‘ಪ್ರತೀಕಗಳು (ಚಿಹ್ನೆಗಳು) ಅರ್ಥಪೂರ್ಣ, ಸಾಮರ್ಥ್ಯಶಾಲಿ ಮತ್ತು ಪ್ರಭಾವೀ ಆಗಿರುತ್ತವೆ. ನಮಗೆ ನಮ್ಮ ರಾಷ್ಟ್ರಧ್ವಜವು ಅನಂತ ಪಟ್ಟು ಸರ್ವಶ್ರೇಷ್ಠ ಅನಿಸುವುದು ಇದಕ್ಕಾಗಿಯೇ ! ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಬ್ಬ ಭಾರತೀಯನ ಪ್ರಾಣ ಮತ್ತು ಆತ್ಮದ ಪ್ರತೀಕವೇ ಆಗಿದೆ. ಅದಕ್ಕೆ ಗೌರವದಿಂದ ನಮಸ್ಕರಿಸುವುದು ಶ್ರೇಷ್ಠವೇ ಆಗಿದೆ. ಭಾರತೀಯರ ಪ್ರಖರ ರಾಷ್ಟ್ರೀಯ ಭಾವನೆಗಳು ತ್ರಿವರ್ಣಧ್ವಜದ ಹಿಂದೆ ಅಖಂಡವಾಗಿ ಕಾರ್ಯನಿರತವಾಗಿವೆ. ಅದರಲ್ಲಿ ಸ್ವಧರ್ಮ, ದೇಶಪ್ರೇಮ, ರಾಷ್ಟ್ರವಾದ ಅಖಂಡ ಜಾಗೃತವಾಗಿವೆ.
ಸ್ತ್ರೀಯರ ಕೈಗಳಲ್ಲಿನ ಹಸಿರು ಬಳೆ ಮತ್ತು ಹಣೆಯ ಮೇಲಿನ ಕುಂಕುಮವು ಬಹಳ ದೊಡ್ಡ ಪ್ರತೀಕಗಳೇ ಆಗಿವೆ. ಅವುಗಳಲ್ಲಿ ಜೀವನದ ಸೌಭಾಗ್ಯವೇ ಕ್ರೋಢೀಕರಣಗೊಂಡಿದೆ. ಯಾವಾಗ ಕಲ್ಲಿಗೆ ಸಿಂಧೂರವನ್ನು ಹಚ್ಚಿ ಅದನ್ನು ಶ್ರದ್ಧೆಯಿಂದ ಪೂಜಿಸಲಾಗುತ್ತದೆಯೋ, ಆಗ ಆ ಕಲ್ಲಿನರೂಪದ ಪ್ರತೀಕದಲ್ಲಿ ದೇವತ್ವ ಪ್ರಕಟವಾಗುತ್ತದೆ ಮತ್ತು ಮನುಷ್ಯನಿಗೆ ಅದು ತಾರಕವಾಗುತ್ತದೆ. ಪ್ರತೀಕಗಳು ಮೌನದ ಮಹಾಪೂಜೆಗಳಾಗಿವೆ. ಪ್ರತೀಕಗಳ ಪೂಜೆ ಎಂದರೆ ಮಾತನಾಡದೇ ಭಾವ, ಭಾವನೆ, ಶ್ರದ್ಧೆ, ನಿಷ್ಠೆ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸುವ ಮಹಾನ್ ಜೀವನಕಲೆಯೇ ಆಗಿದೆ.
