ಅಖಿಲ ಮನುಕುಲಕ್ಕೆ ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸಲು ಅದ್ವಿತೀಯ ಗ್ರಂಥಕಾರ್ಯವನ್ನು ಮಾಡುವ  ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸನಾತನದ ‘೩೫೦ ನೇ ಗ್ರಂಥ’ ಪ್ರಕಾಶನದ ನಿಮಿತ್ತ…

ಅದ್ವಿತೀಯ ಗ್ರಂಥಕಾರ್ಯ ಮಾಡುವ ಪ. ಪೂ. ಡಾ. ಜಯಂತ ಆಠವಲೆ

‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಒಮ್ಮೆ ಒಂದು ಸತ್ಸಂಗದಲ್ಲಿ, ‘ಸಾಮಾನ್ಯ ಸಾಧಕರು ಜನರಿಗೆ ಅಧ್ಯಾತ್ಮದ ಬಗ್ಗೆ ಬುದ್ಧಿಯಿಂದ ಎಷ್ಟು ತಿಳಿಸಿ ಹೇಳಿದರೂ, ಅದರಿಂದ ಅವರ ಮೇಲೆ ಪರಿಣಾಮವಾಗಲು ಬಹಳ ಸಮಯ ಬೇಕಾಗುತ್ತದೆ; ಆದರೆ ಸಂತರು ಒಂದು ವಾಕ್ಯವನ್ನು ಹೇಳಿದರೂ ಸಾಕು, ಅವರ ಮಾತುಗಳಲ್ಲಿನ ಚೈತನ್ಯದಿಂದ ಜನರ ಅಂರ್ತಮನಸ್ಸಿನ ಮೇಲೆ ಸಂಸ್ಕಾರವಾಗಿ ಅವರ ಮೇಲೆ ಬೇಗನೇ ಪರಿಣಾಮವಾಗುತ್ತದೆ.’ ಸನಾತನದ ಗ್ರಂಥಗಳ ಸಂದರ್ಭದಲ್ಲಿಯೂ ಇದೇ ತತ್ವ ಅನ್ವಯಿಸುತ್ತದೆ; ಏಕೆಂದರೆ ಪರಾತ್ಪರ ಗುರು ಡಾ. ಆಠವಲೆಯವರಂತಹ ಅತ್ಯುಚ್ಚ ಕೋಟಿಯ ಸಂತರು ಸನಾತನದ ಗ್ರಂಥಗಳ ಸಂಕಲನವನ್ನು ಮಾಡುತ್ತಿರುವುದರಿಂದ ಈ ಗ್ರಂಥಗಳೆಂದರೆ ಸಾಕ್ಷಾತ್ ಚೈತನ್ಯದ ಸ್ರೋತಗಳೇ ಆಗಿವೆ. ಸನಾತನದ ಗ್ರಂಥಗಳು ಅನೇಕ ಅದ್ವಿತೀಯ ವೈಶಿಷ್ಟ್ಯಗಳಿಂದಾಗಿ ಅವು ಅದ್ವಿತೀಯವಾಗುತ್ತಿವೆ. ಗ್ರಂಥಗಳ ಈ ವೈಶಿಷ್ಟ್ಯಗಳಿಂದ ಅಧ್ಯಾತ್ಮದಲ್ಲಿನ ಜಿಜ್ಞಾಸುಗಳಿಗೆ ಜ್ಞಾನದ ಒಂದು ಅಭಿನವ ಭಾಗವೇ ನಿರ್ಮಾಣವಾಗುತ್ತಿದೆ. ಈ ಗ್ರಂಥಗಳು ವಿವಿಧ ಸಾಧನಾಮಾರ್ಗದಲ್ಲಿನ ಸಾಧಕರಿಗಾಗಿ ದೀಪಸ್ತಂಭಗಳೇ ಆಗುತ್ತಿವೆ.

