದ್ದರು. ಹಾಮಜಾ ಇವರು ಮಾಕಪದ ಮಾಜಿ ಸಚಿವರಾಗಿದ್ದರು. ಅವರು ‘ವಕ್ಫ ಬೋರ್ಡ’ನ ಮಾಜಿ ಅಧ್ಯಕ್ಷರೂ ಆಗಿದ್ದಾರೆ.

ಹಾಮಜಾ ತಮ್ಮ ಮಾತನ್ನು ಮುಂದುವರಿಯುತ್ತಾ, “ಜನರು ವಿಶೇಷವಾಗಿ ಮುಸಲ್ಮಾನರು ‘ಕುರಾನದ ಪಾಠದಿಂದ ನಾವು ದೂರ ಹೋಗಿಲ್ಲಲ ?’, ಎಂದು ಆತ್ಮನಿರೀಕ್ಷಣೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ಸಂಪೂರ್ಣ ಜಗತ್ತು ಅಲ್ಲಾನದ್ದಾಗಿದೆ. ಅವನ ಸಂಪತ್ತಿನ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲೆ ಒಪ್ಪಿಸಿದ್ದಾನೆ. ಆದ್ದರಿಂದ ಎಲ್ಲರೂ ಈ ಸಂಪತ್ತಿನ ರಕ್ಷಣೆಗಾಗಿ ಕಾರ್ಯವನ್ನು ಮನಃಪೂರ್ವಕವಾಗಿ ಮಾಡುವುದು ಆವಶ್ಯಕವಾಗಿದೆ.” ಎಂದು ಹೇಳಿದರು.