೧. ಓಂಕಾರ
ಎಲ್ಲ ಮಂತ್ರಗಳಲ್ಲಿ ‘ಓಂಕಾರ’ ಪ್ರಮುಖ ಪ್ರತೀಕವಾಗಿದೆ. ಓಂಕಾರವು ಪರಮೇಶ್ವರನ ಪ್ರಥಮ ಧ್ವನಿಯಾಗಿದೆ. ಅದು ಪರಮೇಶ್ವರನ ಪ್ರಥಮ ಹೂಂಕಾರವಾಗಿದೆ. ಓಂಕಾರವು ಸಾಕ್ಷಾತ್ ಬ್ರಹ್ಮವಾಗಿದೆ. ‘ಓಂ’ವು ಮೂರೂವರೆ ಅಕ್ಷರಗಳಿಂದ ನಿರ್ಮಾಣವಾಗಿದೆ. ಅದರ ಮೊದಲ ಮಾತ್ರೆ ‘ಅ’ಕಾರ, ಎರಡನೇಯ ಮಾತ್ರೆ ‘ಉ’ ಕಾರ ಮತ್ತು ಮೂರನೆಯ ಮಾತ್ರೆ ‘ಮ’ಕಾರವಾಗಿದೆ. ಅರ್ಧ ಮಾತ್ರೆ ಅನುಸ್ವಾರವಾಗಿದೆ. ಜೀವನದ ೩ ಅವಸ್ಥೆಗಳು ವಿಶ್ವ, ತೇಜಸ್ಸು, ಪ್ರಜ್ಞೆ ಇವು ‘ಅ’ಕಾರ, ‘ಉ’ ಕಾರ ಮತ್ತು ‘ಮ’ಕಾರವಾಗಿವೆ. ಈ ಮೂರು ಮಾತ್ರೆಗಳು ಮಾನವನ ಜೀವನ ಶಕ್ತಿಯ ಪ್ರತೀಕವಾಗಿವೆ. ಅರ್ಧಮಾತ್ರೆಯು ಪಾಪ-ಪುಣ್ಯ, ಸುಖ-ದುಃಖದಿಂದ ನಮ್ಮನ್ನು ಅಲಿಪ್ತವಾಗಿಡುತ್ತದೆ. ವೇದಮಂತ್ರಗಳನ್ನು ಓಂಕಾರ ಪೂರ್ವಕ ಪಠಿಸಬೇಕು. ಸಮಗ್ರ ವಿಶ್ವವು ಓಂಕಾರದಲ್ಲಿ ಸಮಾವೇಶಗೊಂಡಿದೆ. ಯೋಗಿಗಳು ಇಂತಹ ಓಂಕಾರವನ್ನು ಅಖಂಡ ಧ್ಯಾನಿಸುತ್ತಾರೆ.
೨. ಕಮಲ
ಭಾರತೀಯ ಸಂಸ್ಕೃತಿಯಲ್ಲಿನ ‘ಕಮಲ’ ಈ ಪ್ರತೀಕವು ಪ್ರಭಾವಿಯಾಗಿದೆ. ಅದರ ಹೊಕ್ಕಳು ಬಳ್ಳಿ ನೀರಿನಲ್ಲಿದ್ದು, ಅದು ಎಷ್ಟೋ ಯೋಜನಗಳ (ದೂರದ) ವರೆಗೆ ತನ್ನ ಜೀವನ ಸುಗಂಧವನ್ನು ಹರಡುತ್ತದೆ. ಅದರ ದಂಟು ಗಟ್ಟಿಯಾಗಿದೆ, ಮುಖ ಕೋಮಲವಾಗಿದೆ. ಅದರ ಗುಣಸಂಗ್ರಹವು ಸುಖವನ್ನು ನೀಡುವಂತಹದ್ದಾಗಿದೆ. ಇಂತಹ ಈ ‘ಕಮಲ’ವು ಒಂದು ಪ್ರತೀಕವಾಗಿದೆ. ಕಮಲ ಕೆಸರಿನಿಂದ ಮೇಲೆ ಬರುತ್ತದೆ. ಎಲ್ಲರಿಗೂ ಸುಖದ ದರ್ಶನ ನೀಡುತ್ತದೆ; ಯಾವ ಮನುಷ್ಯನು ಸುಖಲೋಲುಪತೆಯ ಕೆಸರಿನಿಂದ ಕಮಲಪತ್ರದಂತೆ ಅಲಿಪ್ತವಾಗಿದ್ದು, ಅನಾಸಕ್ತ ಜೀವನವನ್ನು ಜೀವಿಸುತ್ತಿರುತ್ತಾನೆಯೋ, ಅವನೇ ನಿಜವಾದ ಮನುಷ್ಯ. ಗೀತೆಯಲ್ಲಿ ಶ್ರೀಕೃಷ್ಣನು ಕಮಲವನ್ನು ಜೀವನದ ಆದರ್ಶವೆಂದು ಹೇಳಿದ್ದಾನೆ. ಭಾರತೀಯ ಸಂಸ್ಕೃತಿಗೆ ಕಮಲದಂತೆ ಅನೇಕ ಪಕಳೆಗಳಿವೆ. ಕಮಲವು ಸೌಂದರ್ಯ ಜೀವನದ ಪ್ರತೀಕವಾಗಿದೆ. ಹಸ್ತಕಮಲ, ಚರಣಕಮಲ, ಹೃದಯಕಮಲ, ನಯನಕಮಲ, ವದನಕಮಲ ಇವು ಕಮಲಗಳ ಪ್ರತೀಕದ ಸುಂದರ ಹೆಸರುಗಳಾಗಿವೆ.