(ಪೂ.) ಶ್ರೀ. ಸಂದೀಪ ಆಳಶಿ,

೧೯೯೫ ರಲ್ಲಿ ಪರಾತ್ಪರ ಗುರು ಡಾಕ್ಟರರು ನೆಟ್ಟ ಗ್ರಂಥದ ಒಂದು ಚಿಕ್ಕ ಸಸಿಯು ಕೇವಲ ೨೬ ವರ್ಷಗಳಲ್ಲಿ ೩೫೦ ಗ್ರಂಥಗಳ ಒಂದು ದೊಡ್ಡ ವೃಕ್ಷದಲ್ಲಿ ರೂಪಾಂತರವಾಗಿದೆ. ಇನ್ನೂ ೫ ಸಾವಿರಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸುವಷ್ಟು ಬರವಣಿಗೆಯು ಗಣಕಯಂತ್ರದಲ್ಲಿದೆ. ಸಪ್ಟೆಂಬರ್ ೨೦೨೧ ರಿಂದ ಸನಾತನ ಸಂಸ್ಥೆಯು ನಡೆಸಿದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಅಂರ್ತಗತ ಸನಾತನದ ಗ್ರಂಥಗಳನ್ನು ಭಾರತದಾದ್ಯಂತ ವ್ಯಾಪಕ ಸ್ತರದಲ್ಲಿ ಪ್ರಸಾರವನ್ನು ಮಾಡಲಾಗುತ್ತಿದೆ. ಈ ಅಭಿಯಾನಕ್ಕೆ ಎಲ್ಲೆಡೆಯಲ್ಲೂ ಸ್ವಯಂಪ್ರೇರಿತ ಮತ್ತು ಅಭೂತಪೂರ್ವ ಬೆಂಬಲ ಲಭಿಸುತ್ತಿದೆ. ಈ ಅಭಿಯಾನದ ಅಂರ್ತಗತ ಕೇವಲ ೩ ತಿಂಗಳುಗಳಲ್ಲಿಯೇ ಮರಾಠಿ, ಹಿಂದಿ, ಕನ್ನಡ, ಗುಜರಾತಿ ಮತ್ತು ಆಂಗ್ಲ ಈ ೫ ಭಾಷೆಗಳಲ್ಲಿನ ೩,೫೮,೯೮೦ ಗ್ರಂಥಗಳು ಮಾರಾಟವಾಗಿವೆ ! ಈ ಅಭಿಯಾನ ನಡೆಯತ್ತಿರುವಾಗಲೇ ಸನಾತನದ ೩೫೦ ನೇ ಗ್ರಂಥವನ್ನು ಪ್ರಕಟಿಸುವುದು ದುಗ್ಧಶರ್ಕರಾಯೋಗವಾಗಿದೆ (ಹಾಲಿನಲ್ಲಿ ಸಕ್ಕರೆ ಹಾಕಿದಂತೆ ಆಗಿದೆ).

ಸನಾತನದ ಗ್ರಂಥಗಳಲ್ಲಿನ ಜ್ಞಾನಾಮೃತದ ಆಧಾರದಲ್ಲಿ ಸಾಧನೆಯನ್ನು ಮಾಡಿ ನವೆಂಬರ್ ೨೦೨೧ ರ ವರೆಗೆ ೧೧೫ ಮಂದಿ ಸಾಧಕರು ‘ಸಂತಪದವಿ’ಯನ್ನು ಪ್ರಾಪ್ತಮಾಡಿಕೊಂಡಿದ್ದಾರೆ ಮತ್ತು ೧ ಸಾವಿರಕ್ಕೂ ಹೆಚ್ಚು ಸಾಧಕರು ‘ಸಂತಪದವಿ’ಯ ಮಾರ್ಗದಲ್ಲಿದ್ದಾರೆ. ‘ಈಶ್ವರೀ ನಿಯೋಜನೆಗನುಸಾರ ೨೦೨೫ ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಮತ್ತು ನಂತರ ಅನಂತಕಾಲ ಸನಾತನದ ಗ್ರಂಥಗಳು ವೇದಗಳಂತೆ ‘ಧರ್ಮಗ್ರಂಥ’ಗಳೆಂದು ಮಾನ್ಯತೆಯನ್ನು ಪಡೆಯುವವು’, ಎಂದು ಮಹರ್ಷಿಗಳು ‘ಸಪ್ತರ್ಷಿ ಜೀವನಾಡಿಪಟ್ಟಿ’ಯ ಮೂಲಕ ಆಶೀರ್ವಾದವನ್ನು ನೀಡಿದ್ದಾರೆ. ಪರಾತ್ಪರ ಗುರು ಡಾಕ್ಟರರ ಈ ದೈದಿಪ್ಯಮಾನ ಗ್ರಂಥಕಾರ್ಯವು ಇಡೀ ಭಾರತಕ್ಕೇ ಅಭಿಮಾನವೆನಿಸುವಂತಹದ್ದಾಗಿದೆ.

