ಅಳಬೇಕೊ, ನಗಬೇಕು ?

‘ಗಂಡನ ಮನೆಗೆ ಹೋಗುವಾಗ ಮದುಮಗಳು ಹೇಗೆ ಅಳಬೇಕು ?’, ಎಂಬ ೭ ದಿನಗಳ ‘ಕ್ಯ್ರಾಶ್‌ ಕೋರ್ಸ’ ಭೋಪಾಳದಲ್ಲಿ ಅಯೋಜಿಸಿದ್ದ ಸುದ್ದಿಯನ್ನು ಓದಿದೆ. ಅದರಲ್ಲಿ ‘ಹೇಗೆ ಅಳಬೇಕು ?’, ‘ಅಳುವಾಗ ವಿಶಿಷ್ಟ ನಕಲು ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸುವವರಿದ್ದರು. ಪ್ರಸ್ತುತ ಹುಡುಗಿಯರು ಗಂಡನ ಮನೆಗೆ ಹೋಗುವಾಗ ಅಳದಿರುವುದರಿಂದ ಇದನ್ನು ಕಲಿಸುವ ವರ್ಗವನ್ನು ಇಡಲಾಗಿತ್ತು. ಇಂತಹ ಸ್ವರೂಪದ ಉಪಕ್ರಮವನ್ನು ನಡೆಸುವ ಸಮಯ ಬರುವುದೆಂದರೆ ಇದೇ ಮೂಲದಲ್ಲಿ ದುರ್ದೈವದ ಮಾತಾಗಿದೆ. ‘ಉಪಕ್ರಮದ ಸುದ್ದಿಯನ್ನು ಓದಿಯೇ ನನಗೆ ಅಳಬೇಕೋ ಅಥವಾ ನಗಬೇಕು ?’, ಎಂಬ ಪ್ರಶ್ನೆ ಬಂದಿತು. ಗಂಡನ ಮನೆಗೆ ಹೋಗುವಾಗ ನವವಧು ಸಂಭ್ರಮದಲ್ಲಿರುತ್ತಾಳೆ. ಹೊಸ ಸಂಸಾರ, ಹೊಸ ಜನರು, ಹೊಸ ಜೀವನ ಆರಂಭವಾಗಲಿರುತ್ತದೆ. ಅದಕ್ಕಾಗಿ ತವರುಮನೆಯನ್ನು ಬಿಟ್ಟು ಬರಬೇಕಾಗುತ್ತದೆ. ಆ ಸಮಯದಲ್ಲಿ ಸಹಜವಾಗಿ ಕಣ್ಣೀರು ಸುರಿಯತೊಡಗುತ್ತವೆ ಮತ್ತು ತನ್ನ ತವರುಮನೆಯ ಜನರ ಹತ್ತಿರ ಹೋಗಿ ಅಥವಾ ಅವರನ್ನು ಅಪ್ಪಿಕೊಂಡು ಮದುಮಗಳು ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾಳೆ. ಅದರಲ್ಲಿ ಕೃತ್ರಿಮತೆ ಅಥವಾ ತಾಂತ್ರಿಕತೆ ಇರುವುದಿಲ್ಲ. ಅದು ಕೇವಲ ತಮ್ಮವರನ್ನು ಬಿಡುವುದು ಮತ್ತು ಮುಗ್ಧತನ ಇರುತ್ತದೆ ! ಇದು ಹಿಂದಿನ ಕಾಲದಲ್ಲಿ ಅತ್ಯಂತ ಸಹಜವಾಗಿ ಆಗುತ್ತಿತ್ತು; ಆದರೆ ಈಗ ತುಂಬಾ ವಯಸ್ಸಿನಲ್ಲಿ ಮದುವೆ ಆಗುತ್ತಿರುವುದರಿಂದ, ಹಾಗೆಯೇ ಹೆಣ್ಣುಮಕ್ಕಳು ಅನುಭವಿ ಮತ್ತು ಉಚ್ಚ ಶಿಕ್ಷಣ ಪಡೆದಿರುವುದರಿಂದ ಗಂಡನ ಮನೆಗೆ ಹೋಗುವಾಗ ಅಳುವುದು ವಿರಳವಾಗಿದೆ. ಇದರ ಹಿಂದಿನ ಕಾರಣಗಳ ಬಗ್ಗೆ ವಿಚಾರ ಮಾಡಬೇಕು. ಪ್ರಸ್ತುತ ಸಮಾಜವು ಭಾವನಾಶೀಲ ಕಡಿಮೆ ಮತ್ತು ತಾಂತ್ರಿಕದೃಷ್ಟಿಯಲ್ಲಿ ಪ್ರಗತವಾಗಿದೆ.