೩. ಕಲಶ
ಭಾರತೀಯ ವೈದಿಕ ಸಂಸ್ಕೃತಿಯಲ್ಲಿ ‘ಕಲಶ’ ಈ ಪ್ರತೀಕವು ಎಲ್ಲಕ್ಕಿಂತ ಶ್ರೇಷ್ಠವಾಗಿದೆ. ಮಂದಿರದ ಮೇಲೆ ಕಲಶ ಶೋಭಾಯಮಾನವಾಗಿ ಕಾಣಿಸುತ್ತದೆ. ಪ್ರತಿಯೊಂದು ಶುಭ ಕಾರ್ಯದಲ್ಲಿ ಶ್ರೀ ಗಣೇಶ ಮತ್ತು ಕಲಶವನ್ನು ಪೂಜಿಸಲಾಗುತ್ತದೆ. ‘ಸ್ವಸ್ತಿಕ’ ಚಿಹ್ನೆಯನ್ನು ಬಿಡಿಸಿದ ಕೂಡಲೇ ಸೂರ್ಯದೇವನು ಅದರ ಮೇಲೆ ಆಸನಸ್ಥನಾಗುತ್ತಾನೆ. ಅದರಂತೆ ಕಲಶವನ್ನು ಅಲಂಕರಿಸುತ್ತಲೇ ಅದರಲ್ಲಿ ವರುಣದೇವನು ಬಂದು ವಿರಾಜಮಾನನಾಗುತ್ತಾನೆ. ಕಲಶ ಪೂಜನೆಯ ಸಮಯದಲ್ಲಿ ಕಲಶದಲ್ಲಿರುವ ನೀರು ಶುದ್ಧ ಮತ್ತು ಪವಿತ್ರವಾಗುತ್ತದೆ. ಕಲಶ ವ್ಯಾಪಕವಾದ ನಂತರ, ಅದಕ್ಕೆ ‘ಕುಂಭ’ ಎನ್ನುತ್ತಾರೆ. ಹೊಸ ಮನೆಯಲ್ಲಿ ಪ್ರವೇಶಿಸುವಾಗ ಕುಂಭವನ್ನು ಇಡುವ ಪದ್ಧತಿಯಿದೆ. ಕುಂಭದ ಮೇಲೆ ಶ್ರೀಫಲವನ್ನು ಇಟ್ಟರೆ ಕಲಶದ ಶೋಭೆ ದ್ವಿಗುಣವಾಗುತ್ತದೆ. ಕಲಶವು ಮಾನವನ ದುರ್ಲಭ ಮತ್ತು ಅಪರೂಪ ದೇಹದ ಪ್ರತೀಕವಾಗಿದೆ. ಶರೀರ ಪವಿತ್ರ, ಸುಂದರ ಮತ್ತು ದರ್ಶನೀಯವಾಗಿದೆ. ಅದರಂತೆ ಕಲಶವೂ ಪವಿತ್ರ, ಸುಂದರ ಮತ್ತು ದರ್ಶನೀಯವಾಗಿದೆ. ಸಂತರ ಆಗಮನದ ಸಮಯದಲ್ಲಿ ಶ್ರೀಫಲವಿರುವ ಕಲಶದೊಂದಿಗೆ ಅವರನ್ನು ಗೌರವಿಸಲಾಗುತ್ತದೆ. ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ಜ್ಞಾನೇಶ್ವರಿಯಲ್ಲಿ ೧೮ ನೇ ಅಧ್ಯಾಯಕ್ಕೆ ‘ಕಳಸಾಧ್ಯಾಯ’ ಎಂದು ಹೇಳಿದ್ದಾರೆ.