‘ಅಖಿಲ ಮನುಕುಲವೇ ಈ ಜ್ಞಾನಗಂಗೆಯಲ್ಲಿ ಮಿಂದೆದ್ದು ಮನುಷ್ಯಜನ್ಮ ಸಾರ್ಥಕಗೊಳಿಸಿಕೊಳ್ಳಬೇಕೆಂಬುದೇ ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !’ – (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೧೫.೧೨.೨೦೨೧)

೧. ಗುರುಗಳ ಆಶೀರ್ವಾದದಿಂದ ಪರಾತ್ಪರ ಗುರು ಡಾಕ್ಟರರ ಗ್ರಂಥಕಾರ್ಯದ ಆರಂಭ !

‘೧೯೮೭ ರಲ್ಲಿ ನಾನು ಅಧ್ಯಾತ್ಮದ ಮೇಲೆ ಬರೆದಿರುವ ‘ಅಧ್ಯಾತ್ಮಶಾಸ್ತ್ರ’ ಎಂಬ ‘ಸೈಕ್ಲೋಸ್ಟೈಲ್’ ಗ್ರಂಥವು ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ಇವರಿಗೆ ಇಷ್ಟವಾಯಿತು. ಅವರು ನನಗೆ, “ನನ್ನ ಗುರುಗಳು ನನಗೆ, ‘ತು ಕಿತಾಬೊಂಕೆ ಊಪರ್ ಕಿತಾಬೆ ಲಿಖೆಗಾ |’ ಎಂದು ಆಶೀರ್ವಾದವನ್ನು ಮಾಡಿದ್ದರು. ಆದರೆ ನಾನು ಭಜನೆಯ ಒಂದೇ ಪುಸ್ತಕವನ್ನು ಬರೆದೆ. ನಾನು ನನ್ನ ಗುರುಗಳ ಆಶೀರ್ವಾದವನ್ನು ನಿಮಗೆ ಕೊಡುತ್ತೇನೆ” ಎಂದು ಹೇಳಿದರು.

ಈ ಆಶೀರ್ವಾದದ ಫಲಶ್ರುತಿಯೆಂದು ನನ್ನಿಂದ ಇಂದಿನವರೆಗೆ ಅಧ್ಯಾತ್ಮ, ಸಾಧನೆ, ಈಶ್ವರಪ್ರಾಪ್ತಿಗಾಗಿ ಕಲೆ, ಧರ್ಮಜಾಗೃತಿ ಇತ್ಯಾದಿ ವಿಷಯಗಳ ಗ್ರಂಥಗಳ ಸಂಕಲನವಾಗಿದೆ. ಪ.ಪೂ. ಬಾಬಾರವರ ಕೃಪೆಯಿಂದ ಈ ಕಾರ್ಯವನ್ನು ಮುಂದಿನ ಕೆಲವು ಪೀಳಿಗೆಗಳು ಮುಂದುವರೆಸಲು ಆವಶ್ಯಕವಾಗಿರುವ ಸಾಧಕರು ಪ.ಪೂ. ಬಾಬಾರವರ ಆಶೀರ್ವಾದದಿಂದಲೇ ಸಿದ್ಧರಾಗುತ್ತಿದ್ದಾರೆ.’