ಸೌ. ನಮ್ರತಾ ದಿವೇಕರ

ಪರಸ್ಪರರಲ್ಲಿ ತಮ್ಮವರೆಂಬುದು ಕಡಿಮೆಯಾಗಿರುವುದರಿಂದ ಭಾವನೆಗಳು ವ್ಯಕ್ತವಾಗುವುದೇ ಇಲ್ಲ ಅಥವಾ ಒಂದು ವೇಳೆ ಭಾವನೆಗಳು ವ್ಯಕ್ತವಾದರೂ ಅದರಲ್ಲಿ ಕೃತ್ರಿಮತೆ ಅಥವಾ ಆಡಂಬರ ಇರುತ್ತದೆ. ಆದ್ದರಿಂದಲೇ ಇಂತಹ ಉಪಕ್ರಮಗಳನ್ನು ನಡೆಸುವ ಸಮಯ ಬರುತ್ತದೆ. ಒಂದು ವೇಳೆ ನಿಜವಾಗಿಯೂ ಒಳಗಿನಿಂದ ಪ್ರೀತಿ ಇದ್ದರೆ ಅಥವಾ ಯಾವುದಾದರೊಬ್ಬನ ಬಗ್ಗೆ ಭಾವನಾತ್ಮಕ ಸೆಳೆತವಿದ್ದರೆ, ‘ಈಗ ನೀವು ಅಳಬೇಕು’, ಎಂದು ಹೇಳುವ ಆವಶ್ಯಕತೆಯೇ ಇರುವುದಿಲ್ಲ.

ಮಗಳು ಚಿಕ್ಕಂದಿನಿಂದಲೂ ಮನೆಯಲ್ಲಿ ಓಡಾಡುತ್ತಾಳೆ, ಅವಳ ದುಡುದುಡು ಓಡುವುದು, ಅವಳ ಶಾಲೆ-ಕಾಲೇಜು, ನೌಕರಿ ಇಲ್ಲಿಯವರೆಗಿನ ಜೀವನವನ್ನು ಪಾಲಕರು ಹತ್ತಿರದಿಂದ ಅನುಭವಿಸಿರುತ್ತಾರೆ. ಆದ್ದರಿಂದ ಮಗಳ ವಿರಹದಿಂದ ಪಾಲಕರಿಗೂ ಅಳು ಬರುತ್ತಿತ್ತು. ಈಗ ತಾಯಿ-ತಂದೆ ಮತ್ತು ಮಕ್ಕಳಲ್ಲಿನ ಸೆಳೆತವು ಕಾಲಕ್ಕನುಸಾರ ಕಡಿಮೆಯಾಗುತ್ತ ಹೋಗುತ್ತಿದೆ. ಮಕ್ಕಳು ಬೇಗ ಸ್ವಾವಲಂಬಿಯಾಗಿ ತಮ್ಮ ತಮ್ಮ ಮಾರ್ಗವನ್ನು ಆಯ್ಕೆ ಮಾಡುತ್ತಾರೆ. ಪಾಲಕರೂ ತಮ್ಮ ನೌಕರಿ-ವ್ಯವಸಾಯದಲ್ಲಿ ಸಿಲುಕಿರುತ್ತಾರೆ. ಆದ್ದರಿಂದ ಪರಸ್ಪರ ಸಮಯವನ್ನು ಕೊಡುವುದು ಕಡಿಮೆಯಾಗಿದೆ. ಅಷ್ಟೆ ಅಲ್ಲದೇ ಇದರಲ್ಲಿ ಇನ್ನೂ ಸೇರ್ಪಡೆಯೆಂದರೆ ಸಂಚಾರವಾಣಿ ! ಒಮ್ಮೆ ಆ ಜಗತ್ತಿನಲ್ಲಿ ಮುಳುಗಿದರೆ, ಪಕ್ಕದಲ್ಲಿ ಏನು ನಡೆದಿದೆ ಎಂಬುದರ ಅರಿವೂ ಇರುವುದಿಲ್ಲ. ಯಾರಲ್ಲಿಯೂ  ಯಾರಿಗಾಗಿಯೂ ಸಮಯವೇ ಉಳಿದಿಲ್ಲ. ಸಮಯ ಕೊಡಲು ತನ್ನತನ, ಪ್ರೀತಿ ಇರಬೇಕಾಗುತ್ತದೆ. ಅದೇ ಇಲ್ಲದಿದ್ದರೆ, ಕಣ್ಣೀರಾದರೂ ಎಲ್ಲಿಂದ ಬರುತ್ತದೆ ? ಕಾಲಕ್ಕನುಸಾರ ಸಮಾಜವು ಸಂವೇದನಾಶೂನ್ಯವಾಗುತ್ತಿದೆ. ಸಂಬಂಧಿಕರಲ್ಲಿನ ಹೆಣಿಕೆಯ ಗಂಟು ಕ್ರಮೇಣ ಸಡಿಲವಾಗುತ್ತಿದೆ. ‘ಸ್ವಾರ್ಥ ಸಾಧಿಸುವುದಕ್ಕೆ ಮಾಡಿದ ನೆಂಟಸ್ಥಿಕೆ,’ ಎಂಬಂತಹ ಸ್ಥಿತಿಯಾಗಿದೆ. ತಂತ್ರಜ್ಞಾನದ ಯುಗದಲ್ಲಿಯೂ ಸಂಬಂಧಿಕರಲ್ಲಿ ಪರಸ್ಪರರ ಬಗ್ಗೆ ಪ್ರೇಮಭಾವನೆ ಹೆಚ್ಚಿಸಲು ಪ್ರತಿಯೊಬ್ಬರೂ ಪ್ರಯತ್ನ ಮಾಡಿದರೆ ನಿಜವಾಗಿಯೂ ಇಂತಹ ‘ಕ್ಲಾಸ್’ ನಡೆಸುವ ಸಮಯವೇ ಬರಲಾರದು !

– ಸೌ. ನಮ್ರತಾ ದಿವೇಕರ, ಸನಾತನ ಆಶ್ರಮ, ದೇವದ, ಪನವೇಲ.