೪. ಸ್ವಸ್ತಿಕ
ಭಾರತೀಯ ಸಂಸ್ಕೃತಿಯಲ್ಲಿ ‘ಸ್ವಸ್ತಿಕ’ ಚಿಹ್ನೆಗೆ ಬಹಳ ಮಹತ್ವವಿದೆ. ವೇದಗಳಲ್ಲಿ ಸ್ವಸ್ತಿಕ ಮಂತ್ರಕ್ಕೆ ಬಹಳ ಮಹತ್ವವಿದೆ. ಯಾವುದೇ ಕಾರ್ಯ ನಿರ್ವಿಘ್ನವಾಗಿ ಆಗಬೇಕಾದರೆ ಸ್ವಸ್ತಿಕದ ಪೂಜೆಯನ್ನು ಮಾಡಲಾಗುತ್ತದೆ. ದೇವರ ಶಕ್ತಿ ಮತ್ತು ಸೂರ್ಯನ ಶುಭ ಭಾವನೆ ಸ್ವಸ್ತಿಕದಲ್ಲಿ ಸಮಾವೇಶಗೊಂಡಿವೆ. ಒಂದು ಉದ್ದ ರೇಖೆ ಮತ್ತು ಒಂದು ಅಡ್ಡ ರೇಖೆ ಹಾಗೂ ೪ ಭುಜಗಳಿಂದ ಸ್ವಸ್ತಿಕ ಚಿಹ್ನೆ ತಯಾರಾಗುತ್ತದೆ. ಈ ೪ ಭುಜಗಳು ಶ್ರೀವಿಷ್ಣುವಿನ ೪ ಕೈಗಳಾಗಿವೆ. ಭಗವಾನ ಶ್ರೀವಿಷ್ಣು ೪ ಕೈಗಳಿಂದ ೪ ದಿಕ್ಕುಗಳನ್ನು ರಕ್ಷಿಸುತ್ತಾನೆ. ಸ್ವಸ್ತಿಕವು ಶಾಂತಿಯ, ಸಮೃದ್ಧಿಯ, ಪಾವಿತ್ರ್ಯದ, ಮಾಂಗಲ್ಯದ ಪವಿತ್ರ ಪ್ರತೀಕವಾಗಿದೆ. ಭಾರತೀಯ ಶಿಲ್ಪಕಲೆಯಲ್ಲಿಯೂ ಸ್ವಸ್ತಿಕ ಚಿಹ್ನೆಗೆ ಬಹಳ ಮಹತ್ವವಿದೆ. ಸ್ವಸ್ತಿಕದ ಪೂಜೆಯಿಂದ ಮನುಷ್ಯನ ಜೀವನ ಸಮೃದ್ಧವಾಗುತ್ತದೆ. ಹಿಂದೂ ಸ್ತ್ರೀಯರು ಮನೆಯ ಬಾಗಿಲಿನ ಹೊಸ್ತಿಲಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುತ್ತಾರೆ. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
೫. ಶ್ರೀಫಲ
ಹಿಂದೂಗಳ ಪ್ರತಿಯೊಂದು ಶುಭ ಅಥವಾ ಅಶುಭ ಕಾರ್ಯದ ಆರಂಭದ ಸಮಯದಲ್ಲಿ ಶ್ರೀಫಲಕ್ಕೆ ಅನನ್ಯ ಸ್ಥಾನವಿದೆ. ಹೊರಗಿನಿಂದ ಕಠಿಣ ಮತ್ತು ಒಳಗಿನಿಂದ ಮೃದು, ಹೀಗೆ ಶ್ರೀಫಲದ ರೂಪ ಮತ್ತು ಸ್ವರೂಪವಾಗಿದೆ. ಅದರ ವೈಭವವೆಂದರೆ ಯಾವುದೇ ಶುಭಕಾರ್ಯದಲ್ಲಿ ಶ್ರೀಫಲವನ್ನು ದೇವರ ಮುಂದೆ ಇಟ್ಟು ಒಡೆಯುತ್ತಾರೆ. ಶ್ರೀಫಲದಿಂದ ಶ್ರೀ ಗಣೇಶ ಪೂಜೆಯನ್ನು ಮಾಡಲಾಗುತ್ತದೆ. ಸಮುದ್ರದ ಉಪ್ಪುನೀರನ್ನು ತನ್ನ ಅಂತಃಕರಣದಲ್ಲಿ ಸಂಗ್ರಹಿಸಿಕೊಂಡು ಶ್ರೀಫಲವು ಎಲ್ಲರಿಗೂ ಸಿಹಿ ಮತ್ತು ಮಧುರ ನೀರನ್ನು ಕೊಡುತ್ತದೆ.