– (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ (೧೩.೬.೨೦೨೧)

‘ಗುರುಗಳ ಆಶೀರ್ವಾದ ಫಲಪ್ರದವಾಗಲು ಶಿಷ್ಯನಲ್ಲಿ ‘ಗುರುಗಳ ಬಗ್ಗೆ ದೃಢ ಶ್ರದ್ಧೆ, ಗುರುಚರಣಗಳಲ್ಲಿ ಸಮರ್ಪಿತಭಾವ, ಆಜ್ಞಾಧಾರಕತನ, ಲೋಕಕಲ್ಯಾಣದ ತೀವ್ರ ತಳಮಳ, ಗುರುಕಾರ್ಯದಲ್ಲಿನ ನಿಸ್ವಾರ್ಥತೆ’ ಇತ್ಯಾದಿ ಗುಣಗಳಿರಬೇಕಾಗುತ್ತವೆ. ಪರಾತ್ಪರ ಗುರು ಡಾಕ್ಟರರು ಇಂತಹ ಆದರ್ಶ ಶಿಷ್ಯನ ಮೂರ್ತಿಮಂತ ಉದಾಹರಣೆಯಾಗಿದ್ದಾರೆ; ಆದುದರಿಂದಲೇ ಕೇವಲ ೨೬ ವರ್ಷಗಳಲ್ಲಿ ಸನಾತನವು ಪ್ರಕಟಿಸಿದ ಗ್ರಂಥಗಳ ಸಂಖ್ಯೆ ೩೫೦ ಕ್ಕೇರಿದೆ !’ – (ಪೂ.) ಸಂದೀಪ ಆಳಶಿ

೨. ಪರಾತ್ಪರ ಗುರು ಡಾಕ್ಟರರು ಶೂನ್ಯದಿಂದ ನಿರ್ಮಿಸಿದ ಗ್ರಂಥಕಾರ್ಯ !

‘ಸನಾತನದ ಗ್ರಂಥನಿರ್ಮಿತಿಯ ಕಾರ್ಯ ಆರಂಭವಾಗಿದ್ದು, ಓರ್ವ ಸಾಧಕನು ಅರ್ಪಣೆ ಎಂದು ನೀಡಿದ ಒಂದು ಕಡಿಮೆ ಕ್ಷಮತೆಯ ಗಣಕಯಂತ್ರದಿಂದ ! ಸನಾತನ ಸಂಸ್ಥೆಯ ಆರಂಭದ ಕಾಲದಲ್ಲಿ ಪರಾತ್ಪರ ಗುರು ಡಾಕ್ಟರರು ಮುಂಬೈಯಲ್ಲಿನ ತಮ್ಮ ಮನೆಯನ್ನು ‘ಸೇವಾಕೇಂದ್ರ’ವೆಂದು ಉಪಯೋಗಿಸಲು ಕೊಟ್ಟಿದ್ದರಿಂದ ಮತ್ತು ಅಲ್ಲಿ ಸಾಧಕರ ವಸತಿ ಮತ್ತು ಭೋಜನದ ವ್ಯವಸ್ಥೆಯನ್ನು ಮಾಡಿದ್ದರಿಂದ ಅಲ್ಲಿ ಗ್ರಂಥಕಾರ್ಯ ಆರಂಭವಾಗಲು ಸಹಾಯವಾಯಿತು. ಆ ಸಮಯದಲ್ಲಿ ಗ್ರಂಥಗಳ ಮುದ್ರಣಕ್ಕಾಗಿ ಬರುವ ವೆಚ್ಚವನ್ನು ಪರಾತ್ಪರ ಗುರು ಡಾಕ್ಟರರು ಸ್ವತಃ ಭರಿಸುತ್ತಿದ್ದರು. ಕೆಲವೊಮ್ಮೆ ಗ್ರಂಥಗಳ ಮುದ್ರಣಕ್ಕಾಗಿ ಹಣವೂ ಇರುತ್ತಿರಲಿಲ್ಲ; ಆದರೆ ಎಲ್ಲಿಂದಾದರೂ ಅರ್ಪಣೆ ನಿಧಿ ಬರುತ್ತಿತ್ತು ಮತ್ತು ಗ್ರಂಥಮುದ್ರಣದ ವ್ಯವಸ್ಥೆ ಆಗುತ್ತಿತ್ತು. ಮೊದಲು ಪರಾತ್ಪರ ಗುರು ಡಾಕ್ಟರರು ತಾವೇ ಸ್ವತಃ ಗ್ರಂಥಗಳಿಗಾಗಿ ಲೇಖನ, ಸಂಕಲನ, ಮುದ್ರಣತಿದ್ದುಪಡಿ ಇತ್ಯಾದಿ ಎಲ್ಲವನ್ನು ಮಾಡುತ್ತಿದ್ದರು. ಅನಂತರ ಅವರು ಕ್ರಮೇಣ ಗ್ರಂಥಸೇವೆಯನ್ನು ಮಾಡುವ ಸಾಧಕರಿಗೂ ವ್ಯಾಕರಣದ ನಿಯಮಗಳನ್ನು ಕಲಿಸಲಿಸುವುದರೊಂದಿಗೆ ‘ಸಾತ್ವಿಕತೆಯ ದೃಷ್ಟಿಯಿಂದ ಗ್ರಂಥಗಳನ್ನು ಹೇಗೆ ಸಿದ್ಧಪಡಿಸಬೇಕು’, ಎಂಬುದನ್ನು ನಿರಂತರ ಪರಿಶ್ರಮಪಟ್ಟು ಕಲಿಸಿದರು. ಅದರ ಫಲವೆಂದರೆ, ಗ್ರಂಥನಿರ್ಮಿತಿಯ ಯಾವುದೇ ವಿಶೇಷ ಪ್ರಶಿಕ್ಷಣವನ್ನು ಪಡೆಯದಿದ್ದರೂ ಇಂದು ಅನೇಕ ಸಾಧಕರು ಉತ್ತಮ ರೀತಿಯಲ್ಲಿ ಗ್ರಂಥಸೇವೆಯನ್ನು ಮಾಡುತ್ತಿದ್ದಾರೆ ! ‘ಗುರುಗಳು ಎಲ್ಲವನ್ನು ಮಾಡಿಸಿಕೊಳ್ಳುವರು’, ಎಂಬ ಪರಾತ್ಪರ ಗುರು ಡಾಕ್ಟರರ ದೃಢ ಶ್ರದ್ಧೆಯಿಂದಲೇ ಗ್ರಂಥ ಕಾರ್ಯವು ಇಂದಿನವರೆಗೆ ನಡೆದಿದೆ ಮತ್ತು ಮುಂದೆಯೂ ನಡೆಯುವುದು !’

೩. ಪರಾತ್ಪರ ಗುರು ಡಾಕ್ಟರರ ಗ್ರಂಥಕಾರ್ಯದ ವ್ಯಾಪ್ತಿ !

೩ ಅ. ವಿಪುಲ ಮತ್ತು ವಿವಿಧ ಭಾಷೆಯಲ್ಲಿನ ಗ್ರಂಥಸಂಪತ್ತು ! : ಜಗತ್ತಿನಲ್ಲಿ ಇದುವರೆಗೆ ಕೆಲವು ಸಂತರು ಮಾತ್ರ ‘ಅಧ್ಯಾತ್ಮ’ದ ವಿಷಯದ ಮೇಲೆ ಬರೆದ ಕೆಲವು ಗ್ರಂಥಗಳು ಕೆಲವೇ ಭಾಷೆಗಳಲ್ಲಿ ಪ್ರಕಟವಾಗಿವೆ. ತದ್ವಿರುದ್ಧ ಕೇವಲ ೨೬ ವರ್ಷಗಳಲ್ಲಿ ಪರಾತ್ಪರ ಗುರು ಡಾಕ್ಟರರ (ನವೆಂಬರ್ ೨೦೨೧ ರವರೆಗೆ) ವಿವಿಧ ವಿಷಯಗಳ ಮೇಲಿನ ೩೫೦ ಗ್ರಂಥಗಳನ್ನು ಪ್ರಕಟಿಸಲಾಗಿದೆ. ಇವುಗಳಲ್ಲಿ ಕೆಲವು ಗ್ರಂಥಗಳು ಮರಾಠಿ, ಹಿಂದಿ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲ್ಯಾಳಮ್, ಬಂಗಾಲಿ, ಓಡಿಯಾ, ಆಸಾಮಿ, ಗುರುಮುಖಿ, ಆಂಗ್ಲ, ಸರ್ಬಿಯನ್, ಜರ್ಮನ್, ಸ್ಪ್ಯಾನಿಸ್, ಫ್ರೇಂಚ್ ಮತ್ತು ನೇಪಾಳ ಈ ೧೭ ಭಾಷೆಗಳಲ್ಲಿ ೮೩ ಲಕ್ಷ ೫೮ ಸಾವಿರ ಪ್ರತಿಗಳನ್ನು (ಕಾಪಿ) ಪ್ರಕಟಿಸಲಾಗಿದೆ. ಇಷ್ಟೇ ಅಲ್ಲದೇ, ಇನ್ನೂ ೫ ಸಾವಿರಕ್ಕಿಂತಲೂ ಹೆಚ್ಚು ಗ್ರಂಥಗಳು ಪ್ರಕಟವಾಗುವಷ್ಟು, ಬರವಣಿಗೆಯನ್ನು ಪರಾತ್ಪರ ಗುರು ಡಾಕ್ಟರರು ಗಣಕಯಂತ್ರದಲ್ಲಿ ವಿಷಯಗಳಿಗನುಸಾರ ವರ್ಗೀಕರಣ ಮಾಡಿಟ್ಟಿದ್ದಾರೆ !