೬. ಮಣ್ಣಿನ ಮಡಕೆ
ಮಣ್ಣಿನ ಮಡಕೆಯು ಮಾನವೀ ದೇಹದ ಕ್ಷಣಭಂಗುರತೆಯನ್ನು ತೋರಿಸುತ್ತದೆ. ಮೃತ ವ್ಯಕ್ತಿಗೆ ಅಗ್ನಿಯನ್ನು ಕೊಡುವಾಗ ಯಾವಾಗಲೂ ಮಣ್ಣಿನ ಮಡಕೆಯನ್ನು ಉಪಯೋಗಿಸುತ್ತಾರೆ. ಈ ನರದೇಹ ಕ್ಷಣಭಂಗುರವಾಗಿದ್ದು, ಹೇಗೆ ಮಣ್ಣಿನಿಂದ ಬಂದಿರುವುದೋ, ಹಾಗೆ ಮಣ್ಣಿನಲ್ಲಿಯೇ ಸೇರುತ್ತದೆ. ಮಣ್ಣಿನ ಮಡಕೆ ಮನುಷ್ಯನಿಗೆ ನಿರಾಸಕ್ತಿಯ ಮನೋಜ್ಞ ಜೀವನ ದರ್ಶನವನ್ನು ತೋರಿಸುತ್ತದೆ. ಮಾನವ ದೇಹದ ನಶ್ವರತೆಯ ದರ್ಶನವನ್ನು ಮಾಡುವ ಮಣ್ಣಿನ ಮಡಕೆ ! ಒಂದು ವೇಳೆ ಮನುಷ್ಯನಿಗೆ ಜೀವನದಲ್ಲಿನ ಪ್ರತಿಯೊಂದು ಕ್ಷಣವನ್ನು ಜೀವಿಸಲು ಸಾಧ್ಯವಾದರೆ, ಅವನ ಜೀವನದ ಹಸಿಮಡಕೆ ಪಕ್ಕಾ ಆಗುವುದು.
೭. ಶ್ರೀ ಸರಸ್ವತಿದೇವಿ ಮತ್ತು ಶ್ರೀ ಲಕ್ಷ್ಮೀದೇವಿ
ಹೇಗೆ ಶ್ರೀ ಸರಸ್ವತಿದೇವಿ ೧೪ ವಿದ್ಯೆ ಮತ್ತು ೬೪ ಕಲೆಗಳ ಜನನಿ ಆಗಿದ್ದಾಳೆಯೋ, ಹಾಗೆಯೇ ಶ್ರೀ ಲಕ್ಷ್ಮೀದೇವಿ ಎಲ್ಲ ಲೌಕಿಕ ಮತ್ತು ಅಲೌಕಿಕ ವೈಭವದ ಜನನಿ ಆಗಿದ್ದಾಳೆ.