೩ ಆ. ಬೇರೆ ಬೇರೆ ವಿಷಯಗಳ ಮೇಲಿನ ಗ್ರಂಥಸಂಪತ್ತು ! : ಪರಾತ್ಪರ ಗುರು ಡಾಕ್ಟರರು ಕೇವಲ ‘ಅಧ್ಯಾತ್ಮ’ ಈ ಒಂದೇ ವಿಷಯದ ಮೇಲಿನ ಗ್ರಂಥಗಳನ್ನು ಪ್ರಕಟಿಸದೇ,  ಹಿಂದೂ ಧರ್ಮ, ಸಂಸ್ಕೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ರಾಷ್ಟ್ರ, ಬಾಲಸಂಸ್ಕಾರ, ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳು, ಆಪತ್ಕಾಲದಲ್ಲಿನ ಜೀವಿತರಕ್ಷಣೆ ಇವುಗಳಂತಹ ವಿವಿಧ ವಿಷಯಗಳ ಗ್ರಂಥಗಳ ಸಂಕಲನವನ್ನು ಮಾಡಿದ್ದಾರೆ.

೪. ಪರಾತ್ಪರ ಗುರು ಡಾಕ್ಟರರ ಗ್ರಂಥಕಾರ್ಯದ ಗಮನಾರ್ಹ ಅಂಶಗಳು !

೪ ಅ. ಎಲ್ಲ ಸ್ತರದ ಜಿಜ್ಞಾಸುಗಳಿಗೆ ಲಾಭದಾಯಕವಾಗಿರುವ ಗ್ರಂಥಗಳು ! : ಸರ್ವಸಾಧಾರಣ ಲೇಖಕರ ಅಧ್ಯಾತ್ಮದ ಮೇಲಿನ ಗ್ರಂಥಗಳು ಸಾಮಾನ್ಯ ವ್ಯಕ್ತಿಗಳಿಗಾಗಿ ಇರುತ್ತವೆ. ಅದರಲ್ಲಿ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿ ಅಧ್ಯಾತ್ಮವನ್ನು ತಿಳಿಸಿ ಹೇಳಲು ಪ್ರಯತ್ನಿಸಲಾಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡಿದ ಗ್ರಂಥಗಳು ಆಧ್ಯಾತ್ಮಿಕ ಸ್ತರದಲ್ಲಿದ್ದು ಅವು ಅಧ್ಯಾತ್ಮ ಮತ್ತು ವಿವಿಧ ಸಾಧನೆಯ ಮಾರ್ಗಗಳ ಬಗ್ಗೆ ವಿಜ್ಞಾನದ  ಪರಿಭಾಷೆಯಲ್ಲಿ ಮಾರ್ಗದರ್ಶನವನ್ನು ನೀಡುತ್ತವೆ. ಅವು ಅಧ್ಯಾತ್ಮ ಶಾಸ್ತ್ರದ ಪಠ್ಯಕ್ರಮದಂತಿವೆ. ಆದುದರಿಂದ ಅಧ್ಯಾತ್ಮದಲ್ಲಿನ ಎಲ್ಲ ಸ್ತರದಲ್ಲಿನ ಜಿಜ್ಞಾಸುಗಳಿಗೆ ಈ ಗ್ರಂಥಗಳ ಲಾಭವಾಗುತ್ತಿದೆ. ವಿವಿಧ ವಿಷಯಗಳ ಮೇಲಿನ ಗ್ರಂಥಗಳಿರುವುದರಿಂದ ಈ ಮಾಧ್ಯಮದಿಂದ ಅನೇಕ ಜನರು ತಮ್ಮ ಸ್ವಭಾವ ಮತ್ತು ಇಷ್ಟಗಳಿಗನುಸಾರ ಸಾಧನೆಯ ಕಡೆಗೆ ಬೇಗನೇ ಹೊರಳುತ್ತಿದ್ದಾರೆ.