೮. ಅರ್ಧನಾರಿ ನಟೇಶ್ವರ
ಅರ್ಧನಾರಿ ನಟೇಶ್ವರ ಇದು ಭಾರತೀಯ ಸಂಸ್ಕೃತಿಯ ಪ್ರಧಾನ ಜೀವನೋಪಯೋಗಿ ಪ್ರತೀಕವಾಗಿದೆ. ಅರ್ಧನಾರಿ ನಟೇಶ್ವರನಲ್ಲಿ ಸ್ತ್ರೀ ಮತ್ತು ಪುರುಷ ಇಬ್ಬರೂ ಸ್ವಾಭಾವಿಕ ರೀತಿಯಲ್ಲಿ ಪ್ರಕಟವಾಗಿರುವುದು ಮತ್ತು ಅವರ ಆವಿಷ್ಕಾರ ಆಗಿರುವುದು ಕಂಡು ಬರುತ್ತದೆ. ಸ್ತ್ರೀಯ ಒಂದು ಅಂಗ ಪುರುಷಪ್ರಧಾನ ಮತ್ತು ಇನ್ನೊಂದು ಅಂಗ ಸ್ತ್ರೀಪ್ರಧಾನವಾಗಿರುತ್ತದೆ, ಹಾಗೆಯೇ ಪುರುಷನ ಅರ್ಧ ಅಂಗವು ಸ್ತ್ರೀಪ್ರಧಾನವಾಗಿರುತ್ತದೆ. ಆದ್ದರಿಂದ ನಾವೆಲ್ಲರೂ ಅರ್ಧನಾರಿ ನಟೇಶ್ವರರೇ ಆಗಿದ್ದೇವೆ.
೯. ದೇವದ್ರವ್ಯ
ದೇವದ್ರವ್ಯವು ಇದೇ ರೀತಿ ದೈವಿ ಪ್ರತೀಕವಾಗಿದೆ. ಈ ಜಗತ್ತಿನಲ್ಲಿ ನನ್ನದೆಂದು ಏನೂ ಇಲ್ಲ ಎಲ್ಲವೂ ಪ್ರಭುವಿನದ್ದೇ ಆಗಿದೆ. ನಮ್ಮ ಉತ್ಪನ್ನದಲ್ಲಿನ ಒಂದು ಭಾಗವನ್ನು ನಾವು ‘ದೇವದ್ರವ್ಯ’ ಎಂದು ದೇವರ ಕಾರ್ಯಗಳಿಗೆ ವೆಚ್ಚ ಮಾಡಬೇಕು.
(ಆಧಾರ : ಮಾಸಿಕ ದೀಪಾವಳಿ, ‘ಹರಿ ವಿಜಯ’ ೨೦೧೧)
ಓಟಿಟಿಯ ಮಾಧ್ಯಮಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ನಿರ್ಬೀಜಗೊಳಿಸುವ ಷಡ್ಯಂತ್ರ ! – ನಟಿ ಪಾಯಲ್ ರೊಹತಗಿಬ್ರಿಟಿಷ್ ಸೈನ್ಯದಲ್ಲಿನ ಭಾರತೀಯ ಜನರೇ ಹೇಗೆ ಕ್ರಾಂತಿಕಾರರ ವಿರುದ್ಧ ಹೋರಾಡುತ್ತಿದ್ದರೋ, ಹಾಗೆಯೇ ಇಂದು ಈ ಓಟಿಟಿ (ಓವರ್ ದ ಟಾಪ್) ಮಾಧ್ಯಮಗಳ ಮೂಲಕ ಭಾರತದಲ್ಲಿನ ಜನರೇ ದೇಶವಿರೋಧಿ ವಿಚಾರಸರಣಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಅಮೇಜಾನ್ ಪ್ರೈಮ್ ಇಂಡಿಯಾದ ಕಂಟೆಂಟ್ ವಿಭಾಗದ ಪ್ರಮುಖರಾಗಿರು ಅಪರ್ಣಾ ಪುರೋಹಿತರವರ ಸರಕಾರಿವಿರೋಧಿ ವಿಚಾರಸರಣಿಯಿಂದಾಗಿ ಅವರು ಸತತವಾಗಿ ಇಂತಹ ವೆಬ್ ಸಿರೀಜ್‌ಗಳಿಗೆ ಚಾಲನೆಯನ್ನು ನೀಡುತ್ತಿದ್ದಾರೆ. ಓಟಿಟಿ ಮಾಧ್ಯಮಗಳಲ್ಲಿಯೂ ಅಶ್ಲೀಲ ವಿಷಯಗಳನ್ನು ತೋರಿಸಲಾಗುತ್ತಿದೆ. ಈ ಮಾಧ್ಯಮಗಳಿಂದ ಭಾರತೀಯ ಸಂಸ್ಕೃತಿಯನ್ನು ನಿರ್ಬೀಜ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ತಡೆಯಲು ಹಿಂದೂಗಳು ಒಟ್ಟಾಗಬೇಕು. |