೪ ಆ. ವಿವಿಧ ಸಾಧನಾಮಾರ್ಗದಲ್ಲಿನ ಸಾಧಕರಿಗೆ ಮಾರ್ಗದರ್ಶನ ಮಾಡುವ ಗ್ರಂಥಗಳು ! : ಹೆಚ್ಚಿನ ಸಂತರಿಗೆ ತಮ್ಮ ಸಂಪ್ರದಾಯದಲ್ಲಿನ ಸಾಧನಾ ಮಾರ್ಗದ ಅಧ್ಯಯನವಿರುತ್ತದೆ. ಅವರು ಅದರ ಆಧಾರದಲ್ಲಿ ಕೆಲವು ಗ್ರಂಥಗಳನ್ನು ಬರೆಯುತ್ತಾರೆ. ಇಂತಹ ಗ್ರಂಥಗಳಿಂದ ಕೇವಲ ಅವರ ಸಾಧನಾಮಾರ್ಗದಲ್ಲಿನ ಸಾಧಕರಿಗಷ್ಟೇ ಮಾರ್ಗದರ್ಶನವಾಗುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಸಾಧನಾಮಾರ್ಗದಲ್ಲಿನ, ಉದಾ. ನಾಮಸಂಕೀರ್ತನಾಯೋಗ, ಭಕ್ತಿಯೋಗ, ಕರ್ಮಯೋಗ, ಧ್ಯಾನಯೋಗ, ಜ್ಞಾನಯೋಗ ಇವುಗಳಂತಹ ವಿವಿಧ ಸಾಧನಾಮಾರ್ಗದಲ್ಲಿನ ಸಾಧಕರಿಗೆ ಅವರ ಸಾಧನೆಗಾಗಿ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಅವರು ವಿವಿಧ ಕಲೆಗಳ ಮಾಧ್ಯಮದಿಂದ, ಉದಾ. ಸಂಗೀತಕಲೆ, ಚಿತ್ರಕಲೆ ಇತ್ಯಾದಿ ಮಾಧ್ಯಮಗಳಿಂದ ಸಾಧನೆಯನ್ನು ಮಾಡುವ ಸಾಧಕರಿಗೂ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಆದುದರಿಂದ ಆ ಕ್ಷೇತ್ರದಲ್ಲಿನ ಸಾಧಕರ ಆಧ್ಯಾತ್ಮಿಕ ಪ್ರಗತಿಯೂ ಆಗುತ್ತಿದೆ. ಪರಾತ್ಪರ ಗುರು ಡಾ. ಆಠವಲೆಯವರು ಇಂತಹ ವಿವಿಧ ಸಾಧನಾಮಾರ್ಗಗಳಿಗೆ ಸಂಬಂಧ ಪಟ್ಟ ಗ್ರಂಥಗಳನ್ನೂ ಸಂಕಲನ ಮಾಡಿದ್ದಾರೆ.

೪ ಇ. ಇತರ ಸಂಪ್ರದಾಯ ಅಥವಾ ಸಂಸ್ಥೆಗಳ ಸಂತರ ಗ್ರಂಥಗಳು ! : ಪರಾತ್ಪರ ಗುರು ಡಾಕ್ಟರರು ಇತರ ಸಂಪ್ರದಾಯ ಅಥವಾ ಇತರ ಸಂಸ್ಥೆಯ ಸಂತರು ಮಾಡಿದ ವೈಶಿಷ್ಟ್ಯಪೂರ್ಣ ಸಾಧನೆ, ಕಾರ್ಯ ಅಥವಾ ಅವರ ಕಲಿಕೆ ಸಮಾಜಕ್ಕೆ ತಿಳಿಯಬೇಕೆಂದು ಗ್ರಂಥಗಳನ್ನು ಸಂಕಲನ ಮಾಡುತ್ತಾರೆ. ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಪದ್ಧತಿಗಳನ್ನು ಕಲಿಸುವ ಶ್ರೀ ಮಲಂಗಶಾಹಬಾಬಾ, ಸಂಖ್ಯಾಶಾಸ್ತ್ರದ ಶ್ರೇಷ್ಠ ಅಧಿಕಾರಿಗಳಾದ ಪ.ಪೂ. ಭಾವೂ ಮಸೂರಕರ, ಸಿದ್ಧಿಗಳ ಅದ್ಭುತ ಸಾಮರ್ಥ್ಯವಿದ್ದ ಪ.ಪೂ. ಶಾಮರಾವ ಮಹಾರಾಜ, ಕಲಿಯುಗದಲ್ಲಿನ ದಾರ್ಶನಿಕ ಋಷಿಗಳಾದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನ ಇವರಂತಹ ಕೆಲವು ಸಂತರ ಗ್ರಂಥಗಳನ್ನು ಪರಾತ್ಪರ ಗುರು ಡಾಕ್ಟರರು ಸಂಕಲನ ಮಾಡಿದ್ದಾರೆ.

೪ ಈ. ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ದುಃಸ್ಥಿತಿಯನ್ನು ಬದಲಾಯಿಸಲು ಮಾರ್ಗದರ್ಶನ ಮಾಡುವ ಗ್ರಂಥಗಳು ! : ಪ್ರಸ್ತುತ ಕಲಿಯುಗಾಂರ್ತಗತ ಕಲಿಯುಗ ನಡೆದಿದೆ. ಈ ಕಲಿಯುಗದಲ್ಲಿ ಧರ್ಮ ಮತ್ತು ಸಂಸ್ಕೃತಿಯ ನಾಶ, ಧರ್ಮದ್ರೋಹ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳು ಮುಗಿಲು ಮುಟ್ಟಿವೆ. ಎಲ್ಲಿ ಸಾಮಾನ್ಯ ವ್ಯಕ್ತಿಗಳಿಗೆ ಸುಖಕರ ಜೀವನವನ್ನು ಜೀವಿಸುವುದು ಕಠಿಣವಾಗಿದೆಯೋ, ಅಲ್ಲಿ ಶಾಂತ ಮನಸ್ಸಿನಿಂದ ಸಾಧನೆಯನ್ನು ಮಾಡುವುದಂತೂ ದೂರದ ಮಾತಾಯಿತು! ಸಮಾಜ, ರಾಷ್ಟ್ರ ಮತ್ತು ಧರ್ಮದ ಈ ದುಃಸ್ಥಿತಿಯನ್ನು ಬದಲಾಯಿಸಲು ಅಧಿಕೃತ (ಕಾನೂನು) ಮಾರ್ಗದಿಂದ ‘ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ, ಅಂದರೆ ಈಶ್ವರೀ ರಾಜ್ಯ)’ ವನ್ನು ಸ್ಥಾಪಿಸುವುದೇ ಏಕೈಕ ಮಾರ್ಗವಾಗಿದೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನ ಮಾಡುವುದು ಕಾಲಕ್ಕನುಸಾರ ಆವಶ್ಯಕ ಸಮಷ್ಟಿ ಸಾಧನೆಯೇ ಆಗಿದೆ. ಈ ಕುರಿತು ಸಮಾಜಕ್ಕೆ ಮಾರ್ಗದರ್ಶನವಾಗಿ ಅದನ್ನು ಕೃತಿಯಲ್ಲಿ ತರಲು ಬೇಕಾಗುವ ಗ್ರಂಥಗಳನ್ನು ಬರೆಯುವ ಪರಾತ್ಪರ ಗುರು ಡಾಕ್ಟರರು ಏಕೈಕರಾಗಿದ್ದಾರೆ !’   (ಮುಂದುವರಿಯುವುದು)

– (ಪೂ.) ಸಂದೀಪ ಆಳಶಿ, (ಸನಾತನದ ಗ್ರಂಥಗಳ ಸಂಕಲಕರು) (೨೪.೪.೨೦೨೧)